ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಉಡುಪಿ: ಪಿರ್ಯಾದಿದಾರರಾದ ಗಣೇಶ್ ಕೃಷ್ಣ ಶರ್ಮ.ಕೆ(45), ತಂದೆ: ದಿ.ಕೆ ಮಹಾಬಲ ಭಟ್, ವಾಸ: ಮಾನಸ ಪೊಲೀಸ್ ಕ್ವಾಟ್ರಸ್ ಎದುರುಗಡೆ ದೊಡ್ಡಣ್ಣಗುಡ್ಡೆ ಶಿವಳ್ಳಿ ಗ್ರಾಮ ಉಡುಪಿ ತಾಲೂಕು ಇವರು ದಿನಾಂಕ: 23/08/2021 ರಂದು ಕರಾವಳಿಯಿಂದ ಕಲ್ಸಂಕದ ಕಡೆಗೆ ತನ್ನ ಕೆಲಸದ ನಿಮಿತ್ತ ರಾಷ್ಟ್ರೀಯ ಹೆದ್ದಾರಿ 169(ಎ) ನೇದರಲ್ಲಿ ತನ್ನ ಮೋಟಾರು ಸೈಕಲ್ ನಂಬ್ರ KA-20-EC-1742 ನೇದನ್ನು ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಮಧ್ಯಾಹ್ನ 2:30 ಗಂಟೆಗೆ ಬನ್ನಂಜೆ ಜಂಕ್ಷನ್ ತಲುಪುವಾಗ ಸಿ.ಟಿ ಬಸ್ ನಿಲ್ದಾಣದ ಕಡೆಯಿಂದ KA-20-C-1416ನೇ ರಿಕ್ಷಾ ಚಾಲಕ ಸಂಪತ್ ಆಚಾರ್ಯ ತನ್ನ ಆಟೋ ರಿಕ್ಷಾವನ್ನು ಚಲಾಯಿಸಿಕೊಂಡು ಬಂದು ಬನ್ನಂಜೆ ಜಂಕ್ಷನ್ ನಲ್ಲಿ ವೃತ್ತವನ್ನು ಬಳಸದೇ ದುಡುಕುತನ ಹಾಗೂ ನಿರ್ಲಕ್ಷತನದಿಂದ ಏಕಾಏಕಿಯಾಗಿ ಬಲಕ್ಕೆ ತಿರುಗಿಸಿ ಪಿರ್ಯಾದಿದಾರರ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು, ಬಲಕೈಯ ಮೂಳೆಮುರಿತದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 49/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಪ್ರಸನ್ನ (36)ರ್ಷ, ತಂದೆ: ಗಣೇಶ ಹೆಜಮಾಡಿ, ವಾಸ: 3/12 ಪುಟ್ಟಣ್ಣ ನಿಲಯ, ಆಲಡೆ ದೈವಸ್ಥಾನದ  ಹತ್ತಿರ ಹೆಜಮಾಡಿ ಗ್ರಾಮ, ಕಾಪು ತಾಲೂಕು ಇವರು ದಿನಾಂಕ 23/08/2021 ರಂದು ತನ್ನ ಟೋ ಮಾಡುವ ವಾಹನದಲ್ಲಿ ಪಡುಬಿದ್ರಿಯಿಂದ ಹೆಜಮಾಡಿಗೆ ಹೋಗುತ್ತಿರುವ ಸಮಯ ರಾತ್ರಿ 20:00 ಗಂಟೆಗೆ ಕಾಪು ತಾಲೂಕು ನಡ್ಸಾಲು  ಗ್ರಾಮದ ಬೂಡು ಜಾರದಂಧಾಯ ದೈವಸ್ಥಾನದ ಸ್ವಾಗತ ಗೋಪುರದ ಎದುರು ತಲುಪಿದಾಗ, ರಾಷ್ಟ್ರೀಯ ಹೆದ್ದಾರಿ 66 ರ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ KA-19-MG-4577  ಕಾರು ಚಾಲಕ ಕಾರ್ತಿಕೇಯ ಎ ದಿನೇಶ ಶೆಣೈ ಮೂಡುಬಿದ್ರಿ ಎಂಬುವವರು ಕಾರನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ, ರಸ್ತೆಯ ಪೂರ್ವ ಬದಿಯಲ್ಲಿ ನಡೆದು ಹೋಗುತ್ತಿದ್ದ 35-40 ವರ್ಷ ವಯಸ್ಸಿನ ಅಪರಿಚಿತ ಗಂಡಸಿಗೆ ಡಿಕ್ಕಿ ಹೊಡೆದ ಪರಿಣಾಮ, ಆತ ಕಾರಿನ ಗ್ಲಾಸ ಮೇಲೆ ಬಿದ್ದು, ಬಳಿಕ ರಸ್ತೆಗೆ ಎಸೆಯಲ್ಪಟ್ಟು ತಲೆಗೆ, ಹೊಟ್ಟೆಗೆ ಗಂಭೀರ ಗಾಯಗೊಂಡಿದ್ದು  ಗಾಯಾಳುವನ್ನು ಪಿರ್ಯಾದಿದಾರರು ಅಂಬುಲೆನ್ಸ್ ಒಂದರಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು,  ರಾತ್ರಿ  20:30 ಗಂಟೆಗೆ ಆಸ್ಪತ್ರೆಗೆ ತಲುಪಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಗಾಯಾಳು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 82/2021 ಕಲಂ: 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 21/08/2021 ರಂದು ಸಂಜೆ 7:30  ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ  ಚೈತ್ರಾ ಮೂಲ್ಯ (29), ಗಂಡ: ಸಂತೋಷ್ ಮೂಲ್ಯ,  ವಾಸ:  2 -17 ಹೊಸ ಹಿತ್ಲು ಮನೆ   ಮುಂಡ್ಕೂರು ಅಂಚೆ  ಮುಲ್ಲಡ್ಕ   ಗ್ರಾಮ,   ಕಾರ್ಕಳ  ತಾಲೂಕು ಉಡುಪಿ ಜಿಲ್ಲೆ ಇವರು ತನ್ನ ಗಂಡನ KA-20-EU-6353 ಸ್ಕೂಟರ್ ನಲ್ಲಿ ಮುಂಡ್ಕೂರಿನಿಂದ ಸುರತ್ಕಲ್ ಕಡೆಗೆ ಸವಾರಿ ಮಾಡಿಕೊಂಡು  ಬರುತ್ತಾ ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆ ಬಳಿ ತಲುಪುವಾಗ ಕಿನ್ನಿಗೋಳಿ ಕಡೆಯಿದ ಮುಂಡ್ಕೂರು ಕಡೆಗೆ  KA-19-MG-9142 ನೇ ನಂಬ್ರದ ಕಾರು ಚಾಲಕ ಸನತ್ ಆತನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಆತನ  ಎದುರಿನಿಂದ ಹೋಗುತ್ತಿದ್ದ ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ರಸ್ತೆಯ ತೀರಾ ಬಲ ಬದಿಗೆ  ಬಂದು ಪಿರ್ಯಾದಿದಾರರ ಸ್ಕೂಟರ್ ಗೆ  ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು, ಅವರ ಎಡಭುಜಕ್ಕೆ ಮೂಳೆ ಮುರಿತದ  ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಮೊದಲು ಕೊನ್ಸೆಟ್ಟಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ಹೆಚ್ಚಿನ ಚಿಕಿತ್ಸೆ  ಬಗ್ಗೆ ಸುರತ್ಕಲ್ ಅಥರ್ವ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 101 /2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಮಣಿಪಾಲ: ಪಿರ್ಯಾದಿದಾರರಾದ ಸುಧೀರ್ (31), ತಂದೆ: ಸುಬ್ರಹ್ಮಣ್ಯ ಪೂಜಾರಿ, ವಾಸ: ಮಂಚಿಕೆರೆ,  80 ಬಡಗುಬೆಟ್ಟು   ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ  ಇವರು ದಿನಾಂಕ 22/08/2021 ರಂದು ಸಂಜೆ 04:30 ಗಂಟೆಗೆ ಉಡುಪಿ ತಾಲೂಕು 80 ಬಡಗುಬೆಟ್ಟು ಗ್ರಾಮದ ರಾಜೀವ ನಗರದ ನಾರಾಯಣಿ ಪೆಟ್ರೋಲ್ ಬಂಕ್ ಬಳಿ ಇರುವಾಗ ಮಣಿಪಾಲ ಕಡೆಯಿಂದ ಅಲೆವೂರು ಕಡೆಗೆ  KA-20-X-7774  ನೇ ಪಲ್ಸರ್ ಬೈಕ್ ಸವಾರನು ಅತಿವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಬಲಕ್ಕೆ ಬಂದು ಅಲೆವೂರು ಕಡೆಯಿಂದ ಮಣಿಪಾಲ ಕಡೆಗೆ ಹೋಗುತ್ತಿದ್ದ KA-19-EN-8733 ನೇ ಹೋಂಡಾ ಆ್ಯಕ್ಟೀವಾ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ  ಹೋಂಡಾ ಅ್ಯಕ್ಟೀವಾ ದ ಸವಾರನಿಗೆ ಬಲಕೈ ಕಾಲು ಹಾಗೂ ಹಣೆಗೆ ತೀವ್ರ ರಕ್ತಗಾಯ ಹಾಗೂ ಸಹ ಸವಾರಳಿಗೆ ಹಣೆಗೆ ರಕ್ತ ಗಾಯ ವಾಗಿದ್ದು ಪಲ್ಸರ ಬೈಕ್ ಸವಾರನಿಗೆ ಹಣೆಗೆ ರಕ್ತಗಾಯ ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 108/2021 ಕಲಂ:279, 337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಮೊಹಮ್ಮದ್ ಶಫೀ (38), ತಂದೆ: ಇಬ್ರಾಹಿಂ, ವಾಸ: ಪೊಮ್ಮಾಜಿ ಹೌಸ್, ಸಾಣಂದೂರು ಗ್ರಾಮ, ಪಣಕಾಜೆ ಅಂಚೆ, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ  ಇವರು ಮಾವ ಅಫ್ಫಾರ್  ರವರ  KA-21-9222  ನೇ ನಂಬ್ರದ ಗೂಡ್ಸ್ ಲಾರಿಯಲ್ಲಿ ಲಾರಿ ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿದ್ದು, ಅವರ ಮಾವ ಲಾರಿ ಚಾಲಕನಾಗಿರುತ್ತಾರೆ. ದಿನಾಂಕ  22/08/2021 ರಂದು ಲಾರಿಯಲ್ಲಿ ಉಡುಪಿಗೆ  ಬಾಡಿಗೆ ಹೋದವರು ಕೆಲಸ ಮುಗಿಸಿಕೊಂಡು ರಾತ್ರಿ ಹೊರಟು ಬಡಾ ಎರ್ಮಾಳು ಗ್ರಾಮದ  ರಾಷ್ಟ್ರೀಯ ಹೆದ್ದಾರಿ 66 ರ ಬದಿಯಲ್ಲಿರುವ  ಬುದಗಿ ಪೆಟ್ರೋಲ್ ಬಂಕ್ ಬಳಿ ಉತ್ತರ ಬದಿಯಲ್ಲಿರುವ ಡಿವೈಡರ್‌ನ ಹತ್ತಿರ ಉಡುಪಿ- ಮಂಗಳೂರು ಏಕಮುಖ ರಸ್ತೆಯ ಪೂರ್ವಬದಿಯಲ್ಲಿ ಲಾರಿಯನ್ನು ನಿಲ್ಲಿಸಿದಾಗ ಪಿರ್ಯಾದಿದಾರರಾದ ಮೊಹಮ್ಮದ್ ಶಫಿ ರವರು ಮಂಗಳೂರು-ಉಡುಪಿ ಏಕಮುಖ ರಸ್ತೆಯ ಬದಿಯಲ್ಲಿರುವ ಅಂಗಡಿಗೆ ಹೋಗಿ ಹಾಲು ಪ್ಯಾಕೇಟ್ ತೆಗೆದುಕೊಂಡು ವಾಪಾಸ್ಸು ಲಾರಿ ಬಳಿ ಹೋಗಲು ಉಡುಪಿ- ಮಂಗಳೂರು ಏಕಮುಖ ರಸ್ತೆಯನ್ನು ದಾಟಲು ರಾತ್ರಿ 21:30 ಗಂಟೆ ವೇಳೆಗೆ  ಡಿವೈಡರ್‌ ಬಳಿ ನಿಂತಿರುವ ಸಮಯ ಬಿಳಿ ಬಣ್ಣದ, ರಿಜಿಸ್ಟ್ರೇಷನ್ ನಂಬ್ರ ಇಲ್ಲದ ಹೊಸ ಕಾರನ್ನು ಅದರ ಚಾಲಕ ರಮೇಶ್ ಕುಮಾರ್  ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಹಾಗೂ ನಿರ್ಲಕ್ಷವಾಗಿ ಚಲಾಯಿಸಿಕೊಂಡು ಬಂದು ಮೊಹಮ್ಮದ್ ಶಫೀ ರವರಿಗೆ ಡಿಕ್ಕಿಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು ತಲೆಗೆ, ಬಲ ಸೊಂಟಕ್ಕೆ  ಗಾಯವಾಗಿ, ಬಲ ಕಾಲಿಗೆ ತೀವ್ರ ವಾದ ಒಳನೋವು ಗಾಯವಾಗಿದ್ದು, ಎಡಕಾಲಿಗೆ ಮತ್ತು ಬಲಕೈಗೆ ತೆರಚಿದ ಗಾಯವಾಗಿರುತ್ತದೆ.  ಗಾಯಾಳುವನ್ನು  ಚಿಕಿತ್ಸೆಯ ಬಗ್ಗೆ ಮಂಗಳೂರಿನ ವೆನ್‌‌ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುಧಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 81/2021 ಕಲಂ: 279,  338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಮಾದೇವ ದುರ್ಗಪ್ಪ ನಾಯ್ಕ (67). ತಂದೆ: ದಿ .ದುರ್ಗಪ್ಪ, ವಾಸ; ತಗ್ಗಿನಮನೆ, ಜಾಲಿ ಭಟ್ಕಳ ತಾಲೂಕು.ಉ.ಕ ಜಿಲ್ಲೆ ಇವರು ದಿನಾಂಕ 23/08/2021 ರಂದು ಬೆಳಿಗ್ಗೆ 06:30  ಗಂಟೆಗೆ ತಮ್ಮ ಕುಟುಂಬದ 11 ಜನರೊಂದಿಗೆ KA-53-B-6537ನೇ ವಾಹನದಲ್ಲಿ ಉಜಿರೆ ರಾಮ ಮಂದಿರಕ್ಕೆ ಹೋಗಿ ಅಲ್ಲಿ ದರ್ಶನ ಮುಗಿಸಿಕೊಂಡು ಮದ್ಯಾಹ್ನ 3:00 ಗಂಟೆಗೆ ಅಲ್ಲಿಂದ  ಹೊರಟು ಉಡುಪಿ-ಭಟ್ಕಳ ರಾಷ್ಟ್ರೀಯ ಹೆದ್ದಾರಿ 66ರ ಮಾರ್ಗವಾಗಿ ಬರುತ್ತಾ ಸಂಜೆ 7:30 ಗಂಟೆಗೆ ಬೈಂದೂರಿನ ರಾಹುತನ ಕಟ್ಟೆಯ ಬಳಿ ಅವರ  ವಾಹನವನ್ನು ರಸ್ತೆಯ ಅಂಚಿನಲ್ಲಿ ನಿಲ್ಲಿಸಿದ್ದು ಅವರೊಂದಿಗೆ ಬಂದಿದ್ದ ಮಂಜುನಾಥ ದುರ್ಗಪ್ಪ ನಾಯ್ಕ ಹಾಗೂ ಶಾಂತಾರಾಮ ಸುಬ್ಬಯ್ಯ ರವರು ವಾಹನದಿಂದ ಇಳಿದು  ನೀರಿನ ಬಾಟಲಿ ತರಲು ರಸ್ತೆಯ ಪೂರ್ವ ಬದಿಯಲ್ಲಿರುವ ಅಂಗಡಿಗೆ ರಸ್ತೆಯ ಪೂರ್ವಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ KA-20-EG-7979 ನೇ ಮೋಟಾರು ಸೈಕಲ್ ಸವಾರನು ಆತನ ಮೋಟಾರು ಸೈಕಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಂಜುನಾಥ ದುರ್ಗಪ್ಪ ನಾಯ್ಕ  ರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ತಲೆಗೆ ತೀವ್ರ ಸ್ವರೂಪದ ರಕ್ತ ಗಾಯವಾಗಿದ್ದು ಪಿರ್ಯಾದಿದಾರರು ಹಾಗೂ ಇತರರು  ರಸ್ತೆಗೆ ಬಿದ್ದವರನ್ನು ಮಂಜುನಾಥ ದುರ್ಗಪ್ಪ ನಾಯ್ಕ ರವರನ್ನು ಎತ್ತಿ ಉಪಚರಿಸಿದಲ್ಲಿ ಮಂಜುನಾಥ ದುರ್ಗಪ್ಪ ನಾಯ್ಕ ರವರು ಸ್ಥಳದಲ್ಲೆ ಮೃತ ಪಟ್ಟಿರುತ್ತಾರೆ. ಈ ಅಪಘಾತದಲ್ಲಿ ಮೋಟಾರು ಸೈಕಲ್ ಸವಾರನಿಗೂ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದು ಚಿಕಿತ್ಸೆಯ ಬಗ್ಗೆ ಅಂಬುಲೆನ್ಸ್ ನಲ್ಲಿ ಕಳುಹಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 136/2021 ಕಲಂ: 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಅಜೆಕಾರು: ಶೇಖರ ಶೆಟ್ಟಿ(70) ಎಂಬುವವರು ಶಿವಾನಿ ಮನೆ, ಮೈನ್ ರೋಡ್ ಶಿರ್ವ ಎಂಬಲ್ಲಿ ವಾಸಮಾಡಿಕೊಂಡಿದ್ದು, ಮನೆಯಲ್ಲಿಯೇ ಇರುವುದಾಗಿದೆ. ದಿನಾಂಕ 23/08/2021 ರಂದು ಅಜೆಕಾರಿನ ದೆಪ್ಪುತ್ತೆಯ ತನ್ನ ಮೂಲ ಮನೆಯಲ್ಲಿ ಪೂಜಾ ಕಾರ್ಯಕ್ರಮವಿದ್ದ ಕಾರಣ ಕುಟುಂಬದವರ ಜೊತೆ ಬಂದಿದ್ದು ಪೂಜೆಯನ್ನು ಮುಗಿಸಿ ಸಂಜೆ 5:00 ಗಂಟೆಗೆ ಮನೆಯ ಅಂಗಳದಲ್ಲಿ ಒಡಾಡಿಕೊಂಡಿದ್ದವರು ಒಮ್ಮೆಲೆ ಸುಸ್ತಾಗಿ ಕುರ್ಚಿಯಲ್ಲಿ ಕುಳಿತು ತನ್ನ ಮಗನಲ್ಲಿ ನೀರನ್ನು ಕೇಳಿದ್ದು , ಮಗ ನೀರು ಕೊಟ್ಟ ಬಳಿಕ ಸ್ವಲ್ಪ ನೀರನ್ನು ಕುಡಿದು ನಂತರ ತೀವ್ರ ಅಸ್ವಸ್ಥರಾಗಿ ಮಾತನಾಡುವುದನ್ನು ನಿಲ್ಲಿಸಿದ್ದು, ಅವರನ್ನು ಕೂಡಲೇ ಕಾರಿನಲ್ಲಿ ಕರೆದುಕೊಂಡು ಕಾರ್ಕಳದ ಟಿ ಎಂ ಎ ಪೈ ಆಸ್ಪತ್ರೆಗೆ ಹೋಗಿದ್ದು, ಅಲ್ಲಿನ ವೈಧ್ಯಾಧಿಕಾರಿಯವರು ಪರೀಕ್ಷಿಸಿ ಆಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 11/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಸುಲಿಗೆ ಪ್ರಕರಣ

  • ಹಿರಿಯಡ್ಕ:  ಪಿರ್ಯಾದಿದಾರರಾದ ರಾಮಣ್ಣ ಜಿ, ನಾಯಕ್‌ (75), ತಂದೆ: ಗೊಂದಪ್ಪ ನಾಯಕ್‌, ವಾಸ: ಕಲ್ಯಾಣಿ ಜನರಲ್‌ಸ್ಟೋರ್‌, ಗುಂಡುಪಾದೆ ಪೆರ್ಣಂಕಿಲ ಗ್ರಾಮ ಉಡುಪಿ ತಾಲೂಕು ಇವರ  ಮನೆಗೆ ತಾಗಿ ಕಲ್ಯಾಣಿ ಜನರಲ್ ಸ್ಟೋರ್ ಎಂಬ ದಿನಸಿ ಅಂಗಡಿಯನ್ನು ಮಾಡಿಕೊಂಡಿದ್ದು, ಅದರಲ್ಲಿ ವ್ಯಾಪಾರ ಮಾಡಿಕೊಂಡಿರುತ್ತಾರೆ. ಅವರ ಅಂಗಡಿ ಎದುರು ಚಿತ್ರಬೈಲು – ಆತ್ರಾಡಿ ರಸ್ತೆ ಹಾದು ಹೋಗುತ್ತದೆ.  ದಿನಾಂಕ 23/08/2021 ರಂದು ಪಿರ್ಯಾದಿದಾರರು ಎಂದಿನಂತೆ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿರುವಾಗ ಸಂಜೆ 7:40 ಗಂಟೆಗೆ ಅಂಗಾರಕಟ್ಟೆ ಕಡೆಯಿಂದ ಇಬ್ಬರೂ ಅಪರಿಚಿತ ವ್ಯಕ್ತಿಗಳು ಒಂದು ಮೋಟಾರ್‌ಸೈಕಲ್‌ನಲ್ಲಿ ಬಂದು ಪಿರ್ಯಾದಿದಾರರ ಅಂಗಡಿಯ ಎದುರು ಸ್ವಲ್ಪ ಮುಂದೆ ಮೋಟಾರ್ ಸೈಕಲ್‌ನ್ನು ಚಾಲನಾ ಸ್ಥೀತಿಯಲ್ಲಿ ನಿಲ್ಲಿಸಿದ್ದು,  ಮೋಟಾರ್‌ಸೈಕಲ್‌ ಹಿಂಬದಿ ಕುಳಿತಿದ್ದ ವ್ಯಕ್ತಿ ಮೋಟಾರ್‌ಸೈಕಲ್‌ನಿಂದ ಇಳಿದು ಅಂಗಡಿ ಬಳಿ ಬಂದು ಪಿರ್ಯಾದಿದಾರರಲ್ಲಿ ಸಿಗರೇಟ್‌ಕೊಡಿ ಎಂದು ಕೇಳಿದ್ದು ಅದಕ್ಕೆ ಪಿರ್ಯಾದಿದಾರರು ಯಾವ ಸಿಗರೆಟ್‌ ಎಂದು ಕೇಳಿದಾಗ ಪ್ಲೇಯರ್ಸ್‌ ಎಂದು ಹೇಳಿರುತ್ತಾನೆ. ಆಗ ಪಿರ್ಯಾದಿದಾರರು ಅಂಗಡಿಯ ಒಳಗಡೆ ಇದ್ದ ಸಿಗರೇಟ್‌ಪ್ಯಾಕ್‌ನ್ನು ತೆರೆದು ಸಿಗರೇಟ್‌ ಕೊಡುತ್ತಿರುವಾಗ  ಆತನು ಒಮ್ಮೆಲೇ ಪಿರ್ಯಾದಿದಾರರ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ ಅವರ ಮಾವ ಸುಮಾರು 5 ವರ್ಷಗಳ ಹಿಂದೆ ಉಡುಗೊರೆಯಾಗಿ ನೀಡಿದ್ದ  ಸುಮಾರು 12 ರಿಂದ 16 ಗ್ರಾಮ್‌ ತೂಕದ ಚಿನ್ನದ ಚೈನ್‌ನ್ನು ಕುತ್ತಿಗೆಯಿಂದ ಎಳೆದುಕೊಂಡು ಓಡಿ ಹೋಗಿ ಅಂಗಡಿಯ ಮುಂಭಾಗ ಸ್ವಲ್ಪ ದೂರದಲ್ಲಿ ಇನ್ನೊರ್ವ ವ್ಯಕ್ತಿ ಚಾಲನಾ ಸ್ಥಿತಿಯಲ್ಲಿ ನಿಲ್ಲಿಸಿಕೊಂಡಿದ್ದ ಮೋಟಾರ್‌ಸೈಕಲ್‌ನಲ್ಲಿ ಕುಳಿತುಕೊಂಡು ಅವರು ಮೋಟಾರ್ ಸೈಕಲ್‌ನ್ನು ಅತಿವೇಗವಾಗಿ ಚಾಲನೆ ಮಾಡಿಕೊಂಡು ಮರ್ಣೆ ಅಲೆವೂರು ಕಡೆ ಹೋಗಿರುತ್ತಾರೆ. ಪಿರ್ಯಾದಿದಾರರು ಮೋಟಾರ್‌ಸೈಕಲ್‌ ನಂಬ್ರ ನೋಡಿದಾಗ ಅದಕ್ಕೆ ಹಿಂಬದಿಯಲ್ಲಿ ನಂಬರ್‌ಪ್ಲೇಟ್‌ ಇರುವುದಿಲ್ಲ, ಪಿರ್ಯಾದಿದಾರರ ಕುತ್ತಿಗೆಯಿಂದ ಚಿನ್ನದ ಚೈನ್‌ ಎಳೆದುಕೊಂಡು ಹೋದ ವ್ಯಕ್ತಿ ಕಪ್ಪಗಿದ್ದು, ಗಿಡ್ಡದವನಾಗಿರುತ್ತಾನೆ. ಆತನು ಪ್ಯಾಂಟ್‌ಮತ್ತು ಶರ್ಟ್‌ಧರಿಸಿರುತ್ತಾನೆ.  ಮೋಟಾರ್‌ಸೈಕಲ್‌ನಲ್ಲಿ ಕುಳಿತಿದ್ದ ವ್ಯಕ್ತಿ ಹೆಲ್ಮೆಟ್‌ ಹಾಕಿಕೊಂಡಿರುತ್ತಾನೆ. ಅಪರಿಚಿತ ವ್ಯಕ್ತಿ ಪಿರ್ಯಾದಿದಾರರ ಕುತ್ತಿಗೆಗೆ ಕೈ ಹಾಕಿ ಚೈನ್‌ಎಳೆಯುವಾಗ ಅವರು ಧರಿಸಿದ್ದ ಬನಿಯನ್‌ ಹರಿದು ಹೋಗಿರುತ್ತದೆ.  ಅಪರಿಚಿತ ವ್ಯಕ್ತಿಗಳು ಎಳೆದುಕೊಂಡು ಹೋದ  ಚಿನ್ನದ ಚೈನ್‌ನ  ಮೌಲ್ಯ 40,000 ಆಗಿರುತ್ತದೆ. ಈ ಬಗ್ಗೆ ಹಿರಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 46/2021  ಕಲಂ: 392   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣಗಳು

  • ಬೈಂದೂರು: ದಿನಾಂಕ 21/08/2021 ರಂದು ಸಂತೋಷ ಎ. ಕಾಯ್ಕಿಣಿ , ಪೊಲೀಸ್ ವೃತ್ತ ನಿರೀಕ್ಷಕರು ಬೈಂದೂರು ವೃತ್ತ ಇವರಿಗೆ  ಉಪ್ಪುಂದ ಗ್ರಾಮದ ಅಂಬಾಗಿಲು ಪೇಟೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಯುತ್ತಿದೆ ಎಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿ ಆರೋಪಿತ ಶಿವರಾಮ (47), ತಂದೆ:  ದಿ.ನಾಗ, ವಾಸ : ಭಗವತಿ ದೇವಸ್ಥಾನದ ಹತ್ತಿರ ಕೆರ್ಗಾಲ್ ಗ್ರಾಮ, ಬೈಂದೂರು ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ಆತನ ಕೈಯಲ್ಲಿದ್ದ ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ ನಗದು ಹಣ ರೂಪಾಯಿ 450/-, ಮಟ್ಕಾ ನಂಬ್ರ ಬರೆದ ಚೀಟಿ-1 ಹಾಗೂ ಬಾಲ್ ಪೆನ್ನು-1 ನ್ನು ಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 135/2021  ಕಲಂ: 78(1) (3)  ಕೆ.ಪಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 21/08/2021 ರಂದು ಸುಬ್ಬಣ್ಣ ಬಿ, ಪೊಲೀಸ್ ಉಪನಿರೀಕ್ಷಕರು, ಪ್ರಭಾರ ಶಂಕರನಾರಾಯಣ ಪೊಲೀಸ್  ಠಾಣೆ ಇವರು ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ ಗೋಳಿಯಂಗಡಿ ಮಾರ್ಕೆಟ್  ಬಳಿಯ ಗೂಡಂಗಡಿಯ ಬಳಿ ಸಾರ್ವಜನಿಕ  ಸ್ಥಳದಲ್ಲಿ   ಅಕ್ರಮವಾಗಿ ಜನರನ್ನು ಸೇರಿಸಿಕೊಂಡು ಮಟ್ಕಾ ಜುಗಾರಿ ಆಟದ  ಬಗ್ಗೆ  ಹಣ ಸಂಗ್ರಹ ಮಾಡುತ್ತಿರುವುದಾಗಿ ಬಂದ ಮಾಹಿತಿಯಂತೆ  ದಾಳಿ  ನಡೆಸಿ ಗಣೇಶ ಪೂಜಾರಿ (28), ತಂದೆ: ಜಯರಾಮ ಪೂಜಾರಿ, ವಾಸ: ಕೆದ್ಲಹಕ್ಕು ಎತ್ತಿನಕಟ್ಟೆ ಶಿರಿಯಾರ ಗ್ರಾಮ ಬ್ರಹ್ಮಾವರ  ತಾಲೂಕು ಎಂಬಾತನನ್ನು ವಶಕ್ಕೆ ಪಡೆದು, ಮಟ್ಕಾ ಸಂಖ್ಯೆ ಬರೆದ ಚೀಟಿ-1, ಬಾಲ್ ಪೆನ್ನು -1  ಹಾಗೂ ಮಟ್ಕಾ  ಜುಗಾರಿ ಆಟದ ಬಗ್ಗೆ ಸಂಗ್ರಹ ಮಾಡಿದ ನಗದು ಹಣ  ರೂಪಾಯಿ 1130/- ವಶಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 84/2021 ಕಲಂ: 78(1) (111) ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 23/08/2021 ರಂದು  ಪ್ರಮೋದ ಕುಮಾರ್ ಪಿ, ಪೊಲೀಸ್ ನಿರೀಕ್ಷಕರು, ಉಡುಪಿ ನಗರ ಪೊಲೀಸ್ ಠಾಣೆ  ಇವರು ಠಾಣೆಯಲ್ಲಿರುವಾಗ ಆರೋಪಿ ಹರ್ಷ (26), ತಂದೆ: ರವಿಚಂದ್ರ, ವಾಸ: ಶಾರದಾ ನಿಲಯ, ಹನುಮಂತನಗರ, ಪುತ್ತೂರು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಎಂಬಾತ ಪಾಸ್ ಪೋರ್ಟ ವಿಚಾರಣೆಯ ಬಗ್ಗೆ ಠಾಣೆಗೆ ಬಂದಿದ್ದು, ಆತನು ಈ ಹಿಂದೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕೆಲವು ಮಟ್ಕಾ ಜುಗಾರಿ ಆಟ ಪ್ರಕರಣಗಳಲ್ಲಿ ಆರೋಪಿಯಾಗಿರುವುದು ಕಂಡು ಬಂದಿದ್ದು, ಆತನ ಮೇಲೆ ಸಂಶಯಗೊಂಡು ಆತನ ಮೊಬೈಲ್ ಪರಿಶೀಲಿಸಲಾಗಿ O.C Office ಎಂಬ ಹೆಸರಿನ ಗ್ರೂಪ್ ಇದ್ದು, ಅದರಲ್ಲಿ UBK ಮತ್ತು BK ಎಂಬ ಹೆಸರಿನ ಲಕ್ಕಿ ನಂಬ್ರ ಹಾಗೂ ಆ ನಂಬ್ರಗಳಿಗೆ ಹಣ ನಮೂದಿಸಿದ ಟೈಪ್ ಮಾಡಿದ ಮಾಹಿತಿ ಇದ್ದು, ದಿನಾಂಕ 23/08/2021 ರಂದು ಟೈಪ್ ಮಾಡಿದ ಮಾಹಿತಿಯನ್ನು ಪ್ರಿಂಟ್ ತೆಗೆದು ಆರೋಪಿತನಲ್ಲಿ ನೀಡಿದ್ದು, ಆತನು ಹಣವನ್ನು ಲೆಕ್ಕ ಮಾಡಿದ್ದು ಒಟ್ಟು ರೂಪಾಯಿ 3,005/- ಹಣದಲ್ಲಿ ತನಗೆ ರೂಪಾಯಿ 1,000/- ಹಣ ಮಾತ್ರ ಸಿಕ್ಕಿದ್ದು, ಉಳಿದ ರೂ 2,005/- ಹಣ ಸಾಲದ ರೂಪದಲ್ಲಿ ಇದ್ದಿದ್ದು, ಆ ಹಣ ತನ್ನ ಕೈಗೆ ಸಿಕ್ಕಿರುವುದಿಲ್ಲವಾಗಿ ಹಾಗೂ ತಾನು ಸಂಗ್ರಹಿಸಿದ ಹಣವನ್ನು ಲಿಯೋ ಎಂಬವರಿಗೆ ಕೊಡುತ್ತಿರುವುದಾಗಿ ತಿಳಿಸಿದ್ದು ರೂಪಾಯಿ 1,000/- ಹಣ,  ಲಕ್ಕಿ ನಂಬ್ರ ಇರುವ ಪ್ರಿಂಟ್ ತೆಗೆದ 2 ಹಾಳೆ ಹಾಗೂ ಮೊಬೈಲನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 119/2021 ಕಲಂ:78 ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಶಕುಂತಳ ಎಸ್ ಪುತ್ರನ್ (63), ಗಂಡ: ದಿ. ಸುರೇಶ್ ಪುತ್ರನ್, ಬೀಚ್ ಹೌಸ್ ರಾಮನಗರ, ಆರ್ ಡಿ ಮೆಂಡನ್ ರಸ್ತೆ, ಕಾಫು ಪಡು ಗ್ರಾಮ ಕಾಪು ತಾಲೂಕು ಇವರು ತನ್ನ ಮಕ್ಕಳೊಂದಿಗೆ ಮುಂಬೈನಲ್ಲಿ ವಾಸವಾಗಿದ್ದು  ಕಾಪು ಪಡು ಗ್ರಾಮದ ಸರ್ವೆ ನಂಬ್ರ 110/9 ಮತ್ತು 110/14 ರಲ್ಲಿ 0.26 ಸೆಂಟ್ಸ್ ಜಾಗ ಹೊಂದಿರುತ್ತಾರೆ. ಪಿರ್ಯಾದಿದಾರರು 2017 ರಲ್ಲಿ ಜಾಗದ ಸರ್ವೆ ಮಾಡಿಸಿ ಆವರಣ ಗೋಡೆಯನ್ನು ಕಟ್ಟಿಸಿರುತ್ತಾರೆ. ತದ ನಂತರ ಮುಂಬೈಗೆ ಹೋಗಿದ್ದು ವರ್ಷದಲ್ಲಿ ಮೂರು ಬಾರಿ ಕಾಪುವಿನ ತನ್ನ ಮನೆಗೆ ಬಂದು ಹೋಗುತ್ತಿದ್ದು, ದಿನಾಂಕ 02/06/2021 ರಂದು ಪಿರ್ಯಾದಿದಾರರು ಕಾಪುವಿನಿಂದ ಮುಂಬೈಗೆ ಹೋಗಿ ದಿನಾಂಕ 23/08/2021 ರಂದು ಬೆಳಿಗ್ಗೆ 10:00 ಗಂಟೆಗೆ ವಾಪಾಸು ಕಾಪುವಿನ ಮನೆಗೆ ಬಂದು ನೋಡಿದಾಗ ಪಿರ್ಯಾದಿದಾರರ ಮನೆಯ ಕಾಂಪೌಂಡಿನ ಉತ್ತರ ಪೂರ್ವದಲ್ಲಿ ಕಾಂಪೌಂಡು ಕೆಡವಿದ್ದು ಕಂಡು ಬಂದಿದ್ದು, ಪಿರ್ಯಾದಿದಾರರಿಗೂ ಅವರ ನೆರೆಮನೆಯ ಶ್ರೀನಿವಾಸ ರಾಮ ಪುತ್ರನ್ ಎಂಬುವವರಿಗೂ ಜಾಗದ ವಿಚಾರದಲ್ಲಿ ತಕರಾರು ಇದ್ದು  ಶ್ರೀನಿವಾಸ ರಾಮ ಪುತ್ರನ್‌ ರವರು ದಿನಾಂಕ 02/06/2021 ರಂದು ಮಧ್ಯಾಹ್ನ 2:00 ಗಂಟೆಯಿಂದ ದಿನಾಂಕ 23/08/2021 ರಂದು ಬೆಳಿಗ್ಗೆ 10:00 ಗಂಟೆಯ ಮಧ್ಯಾವಧಿಯಲ್ಲಿ ಕಾಂಪೌಂಡು ಗೋಡೆಯನ್ನು ಕೆಡವಿ ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಬೇಲಿ ಹಾಕಿ 1 ಲಕ್ಷ ರೂಪಾಯಿ ನಷ್ಟ ಉಂಟುಮಾಡಿರುವುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 140/2021  ಕಲಂ: 447, 427  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಬ್ರಹ್ಮಾವರ: ಪಿರ್ಯಾದಿದಾರರಾದ ಭಾಸ್ಕರ ಪೂಜಾರಿ (57), ತಂದೆ: ಜಗನ್ನಾಥ ಪೂಜಾರಿ, ವಾಸ: ತೆಂಕಬೆಟ್ಟು, ಚಾಂತಾರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ಬ್ರಹ್ಮಾವರ ತಾಲೂಕು, ಚಾಂತಾರು ಗ್ರಾಮದ ತೆಂಕಬೆಟ್ಟುವಿನ ರಸ್ತೆಯ ಬಲ ಭಾಗದಲ್ಲಿರುವ ಮೋರಿಯ ಮೇಲ್ಭಾಗದಲ್ಲಿ ಎಳನೀರು ವ್ಯಾಪಾರ ಮಾಡಿಕೊಂಡಿರುವುದಾಗಿದೆ. ಅದರಂತೆ ದಿನಾಂಕ 18/08/2021 ರಂದು ಎಂದಿನಂತೆ ವ್ಯಾಪಾರ ಮಾಡುತ್ತಿರುವಾಗ ಬೆಳಿಗ್ಗೆ 11:40 ಗಂಟೆಗೆ KA-20-P-7056 ನೇ ನೊಂದಣಿ ನಂಬ್ರದ ಬೂದು ಬಣ್ಣದ ಕಾರು ಕುಂಜಾಲು ಕಡೆಯಿಂದ ಬಂದು ಅದರ ಚಾಲಕ ಕಾರನ್ನು ಪಿರ್ಯಾದಿದಾರರ ಅಂಗಡಿಯ ಬದಿಯಲ್ಲಿ  ನಿಲ್ಲಿಸಿ, ಕಾರಿನಲ್ಲಿದ್ದ ಮೂರು ಜನ ಆರೋಪಿಗಳು ಬಂದು ಬೊಂಡವನ್ನು ಕುಡಿದು ಹಣವನ್ನು ಕೊಡದೇ ಹೋಗುತ್ತಿರುವಾಗ, ಪಿರ್ಯಾದಿದಾರರು ಅವರಲ್ಲಿ ಹಣವನ್ನು ಕೇಳಿದ್ದಕ್ಕೆ ಅವಾಚ್ಯವಾಗಿ ಬೈದು ಒಬ್ಬ ಆರೋಪಿ ಪಿರ್ಯಾದಿದಾರರನ್ನು ಕೈಯಿಂದ ದೂಡಿದ್ದು, ಇನ್ನೊಬ್ಬ ಆರೋಪಿಯು ಪಿರ್ಯಾದಿದಾರರ ಕೆನ್ನೆಗೆ ಹೊಡೆದಿರುತ್ತಾನೆ.  ಆಗ ಪಿರ್ಯಾದಿದಾರರು ಕೆಳಗೆ ಬಿದ್ದು ಏಳುತ್ತೀರುವಾಗ ಪಿರ್ಯಾದಿದಾರರ ಅಂಗಡಿಯಲ್ಲಿ ಬೊಂಡ ಕೆತ್ತಲು ಇಟ್ಟಿರುವ ಚಾಕುವನ್ನು ಹಿಡಿದುಕೊಂಡು, ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಇದೇ ಕತ್ತಿಯಿಂದ ತಿವಿದು ಕೊಲ್ಲುತ್ತೇನೆಂದು ಹೆದರಿಸಿ, ಅಲ್ಲೇ ಹತ್ತಿರದಲ್ಲಿದ್ದ ಬೊಂಡದ ವ್ಯಾಪಾರದಿಂದ ಬಂದ ದುಡ್ಡನ್ನು ಹಾಕುತ್ತಿದ್ದ ತಗಡಿನ ಬಾಕ್ಸಿಗೆ ಕೈ ಹಾಕಿ ಹಣವನ್ನು ದೊಚಲು ಪ್ರಯತ್ನಿಸುತ್ತಿದ್ದಾಗ  ಪಿರ್ಯಾದಿದಾರರು ಬೊಬ್ಬೆ ಹೊಡೆದಿದ್ದು,  ಆಗ ಅದೇ ಸಮಯದಲ್ಲಿ ಸಾರ್ವಜನಿಕರು ಬರುವುದನ್ನು ನೋಡಿ ಮೂರು ಜನ ಆರೋಪಿಗಳು ಕಾರಿನಲ್ಲಿ ಅಲ್ಲಿಂದ ಕಾರನ್ನು ತಿರುಗಿಸಿಕೊಂಡು ಪುನಃ ಕುಂಜಾಲು ಕಡೆಗೆ ಹೋಗಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 156/2021 ಕಲಂ: 323, 504, 506 (2), 393 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-08-2021 10:03 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080