ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 21/06/2022 ರಂದು ಮಧ್ಯಾಹ್ನ 12:00 ಗಂಟೆಗೆ ಪಿರ್ಯಾದಿದಾರರಾದ ಸುನೀಲ್  (40), ತಂದೆ:ಸುಂದರ ಪೂಜಾರಿ , ವಾಸ: ಸುನೀತ ನಿವಾಸ, ನೀರಲ್ಕೆ ಬೋಳ  ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರು ಕಾರ್ಕಳ ತಾಲೂಕು ಕೆದಿಂಜೆ ಗ್ರಾಮದ ಕೆದಿಂಜೆ ಕೆನರಾ ಬ್ಯಾಂಕ್ ಬಳಿಯಲ್ಲಿರುವ ತನ್ನ  ಕೋಳಿ ಅಂಗಡಿಯಲ್ಲಿರುವಾಗ ಬೆಳ್ಮಣ್ ಕಡೆಯಿಂದ ಕೆದಿಂಜೆ ಕಡೆಗೆ ರಾಜ್ಯ ಹೆದ್ದಾರಿಯಲ್ಲಿ KA-20-ED-3906 ನೇ ಮೋಟಾರ್ ಸೈಕಲ್ ಸವಾರ ಗುರುಪ್ರಸಾದ್  ಮೋಟಾರ್ ಸೈಕಲನ್ನು ನಿರ್ಲಕ್ಷದಿಂದ ಸವಾರಿ ಮಾಡಿಕೊಂಡು ಬರುವಾಗ ಮೋಟಾರ್ ಸೈಕಲಿನ ಮೇಲಿನ ನಿಯಂತ್ರಣ ತಪ್ಪಿ ವಾಹನ ಸಮೇತ ರಸ್ತೆಯ ಮದ್ಯದಲ್ಲಿರುವ ಡಿವೈಡರಿನ ಮೇಲೆ ಬಿದ್ದ ಪರಿಣಾಮ ಗುರುಪ್ರಸಾದ್ ಇವರ ಎಡಕೈ ತುಂಡಾಗಿ, ಅವರ ದೇಹಕ್ಕೆ ಗುದ್ದಿದ ಒಳ ಜಖಂ ಆಗಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 88/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಸಂತೋಷ್‌ ಶೆಟ್ಟಿ (48), ತಂದೆ:ದಿ. ಶಂಕರ ಶೆಟ್ಟಿ, ವಾಸ:ಪಡುತೋಟ ಹೌಸ್‌, ಚಿತ್ರಾಪು, ಚಿತ್ರಾಪು ಗ್ರಾಮ, ಮುಲ್ಕಿ, ಮಂಗಳೂರು ತಾಲೂಕು, ದ.ಕ. ಜಿಲ್ಲೆ ಇವರ ದೊಡ್ಡಮ್ಮನ ಮಗ ರಾಮಚಂದ್ರ ಶೆಟ್ಟಿ (63) ರವರು ದಿನಾಂಕ 23/06/2022 ರಂದು ಇನ್ನಾದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗುವುದಾಗಿ ತಿಳಿಸಿ ಸಂಜೆ 6:00 ಗಂಟೆಗೆ ಮನೆಯಿಂದ ಹೊರಟವರು ರಾತ್ರಿ 8:30 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿ ಎಸ್.ಎಸ್. ಬಾರ್ ಆಂಡ್ ರೆಸ್ಟೋರೆಂಟ್‌ ಎದುರು ರಾಷ್ಟ್ರೀಯ ಹೆದ್ದಾರಿ-66ರ ಉಡುಪಿ-ಮಂಗಳೂರು ರಸ್ತೆಯ ಡಿವೈಡರ್‌ ಬದಿಯಲ್ಲಿ ರಸ್ತೆ ದಾಟಲು ನಿಂತಿರುವಾಗ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀವೇಗವಾಗಿ ಬಂದ KA-20-P-4666 ನೇ ರಿಡ್ಜ್ ಕಾರು ರಾಮಚಂದ್ರ ಶೆಟ್ಟಿ ಯವರಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಎದುರು ಗ್ಲಾಸಿನ ಮೇಲೆ ಬಿದ್ದು, ನಂತರ ರಸ್ತೆಗೆ ಬಿದ್ದವರು ತಲೆಗೆ ಹಾಗೂ ಎಡಕಾಲಿಗೆ ಗಾಯ ಉಂಟಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದವರನ್ನು ಅಲ್ಲಿ ಸೇರಿದವರು ಹೆಜಮಾಡಿ ಟೋಲ್‌ಗೇಟ್‌ ಆಂಬುಲೆನ್ಸ್ ಗೆ ಮಾಹಿತಿ ನೀಡಿ ಅದೇ ಆಂಬುಲೆನ್ಸ್‌ ನಲ್ಲಿ ರಾಮಚಂದ್ರ ಶೆಟ್ಟಿ ರವರನ್ನು ಚಿಕಿತ್ಸೆಯ ಬಗ್ಗೆ ಕರೆದುಕೊಂಡು ಹೋಗುತ್ತಾ ಮೃತಪಟ್ಟಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 80/2022 ಕಲಂ: 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಕಿರಣ್‌ರಾಜ್‌ ಎಸ್‌ (41), ತಂದೆ: ಸರ್ವೋತ್ತಮ ನಾಯಕ್‌, ವಾಸ: ಮನೆನಂಬ್ರ  ಕಿಶನ್‌-ಕಿರಣ್‌ 2-49 ಎ-1, ಎಲ್‌ವಿಟಿ ದೇವಸ್ಥಾನದ ಹಿಂದೆ, ಪುತ್ತೂರು ಗ್ರಾಮ, ಉಡುಪಿ  ಜಿಲ್ಲೆ ಇವರ ತಮ್ಮ ರಾಜ್‌ಕಿಶನ್‌ (36) ಇವರು 5 ತಿಂಗಳಿನ ಹಿಂದೆ ರಸ್ತೆ ಅಪಘಾತವಾಗಿ ಬಲ ಕೈಯನ್ನು ಕಳೆದುಕೊಂಡಿದ್ದು, ಇದೇ ಕಾರಣದಿಂದ ಮನನೊಂದು, ದಿನಾಂಕ 22/06/2022ರಂದು ರಾತ್ರಿ 10:30 ಗಂಟೆಯಿಂದ  ದಿನಾಂಕ 23/06/2022 ರಂದು ಮದ್ಯಾಹ್ನ 3:00 ಗಂಟೆಯ ಮಧ್ಯಾವಧಿಯಲ್ಲಿ ಹೊದಿಕೆಯನ್ನು ಫ್ಯಾನ್‌ಗೆ ಉರುಳು ಹಾಕಿಕೊಂಡು ಆತ್ಮಹತ್ಯೆಯನ್ನು ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 33/2022 ಕಲಂ: 174 CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ಅಮೃತಾ (18), ತಂದೆ: ಶೇಖರ ಮೊಗವೀರ , ವಾಸ: ಕೋಳಿ ಪಾರಂ ಬಳಿ, ಮಾವಿನಕಟ್ಟೆ ಗುಲ್ವಾಡಿ ಗ್ರಾಮ ಕುಂದಾಪುರ ತಾಲೂಕು ಇವರ ತಂದೆ  ಶೇಖರ (53) ರವರು ತನ್ನ ತಮ್ಮಂದಿರೊಂದಿಗೆ ಗುಲ್ವಾಡಿ  ನೀರು ಟ್ಯಾಂಕಿ ಬಳಿ ವಾಸವಾಗಿದ್ದು, ವಿಪರೀತ ಶರಾಬು ಸೇವಿಸುವವರಾಗಿದ್ದು ಧರ್ಮಸ್ಥಳ ಸಂಘದಿಂದ ಸಾಲ ಮಾಡಿದ್ದು, ಅವರು ಸಾಲವನ್ನು ತೀರಿಸಲಾಗದೇ ಜೀವನದಲ್ಲಿ ಜಿಗೂಪ್ಸೆಗೊಂಡು ದಿನಾಂಕ 23/06/2021 ರಂದು 11:00 ಗಂಟೆಯಿಂದ 15:00 ಗಂಟೆ ಮದ್ಯಾವಧಿಯಲ್ಲಿ  ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 19/2022 ಕಲಂ: 174 CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-06-2022 09:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080