ಅಭಿಪ್ರಾಯ / ಸಲಹೆಗಳು

ಮಟ್ಕಾ ಜುಗಾರಿ ಪ್ರಕರಣ

  • ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಹನೇಹಳ್ಳಿ ಗ್ರಾಮದ ಖುಷಿ ಬಾರ್ & ರೆಸ್ಟೋರೆಂಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಗೋಪಾಲ ಕೃಷ್ಣ ಎಂಬವರು ಹಣವನ್ನು ಪಣವಾಗಿ ಪಡೆದು ಮಟ್ಕಾ ಜುಗಾರಿ ನಡೆಸುತ್ತಿರುವ ಬಗ್ಗೆ ಸದ್ರಿ ಗ್ರಾಮದ ಬೀಟ್ ಸಿಬ್ಬಂದಿಯವರು ನೇ ರವರು ಗುರುನಾಥ ಬಿ ಹಾದಿಮನಿ, ಪೊಲೀಸ್ ಉಪನಿರೀಕ್ಷಕರು, ಬ್ರಹ್ಮಾವರ ಪೊಲೀಸ್ ಠಾಣೆ.ಇವರಿಗೆ ಮಾಹಿತಿ ನೀಡಿದ್ದು, ಸದ್ರಿ ಮಾಹಿತಿಯನ್ನು ಪಿರ್ಯಾದಿದಾರರು ಇಲಾಖಾ ಮೇಲಾಧಿಕಾರಿಗಳಿಗೆ ತಿಳಿಸಿ, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು, ಠಾಣಾ ಸಿಬ್ಬಂದಿಯವರ ಜೊತೆ ಇಲಾಖಾ ಜೀಪಿನಲ್ಲಿ ಸದ್ರಿ  ಸ್ಥಳಕ್ಕೆ ಮಧ್ಯಾಹ್ನ 11:15 ಗಂಟೆಗೆ ತೆರಳಿ ಅಲ್ಲೇ ಹತ್ತಿರ ಗೂಡಂಗಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಗೋಪಾಲಕೃಷ್ಣ ಗಾಣಿಗ, ಪ್ರಾಯ: 42 ವರ್ಷ, ತಂದೆ: ಭುಜಂಗ ಗಾಣಿಗ, ವಾಸ: ಕಂಪ, ಬಾರಕೂರು ಅಂಚೆ, ಹನೇಹಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು ಈತನು 00 ರಿಂದ 99 ರ ಒಳಗೆ ಬರೆಯಿಸಿದ ಯಾವುದೇ ನಂಬರ್ ಬಂದರೆ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸಂಗ್ರಹಿಸಿ ಮಟ್ಕಾ ಚೀಟಿ ಬರೆದು ಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಮಧ್ಯಾಹ್ನ 11:20 ಗಂಟೆಗೆ ದಾಳಿ ನಡೆಸಿದಾಗ ಸಾರ್ವಜನಿಕರು ಅಲ್ಲಿಂದ ಓಡಿ ಹೋಗಿದ್ದು,  ಆರೋಪಿಯನ್ನು ಸಿಬ್ಬಂದಿಯವರ ಸಹಾಯದಿಂದ ಹಿಡಿದು ಆತನನ್ನು ವಶಕ್ಕೆ ತೆಗೆದುಕೊಂಡು ಜಪ್ತಿಮಾಡಿ ಆತನ ವಶದಲ್ಲಿದ್ದ ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ಹಣ ರೂ. 1270/-, ಮಟ್ಕಾ ಬರೆದ ಚೀಟಿ – 1 ಹಾಗೂ ಬಾಲ್ ಪೆನ್ನು – 1 ನ್ನು ಸ್ವಾಧೀನ ಪಡಿಸಿಕೊಂಡಿದ್ದು ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 157/2021 ಕಲಂ  78 (i) & (iii) ಕೆ.ಪಿ ಆ್ಯಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ.

ಅಫಘಾತ ಪ್ರಕರಣ

  • ಬೈಂದೂರು: ಪಿರ್ಯಾದಿ ಪ್ರಕಾಶ್ ನಾಯರಿ  ಇವರು ದಿನಾಂಕ; 23/08/2021 ರಂದು ಅಗಸ್ತೇಶ್ವರ ದೇವಾಸ್ಥಾನದ ಮುಖಮಂಟಪದ ಎದುರು ರಾಹೆ 66 ರ ಪಕ್ಕದಲ್ಲಿ ರಿಕ್ಷಾ ಬಾಡಿಗೆಗೆ ನಿಂತುಕೊಂಡಿರುವಾಗ ಫಿರ್ಯಾದಿದಾರರ ಪರಿಚಯದ ಪುಂಡಲೀಕ ಎಂಬುವವರು ಸಮಯ ಸುಮಾರು ಸಂಜೆ 06.30 ಗಂಟೆಗೆ ರಾಹೆ 66ರಲ್ಲಿ ಕಿರಿಮಂಜೇಶ್ವರ ರಿಕ್ಷಾ ನಿಲ್ದಾಣದಿಂದ ಅರೆಹೊಳೆ ಬೈಪಾಸ್ ಕಡೆಗೆ ರಸ್ತೆಯ ಎಡಭಾಗದಲ್ಲಿ ಕಿರಿಮಂಜೇಶ್ವರ ಹೈಸ್ಕೂಲ್ ಕ್ರಾಸ್ ಹತ್ತಿರ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕೆಎ 20 ಈಎಲ್ 5574 ನೇ ಮೋಟಾರ್ ಸೈಕಲ್ ಸವಾರನು ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಆತನ ಬಾಬ್ತು ಮೋಟಾರ್ ಸೈಕಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪುಂಡಲೀಕರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪುಂಡಲೀಕರವರಿಗೆ ಎಡಕಾಲಿಗೆ ರಕ್ತಗಾಯವಾಗಿರುತ್ತದೆ. ಗಾಯಗೊಂಡ ಪುಂಡಲೀಕರವರನ್ನು ಫಿರ್ಯಾದಿದಾರರು ಕುಂದಾಪುರ ವಿವೇಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಬೈಂದೂರು  ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 138/2021 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-08-2021 05:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080