ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 20/07/2022 ರಂದು ರಾತ್ರಿ ಸುಮಾರು 9:50 ಗಂಟೆಗೆ ಕುಂದಾಪುರ ತಾಲೂಕು, ಕೊಟೇಶ್ವರ ಗ್ರಾಮದ ಶ್ರೀಸಾಯಿ ಟ್ರಾನ್ಸ್‌‌ಪೋರ್ಟ್‌ ಬಳಿ NH 66 ರಸ್ತೆಯಲ್ಲಿ, ಆಪಾದಿತ ಅರುಣ್‌ಎಂಬವರು,  KA19-EC-6714ನೇ ಬೈಕಿನಲ್ಲಿ ಮಾಲತಿರವರನ್ನು ಸಹ ಸವಾರಳಾಗಿ ಕುಳ್ಳಿರಿಸಿಕೊಂಡು ತೆಕ್ಕಟ್ಟೆ  ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು  ಬಂದು,  ಶ್ರೀ ಸಾಯಿ ಟ್ರಾನ್ಸ್‌‌ಪೋರ್ಟ್‌ನಿಂದ NH 66 ರಸ್ತೆಗೆ  ಹಿಮ್ಮುಖವಾಗಿ ಬರುತ್ತಿದ್ದ ಟ್ರಕ್‌‌ಗೆ  ಸೂಚನೆ ನೀಡಲು NH 66 ರಸ್ತೆ ಪಶ್ಚಿಮ ಬದಿಯಲ್ಲಿ ನಿಂತುಕೊಂಡಿದ್ದ ಇಂದಲ್‌‌ಕುಮಾರ್‌ಚೌಹಣ್‌ರವರಿಗೆ ಡಿಕ್ಕಿ ಹೊಡೆದು, ಬೈಕ್‌ಸಮೇತ ರಸ್ತೆಗೆ ಬಿದ್ದು, ಅರುಣ್‌ಹಾಗೂ ಮಾಲತಿ ರವರು ಗಾಯಗೊಂಡು ಕೊಟೇಶ್ವರ  ಎನ್‌. ಆರ್‌ಆಚಾರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು,  ದಿನಾಂಕ 21/07/2022 ರಂದು ಬೆಳಿಗ್ಗೆ ಆಸ್ಪತ್ರೆಯಿಂದ  ಬಿಡುಗಡೆಗೊಂಡು ಮಣಿಪಾಲ ಕೆ.ಎಂಸಿ ಆಸ್ಪತ್ರೆಗೆ ಹೋಗಿ ಅಲ್ಲಿಂದ  ಉಡುಪಿ ಜಿಲ್ಲಾ ಆಸ್ಪತ್ರೆಗೆ  ಹೋಗಿ ಒಳರೋಗಿಯಾಗಿ  ದಾಖಲಾಗಿರುತ್ತಾರೆ ಹಾಗೂ ಇಂದಲ್‌‌ಕುಮಾರ್‌ಚೌಹಣ್‌ರವರು ಕೊಟೇಶ್ವರ  ಎನ್‌. ಆರ್‌ಆಚಾರ್ಯ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುವುದು. ಈ ಬಗ್ಗೆ ರಂಜಿತ್‌ಕುಮಾರ್   ಪ್ರಾಯ  29   ವರ್ಷ   ತಂದೆ ಎ. ರಾಮಚಂದ್ರ ಭಟ್‌     ವಾಸ:    ಅಗ್ರಹಾರ, ಕಮಲಶಿಲೆ  ರವರು ದೂರು ನೀಡಿದ್ದು ಕುಂದಾಪುರ ಸಂಚಾರ ಪೊಲೀಸ್ ಠಾಣೆ, ಅಪರಾಧ ಕ್ರಮಾಂಕ 86/2022  ಕಲಂ 279, 337  IPC  ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ:ಪಿರ್ಯಾದಿ ಸತೀಶ ಗೌಡ, ಪ್ರಾಯ: 35 ವರ್ಷ, ತಂದೆ: ಜನಾರ್ಧನ ಗೌಡ, ವಾಸ: ನೆಕ್ಕರೆ ಮನೆ, ಕೋಣಾಲು ಅಂಚೆ ಮತ್ತು ಗ್ರಾಮ, ಕಡಬ ಇವರ ಸಹೋದರನಾದ  ಆನಂದ ಎಂಬಾತನು ಕುಂದಾಪುರದ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿದ್ದು, ಪ್ರಸ್ತುತ ಹಂಗಳೂರು ಗ್ರಾಮದ ಗೋಪಾಲ ಕೆ.ಜಿ ಎನ್ನುವವರ  ಬಾಡಿಗೆ ಮನೆಯಲ್ಲಿ ವಾಸವಾಗಿದ್ದು , ದಿನಾಂಕ 23-07-2022 ರಂದು ಬಾಡಿಗೆ ಮನೆಯ ಮಾಲೀಕರು ಪಿರ್ಯಾದಿದಾರರಿಗೆ ಕರೆ ಮಾಡಿ ಆನಂದ ರವರು ಮನೆಯ ಅಡುಗೆ ಕೋಣೆಯಲ್ಲಿ ಫ್ಯಾನ್ ನ ಹುಕ್ಕಿಗೆ ಲುಂಗಿಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡಿದ್ದು ನಂತರ  ಮಾಲೀಕರು ಮತ್ತು ಮನೆಯಲ್ಲಿದ್ದ ಆನಂದ ರವರ ಪತ್ನಿ ಸೇರಿ ಕುತ್ತಿಗೆಗೆ ಬಿಗಿದ ನೇಣಿನ ಹಗ್ಗವನ್ನು ಕತ್ತರಿಸಿ, ಆನಂದರವರ ಬಾಯಿಗೆ ಬಾಯಿ ಮೂಲಕ ಉಸಿರು ಕೊಟ್ಟರೂ ಕೂಡಾ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನ ಕಂಡು 108 ಅಂಬುಲೆನ್ಸ್ ನ್ನು ಕರೆಸಿದ್ದು ಅದರಲ್ಲಿದ್ದ ತಜ್ಞರು ಪರಿಕ್ಷೀಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಆನಂದ ರವರು ಸುಮಾರು 1 ವಾರದಿಂದ  ಪಿರ್ಯಾದಿದಾರರು ಮತ್ತು ಪಿರ್ಯಾದಿದಾರರ ಪತ್ನಿಯಲ್ಲಿ ಕಿರಿಕಿರಿ (Tention)ಯಾಗುತ್ತಿರುವುದಾಗಿ ತಿಳಿಸಿರುತ್ತಾರೆ್. ಆನಂದ ರವರು ಯಾವುದೋ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆ ಗೊಂಡು ನೇಣು ಬಿಗಿದು ಆತ್ಮಹತ್ಯೆ  ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ಠಾಣೆ  UDR No 24-2022 ಕಲಂ: 174 CrPC  ಯಂತೆ ಪ್ರಕರಣ ದಾಖಲಿಸಲಾಗಿದೆ.

ಗಂಡಸು ಕಾಣೆ  ಪ್ರಕರಣಗಳು

  • ಕೊಲ್ಲೂರು: ಪಿರ್ಯಾದಿ ಮಮತಾ ( 40 ವರ್ಷ)  ಗಂಡ: ನಾರಾಯಣ ವಾಸ: ಮೇಲ್ಧಳಿ ಕೊಲ್ಲೂರು  ಇವರ ಗಂಡ ನಾರಾಯಣ  (54 ವರ್ಷ) ರವರು ತಾನು ಸಂಸಾರದೊಂದಿಗೆ ವಾಸವಾಗಿರುವ ಬೈಂದೂರು ತಾಲೂಕು ಕೊಲ್ಲೂರು ಗ್ರಾಮದ ಮೇಲ್ಧಳಿ ಎಂಬಲ್ಲಿಂದ  ದಿನಾಂಕ: 9-07-2022 ರಂದು ಬೆಳಿಗ್ಗೆ 09:30 ಗಂಟೆಗೆ ಮನೆಯಿಂದ  ಹೋದವರು ಈ ತನಕ ಮನೆಗೆ ವಾಪಾಸ್ಸು ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ ಕಾಣೆಯಾದವರ ಚಹರೆ:  ನಾರಾಯಣ  (54 ವರ್ಷ) ತಂದೆ: ದಿ: ಮಲ್ಲ ವಾಸ: ಮೇಲ್ಧಳಿ ಕೊಲ್ಲೂರು  ಗ್ರಾಮ ಬೈಂದೂರು ತಾಲೂಕು ಎತ್ತರ: 5 ಅಡಿ 2 ಇಂಚು ಕೋಲು  ಮುಖ ,ಗೋದಿ ಮೈಬಣ್ಣ   ಸಾಧಾರಣ ಶರೀರ , ಕಪ್ಪು ತಲೆ ಕೂದಲು, ಮುಖದಲ್ಲಿ ಕಪ್ಪು ಕಲೆ ಇರುತ್ತದೆ. ಕೆಂಪು  ಬಣ್ಣದ ತೋಳಿನ  ಅಂಗಿ ಹಾಗೂ ಬಿಳಿ  ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಕನ್ನಡ, ಮಲೆಯಾಳಿ  ಮತ್ತು ತಮಿಳು ಭಾಷೆ ಮಾತನಾಡುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ  32/2022 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

  • ಕೋಟ: ಫಿರ್ಯಾದಿ ಶ್ರೀ ಚೆಲುವರಾಜು ಗ್ರಾಮ ಲೆಕ್ಕಿಗರು ಕೋಟ ವೃತ್ತ ಬ್ರಹ್ಮಾವರ. ರವರು ಕೋಟ ವೃತ್ತದ ಗ್ರಾಮ ಲೆಕ್ಕಾಧಿಕಾರಿಯಾಗಿದ್ದು ಸರಕಾರಿ ನೌಕರನಾಗಿರುತ್ತಾರೆ. ಫಿರ್ಯಾದುದಾರರು ದಿನಾಂಕ: 15.07.2022 ರಂದು ಸಂಜೆ 4:00 ಗಂಟೆಯಿಂದ 4:30 ಗಂಟೆಯ ಮಧ್ಯಾವಧಿಯಲ್ಲಿ ಫಿರ್ಯಾದುದಾರರ ಕಛೇರಿಯಲ್ಲಿ ಸರಕಾರಿ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ಏಕಾಏಕಿ ಆರೋಪಿತೆ ಆರತಿ ಗಿಳಿಯಾರು ಎಂಬವರು ಫಿರ್ಯಾದುದಾರರ ಕಛೇರಿಗೆ ಬಂದು ಸರಕಾರಿ ಕಡತಗಳನ್ನು ತೆಗದುಕೊಂಡು ಅದನ್ನು ಎತ್ತಿ ಫಿರ್ಯಾದುದಾರರ ಮುಖದ ಮೇಲೆ ಎಸೆದು ಅವಮಾನಿಸಿ ಫಿರ್ಯಾದುದಾರರ ಸರಕಾರಿ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿರುತ್ತಾರೆ. ಇದನ್ನು ವಿಚಾರಿಸಲು ಫಿರ್ಯಾದುದಾರರು ಎದ್ದಾಗ ಆರೋಪಿತೆಯು ಫಿರ್ಯಾದುದಾರರನ್ನು ತಡೆದು ಕೊರಳ ಪಟ್ಟಿಯನ್ನು ಹಿಡಿದು ತಳ್ಳಿರುತ್ತಾರೆ. ನಂತರ ಆರೋಪಿತೆಯು ಕಛೇರಿಯ ಹೊರಗೆ ಹೋಗಿ ಫಿರ್ಯಾದುದಾರರನ್ನು ಉದ್ದೇಶಿಸಿ ಏಕವಚನದಲ್ಲಿ ಅವಾಚ್ಯ ಶಬ್ದಗಳನ್ನು ಬಳಿಸಿ ಬೈದು ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಪುನಃ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಹಾಗೂ ಆರೋಪಿತೆಯು ಫಿರ್ಯಾದುದಾರರನ್ನು ಉದ್ದೇಶಿಸಿ ತಾನು ದಲಿತ ವರ್ಗಕ್ಕೆ ಸೇರಿದವಳಾಗಿದ್ದು ದಲಿತರನ್ನೆಲ್ಲಾ ಸೇರಿಸಿಕೊಂಡು ನಿಮ್ಮ ಕಛೇರಿಯ ಮುಂದೆ ಧರಣಿ ಮಾಡುತ್ತೇನೆ ಹಾಗೂ ಮೇಲಾಧಿಕಾರಿಗಳಿಗೆ ದೂರು ನೀಡುತ್ತೇನೆ ಎಂಬುದಾಗಿ ಏರು ಧ್ವನಿಯಲ್ಲಿ ಅಬ್ಬರಿಸಿರುತ್ತಾರೆ. ನಿಮ್ಮನ್ನು ನಾನು ಹೀಗೆ ಬಿಡುವುದಿಲ್ಲ ನನಗೆ ದಲಿತ ಸಂಘಗಳ ಬೆಂಬಲ ಇರುತ್ತದೆ ಎಂದು ಧಮಕಿ ಹಾಕಿರುವುದಲ್ಲದೇ ಕೊಲೆ ಬೆದರಿಕೆಯನ್ನು ಹಾಕಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  116/2022 ಕಲಂ: 341, 323,353, 504 ,506  IPC ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಣಿಪಾಲ: ಹೆರ್ಗಾ ಗ್ರಾಮದ ಮಣಿಪಾಲ ಮಿಲ್ಕ್‌ ಡೈರಿ ಬಳಿ ಪಿರ್ಯಾದಿ ಸುಶೀಲ ನಾಯ್ಕ, ಪ್ರಾಯ: 43 ವರ್ಷ, ಗಂಡ: ಶೈಲೇಶ್‌ ನಾಯ್ಕ್‌,ವಾಸ: ನರ್ಸಿ ಹೌಸ್‌, ಮನೆ ನಂಬ್ರ 8 – 109 E 6 th Cross ನಂದಿನಿ ಮಿಲ್ಕ್‌ ಡೈರಿ ಎದುರು, ಮಣಿಪಾಲ, ಇವರ ತಂದೆಗೆ ಸೇರಿದ ಜಾಗವಿದ್ದು , ಸುಮಾರು 7 ವರ್ಷದ ಹಿಂದೆ ಸದರಿ ಜಾಗವು ಪಿರ್ಯಾದಿದಾರರಿಗೆ ಸೇರಿ 4 ನಾಲ್ಕು ಜನರಿಗೆ ಪಾಲಾಗಿರುತ್ತದೆ. ಪಿರ್ಯಾದಿದಾರರ ಮನೆಯ ಹಿಂದೆ ಆಪಾದಿತ ಮುದ್ದು ನಾಯ್ಕನ ಮನೆಯಿರುತ್ತದೆ. ಪಿರ್ಯಾದಿದಾರರು ಹಾಗೂ ಆಪಾದಿತ ಮುದ್ದು ನಾಯ್ಕನಿಗೆ ಜಾಗದ ಗಡಿ ವಿಷಯವಾಗಿ ತಕರಾರು ಇದ್ದು , ಮಾನ್ಯ ನ್ಯಾಯಾಲಯದಲ್ಲಿ ಸ್ಟೇ ಇರುತ್ತದೆ.  ದಿನಾಂಕ: 23.07.2022 ರಂದು ಸಂಜೆ ಸುಮಾರು 5.15 ಗಂಟೆಗೆ ಪಿರ್ಯಾದಿದಾರರು ಹಾಗೂ ಅವರ ಮಗಳು ಶಮಿತಾ ಮನೆಯ ಹಿಂಬದಿ ಹೋದಾಗ ಅಂಗಡಿಯಲ್ಲಿದ್ದ  ಆಪಾದಿತ ಮುದ್ದು ನಾಯ್ಕನಿಗೆ ಬೇಲಿಗೆ ಕಟ್ಟಿದ ಬಟ್ಟೆಯನ್ನು ತುಂಡು ಮಾಡಿದ್ದು ಯಾಕೆ ಎಂದು ಕೇಳಿದಾಗ ಆಪಾದಿತ ಮುದ್ದು ನಾಯ್ಕನು  ನನ್ನ ಜಾಗದಲ್ಲಿ ಮನೆ ಕಟ್ಟಿದ್ದೀ ನನ್ನನ್ನೇ ಪ್ರಶ್ನೆ ಮಾಡುತ್ತೀಯಾ? ಎಂದು ಬೈದು ಅಂಗಡಿಯಿಂದ ಹೊರಗೆ ಬಂದು ಪಿರ್ಯಾದಿದಾರರ ಬೇಲಿಯ ಬಳಿ ಇದ್ದ ಮರದ ಕೋಲನ್ನು ತೆಗೆದು ಪಿರ್ಯಾದಿದಾರರ ಮೇಲೆ ಎಸೆದಾಗ ಕೋಲು ಪಿರ್ಯಾದಿದಾರರ ಮುಖದ ಬಲ ಭಾಗಕ್ಕೆ ಬಿದ್ದು ಹಣೆ ಹಾಗೂ ಕೆನ್ನೆಯ ಬಲ ಭಾಗಕ್ಕೆ ಗಾಯವಾಗಿರುತ್ತದೆ. ನಂತರ ಆಪಾದಿತ ಬೇಲಿಯ ಬಳಿ ಬಂದು ಪಿರ್ಯಾದಿದಾರು  ಧರಿಸಿದ್ದ ನೈಟಿಯ ಕಾಲರ್‌ ಪಟ್ಟಿ ಹಿಡಿದು ಎಳೆದಾಡಿದನು. ಆಗ ಪಿರ್ಯಾದಿದಾರರು ಹಾಗೂ ಮಗಳು ಶಮಿತಾ ಜೋರಾಗಿ ಬೊಬ್ಬೆ ಹಾಕಿದಾಗ ಪಿರ್ಯಾದಿದಾರರನ್ನು  ದೂಡಿ ಹಾಕಿದನು. ಆಗ ಪಿರ್ಯಾದಿದಾರರ ಮಗಳು ಶಮಿತ ಮತ್ತು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರ ದೊಡ್ಡಮ್ಮನ ಮಗ ಬಾಲಕೃಷ್ಣ ಪಿರ್ಯಾದಿದಾರರನ್ನು  ಎತ್ತಿ ಉಪಚರಿಸಿರುತ್ತಾರೆ.ಆಪಾದಿತ ಮುದ್ದು ನಾಯ್ಕನು ಹಲ್ಲೆ ಮಾಡಿದ್ದರಿಂದ ಪಿರ್ಯಾದಿದಾರ ಹಣೆ ಹಾಗೂ ಕೆನ್ನೆಯ ಬಲ ಭಾಗಕ್ಕೆ ರಕ್ತ ಗಾಯವಾಗಿರುತ್ತದೆ. ನೈಟಿ ಹಿಡಿದು ಎಳೆದಾಡಿದ್ದರಿಂದ ನೈಟಿಯ ಎದೆಯ ಭಾಗದಲ್ಲಿ ಹರಿದಿರುತ್ತದೆ. ಅಲ್ಲದೇ ಪಿರ್ಯಾದಿದಾರರು ಧರಿಸಿದ್ದ ನೈಟಿಯ ಕಾಲರ್‌ ಪಟ್ಟಿ ಹಿಡಿದು ಎಳೆದಾಡಿದ್ದರಿಂದ ಪಿರ್ಯಾದಿದಾರರ ಮಾನಕ್ಕೆ ಕುಂದುಂಟಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ  ಅಪರಾಧ ಕ್ರಮಾಂಕ 98/2022  ಕಲಂ: 504,324, 354 (ಬಿ) , 352 ಐಪಿಸಿ. ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 24-07-2022 11:55 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080