ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿ ಗುರುಕಿರಣ ಪ್ರಾಯ: 29  ವರ್ಷ, ತಂದೆ: ರಾಮಣ್ಣ ಶೆಟ್ಟಿ , ವಾಸ: ಕಾಡೇರಿಮನೆ ಹೊಸಾಡು ಮುಳ್ಳಿಕಟ್ಟೆ, ರವರು ದಿನಾಂಕ: 23.06.2022 ರಂದು ಕೆಲಸ ಮುಗಿಸಿ ತನ್ನಮೋಟಾರು ಸೈಕಲ್‌ನಲ್ಲಿ ನಾಡ ಕಡೆಯಿಂದ ಡಾನ್‌ಬಾಸ್ಕೋ ಶಾಲೆಯ  ಮಾರ್ಗವಾಗಿ ಮುಳ್ಳಿಕಟ್ಟೆ ಕಡೆಗೆ ಬರುತ್ತಿರುವಾಗ ತನ್ನ ಮುಂದಿನಿಂದ ತನ್ನ ಪರಿಚಯದ ವಿಶ್ವಾನಾಥ  ಶೆಟ್ಟಿ ಎಂಬವರು KA 20 EE 8351 ನೇ ಮೋಟಾರು ಸೈಕಲ್‌ನಲ್ಲಿ ಸಾಯಿಕುಮಾರ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು 20:15 ಗಂಟೆಗೆ ತ್ರಾಸಿ ಗ್ರಾಮದ ಮೊವಾಡಿ ಕ್ರಾಸ್‌ಬಳಿ ತಲುಪುವಾಗ್ಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಾಲನೆ ಮಾಡಿದ್ದು,   ಮೋಟಾರು ಸೈಕಲ್‌ ಸವಾರನ ಹಿಡಿತ ತಪ್ಪಿ ಸಹಸವಾರನೊಂದಿಗೆ ಮೋಟಾರು ಸೈಕಲ್‌ಸಮೇತ ರಸ್ತೆಗೆ ಬಿದ್ದರು. ನಂತರ ಉಪಚರಿಸಿ ನೋಡಲಾಗಿ ಸವಾರ ವಿಶ್ವನಾಥ ಶೆಟ್ಟಿ ರವರಿಗೆ ಬೆನ್ನಿಗೆ ಗುದ್ದಿದ ಗಾಯ ಹಾಗೂ ಸಹ ಸವಾರ ಸಾಯಿಕುಮಾರ ರವರಿಗೆ ಎಡಕೈಗೆ ಜಖಂ ಆಗಿರುತ್ತದೆ. ಈ ಅಪಘಾತಕ್ಕೆ KA 20 EE 8351 ನೇ ಮೋಟಾರು ಸೈಕಲ್‌ಸವಾರನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  57/2022 ಕಲಂ: 279, 337 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿ ಎಸ್ ಪಿ ಅರವಿಂದ ಪ್ರಾಯ: 53 ವರ್ಷ, ತಂದೆ:ಎಸ್ ಪ್ರಭಾಕರ , ವಾಸ: ಎಸ್ ಪಿ ಎಮ್ ರಸ್ತೆ ಸಾಗರ ಇವರು ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರು ದಿನಾಂಕ:23/06/2022 ರಂದು KA15N 6878 ನೇ ಐ-10 ಕಾರನ್ನು ಉಡುಪಿ ರೆಸಿಡೆನ್ಸಿ ಹೋಟೆಲ್ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿದ್ದು, ಸಮಯ ಸುಮಾರು ರಾತ್ರಿ 9-15 ಗಂಟೆಗೆ  ಹುಂಡೈ ಕಂಪೆನಿ ನೀಲಿ ಬಣ್ಣದ ನೊಂದಣಿ ಸಂಖ್ಯೆ ಇಲ್ಲದ ಹೊಸ ಐ.10 ಕಾರನ್ನು   ಅದರ ಚಾಲಕಿ ವಿಜೇತ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಾಲಾಯಿಸಿಕೊಂಡುಬಂದು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಪಿರ್ಯಾದಿದಾರರ ಕಾರಿಗೆ ಡಿಕ್ಕಿ  ಹೊಡೆದ ಪರಿಣಾಮ ಪಿರ್ಯಾದಿದಾರರ ಕಾರಿನ ಮುಂಭಾಗ ಮತ್ತು ಹಿಂಭಾಗ ಜಖಂಗೊಂಡಿರುತ್ತದೆ.ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌  ಠಾಣೆ ಅಪರಾಧ ಕ್ರಮಾಂಕ 50/2022 ಕಲಂ: 279, ಐ.ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕಾರ್ಕಳ: ಪಿರ್ಯಾದಿ ಕೃಷ್ಣ , ಪ್ರಾಯ 47 ವರ್ಷ, ತಂದೆ: ನಾರಾಯಣ, ವಾಸ: ಶ್ರೇಯ ಅಪಾರ್ಟ್ ಮೆಂಟ್, ಜೋಡುರಸ್ತೆ, ಕಾರ್ಕಳ ಇವರು ಕಾರ್ಕಳ ತಾಲೂಕು ಕಛೇರಿ ಜಂಕ್ಷನ್  ಬಳಿ ವ್ಯವಹಾರ ಮಾಡುತ್ತಿದ್ದು ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರ ಗರಡಿ ಬಳಿ  10 ಸೆಂಟ್ಸ್ ಖಾಲಿ ಜಾಗ ಹೊಂದಿದ್ದು ಅದಕ್ಕೆ ತಂತಿ ಬೇಲಿ ಅಳವಡಿಸಿರುತ್ತಾರೆ. ಸದ್ರಿ ಜಾಗದಲ್ಲಿ ಬಾವಿ ಇದ್ದುಬಾವಿಗೆ ಶೇಡ್ ನೆಟ್‌ನ ಬೇಲಿ ಅಳವಡಿಸಿರುತ್ತಾರೆ. ಈ ದಿನ ದಿನಾಂಕ 24-06-2022 ರಂದು ಬೆಳಿಗ್ಗೆ 09-00 ಗಂಟೆಗೆ ಪಕ್ಕದ ಮನೆಯವರು ಫೊನ್ ಮಾಡಿ 2-3 ದಿನಗಳಿಂದ ಜಾಗದಲ್ಲಿ ತುಂಬಾ  ವಾಸನೆ ಬರುತ್ತಿದೆ ಎಂದು ತಿಳಿಸಿದ್ದು  09-15 ಗಂಟೆಗೆ ಸ್ಥಳಕ್ಕೆ  ಹೋಗಿ ನೋಡಿದಾಗ ಬಾವಿಯಲ್ಲಿ ಸುಮಾರು25 ರಿಂದ 35 ವರ್ಷದ ಗಂಡಸಿನ ಮೃತದೇಹ ತೇಲುತ್ತಿದ್ದು ಅಪರಿಚಿತ ವ್ಯಕ್ತಿ ಸುಮಾರು 4-5 ದಿನಗಳ ಹಿಂದೆ  ಬಾವಿಗೆ ಬಿದ್ದು ಮೃತಪಟ್ಟಿರುವ ಬಗ್ಗೆ ಸಂಶಯ ಇರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣೆ ಯುಡಿಆರ್‌ ಸಂ: 27/2022 ಕಲಂ 174(ಸಿ) CRPCಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 24-06-2022 06:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080