ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೋಟ: ಪಿರ್ಯಾದಿದಾರರು ಅಲ್ಜಿ ಸಲ್ಮಾನ್‌‌‌‌‌‌‌‌‌‌(25), ತಂದೆ ಅಲ್ಜಿ  ಅಬ್ದುಲ್‌‌‌‌‌ಗಫೂರ್‌‌‌‌, ಆರ್ಮೆ  ಕರಿಕಟ್ಟೆ,  ಶಿರೂರು, ಬೈಂದೂರು  ರವರು ದಿನಾಂಕ 23/09/2021  ರಂದು  ತನ್ನ ಚಿಕ್ಕಪ್ಪನ ಮಗಳ ಮದುವೆ ಕಾರ್ಯಕ್ರಮ  ಮುಗಿಸಿ ಮಿನಿಬಸ್ ನಲ್ಲಿ ಹೊರಟು ಮದು ಮಕ್ಕಳನ್ನು ಮೂಡಬಿದ್ರೆಗೆ ಬಿಟ್ಟು  ವಾಪಾಸ್ಸು ಉಡುಪಿ ಕುಂದಾಪುರ ರಾ.ಹೆ 66 ರಲ್ಲಿ ಬರುತ್ತಿರುವಾಗ  ಸಾಸ್ತಾನ ಟೋಲ್ ಗೇಟ್ ದಾಟಿ ಸ್ವಲ್ಪ ಮುಂದೆ ಪೆಟ್ರೋಲ್ ಪಂಪ್ ಎದುರು ಮಿನಿಬಸ್ ನ್ನು ಟೀ ಕುಡಿಯಲು ನಿಲ್ಲಿಸಿದ್ದು ಮಿನಿ ಬಸ್ ನಲ್ಲಿದ್ದ ಹುಮ್ರಾ ಸಿರಾಜುನ್‌‌‌‌‌‌ನೀಸಾ  ಎಂಬವರು ಮೂತ್ರ ಮಾಡಲೆಂದು ಪೆಟ್ರೋಲ್ ಬಂಕ್ ನ ಬಳಿಯಿರುವ ಶೌಚಾಲಯಕ್ಕೆ ಹೋಗುವ ಬಗ್ಗೆ ಉಡುಪಿ ಕುಂದಾಪುರ ರಾಹೆ66 ನ್ನು ದಾಟಿ ಯು ಟರ್ನ ಬಳಿ ನಿಂತಿದ್ದು  ,  21:50  ಗಂಟೆ  ಸಮಯಕ್ಕೆ  ಆರೋಪಿ  ತನ್ನ  ಬಾಬ್ತು  ಬೊಲೆರೋ ಪಿಕ್‌ಅಪ್‌  ವಾಹನದ  ನಂಬ್ರ KA 20  D 3702 ವಾಹನವನ್ನು  ಕುಂದಾಪುರ  ಕಡೆಯಿಂದ  ಉಡುಪಿ  ಕಡೆಗೆ  ರಾ.ಹೆ.  66  ರಲ್ಲಿ  ಅತೀವೇಗ  ಹಾಗೂ  ನಿರ್ಲಕ್ಷತನದಿಂದ  ಚಲಾಯಿಸಿಕೊಂಡು  ಬಂದು  ಸಾಸ್ತಾನ  ಟೋಲ್‌‌‌‌‌‌‌ಗೇಟ್‌‌‌‌‌‌‌ಬಳಿ  ಪೆಟ್ರೋಲ್‌‌‌‌‌‌ಪಂಪ್‌‌‌‌ನ  ಎದುರು  ಬೇರೊಂದು  ವಾಹನವನ್ನು  ಓವರ್‌‌‌‌‌ಟೇಕ್‌‌‌‌‌‌‌ಮಾಡಿ  ಯು-ಟರ್ನ್‌ನಲ್ಲಿ  ರಸ್ತೆಯ  ತೀರಾ  ಬಲ ಬದಿಗೆ ಹೋಗಿ  ರಸ್ತೆ ದಾಟಲು  ನಿಂತಿದ್ದ ಹುಮ್ರಾ ಸಿರಾಜುನ್‌‌‌‌‌‌ನೀಸಾ  (60) ರವರಿಗೆ  ಡಿಕ್ಕಿ  ಹೊಡೆದ  ಪರಿಣಾಮ  ಅವರು  ರಸ್ತೆಗೆ  ಬಿದ್ದು,  ತಲೆಗೆ,  ಹಣೆಗೆ  ತೀವ್ರ  ರಕ್ತ ಗಾಯವಾಗಿ  ಮಾತನಾಡದ ಸ್ಥಿತಿಯಲ್ಲಿದ್ದು,  ಅವರನ್ನು  ಚಿಕಿತ್ಸೆಯ  ಬಗ್ಗೆ  ಬ್ರಹ್ಮಾವರ  ಮಹೇಶ್‌‌‌‌‌‌‌‌‌ಆಸ್ಪತ್ರೆಗೆ ಸಾಗಿಸಿದಲ್ಲಿ  ಅಲ್ಲಿ ವೈದ್ಯರು  ಪರೀಕ್ಷಿಸಿ  ಅದಾಗಲೇ  ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 166/2021 ಕಲಂ: 279, 304(A)  IPC ಯಂತೆ ಪ್ರಕರಣ ದಾಕಲಿಸಲಾಗಿದೆ.
 • ಉಡುಪಿ : ಪಿರ್ಯಾದಿದಾರರು ದಿನೇಶ್ ಶೇಟ್ (32) ವರ್ಷ ತಂದೆ: ಪಾಂಡುರಂಗ ಶೇಟ್ ವಾಸ: ರತ್ನ ನಿಲಯ ಮುಳ್ಳುಗುಡ್ಡೆ ಕವ್ರಾಡಿ ಅಂಚೆ ಮತ್ತು ಗ್ರಾಮ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ರವರು ದಿನಾಂಕ: 23-09-2021ರಂದು ಪಿರ್ಯಾದಿದಾರರು ತನ್ನ ಸ್ನೇಹಿತ ಸುಶಾಂತ್ ನಾಯಕ್ ರವರೊಂದಿಗೆ ಉಡುಪಿ ಸರ್ವಿಸ್ ಬಸ್ ನಿಲ್ದಾಣದಿಂದ ಉಡುಪಿ ಬಿ.ಆರ್ ಶೆಟ್ಟಿ ಆಸ್ಪತ್ರೆಗೆ ನಡೆದುಕೊಂಡು ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ 9-45 ಗಂಟೆಗೆ ಉಡುಪಿ ನಗರ ಸಭೆ ಕಚೇರಿ ಮುಂಭಾಗ ತಲುಪುವಾಗ ಸರ್ವಿಸ್ ಬಸ್ ನಿಲ್ದಾಣದ ಕಡೆಯಿಂದ ಸಿಂಡಿಕೇಟ್ ಸರ್ಕಲ್ ಕಡೆಗೆ KA22MA1909ನೇ ಕಾರಿನ ಚಾಲಕ ರೋಶನ್ ಎಂಬಾತನು ತನ್ನ ಕಾರನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ನಡೆದುಕೊಂಡು ಹೋಗುತ್ತಿದ್ದ ಸುಶಾಂತ್ ನಾಯಕ್ ರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸುಶಾಂತ್ ನಾಯಕ್ ರವರು ರಸ್ತೆಗೆ ಬಿದ್ದು, ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಕೈ-ಕಾಲುಗಳಿಗೆ ತರಚಿದ ಗಾಯವಾಗಿದ್ದವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.ಈ ಬಗ್ಗೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 62/2021 ಕಲಂ: 279, 338 ಐ.ಪಿ.ಸಿ  ಯಂತೆ ಪ್ರಕರಣ ದಾಕಲಿಸಲಾಗಿದೆ.

ವಾಹನ ಕಳವು ಪ್ರಕರಣ:

 • ಬ್ರಹ್ಮಾವರ:  ಪಿರ್ಯಾದಿದಾರರು ಸುಕನ್ಯಾ ಶೆಟ್ಟಿ (38), ಗಂಡ: ವಿಶ್ವಪ್ರತಾಪ್ ಶೆಟ್ಟಿ, ವಾಸ: ದೃಷ್ಠಿ, ಡೋರ್,ನಂ 3-35ಬಿ9, ಬೀಡು ರೋಡ್, ಅಂಬಲಪಾಡಿ, ಇವರು KA-20-D-7394 ನೇ ನೊಂದಣಿ ನಂಬ್ರದ ಮಹೀಂದ್ರಾ ಬೊಲೆರೋ ಗೂಡ್ಸ್ ವಾಹನದ ನೊಂದಣಿ ಮಾಲಿಕರಾಗಿದ್ದು, ಸದ್ರಿ ವಾಹನದ ಚಾಲಕ ನವೀನ್ ಪ್ರಭು ರವರು ದಿನಾಂಕ 23.09.2021 ರಂದು ಸಂಜೆ ಪಿರ್ಯಾದಿದಾರರ ಗಂಡನಿಗೆ ಸಂಬಂಧಿಸಿದ ಉಪ್ಪೂರು ಗ್ರಾಮದ ಉಪ್ಪೂರು ಬಸ್ಸು ನಿಲ್ದಾಣದಿಂದ ಸ್ವಲ್ಪ ಮುಂದೆ ರಾ.ಹೆ 66 ಎಡಬದಿಯಲ್ಲಿ ಇರುವ ವಿಷನ್ ರೂಫಿಂಗ್ಸ್ ಎಂಬ ಫ್ಯಾಕ್ಟರಿಯ ಎದುರುಗಡೆ ಜಾಗದಲ್ಲಿ  ನಿಲ್ಲಿಸಿ ಅದನ್ನು ಲಾಕ್‌ಮಾಡಿ, ಕೀಯನ್ನು ಫ್ಯಾಕ್ಟರಿಯ ಟೇಬಲ್‌ಮೇಲೆ ಇಟ್ಟು ಹೋಗಿದ್ದು. ಯಾರೋ ಕಳ್ಳರು ದಿನಾಂಕ 23.09.2021 ರಂದು ರಾತ್ರಿ 9:00 ಗಂಟೆಯಿಂದ ದಿನಾಂಕ 24.09.2021 ರಂದು ಬೆಳಿಗ್ಗೆ 06:00 ಗಂಟೆಯ ಮಧ್ಯಾವಧಿಯಲ್ಲಿ  ಸದ್ರಿ KA-20-D-7394 ನೇ ನೊಂದಣಿ ನಂಬ್ರದ ಮಹೀಂದ್ರಾ ಬೊಲೆರೋ ಗೂಡ್ಸ್ ವಾಹನವನ್ನು  ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ  ವಾಹನದ ಮೌಲ್ಯ ರೂ 2.80.000/- ಆಗಿರುತ್ತದೆ . [ ವಾಹನದ ವಿವರ:  ಬಿಳಿ ಬಣ್ಣವಾಗಿದ್ದು ಎದುರು ಮಡ್‌ಗಡ್‌ನೀಲಿ ಬಣ್ಣ, ಮಾದರಿ: 2016;  ENGINE NO; GHG1A12531, CHASIS NO;-  MA12N2GHKG1A18508 ],  ಅಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 172/2021 ಕಲಂ 379  ಐಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣ:

 • ಉಡುಪಿ ಪಿರ್ಯಾದುದಾರರು ಡಾ. ಶಕಿಲಾ ಸಚಿನ್‌(47) ಡಾ. ಸಚಿನ್‌ರಾಜಕುಮಾರ್‌ವಾಸ: ವಿಲ್ಲಾ ನಂಬ್ರ: 54, ಸಾಯಿ ರಾಧಾ, ಗ್ರೀನ್‌ವ್ಯಾಲಿ, ಪೆರಂಪಳ್ಳಿ, ಕುಂಜಿಬೆಟ್ಟು ಅಂಚೆ, ಉಡುಪಿ ತಾಲೂಕು ಇವರು ಬನ್ನಂಜೆಯಲ್ಲಿರುವ ಮಂಜುನಾಥ ಕಣ್ಣಿನ ಆಸ್ಪತ್ರೆಯಲ್ಲಿ ನೇತ್ರ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದು, ದಿನಾಂಕ: 23/09/2021 ರಂದು 19:30 ಗಂಟೆಯಿಂದ ದಿನಾಂಕ: 24/09/2021 ರಂದು ಬೆಳಿಗ್ಗೆ 08:30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಮಂಜುನಾಥ ಕಣ್ಣಿನ ಆಸ್ಪತ್ರೆಯ ಶೆಟರ್‌ನ ಬೀಗವನ್ನು ಮುರಿದು, ಪಿರ್ಯಾದುದಾರರು ಕೆಲಸ ಮಾಡುವ ತಪಾಸಣಾ ಕೊಠಡಿಯ ಡ್ರಾವರ್‌ನ ಚಿಲಕವನ್ನುಯಾವುದೋ ಆಯುಧದಿಂದ ಮೀಟಿ ತೆಗೆದು, ಮೇಲಿನ ಡ್ರಾವರ್‌ನಲ್ಲಿದ್ದ ರೂ. 20,000/-, ಕೆಳಗಡೆ ಡ್ರಾವರ್‌ನಲ್ಲಿ ಇಟ್ಟಿದ್ದ ರೂ. 4,50,000/- ಹಣ ಹಾಗೂ ರಿಸೆಪ್ಷನ್‌ನಲ್ಲಿದ್ದ ರೂ. 4,500/- ಹಣವನ್ನು ಮತ್ತು ಸಿಸಿ ಟಿವಿ ಡಿವಿಆರ್‌ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂ. 4,79,500/- ಆಗಬಹುದು.ಈ ಬಗ್ಗೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 138/2021 ಕಲಂ 457, 380 IPC    ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಶಂಕರನಾರಾಯಣ:  ದಿನಾಂಕ 11-03-2021 ರಂದು  18;30  ಗಂಟೆಯಿಂದ  19;00  ಗಂಟೆಯ  ಮಧ್ಯದ  ಅವಧಿಯಲ್ಲಿ    ಬೈಂದೂರು   ತಾಲೂಕಿನ  ಹಳ್ಳಿಹೊಳೆ  ಗ್ರಾಮದ   ಸರ್ವೇ  ನಂಬ್ರ   136  ರಲ್ಲಿ   ಇರುವ   ತೋಟಕ್ಕೆ  ನೀರು  ಹಾಯಿಸಲು  ಇರಿಸಿದ   ಡಿಸೇಲ್  ಇಂಜಿನನ್ನು  7 ರಿಂದ  8 ಜನ   ಅಪರಿಚಿತ ವ್ಯಕ್ತಿಗಳು   ಸೇರಿ  ಸಮಾನ ಉದ್ದೇಶದಿಂದ  ಕಳವು  ಮಾಡಿಕೊಂಡು   ಕೆಎ, 15 ಎ.0612   ನೇ  ನಂಬ್ರದ    ವಾಹನದಲ್ಲಿ   ಸಾಗಾಟ  ಮಾಡಿಕೊಂಡು   ಹೋಗಿರುತ್ತಾರೆ. ಈ ಬಗ್ಗೆ ವಿಜೇಂದ್ರ  ಚಾತ್ರ  ಪ್ರಾಯ 53  ವರ್ಷ   ತಂದೆ.  ದಿ ನಾಗೇಶ್ವರ  ಚಾತ್ರ  ವಾಸ.. ಕೊಳೆಕೋಡು  ಹಳ್ಳಿಹೊಳೆ  ಗ್ರಾಮ  ಬೈಂದೂರು  ತಾಲೂಕು ರವರು ಶಂಕರನಾರಾಯಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದು ಠಾಣಾ ಅಪರಾಧ ಕ್ರಮಾಂಕ 91/2021  ಕಲಂ:379 ಜೊತೆಗೆ 34 ಐ.ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಬ್ರಹ್ಮಾವರ:  ಬ್ರಹ್ಮಾವರ ತಾಲೂಕು, ಹೆಗ್ಗುಂಜೆ ಗ್ರಾಮದ, ಮಂದಾರ್ತಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ವಠಾರ ಹಾಗೂ ಮಂದಾರ್ತಿ ಹೈಸ್ಕೂಲ್ ಸರ್ಕಲ್ ಬಳಿ ಕೆಲವು ಬೀಡಾಡಿ ದನಗಳು ಹಗಲು ವೇಳೆಯಲ್ಲಿ ಹತ್ತಿರದ ಖಾಲಿ ಸ್ಥಳದಲ್ಲಿನ ಹುಲ್ಲನ್ನು ಮೇಯ್ದು ರಾತ್ರಿ ವೇಳೆಯಲ್ಲಿ ದೇವಸ್ಥಾನದ ಪರಿಸರ ಹಾಗೂ ಹೈಸ್ಕೂಲ್ ವಠಾರದಲ್ಲಿ ಮಲಗುವುದನ್ನು ಪಿರ್ಯಾದಿ ಪ್ರಮೋದ್ ಕುಮಾರ್ ಶೆಟ್ಟಿ (38), ತಂದೆ: ವಿಶ್ವನಾಥ ಶೆಟ್ಟಿ, ವಾಸ: ಮಂಜುಶ್ರೀ,ಮೈರ್‌ಕೋಮೆ, ಹೆಗ್ಗುಂಜೆ ಗ್ರಾಮ,  ಮಂದಾರ್ತಿ ರವರು ನೋಡಿದ್ದು, ದಿನಾಂಕ 21.08.2021 ರ ನಂತ್ರ ದೇವಸ್ಥಾನದ ಪರಿಸರ ಹಾಗೂ ಹೈಸ್ಕೂಲ್ ಪರಿಸರದಲ್ಲಿ ಇದ್ದ 2 ದನಗಳು ಕಾಣದೇ ಇದ್ದು, ಆಗ ಪಿರ್ಯಾದಿದಾರರು ಸದ್ರಿ ದನಗಳು ಮೇಯುವ ಬಗ್ಗೆ ಬೇರೆ ಕಡೆ ಹೋಗಿರ ಬಹುದೆಂದು ಭಾವಿಸಿರುತ್ತಾರೆ. ನಂತ್ರ ಸದ್ರಿ ಕಾಣೆಯಾಗಿರುವ ದನಗಳನ್ನು ಹುಡುಕಾಡಿದ್ದಲ್ಲಿ ಎಲ್ಲಿಯೂ ಕಂಡು ಬಂದಿರುವುದಿಲ್ಲ. ಆದರೇ ದಿನಾಂಕ 23.09.2021 ರಂದು ಸಾಮಾಜಿಕ ಜಾಲತಾಣದಲ್ಲಿ ಮಂದಾರ್ತಿ ಹೈಸ್ಕೂಲ್ ಸರ್ಕಲ್ ಬಳಿ ರಾತ್ರಿ ವೇಳೆ ಇಬ್ಬರೂ ಕಳ್ಳರು 2 ದನಗಳನ್ನು ಕಳ್ಳತನ ಮಾಡಿ ಹೋಗಿರುವುದು ಕಂಡು ಬಂದಿರುತ್ತದೆ. ಅಲ್ಲದೇ ದಿನಾಂಕ 21.08.2021 ರಿಂದ ಪಿರ್ಯಾದಿದಾರರಿಗೆ ಕಾಣ ಸಿಗದೇ ಇದ್ದ ದನಗಳನ್ನು ಸಹಾ ಇದೇ ಕಳ್ಳರು ಕಳ್ಳತನ ಮಾಡಿರುವುದಾಗಿದೆ. ಕಳ್ಳತನವಾದ  2 ದನಗಳ ಮೌಲ್ಯ ಸುಮಾರು ರೂ. 30000 /- ಆಗಬಹುದು. ದನಗಳನ್ನು ಕಳ್ಳತನ ಮಾಡಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ನೀಡಿರುವ ಪಿರ್ಯಾದು ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 171/2021 ಕಲಂ 379  ಐಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಹೆಂಗಸು ಕಾಣೆ ಪ್ರಕರಣ:

 • ಕುಂದಾಪುರ ಗ್ರಾಮಾಂತರ : ಫಿರ್ಯಾದುದಾರ ಪ್ರವೀಣ್ ಎಮ್ (29), ತಂದೆ ಮಂಜುನಾಥ ವಾಸ: ಬಾಳಿಕೆರೆ ದೇವಲ್ಕುಂದ ಗ್ರಾಮ ಇವರ  ಚಿಕ್ಕಮ್ಮ ಶ್ರೀಮತಿ ಎಂಬವರು ಆಶಾ ಕಾರ್ಯ ಕರ್ತೆಯಾಗಿ ಕೆಲಸ ಮಾಡಿಕೊಂಡಿದ್ದು  ಈ ದಿನ ದಿನಾಂಕ 24/09/2021 ರಂದು ಬೆಳಿಗ್ಗೆ 08:00 ಗಂಟೆ ಸಮಯಕ್ಕೆ ಮನೆಯಿಂದ ಹೊರಗೆ ಹೋಗಿದ್ದು ಮಾನಸಿಕವಾಗಿ ನೊಂದಿರುವುದಾಗಿ ಸ್ನೇಹಿತರಿಗೆ ಸಂದೇಶ ಕಳುಹಿಸಿ ಮೊಬೈಲ್ ಸ್ವಚಿ ಆಫ್ ಮಾಡಿ ರುತ್ತಾರೆ. ಈ ಬಗ್ಗೆ ಮನೆಯವರೆಲ್ಲಾ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ .ಚಹಾರೆ 1. ದಪ್ಪ ಶರೀರ , ಕಪ್ಪು  ಮೈ ಬಣ್ಣ ಎತ್ತರ 4.5, 2. ಕನ್ನಡ ಬಾಷೆ ಮಾತಾಡುತ್ತಾರೆ.3 ಚೂಡಿದಾರ  ಧರಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ  61/2021 ಕಲಂ: ಹೆಂಗಸು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.


ಇತ್ತೀಚಿನ ನವೀಕರಣ​ : 24-09-2021 06:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080