ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಕುಂದಾಪುರ: ದಿನಾಂಕ 23/07/2021 ರಂದು ರಂದು ಸಂಜೆ  ಸುಮಾರು 7:30 ಗಂಟೆಗೆ ಕುಂದಾಪುರ  ತಾಲೂಕಿನ ಕಟ್‌ಬೇಲ್ತೂರು ಗ್ರಾಮದ ಹೆಮ್ಮಾಡಿ – ಕೊಲ್ಲೂರು  ರಸ್ತೆಯ ಕಾಂಚನ ಹೊಟೇಲ್‌‌ ಬಳಿ ರಸ್ತೆಯಲ್ಲಿ,  ಆಪಾದಿತ ಮಂಜುನಾಥ ಶೇರಿಗಾರ ಎಂಬವರು KA-20-Z-8548 ನೇ ಕಾರನ್ನು ಹೆಮ್ಮಾಡಿ ಕಡೆಯಿಂದ ವಂಡ್ಸೆ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು, ಅದೇ ದಿಕ್ಕಿನಲ್ಲಿ ರಸ್ತೆಯ ತೀರ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಾದ ದಯಾನಂದ (29) ತಂದೆ  ಗೋಪಾಲ ವಾಸ: ಮುಳ್ಳುಕುಂಟೆ, ಕಟ್‌‌‌‌ಬೇಲ್ತೂರು ಗ್ರಾಮ, ಕುಂದಾಪುರ ತಾಲೂಕು ಎಂಬವರಿಗೆ  ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಇವರ ಬಲಕಾಲಿಗೆ ಮೂಳೆ ಮುರಿತದ ಗಾಯ ಹಾಗೂ ತರಚಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 61/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಿರ್ವಾ: ಪಿರ್ಯಾದಿದಾರರಾದ ಉಮೇಶ್‌ದೇವಾಡಿಗ, (54) ತಂದೆ: ದಿ|| ಮೈಂದ ಸೇರಿಗಾರ, ವಾಸ: ಪಡುಮಠ, ಮಾಣಿಬೆಟ್ಟು, ಮಟ್ಟಾರು ಅಂಚೆ ಮತ್ತು ಶಿರ್ವ ಗ್ರಾಮ, ಕಾಪು ಇವರು ದಿನಾಂಕ 23/07/2021 ರಂದು ಸಾಯಂಕಾಲ 19:25 ಗಂಟೆ ಸುಮಾರಿಗೆ ನಾಲ್ಕು ಬೀದಿ ಜಂಕ್ಷನ್‌ನಿಂದ ಸ್ವಲ್ಪ ಮುಂದಕ್ಕೆ ಶಿರ್ವ ಕಡೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ತನ್ನ ಕೆಎ-20-ಇಪಿ-8004 ನೇ ದ್ವಿಚಕ್ರ ವಾಹನದಲ್ಲಿ ತನ್ನ ಮನೆ ಕಡೆಗೆ ಹೋಗುವರೇ ಸೂಚನೆ ಕೊಟ್ಟು ವಾಹನವನ್ನು ತಿರುಗಿಸುತ್ತಿದ್ದಾಗ ಕೆಎ-20-ಎನ್‌-1533 ನೇಯ ಅಲ್ಟೋ ಕಾರಿನ ಚಾಲಕ ಮಹಮ್ಮದ್‌ ಎಂಬಾತನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಹಿಂಬಂದಿಯಿಂದ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸಮೇತ ರಸ್ತೆಗೆ ಎಸೆಯಲ್ಪಟ್ಟು ಬಲ ಬದಿ ತಲೆಗೆ, ಬಲ ಬದಿ ಹಣೆಗೆ ರಕ್ತ ಗಾಯವಾಗಿದ್ದು, ಬಲ ಬದಿ ಎದೆಗೆ ತೀವ್ರ ತರದ ಒಳ ಜಖಂ ಆಗಿರುತ್ತದೆ, ಹಾಗೂ ಬಲ ಬದಿ ಸೊಂಟಕ್ಕೆ, ಎರಡೂ ಕಾಲಿನ ಮೊಣಗಂಟಿಗೆ ತರಚಿದ ಗಾಯ ಆಗಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 41/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ಅಶೋಕ ದೇವಾಡಿಗ (30) ತಂದೆ: ಲಕ್ಷ್ಮಣ ದೇವಾಡಿಗ ವಾಸ: ಗುರು ನಿಲಯ ಪಾರಂಪಳ್ಳಿ ಪಡುಕೆರೆ ಸಾಲಿಗ್ರಾಮ ಪಾರಂಪಳ್ಳಿ ಗ್ರಾಮ ಬ್ರಹ್ಮಾವರ ಇವರ ತಾಯಿ ಬಾಬಿ (58) ಇವರು ಮನೆವಾರ್ತೆ ಕೆಲಸ ಮಾಡಿಕೊಂಡಿದ್ದು ದಿನಾಂಕ 23/07/2021 ರಂದು ಮಧ್ಯಾಹ್ನ 1.00 ಘಂಟೆಯ ಸುಮಾರಿಗೆ ಅಡುಗೆ ಒಲೆಗೆ ಸೌದೆ ತರಲು ಕೊಟ್ಟಿಗೆಗೆ ಹೋಗಿ ಸೌದೆ ರಾಶಿಯಿಂದ ಕಟ್ಟಿಗೆಯನ್ನು ತೆಗೆಯುವಾಗ  ಯಾವುದೋ ವಿಷ ಪೂರಿತ ಹಾವು ಅವರ  ಬಲ ಕೈಯ ಹಸ್ತಕ್ಕೆ  ಕಚ್ಚಿದ್ದು ಕೂಡಲೇ ಕೊಟ್ಟಿಗೆಯಿಂದ ಹೊರಗೆ ಬಂದು ಹಾವು ಕಚ್ಚಿದ ಬಗ್ಗೆ ತಿಳಿಸಿದಂತೆ ಕೂಡಲೇ ಒಂದು ರಿಕ್ಷಾದಲ್ಲಿ ಕೋಟ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ  ಉಡುಪಿಯ ಜಿಲ್ಲಾಸ್ಪತ್ರೆಗೆ  ಕರೆದುಕೊಂಡು ಒಳ ರೋಗಿಯಾಗಿ ದಾಖಲು ಮಾಡಿರುತ್ತಾರೆ. ಆಸ್ಪತ್ರೆಯ ತೀವೃ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿರುತ್ತಾ ದಿನಾಂಕ 24/07/2021 ರಂದು ಬೆಳಿಗ್ಗೆ 9:00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 24/2021 ಕಲಂ: 174 ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
 • ಬ್ರಹ್ಮಾವರ: ಪಿರ್ಯಾದಿದಾರರಾದ ಅಣ್ಣಪ್ಪ ಶೆಟ್ಟಿಗಾರ್ (52), ತಂದೆ: ದಿ| ನಾರಾಯಣ ಶೆಟ್ಟಿಗಾರ್, ವಾಸ: ಮಾತೃಶ್ರೀ ಕೃಪಾ, ಸಾಲಿಕೇರಿ, ವಾರಂಬಳ್ಳಿ ಗ್ರಾಮ, ಬ್ರಹ್ಮಾವರ ಇವರು ಹಾಗೂ ಅವರ ತಮ್ಮ ಜಗನ್ನಾಥ ಶೆಟ್ಟಿಗಾರ್, (48) ಎಂಬವರು ತಮ್ಮ ಸಂಸಾರದೊಂದಿಗೆ ಕೂಡು ಕುಟುಂಬದಲ್ಲಿ ವಾಸವಾಗಿರುವುದಾಗಿದೆ. ಜಗನ್ನಾಥ ಶೆಟ್ಟಿಗಾರ್‌ರವರು ಒಂದು ವರ್ಷದಿಂದ ಮೂಲ ವ್ಯಾಧಿ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ  ವೈಧ್ಯರಿಂದ ಎರಡೂ ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿದ್ದು, ಅನಂತರ ಸ್ವಲ್ಪ ಗುಣಮುಖರಾಗಿದ್ದು, ಕೆಲಸಕ್ಕೆ ಹೋಗಿ ಬರುತ್ತಿದ್ದರು. ಆದರೇ ಜಗನ್ನಾಥ ಶೆಟ್ಟಿಗಾರ್‌ರವರು ಅವರಿಗಿದ್ದ ಮೂಲವ್ಯಾಧಿ ಕಾರಣದಿಂದಲೋ ಅಥವಾ ಬೇರೆ ಯಾವುದೋ ಕಾರಣದಿಂದ ಮನನೊಂದು ಜೀವನದಲ್ಲಿ ಜೀಗುಪ್ಸೆಗೊಂಡು ದಿನಾಂಕ 23/07/2021 ರಂದು ರಾತ್ರಿ 10:15 ಗಂಟೆಯಿಂದ ದಿನಾಂಕ 24/07/2021 ರಂದು ಬೆಳಿಗ್ಗೆ 08:30 ಗಂಟೆಯ ಮಧ್ಯಾವಧಿಯಲ್ಲಿ  ಮನೆಯ ಪೂರ್ವ ಭಾಗದಲ್ಲಿರುವ ಬಾವಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಜಗನ್ನಾಥ ಶೆಟ್ಟಿಗಾರ್‌ರವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. . ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 42/2021 ಕಲಂ: 174 ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ರೆ| ಫಾ| ವಿಕ್ಟರ್ ಫೆನಾ್ಂಡೀಸ್, (51), ಬ್ರಹ್ಮಾವರ ಹೋಲಿ ಫ್ಯಾಮಿಲಿ ಚರ್ಚ್‌ನ ಪ್ರಧಾನಗುರುಗಳು ಇವರು ಬ್ರಹ್ಮಾವರ ತಾಲೂಕು ಚಾಂತಾರು ಗ್ರಾಮದಲ್ಲಿರುವ ಹೋಲಿ ಫ್ಯಾಮಿಲಿ ಚರ್ಚ್‌ನ ಗುರುಗಳು ಹಾಗೂ ನಿರ್ಮಲ ಹಿರಿಯ ಪ್ರಾಥಮಿಕ  ಶಾಲೆಯ ಸಂಚಾಲಕರು ಆಗಿರುತ್ತಾರೆ.  ದಿನಾಂಕ 23/07/2021 ರಂದು ರಾತ್ರಿ ಇವರು ಸದ್ರಿ ಚರ್ಚ್‌& ನಿರ್ಮಲ ಶಾಲೆಯ ಆಫೀಸುಗಳ ಬಾಗಿಲಿಗೆ ಬೀಗ ಹಾಕಿ ತನ್ನ ವಸತಿ ಗೃಹಕ್ಕೆ ಹೋಗಿರುತ್ತಾರೆ,  ಬೆಳಿಗ್ಗೆ ಎದ್ದು ನೋಡುವಾಗ ಅಂದರೆ ದಿನಾಂಕ 23/07/2021 ರಂದು ರಾತ್ರಿ 9:00 ಗಂಟೆಯಿಂದ ದಿನಾಂಕ 24/07/2021 ರಂದು ಬೆಳಿಗ್ಗೆ 7:00 ಗಂಟೆಯ ಮಧ್ಯಾವದಿಯಲ್ಲಿ  ಯಾರೋ ಕಳ್ಳರು ಚರ್ಚ್‌ ಆಫೀಸು ಕೋಣೆಯ ಎದುರಿನ ಕಿಟಕಿಯ ಗಾಜನ್ನು ಒಡೆದು, ಕಬ್ಬಿಣದ ಪಟ್ಟಿಯನ್ನು ಕತ್ತರಿಸಿ, ಒಳ ಹೊಕ್ಕಿ ಮೇಜಿನ ಡ್ರಾವರನ ಮೇಲೆ ಇಟ್ಟಿದ್ದ  ಬೀಗದ ಕೀಯನ್ನು ಬಳಸಿ ಡ್ರಾವರಿನಲ್ಲಿದ್ದ ಸುಮಾರು ರೂಪಾಯಿ 88.000/- ಕಳವು ಮಾಡಿಕೊಂಡುಹೋಗಿರುತ್ತಾರೆ. ಅಲ್ಲದೇ ನಿರ್ಮಲ ಶಾಲೆಯ ಆಫೀಸು ಕೋಣೆಯ ಬಾಗಿಲು ಬೀಗವನ್ನು ಒಡೆದು ಹೊಳ ಹೊಕ್ಕಿ ರೂಮಿನಲ್ಲಿದ್ದ ಕಪಾಟುಗಳನ್ನು ಜಾಲಾಡಿಸಿ ಕಳ್ಳತನಕ್ಕೆ ಪ್ರಯತ್ನಿಸಿರುವುದು ಕಂಡುಬಂದಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 140/2021 ಕಲಂ: 454, 457, 380, 511 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕಾಪು: ಪಿರ್ಯಾದಿದಾರರಾದ ಅಬ್ದುಲ್ ರಹೀಮ್ (46) ತಂದೆ: ದಿ ಶೇಕಬ್ಬ ಬ್ಯಾರಿ ವಾಸ: ಮನಹಾರ್ ಇಬ್ರಾಹೀಂ ಸಾಹೇಬರವರ ಬಾಡಿಗೆ ಮನೆ ಕೊಪ್ಪಲಂಗಡಿ ಕಾಪು ಪಡು ಗ್ರಾಮ ಉಡುಪಿ ಇವರು ದಿನಾಂಕ 23/07/2021 ರಂದು ರಾತ್ರಿ 09:00 ಗಂಟೆಗೆ ಮೂಳೂರು ಸುನ್ನಿ ಸೆಂಟರ್ ಬಳಿ ಕುಷನ್ ವರ್ಕ್ ಆರ್ಡರ್ ತೆಗೆದುಕೊಂಡು ರಾತ್ರಿ ಸುಮಾರು 09:40 ಗಂಟೆಗೆ ಅಲ್ಲಿಂದ ಹೋರಟು ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 66 ಕೊಪ್ಪಲಂಗಡಿ ಕಡೆಗೆ ತನ್ನ ಕೆಎ-20-ಈವೈ-3223 ನೇದರ ನಂಬ್ರದ ಸ್ಕೂಟಿಯಲ್ಲಿ ಅಬ್ದುಲ್ ಅಜೀಜ್ ರವರು ಸವಾರಿ ಮಾಡಿಕೊಂಡು ಅಬ್ದುಲ್ ರಹೀಮ್ ರವರು ಸಹ ಸವಾರರಾಗಿ ಹಿಂದೆ ಕುಳಿತುಕೊಂಡು ಕೊಪ್ಪಲಂಗಡಿ ಕಮ್ಯೂನಿಟಿ ಹಾಲ್ ತಲುಪಿದಾಗ ಮಂಗಳೂರು ಉಡುಪಿ ರಸ್ತೆಯ ಬದಿಯಲ್ಲಿ ಉಡುಪಿ ಕಡೆಗೆ ಮುಖ ಮಾಡಿ ಒಂದು ಸಿಲ್ವರ್ ಬಣ್ಣದ ರಿಡ್ಜ್ ಕಾರು ನಿಂತಿದ್ದು ಸದ್ರಿ ಕಾರಿನ ಒರಗಡೆ 05 ಜನ ನಿಂತಿದ್ದು ಅದರಲ್ಲಿ ಒಬ್ಬ ಕೈಯಲ್ಲಿ ಬಿದರಿ ಕೋಲನ್ನು ಹಿಡಿದುಕೊಂಡು ನಿಂತಿದ್ದು ಉಳಿದ 04 ಜನ ಅಬ್ದುಲ್ ರಹೀಮ್ ರವರು ಹೋಗುತಿದ್ದ ಸ್ಕೂಟಿಯನ್ನು ಒಮ್ಮೇಲೆ ತಡೆದು ನಿಲ್ಲಿಸಿ ಏಕಾಏಕಿ ಕೋಲಿನಿಂದ ಮುಖಕ್ಕೆ ಹೊಡೆದು ಉಳಿದವರು ಕೈಯಿಂದ ಹೊಡೆದು ಕಾಲಿನಿಂದ ತುಳಿದು ಹಲ್ಲೆ ನಡೆಸಿದಾಗ ಇವರ ಹಣೆಗೆ ಗಲ್ಲಕ್ಕೆ ಹಾಗೂ ಕಣ್ಣಿನ ಬಳಿ ರಕ್ತ ಗಾಯವಾಗಿ ಕೋಲಿನಿಂದ ಅಬ್ದುಲ್ ರಹೀಮ್ ಇವರನ್ನು ಹೊಡೆದ ರಭಸಕ್ಕೆ ಕೋಲು ಹುಡಿಯಾಗಿ ಬಿದಿದ್ದು ಆ ಸಮಯ ಅಬ್ದುಲ್ ರಹೀಮ್ ಇವರು ಬೊಬ್ಬೆ ಹೊಡೆದಾಗ ಅಬ್ದುಲ್ ರಹೀಮ್ ಇವರ ಜೊತೆಗಿದ್ದಾ ಅಬ್ದುಲ್ ಅಜೀಜ್ ರವರು ತಡೆಯಲು ಬಂದಾಗ ಎಲ್ಲರೂ ಅವರು ತಂದಿದ್ದ ಕಾರನ್ನು ಹತ್ತಿ ಉಡುಪಿ ಕಡೆಗೆ ರಭಸವಾಗಿ ಹೋಗಿರುತ್ತಾರೆ  ಸದ್ರಿ ಕಾರಿನಲ್ಲಿದ್ದ 5 ಜನರು ಮುಖಕ್ಕೆ ಮಾಸ್ಕ್ ಹಾಕಿರುವುದರಿಂದ ಅವರ ಪರಿಚಯ ಆಗಿರುವುದಿಲ್ಲಾ ಕೂಡಲೇ ಅಬ್ದುಲ್ ಅಜೀಜ್ ರವರು ಅಬ್ದುಲ್ ರಹೀಮ್ ಇವರನ್ನು ಚಿಕಿತ್ಸೆಯ ಬಗ್ಗೆ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಒಂದು ವಾಹನದಲ್ಲಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿ ಕಳುಹಿಸಿಕೊಟ್ಟಿದ್ದು, ದಿನಾಂಕ 23/07/2021 ರಂದು ರಾತ್ರಿ 10:00 ಗಂಟೆ ಸುಮಾರಿಗೆ ಅಡ್ಡಗಟ್ಟಿ ಹಲ್ಲೆ ನಡೆಸಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 124/2021 ಕಲಂ: 143,147, 148, 341, 323, 324 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ಪಿರ್ಯಾದಿದಾರರಾದ ಸವಿತಾ ಕ್ವಾಡೋಸ್ (34) ತಂದೆ: ರೋಬರ್ಟ್ ಕ್ವಾಡೋಸ್  ವಾಸ:4-213, ಪ್ರಕಾಶ ವಿಲ್ಲಾ, ಕೋಡಿ ರೋಡ, ಹಂಗ್ಲೂರು, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇವರು ಮಣಿಪಾಲದಲ್ಲಿ  ದೆಹಲಿ ಮೂಲದ ಶಂಬ್ರೋಕ್  ಪ್ಲೇ ಸ್ಕೂಲ್ ಇದರ ಪ್ರಾಂಚೈಸಿ  ಪಡೆದು ಶಾಲೆಯನ್ನು  ತೆರೆಯಲು ನಿರ್ಧರಿಸಿ  3ನೇ ಆರೋಪಿಯಾದ  ಅಲ್ವಿನ್  ಸಾಲ್ಡಾನ ಮೇಖೇನಾ 1ನೇ ಆರೋಪಿ ಸ್ವಪ್ನಾ ಶೆಟ್ಟಿರವರಿಂದ ಹೆರ್ಗಾ ಗ್ರಾಮದ ಸರ್ವೆ ನಂಬರ್: 260/8ಪಿ11 ರಲ್ಲಿನ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿರುತ್ತಾರೆ. ನಂತರ ಸವಿತಾ ಕ್ವಾಡೋಸ್ ರವರು  1ನೇ ಆರೋಪಿ ಸ್ವಪ್ನ ಶೆಟ್ಟಿಯನ್ನು ಸಂಪರ್ಕಿಸಿ ಸದರಿ ಮನೆಯಲ್ಲಿ ಶಾಲೆಯನ್ನು ತೆರೆಯುವ ಬಗ್ಗೆ ಮಾತುಕತೆ ನಡೆಸಿ, ದಿನಾಂಕ 12/03/2020 ರಂದು ಲಿಖಿತ ಕರಾರನ್ನು ಮಾಡಿ ದಿನಾಂಕ 23/03/2020 ರಂದು  1 ಲಕ್ಷ ರೂಪಾಯಿ ಹಣವನ್ನು ಭದ್ರತೆ  ಠೇವಣೆಯನ್ನು ಚೆಕ್ ಮೂಲಕ 2 ನೇ ಆರೋಪಿ ಶಶಾಂಕ್ ಶೆಟ್ಟಿ ಖಾತೆಗೆ ಪಾವತಿ ಮಾಡಿರುತ್ತಾರೆ. ನಂತರ ಸವಿತಾ ಕ್ವಾಡೋಸ್ ರವರು ಮನೆಯನ್ನು ಸುಮಾರು 15 ಲಕ್ಷ ರೂಪಾಯಿ ಹಣ ಖರ್ಚು ಮಾಡಿ ನವೀಕಣಗೊಳಿಸಿರುತ್ತಾರೆ. ಹಾಗೂ ಸದರಿ ಕರಾರಿನ ಆಧಾರದಲ್ಲಿ ಸವಿತಾ ಕ್ವಾಡೋಸ್ ರವರು  ಸಿ.ಬಿ.ಎಸ್ ಬೋರ್ಡ್  ನಿಂದ  4,25,000/-ಕ್ಕೆ ಹಕ್ಕು  ಪಡೆದಿರುತ್ತಾರೆ. ದಿನಾಂಕ 15/03/2021 ರಂದು 1ನೇ ಆರೋಪಿ ಸ್ವಪ್ನ ಶೆಟ್ಟಿ, 2ನೇ ಆರೋಪಿ ಶಶಾಂಕ್ ಶೆಟ್ಟಿ,  ಮತ್ತು 4 ನೇ ಆರೋಪಿ ಸನೀತ್ ಶೆಟ್ಟಿ ಸವಿತಾ ಕ್ವಾಡೋಸ್ ಇವರು ಶಾಲೆಯಲ್ಲಿ ಇರುವ ಸಮಯ ಶಾಲೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಇವರನ್ನು ಉದ್ದೇಶಿಸಿ ಮನೆಯನ್ನು ಬಾಡಿಗೆಗೆ ನೀಡುವುದಿಲ್ಲ, ಈ ಕೂಡಲೇ ನೀವು ಜಾಗ ಖಾಲಿಮಾಡಬೇಕೆಂದು ತಿಳಿಸಿರುತ್ತಾರೆ. ಹಾಗೂ ಆರೋಪಿಗಳು ಸವಿತಾ ಕ್ವಾಡೋಸ್ ಇವರನ್ನು ಹಾಗೂ ಮಕ್ಕಳನ್ನು ಬಲವಂತವಾಗಿ ಮನೆಯಿಂದ ಹೊರಕ್ಕೆ ಹಾಕಿ ಸವಿತಾ ಕ್ವಾಡೋಸ್ ಇವರು ಹಾಕಿದ ಬೀಗವನ್ನು ಒಡೆದು ತೆಗೆದು ಬೇರೆ ಬೀಗವನ್ನು ಹಾಕಿರುತ್ತಾರೆ. ಹಾಗೂ ಸವಿತಾ ಕ್ವಾಡೋಸ್ ರವರು ಮನೆಯ ಒಳಗಡೆ ಸುಮಾರು 2,50,000/-ರೂ ಖರ್ಚು ಮಾಡಿ ಹಾಕಿದ  ಪೈಂಟಿಂಗ್‌‌ಹಾಳು ಮಾಡಿ, ಕುರ್ಚಿಗಳನ್ನು ಎಸೆದು 3 ಲಕ್ಷ  ನಷ್ಟ ಉಂಟು ಮಾಡಿರುತ್ತಾರೆ. ಮನೆಯ ಹೊರಗಡೆ ಶಾಲೆಯ ಅನುಕೂಲತೆಗಾಗಿ  ನಿರ್ಮಿಸಿದ್ದ  ಕಛೇರಿಯನ್ನು  ಒಡೆದು ತೆಗೆದು ನಷ್ಟ ಉಂಟುಮಾಡಿರುತ್ತಾರೆ. ಇದನ್ನು ಸವಿತಾ ಕ್ವಾಡೋಸ್ ರವರು ಪ್ರಶ್ನಿಸಿದಾಗ 1ನೇ ಆರೋಪಿ ಸ್ವಪ್ನ ಶೆಟ್ಟಿ ಬಾಡಿಗೆ ಮುಂದುವರಿಸುವುದಿಲ್ಲ ಎಂದು ತಿಳಿಸಿರುತ್ತಾರೆ. ಇದನ್ನು ವಿರೋಧಿಸಿದಾಗ  ಆರೋಪಿಗಳು ಅವ್ಯಾಚ್ಯ ಶಬ್ದದಿಂದ ಬೈದು ಮನೆಯನ್ನು ಖಾಲಿ ಮಾಡಬೇಕು ಇಲ್ಲದಿದ್ದಲ್ಲಿ ಬಲತ್ಕಾರವಾಗಿ ಹೊರಗೆ ಹಾಕುವುದಾಗಿ ಹಾಗೂ  ಮಾತನ್ನು ಕೇಳದಿದ್ದಲ್ಲಿ ಕೈ ಕಾಲನ್ನು  ಕಡಿದು ಕೊಂದು ಹಾಕುವುದಾಗಿ ಬೆದರಿಕೆ ಹಾಕಿರುತ್ತಾರೆ. ಹಾಗೂ 1ನೇ ಆರೋಪಿತೆಯು  ದೇಹಲಿಯ  ಮುಖ್ಯ ಪ್ರಾಂಚೈಸಿಗೆ ಇ- ಮೇಲ್ ಗಳನ್ನು ಕಳುಹಿಸಿ ಸುಳ್ಳು ಮಾಹಿತಿಯನ್ನು ನೀಡಿ, ಸದರಿ ಮನೆಯನ್ನು ಬಾಡಿಗೆಗೆ ನೀಡಿಲ್ಲವಾಗಿ  ತಿಳಿಸಿರುತ್ತಾರೆ. ಸವಿತಾ ಕ್ವಾಡೋಸ್ ರವರು ಈಗಾಗಲೇ ಮನೆ ನವೀಕರಣ ಮಾಡಿರುವುದರಿಂದ 15 ಲಕ್ಷ ರೂ ನಷ್ಟ ಉಂಟಾಗಿರುತ್ತದೆ. 1, 2, 3 ನೇ  ಆರೊಪಿಗಳು ಇವರಿಗೆ  ಮೋಸ ಮಾಡುವ ಉದ್ದೇಶದಿಂದ  ಮನೆಯ ಬಗ್ಗೆ  ಕರಾರು ಮಾಡಿಕೊಂಡು  1 ಲಕ್ಷ  ಹಣವನ್ನು ಪಡೆದು  ಶಾಲೆ ನಡೆಸಲು ಅವಕಾಶ ಕೊಡದೇ ಮೋಸ ಮಾಡಿ ನಷ್ಟ  ಉಂಟುಮಾಡಿರುತ್ತಾರೆ .ಎಪ್ರಿಲ್ 2ನೇ ವಾರದಂದು ಸವಿತಾ ಕ್ವಾಡೋಸ್ ಇವರು ತಮ್ಮ ಅಕ್ಕನೊಂದಿಗೆ  ಸದರಿ ಮನೆಗೆ ಹೋದಾಗ 4ನೇ ಆರೋಪಿ ಸನಿತ್ ಶೆಟ್ಟಿ ಸ್ಥಳಕ್ಕೆ  ಬಂದು ಮನೆಯಲ್ಲಿ ಯಾವುದೇ ಕೆಲಸ ಮಾಡದಂತೆ ತಡೆಹಿಡಿದಿರುತ್ತಾನೆ. ಇದನ್ನು ಇವರು ಪ್ರತಿಭಟಿಸಿದಾಗ ಸದರಿ ಆರೋಪಿಯು ಆಕೆಯ ಆಕೆಯನ್ನು  ನೆಲಕ್ಕೆ  ದೂಡಿ ಅವ್ಯಾಚ್ಯ ಶಬ್ದದಿಂದ ನಿಂದಿಸಿ ಇನ್ನೂ ಈ ಮನೆಯಲ್ಲಿ ನೋಡಿದಲ್ಲಿ ನಿನ್ನನ್ನು ಕೊಂದು  ಹಾಕಲು ಸುಪಾರಿ  ಬಂದಿರುವುದಾಗಿ ಹೆದರಿಸಿ ಬೆದರಿಕೆ ಹಾಕಿ ಹೋಗಿರುತ್ತಾನೆ. ಮಾನ್ಯ ನ್ಯಾಯಾಲಯದಿಂದ ಬಂದ ಖಾಸಗಿ ಪ್ರಕರಣದಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 95/2021 ಕಲಂ: 341, 354, 406, 420, 427, 504, 506, 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-07-2021 06:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080