ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 23/08/2022 ರಂದು ಪಿರ್ಯಾದಿದಾರಾದ ನಿತ್ಯಾನಂದ (39), ತಂದೆ ದಿ. ಸಾಧು ಪೂಜಾರಿ, ವಾಸ ಮಾತೃಶ್ರೀ, ಲಕ್ಷ್ಮೀ ನಗರ, ನರ್ನಾಡು, ಕೊಳಲಗಿರಿ ಅಂಚೆ, ಉಪ್ಪೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ಮೋಟಾರ್ ಸೈಕಲ್ ನಲ್ಲಿ ಸ್ನೇಹಿತ ಮಂಜುನಾಥರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಮನೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಕೆ.ಜಿ ರೋಡ್ – ಹಾವಂಜೆ ಮುಖ್ಯ ರಸ್ತೆಯಲ್ಲಿ  ಉಪ್ಪೂರು ಗ್ರಾಮದ  ಅಮ್ಮುಜೆ ರೈಲ್ವೆ ಒವರ್ ಬ್ರಿಡ್ಜ್ ದಾಟಿ ಸ್ವಲ್ಪ ಮುಂದೆ ತಲುಪುವಾಗ ಮಧ್ಯಾಹ್ನ 03:15 ಗಂಟೆಗೆ ಅವರ ಮುಂಭಾಗದಲ್ಲಿ  ಗಣೇಶ್ ಪೂಜಾರಿ ರವರು ಅವರ KA-20-D-1496 ನೇ ಆಪೇ ರಿಕ್ಷಾದಲ್ಲಿ ಹಾವಂಜೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅವರ ಮುಂಭಾಗದಲ್ಲಿ ನಾಯಿಯೊಂದು ಒಮ್ಮೇಲೇ ಅಡ್ಡ ಬಂದ ಪರಿಣಾಮ ಅದನ್ನು ತಪ್ಪಿಸಲು ಹೋಗಿ ರಿಕ್ಷಾದ ನಿಯಂತ್ರಣ ತಪ್ಪಿ ರಿಕ್ಷಾವು ರಸ್ತೆಯ ಎಡ ಭಾಗದ ಮಣ್ಣು ರಸ್ತೆಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದ್ದು, ಈ ಅಪಘಾತದ ಪರಿಣಾಮ ಗಣೇಶ್‌ ಪೂಜಾರಿರವರ ಎದೆಗೆ ತಲೆಗೆ ತೀವ್ರ ಒಳ ಜಖಂ ಆಗಿದ್ದು, ಅವರನ್ನು ಚಿಕಿತ್ಸೆ ಬಗ್ಗೆ ಉಡುಪಿಯ ಹೈಟೆಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ವೈಧ್ಯರಿಂದ ಪ್ರಥಮ ಚಿಕಿತ್ಸೆ ಕೊಡಿಸಿ, ವೈಧ್ಯರ ಸಲಹೆಯಂತೆ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರಗೆ ಮದ್ಯಾಹ್ನ 4:00 ಗಂಟೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈಧ್ಯರು ಗಣೇಶ್‌ ಪೂಜಾರಿ (53) ರವರು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 141/2022 ಕಲಂ : 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ರಘುನಾಥ ಪೂಜಾರಿ( 44), ತಂದೆ: ಗೋಪ ಪೂಜಾರಿ, ವಾಸ:  ಉಪ್ಪೂರು, ಕೊಳಲಗಿರಿ ಪೋಸ್ಟ್  ಇವರು ದಿನಾಂಕ 22/8/2022 ರಂದು ತನ್ನ KA-20-AA- 8359 ನೇ ಆಟೋ ರಿಕ್ಷಾದಲ್ಲಿ ಬಾಡಿಗೆ ಬಗ್ಗೆ ಸಂತೆಕಟ್ಟೆಯಿಂದ ಹೊರಟು ಕಲ್ಯಾಣಪುರ ಮಾರ್ಗವಾಗಿ ಮಿಲಾಗ್ರಿಸ್ ಕಾಲೇಜಿಗೆ ಹೋಗುತ್ತಿರುವಾಗ ಬೆಳಿಗ್ಗೆ 9:30 ಗಂಟೆ ಸಮಯಕ್ಕೆ ಕಲ್ಯಾಣಪುರ ಗಣಪತಿ ಕೋ ಅಪರೇಟಿವ್ ಸೊಸೈಟಿ ಬಳಿ ತಲುಪಿದಾಗ ಪಿರ್ಯಾದಿದಾರರ ಎದುರಿನಿಂದ  ಕಲ್ಯಾಣಪುರ ಕಡೆಯಿಂದ ಸಂತೆ ಕಟ್ಟೆ ಕಡೆಗೆ KA-04-JS-8504ನೇ ಸ್ಕೂಟರಿನಲ್ಲಿ ಸವಾರ ಮಹಿಳೆ ಸ್ಕೂಟರಿನಲ್ಲಿ ಸಹ ಸವಾರನನ್ನು ಕುಳಿರಿಸಿಕೊಂಡು ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಸ್ಕೂಟರನ್ನು ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೆ ಸ್ಕೂಟರನ್ನು ಒಮ್ಮೆಲೇ ಬಲ ಬದಿಗೆ ತಿರುಗಿಸಿದಾಗ ಪಿರ್ಯಾದಿದಾರರು ಆಟೋರಿಕ್ಷಾ ಸ್ಕೂಟರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬ್ರೇಕ್ ಹಾಕಿದಾಗ ಸ್ಕೂಟರ್ ಆಟೋ ರಿಕ್ಷಾವನ್ನು ಸವರಿಕೊಂಡು ಹೋಗಿ ಸ್ಕೂಟರ್ ಸಮೇತ ಸವಾರ ಹಾಗೂ ಸಹಸವಾರ ರಸ್ತೆಗೆ ಬಿದ್ದು ಸಹಸವಾರನ ಮುಖಕ್ಕೆ ಹಾಗೂ ಕೈಗೆ ಗಾಯ ಆಗಿದ್ದು ಅಲ್ಲದೆ ಪಿರ್ಯಾದಿದಾರರು ಆಟೋ ರಿಕ್ಷಾ   ಪಲ್ಟಿಯಾಗಿ ಪಿರ್ಯಾದಿದಾರರ ಎಡಕಾಲು ರಿಕ್ಷಾದ ಕೆಳಗೆ ಸಿಲುಕಿ ಎಡಕಾಲಿನ ಮಣಿಗಂಟಿನ ಬಳಿ ಮೂಳೆ ಮುರಿತದ ಜಖಂ ಉಂಟಾಗಿದ್ದು. ಗಾಯಗೊಂಡ ಪಿರ್ಯಾದಿದಾರರನ್ನು ಅಲ್ಲಿ ಸೇರಿದ ಸಾರ್ವಜನಿಕರು ಉಪಚರಿಸಿ ಒಂದು ಆಟೋ ರಿಕ್ಷಾದಲ್ಲಿ ಕಲ್ಯಾಣಪುರ ಗೊರಟ್ಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿ ಪಿರ್ಯಾದಿದಾರರನ್ನು ಒಳ ರೋಗಿಯಾಗಿ ದಾಖಲು ಮಾಡಿರುತ್ತಾರೆ.  ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 69/2022 ಕಲಂ: 279, 337, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ಅಬ್ದನ್‌ ಚಾರ್ಲ್ಸ್‌ ಸಿಕ್ವೇರಾ (55), ತಂದೆ: ದಿ. ಚಾರ್ಲ್ಸ್‌ ಸಿಕ್ವೇರಾ, ವಾಸ: 7.2.8-1/ಎ, ಗಾಂಧಿ ಮೈದಾನ ಹತ್ತಿರ, ಪರ್ಕಳ ಅಂಚೆ, ಹೆರ್ಗಾ ಗ್ರಾಮ, ಉಡುಪಿ ತಾಲೂಕು ಇವರು ದಿನಾಂಕ 22/08/2022 ರಂದು ಬೆಳಿಗ್ಗೆ 11:15 ಗಂಟೆಗೆ ತನ್ನ KA-20-EK-2790 ನೇ ಸ್ಕೂಟರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 169(ಎ) ರಲ್ಲಿ ಆತ್ರಾಡಿಯಿಂದ ಪರ್ಕಳ ಕಡೆಗೆ ಹೋಗುತ್ತಿದ್ದು , ಹೆರ್ಗಾ ಗ್ರಾಮದ ಸುರಕ್ಷಾ ಭವನ ಸಮೀಪ ತಲುಪುತ್ತಿದ್ದಂತೆ ಪರ್ಕಳ ಕಡೆಯಿಂದ  ಆಪಾದಿತ ಭವಿತ್‌ KA-03-MH-9100 ನೇ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಎಡ ಕೈ ಮುಂಗೈಯ ಮೂಳೆ ಮುರಿತ ಹಾಗೂ ಬೆನ್ನಿಗೆ ಗುದ್ದಿದ ಒಳನೋವು  ಹಾಗೂ ಎಡ ಕಾಲಿಗೆ ತರಚಿದ ಗಾಯ ಉಂಟಾದವರನ್ನು ರಮೇಶ್‌ ಎಂಬುವವರು ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 108/2022 ಕಲಂ : 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾದ ಕಣ್ಣಮ್ಮ(22), ಗಂಡ: ಪಾಂಡಿ, ವಾಸ: ಧರ್ಮಶ್ರೀ ಕಾಲನಿ, ಪಾಂಬೂರು, ಪಡುಬೆಳ್ಳೆ ಅಂಚೆ ಬೆಳ್ಳೆ  ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ಗಂಡ ಪಾಂಡಿ (27) ರವರು ವಿಪರೀತ ಮದ್ಯಪಾನ  ಮಾಡುವ ಚಟವನ್ನು ಹೊಂದಿದ್ದು, ದಿನಾಂಕ 22/08/2022 ರಂದು ರಾತ್ರಿ 10:00  ಗಂಟೆಯಿಂದ  ದಿನಾಂಕ 23/08/2022 ರಂದು ಬೆಳಿಗ್ಗೆ  6:00 ಗಂಟೆಯ ನಡುವಿನ  ಅವಧಿಯಲ್ಲಿ  ಪಿಲಾರು ಗ್ರಾಮದ ಕುಡ್ತಕುಮೇರಿ ಎಂಬಲ್ಲಿ ಗಿರಿಧರ ಪೈರವರ ಶೆಡ್‌ನಲ್ಲಿ ಮಾಡಿನ ಕಬ್ಬಿಣದ ಜಂತಿಗೆ  ನೈಲಾನ್‌ ಶಾಲ್‌ನ್ನು ಕುತ್ತಿಗೆ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.  ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 22/2022  ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಶಿರ್ವಾ: ದಿನಾಂಕ 22/08/2022 ರಂದು ರಾಘವೇಂದ್ರ ಸಿ. ಪೊಲೀಸ್‌ ಉಪನಿರೀಕ್ಷಕರು,  ಶಿರ್ವಾ ಪೊಲೀಸ್‌ ಠಾಣೆ ಇವರು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಬೆಳಪು ಗ್ರಾಮದ ಪಣಿಯೂರು ಬಳಿ ಓರ್ವ ವ್ಯಕ್ತಿ  ನಿಂತಿದ್ದು, ಆತನು ಮೇಲ್ನೋಟಕ್ಕೆ ಯಾವುದೋ ಅಮಲು ಪದಾರ್ಥ ಸೇವನೆ ಮಾಡಿರುವುದು ಕಂಡು ಬಂದಿದ್ದು ಅತನ ಹೆಸರು ವಿಳಾಸ  ಕೇಳಲಾಗಿ ತುಫೇಲ್ (19), ತಂದೆ: ಖಾಲಿದ್, ವಾಸ:  ಮೂಳೂರು, ಕಾಪು ತಾಲೂಕು, ಉಡುಪಿ ಜಿಲ್ಲೆ ಎಂದು ತಿಳಿಸಿದ್ದು,  ಆತನನ್ನು ವಶಕ್ಕೆ  ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆಪಾದಿತನು ಗಾಂಜಾ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ವರದಿ 23/08/2022 ರಂದು ಬಂದಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 59/2022, ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ದಿನಾಂಕ 22/08/2022 ರಂದು ಶ್ರೀಶೈಲ ಮುರಗೋಡ, ಪೊಲೀಸ್‌ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ  ಉಳಿಯಾರಗೋಳಿ ಗ್ರಾಮದ ಪೊಲಿಪು ಜಂಕ್ಷನ್ ಬಳಿ ಅನುಮಾನಾಸ್ಪದ ಓರ್ವ ವ್ಯಕ್ತಿ ಕಂಡು ಬಂದಿದ್ದು ಆತನು ಮಾದಕ ಸೇವನೆಯ ನಶೆಯಲ್ಲಿರುವ ಬಗ್ಗೆ ಅನುಮಾನಗೊಂಡು ಅವನ ಬಳಿ ಹೋಗಿ ಅವನ ಹೆಸರು ವಿಳಾಸ  ಕೇಳಿ ಅವನನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವನು  ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿ ವಿಳಾಸ ತಿಳಿದುಕೊಳ್ಳಲಾಗಿ  ಆತನ ಹೆಸರು ಮಹಮ್ಮದ್     ಮಹಮ್ಮದ್‌ ಅಫ್ರಜ್ (19), ತಂದೆ: ಅಬ್ದುಲ್‌ ಖಾದರ್‌ವಾಸ:ತೋಪನಂಗಡಿ, ಶಿವಾ೯  
     ಎಂದು ತಿಳಿಸಿದ್ದು, ಆತನನ್ನು ವೈದ್ಯಕೀಯ ಪರೀಕ್ಷೆಯ ಬಗ್ಗೆ ಪ್ರೊಫೆಸರ್ ಅಂಡ್ ಹೆಡ್ ಕೆ.ಎಂ.ಸಿ ಪೊರೆನ್ಸಿಕ್ ವಿಭಾಗ  ಮಣಿಪಾಲ  ಇವರ  ಮುಂದೆ ಹಾಜರು ಪಡಿಸಿದ್ದು , ಪರೀಕ್ಷಿಸಿದ ವೈದ್ಯರು ದಿನಾಂಕ 23/08/2022 ರಂದು ಮಹಮ್ಮದ್ ಅಫ್ರಾಜ್‌ ಗಾಂಜಾ ಸೇವಿಸಿರುವ ಬಗ್ಗೆ ದೃಢ ಪತ್ರ ನೀಡಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 88/2022 ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 22/08/2022 ರಂದು ರಾಜಶೇಖರ್‌ ವಂದಲಿ‌,  ಪೊಲೀಸ್‌ ಉಪ ನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ ಇವರು ರೌಂಡ್ಸ್‌ ಕರ್ತವ್ಯದಲ್ಲಿದ್ದಾಗ ಶಿವಳ್ಳಿ ಗ್ರಾಮದ ಮಣಿಪಾಲ ಆರ್‌ಟಿಓ ಕಛೇರಿ ರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿ ಅಮಲಿನಲ್ಲಿರುವುದು ಕಂಡು ಬಂದಿದ್ದು, ಆತನು ಗಾಂಜಾವನ್ನು ಸೇವಿಸಿರುವ ಬಗ್ಗೆ ಅನುಮಾನ ಬಂದ ಮೇರೆಗೆ  ವಿಚಾರಣೆ ನಡೆಸಿದಾಗ ಬಾಯಿಯಿಂದ ಗಾಂಜಾದ ಘಾಟು ವಾಸನೆ ಬರುತ್ತಿದ್ದು, ಆರೋಪಿ ರಿಶಿತ್‌ ಶಿವಕುಮಾರ್‌ ವಡ್ಡೆಪಳ್ಳಿ (21), ತಂದೆ: ಶಿವಕುಮಾರ್‌ ವಡ್ಡೆಪಳ್ಳಿ, ವಾಸ: ರೂಂ ನಂಬ್ರ A – 2903, ರೋಯಲ್‌ ಎಂಬೆಸಿ ಅಪಾರ್ಟ್‌ಮೆಂಟ್‌, ವಿದ್ಯಾರತ್ನ ನಗರ, ಮಣಿಪಾಲ. ಖಾಯಂ ವಿಳಾಸ: H. NO 6 - 1–67/19/1, ಫ್ಲ್ಯಾಟ್‌ ನಂಬ್ರ 502, ಸೂಪರ್‌ ಕ್ಲಾಸಿಕ್‌ ಅಪಾರ್ಟ್‌ಮೆಂಟ್‌, ಸೈಫಾಬಾದ್‌, ಹೈದ್ರಾಬಾದ್‌, ತೆಲಂಗಾಣ ರಾಜ್ಯ ಇತನು ಗಾಂಜಾ ಸೇವಿಸಿದ ಬಗ್ಗೆ ಅನುಮಾನ ಬಂದ ಕಾರಣ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ  ವೈದ್ಯರ ಮುಂದೆ ಹಾಜರುಪಡಿಸಿ  ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು,  ಆರೋಪಿ ಗಾಂಜಾವನ್ನು ಸೇವಿಸಿದ ಬಗ್ಗೆ ಮಣಿಪಾಲ ಕೆ.ಎಂ.ಸಿ ಪೊರೆನ್ಸಿಕ್ ವಿಭಾಗದ ವೈದ್ಯರು 23/08/2022 ರಂದು ದೃಢ ಪತ್ರ ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 109/2022 ಕಲಂ: 27 (B) NDPS ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 22/08/2022 ರಂದು ರಾಜಶೇಖರ್‌ ವಂದಲಿ‌,  ಪೊಲೀಸ್‌ ಉಪ ನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ ಇವರು ರೌಂಡ್ಸ್‌ ಕರ್ತವ್ಯದಲ್ಲಿದ್ದಾಗ  ಶಿವಳ್ಳಿ ಗ್ರಾಮದ ಮಣಿಪಾಲ ಕಾಯಿನ್‌ ಸರ್ಕಲ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿ ಅಮಲಿನಲ್ಲಿರುವುದು ಕಂಡು ಬಂದಿದ್ದು, ಆತನು ಗಾಂಜಾವನ್ನು ಸೇವಿಸಿರುವ ಬಗ್ಗೆ ಅನುಮಾನ ಬಂದ ಮೇರೆಗೆ ಆರೋಪಿ ನಕುಲ್‌ ಪೊನ್ನಪ್ಪ (21), ತಂದೆ: ಅಪ್ಪಯ್ಯ ಕೆ.ಎಸ್,  ವಾಸ: ರೂಂ ನಂಬ್ರ B-2401, ರೋಯಲ್‌ ಎಂಬೆಸಿ ಅಪಾರ್ಟ್‌ಮೆಂಟ್‌, ವಿದ್ಯಾರತ್ನ ನಗರ, ಮಣಿಪಾಲ, ಖಾಯಂ ವಿಳಾಸ: ಅರೆಕಾಡು, ಮಡಿಕೇರಿ, ಕೊಡಗು ಜಿಲ್ಲೆ ಇತನನ್ನು ವಿಚಾರಣೆ ನಡೆಸಿದಾಗ ಬಾಯಿಯಿಂದ ಗಾಂಜಾದ ಘಾಟು ವಾಸನೆ ಬರುತ್ತಿದ್ದು, ಆರೋಪಿ ಗಾಂಜಾ ಸೇವಿಸಿದ ಬಗ್ಗೆ ಅನುಮಾನ ಬಂದ ಕಾರಣ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ  ವೈದ್ಯರ ಮುಂದೆ ಹಾಜರುಪಡಿಸಿ  ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆರೋಪಿ ಗಾಂಜಾವನ್ನು ಸೇವಿಸಿದ ಬಗ್ಗೆ ಮಣಿಪಾಲ ಕೆ.ಎಂ.ಸಿ ಪೊರೆನ್ಸಿಕ್ ವಿಭಾಗದ ವೈದ್ಯರು ದಿನಾಂಕ 23/08/2022 ರಂದು ದೃಢ ಪತ್ರ ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 110/2022 ಕಲಂ: 27 (B) NDPS ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 22/08/2022 ರಂದು ರಾಜಶೇಖರ್‌ ವಂದಲಿ‌,  ಪೊಲೀಸ್‌ ಉಪ ನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ ಇವರು ರೌಂಡ್ಸ್‌ ಕರ್ತವ್ಯದಲ್ಲಿದ್ದಾಗ ಶಿವಳ್ಳಿ ಗ್ರಾಮದ ಮಣಿಪಾಲ ಮಣಿಪಾಲ ಪೆರಂಪಳ್ಳಿ ರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿ ಅಮಲಿನಲ್ಲಿರುವುದು ಕಂಡು ಬಂದಿದ್ದು, ಆತನು ಗಾಂಜಾವನ್ನು ಸೇವಿಸಿರುವ ಬಗ್ಗೆ ಅನುಮಾನ ಬಂದ ಮೇರೆಗೆ ಆರೋಪಿ ಅನುರಾಗ್‌ ಕುಮಾರ್ (20),ತಂದೆ: ರಮಾನಂದ ರಾಯ್, ವಾಸ:‌ಒಪುಲೆನ್ಸ್‌ ರೆಸಿಡೆನ್ಸ್, ಈಶ್ವರ ನಗರ, ಮಣಿಪಾಲ. ಖಾಯಂ ವಿಳಾಸ: ರಜೌರ, ಬೇಗುಸರಾಯ್, ಬಿಹಾರ ರಾಜ್ಯ ಇತನನ್ನು ವಿಚಾರಣೆ ನಡೆಸಿದಾಗ ಬಾಯಿಯಿಂದ ಗಾಂಜಾದ ಘಾಟು ವಾಸನೆ ಬರುತ್ತಿದ್ದು, ಆರೋಪಿ ಗಾಂಜಾ ಸೇವಿಸಿದ ಬಗ್ಗೆ ಅನುಮಾನ ಬಂದ ಕಾರಣ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ  ವೈದ್ಯರ ಮುಂದೆ ಹಾಜರುಪಡಿಸಿ  ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು ಆರೋಪಿ ಗಾಂಜಾವನ್ನು ಸೇವಿಸಿದ ಬಗ್ಗೆ ಮಣಿಪಾಲ ಕೆ.ಎಂ.ಸಿ ಪೊರೆನ್ಸಿಕ್ ವಿಭಾಗದ ವೈದ್ಯರು ದಿನಾಂಕ  23/08/2022 ರಂದು ದೃಢ ಪತ್ರ ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 111/2022 ಕಲಂ: 27 (B) NDPS ರಂತೆ ಪ್ರಕರಣ ದಾಖಲಾಗಿರುತ್ತದೆ.



ಇತ್ತೀಚಿನ ನವೀಕರಣ​ : 24-08-2022 09:54 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080