ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಗಂಗೊಳ್ಳಿ: ದಿನಾಂಕ 21/06/2021 ರಂದು ಪಿರ್ಯಾದಿದಾರರಾಧ ಶಿವರಾಜ ಖಾರ್ವಿ (32), ತಂದೆ: ರಾಮ ಖಾರ್ವಿ, ವಾಸ: ಪತ್ರಿ ಮನೆ, ಕಂಚಗೋಡು, ಗುಜ್ಜಾಡಿ ಅಂಚೆ, ಹೊಸಾಡು ಗ್ರಾಮ, ಕುಂದಾಪುರ ಇವರು ಭರತ ಎಂಬುವವರೊಂದಿಗೆ KA-20-EK-5619 ನೇ ಮೋಟಾರ್‌ಸೈಕಲಿನಲ್ಲಿ ಸಹಸವಾರರಾಗಿ ಕುಳಿತುಕೊಂಡು    ಹೊಸಾಡ್‌ನಿಂದ ಮರವಂತೆ ಸರಕಾರಿ ಆಸ್ಪತ್ರೆಗೆ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಹೋಗುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 2:00 ಗಂಟೆಗೆ ಮೋಟಾರ್‌ಸೈಕಲ್ ಮರವಂತೆಯ ಅಪೂರ್ವ ಹೋಟೆಲ್ ಬಳಿ ತಲುಪುವಾಗ ಭರತ ರವರು ಮೋಟಾರ್‌ ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದು, ಆ ಸಮಯ ರಸ್ತೆಯಲ್ಲಿ ನಾಯಿ ಅಡ್ಡ ಬಂದಿದ್ದನ್ನು ನೋಡಿ ಭರತ ರವರು ಒಮ್ಮೆಲೇ ಮೋಟಾರ್ ಸೈಕಲ್‌ನ ಬ್ರೇಕ್ ಹಾಕಿದ್ದರಿಂದ ನಿಯಂತ್ರಣ ತಪ್ಪಿ ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದ ಪರಿಣಾಮ ಶಿವರಾಜ್‌ ಖಾರ್ವಿ ರವರು ತೀವೃ ತರದ ಗಾಯಗೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 58/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಕಾರ್ಕಳ: ದಿನಾಂಕ 23/06/2021 ರಂದು ಸಂಜೆ 05:45 ಗಂಟೆಗೆ ಪಿರ್ಯಾದಿದಾರರಾಧ ನಾಗೇಶ್ ಆರ್ ಶೆಟ್ಟಿ  (29) ತಂದೆ: ರಾಘುಶೆಟ್ಟಿ  ವಾಸ: ಶ್ರೀ ದುರ್ಗಾ ನಿವಾಸ ಮಹಾಲಕ್ಷ್ಮಿ ನಗರ ರೆಂಜಾಳ  ಗ್ರಾಮ ಕಾರ್ಕಳ  ತಾಲೂಕು ಉಡುಪಿ ಇವರ ವಾಹನವನ್ನು ಅವರ ಮನೆಯ ಎದುರಿನ ರಸ್ತೆ ಬದಿಯಲ್ಲಿ ನಿಲ್ಲಿಸಿ ಪಾರ್ಕಿಂಗ್ ಮಾಡಿ ಸ್ವಚ್ಚತೆ ಮಾಡುತ್ತಿರುವಾಗ ನೆಲ್ಲಿಕಾರಿನಿಂದ ಬೊರ್ಕಟ್ಟೆ ಕಡೆಗೆ ಕೆಎ-51-ಎ-4364 ನೇ ಪಿಕಪ್ ಟೆಂಪೋ ಚಾಲಕನು ಅವರ ವಾಹನವನ್ನು ಮಿತವಾದ ವೇಗದಲ್ಲಿ ಚಲಾಯಿಸಿಕೊಂಡು ಬರುತ್ತಿರುವಾಗ ಬೊರ್ಕಟ್ಟೆ ಕಡೆಯಿಂದ ನೆಲ್ಲಿಕಾರು ಕಡೆಗೆ  ಕೆಎ-20-ಇಪಿ-0510 ನೇ ಮೋಟಾರ್ ಸೈಕಲ್ ಸವಾರ ಪೃಥ್ವೀ ಶೆಟ್ಟಿರವರು ಅವರ ದ್ವಿಚಕ್ರ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿ ಯಾವುದೇ  ಸೂಚನೆ ನೀಡದೇ ಒಮ್ಮೇಲೇ ಬಲಕ್ಕೆ 5 ಸೆಂಟ್ಸ್ ಕಡೆಗೆ ಹೋಗುವ ಕ್ರಾಸ್ ರಸ್ತೆಗೆ ಸವಾರಿ ಮಾಡಿ ಪಿಕಪ್ ಟೆಂಪೋದ ಬಲಬದಿಯ ಹಿಂಬದಿಗೆ ಡಿಕ್ಕಿ ಹೊಡೆದು ವಾಹನ ಸಮೇತ ರಸ್ತೆಗೆ ಬಿದ್ದ ಪರಿಣಾಮ ಮೋಟಾರ್ ಸೈಕಲ್ ಸವಾರನ ಹಣೆ ಬಲ ಕಾಲಿಗೆ ರಕ್ತಗಾಯವಾಗಿ ಕಾರ್ಕಳ ಸಿ ಟಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ  ದಾಖಲಾಗಿರುವುದಾಗಿದೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 76/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 23/06/2021 ರಂದು ಪಿರ್ಯಾದಿದಾರರಾಧ ರಂಗನಾಥ್ (54) ತಂದೆ: ದಿ. ಗೋವಿಂದ ವಾಸ: ಪಲ್ಲವಿ ರೈಸ್ ಮಿಲ್ ಹತ್ತಿರ ಅಂಬಲಪಾಡಿ ಗ್ರಾಮ ಅಂಬಲಪಾಡಿ ಅಂಚೆ ಉಡುಪಿ ಇವರು ಮನೆಯಿಂದ ಕರಾವಳಿ ಮಾರ್ಗವಾಗಿ ಉಡುಪಿಗೆ ತನ್ನ ಕೆಲಸದ ನಿಮಿತ್ತ ನಡೆದುಕೊಂಡು ಹೋಗುತ್ತಿರುವಾಗ ಅಂಬಲಪಾಡಿ ಚಂದು ಪೂಜಾರಿಯ ರಸ್ತೆ ಜಂಕ್ಷನ್ ಬಳಿ ಇರುವ ಅರಣ್ಯ ಕಚೇರಿಯ ಎದುರುಗಡೆ ಸಮಯ ಸುಮಾರು ಬೆಳಿಗ್ಗೆ 09:00 ಗಂಟೆಗೆ ತಲುಪುವಾಗ ಓರ್ವ ಅಪರಿಚಿತ ಕಾರಿನ ಚಾಲಕ ತನ್ನ ಕಾರನ್ನು ಬಲೈಪಾದೆ ಕಡೆಯಿಂದ ಕರಾವಳಿ ಜಂಕ್ಷನ್ ಕಡೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ರಂಗನಾಥ್‌ ರವರು ರಸ್ತೆಗೆ ಬಿದ್ದು, ಸೊಂಟಕ್ಕೆ ಗುದ್ದಿದ ನೋವಾಗಿರುತ್ತದೆ. ಹಾಗೂ ಕಾರಿನ ಚಾಲಕ ಅಪಘಾತಪಡಿಸಿದ ನಂತರ ತನ್ನ ಕಾರನ್ನು ನಿಲ್ಲಿಸದೇ ಪರಾರಿಯಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 37/2021 ಕಲಂ: 279, 337 ಐ ಪಿ ಸಿ ಮತ್ತು 134(ಎ) (ಬಿ) ಜೊತೆಗೆ 187 ಐ.ಎಮ್.ವಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ. 

ವಂಚನೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾಧ ಉದಯ್‌ ಕುಮಾರ್‌(48) ತಂದೆ: ಮುದ್ದು ವಾಸದಶಮಿ ನಿಲಯ, ಕಲ್ಯಾಣಪುರ ಮಿಲಾಗ್ರೀಸ್‌ಕಾಲೇಜ್‌ಬಳಿ, ತೋನ್ಸೆ ಗ್ರಾಮ, ಉಡುಪಿ ಇವರು ಸಂತೆಕಟ್ಟೆಯಲ್ಲಿರುವ ದಶಮಿ ಪ್ರೋವಿಶನ್ ಸ್ಟೋರ್ಸ್ ಮಾಲೀಕರಾಗಿರುತ್ತಾರೆ. ಆರೋಪಿತನಾದ ಗೋಪಾಲ ಅಮೀನ್‌(55) ತಂದೆ: ಚಲ್ಲಾ ಪೂಜಾರಿ, ವಾಸ: ದೂಪದಕಟ್ಟೆ, ಆದರ್ಶ್ ನಗರ, ಮೈಸೂರು ಹಾಲಿ ವಾಸ: ದೂಪದಕಟ್ಟೆ, ಬ್ರಹ್ಮಾವರ ಇತನು ದಿನಾಂಕ 13/07/2019 ರಂದು ಕರಾವಳಿ ಬೈಪಾಸ್ ಬಳಿ ಉದಯ ಕುಮಾರ ರವರ  ಕೆಎ-20-ಜಿ-5969 ನೇ ಸ್ಕೂಟರಿನಲ್ಲಿ ಬ್ಯಾಗ್ ನಲ್ಲಿ ಇಟ್ಟಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಲ್ಯಾಣಪುರ ಶಾಖೆಯ ಚೆಕ್ ಬುಕ್ ಮತ್ತು ಸ್ಟಾರ್ ಪ್ಲಸ್ ಕಂಪೆನಿಯ ಬಾಂಡ್ ಗಳು ಇದ್ದ ಬ್ಯಾಗ್ ಕಳವು ಮಾಡಿ ಅದರಲ್ಲಿ ಇದ್ದ ಚೆಕಗಳನ್ನು ದುರ್ಬಳಕೆ ಮಾಡಿ ಚೆಕ್ಕಿಗೆ ಆರೋಪಿತನೇ ಬರೆದು 10,00,000/- ಹಣ ಪಡೆಯುವರೇ ಚೆಕ್ಕನ್ನು ಕಸಿದುಕೊಂಡು ಹೋಗಿ ನಂಬಿಕೆ ದ್ರೋಹ ಮಾಡಿರುವುದಾಗಿದೆ. ಮಾನ್ಯ ನ್ಯಾಯಾಲಯದ ಖಾಸಗಿ ಪ್ರಕರಣದಂತೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 97/2021 ಕಲಂ: 420, 406 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಶಂಕರನಾರಾಯಣ: ದಿನಾಂಕ 22/06/2021 ರಂದು 22:00 ಘಂಟೆಯಿಂದ ದಿನಾಂಕ 23/06/2021 ರಂದು ಬೆಳಿಗ್ಗೆ 07:00 ಘಂಟೆಯ ಮಧ್ಯದ ಅವಧಿಯಲ್ಲಿ ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಮುಳ್ಳುಗುಡ್ಡೆ   ಎಂಬಲ್ಲಿನ ಯಾರೂ ವಾಸ್ತವ್ಯ ವಿಲ್ಲದ ಪಿರ್ಯಾದಿದಾರರಾಧ ಶ್ಯಾಮ (70) ತಂದೆ, ಪಾಂಡುರಂಗ ವಾಸ, ನೆಲ್ಲಿಕಟ್ಟೆ ಅಂಚೆ ಕಾವ್ರಾಡಿ ಗ್ರಾಮ ಕುಂದಾಪುರ ಇವರ ಆದಿ ಮನೆಯಲ್ಲಿ ಇವರ  ಮಗ  ಪ್ರಶಾಂತ (36) ಇವರು ಮನೆಯ ಕಡುಮಾಡಿನ ಜಂತಿಗೆ ಕುತ್ತಿಗೆಗೆ ಪ್ಲಾಸಿಕ್‌ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ  ಮಾಡಿಕೊಂಡಿರುತ್ತಾರೆ. ಮೃತರಿಗೆ ಇರುವ ಸಾಲ ಬಾಧೆ ಹಾಗೂ ಮನೆಯವರೊಂದಿಗೆ ಸರಿಯಾದ  ಹೊಂದಾಣಿಕೆ ಇಲ್ಲದೆ ಇರುವ ಕಾರಣ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಈ ರೀತಿ ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 23/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾಧ ಶ್ರೀಮತಿ ಪೂರ್ಣಿಮಾ ಶೆಟ್ಟಿ(36) ಗಂಡ:  ಸುರೇಶ ಶೆಟ್ಟಿ ವಾಸ: ಶ್ರೀ  ವಿಠ್ಠಲ ನಿವಾಸ ಗರಡೆ ಕಲ್ಲುಮಠ, ಕೊಡವೂರು ಗ್ರಾಮ ಇವರ ಗಂಡ  ಸುರೇಶ ಶೆಟ್ಟಿ(48)  ರವರು  ಸುಮಾರು 9-10 ವರ್ಷಗಳಿಂದ  ಪೂನದಲ್ಲಿ ಹೋಟೆಲ್  ವ್ಯವಹಾರ ಮಾಡಿಕೊಂಡಿರುತ್ತಾರೆ. 2021 ನೇ ಫೆಬ್ರುವರಿ ತಿಂಗಳಲ್ಲಿ ಸುರೇಶ್ ರವರಿಗೆ ಕಾಲು ನೋವು ಮತ್ತು ಸಕ್ಕರೆ ಖಾಯಿಲೆ ಜಾಸ್ತಿಯಾಗಿದ್ದು ಪೂನದಿಂದ ಊರಿಗೆ  ಕರೆದುಕೊಂಡು ಬಂದು  ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ, ಹಾಗೂ ಪ್ರತಿದಿನ ಮಧ್ಯಪಾನ ಮಾಡುತ್ತಿದ್ದರು.  ಸುಮಾರು 1 ವಾರದಿಂದ ಸುರೇಶ್ ರವರಿಗೆ ಪೂನಾದಿಂದ ಪೋನ್ ಕರೆ ಬರುತ್ತಿದ್ದು ಈ ಬಗ್ಗೆ ಶ್ರೀಮತಿ ಪೂರ್ಣಿಮಾ ಶೆಟ್ಟಿ ರವರು ವಿಚಾರಿಸಿದಾಗ ವ್ಯವಹಾರದಲ್ಲಿ ನಷ್ಟ  ಉಂಟಾಗಿ ಸಾಲ ಮಾಡಿದ್ದು ,  ಸಾಲದ ಹಣವನ್ನು ಕೊಡದೆ ಇದ್ದುದರಿಂದ ಅವರು ಕರೆ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ. ದಿನಾಂಕ 23/06/2021 ರಂದು ಮದ್ಯಾಹ್ನ 2:00 ಗಂಟೆಗೆ ಮನೆಯವರು ಮನೆಯಲ್ಲಿ ಊಟ ಮುಗಿಸಿ ಮಲಗಿರುತ್ತೇವೆ, ಸುಮಾರು 3:00 ಗಂಟೆಗೆ ಶ್ರೀಮತಿ ಪೂರ್ಣಿಮಾ ಶೆಟ್ಟಿ ರವರು ಎದ್ದು ನೋಡುವಾಗ  ಸುರೇಶ್ ಶೆಟ್ಟಿ ರವರು ಕಾಣಿಸದೇ ಇದ್ದು ಎಲ್ಲಾ ಕಡೆ ಹುಡುಕುತ್ತಿರುವಾಗ ,ಮನೆಯ ಪಕ್ಕದಲ್ಲಿ ಜಲಜ ಶೆಡ್ತಿ ರವರ ತೆಂಗಿನ ತೋಟದಲ್ಲಿರುವ ಮಾವಿನ ಮರಕ್ಕೆ ನೈಲಾನ್ ರೋಪನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 31/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-06-2021 10:10 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080