ಅಭಿಪ್ರಾಯ / ಸಲಹೆಗಳು

ಅಘಘಾತ ಪ್ರಕರಣ

  • ಕುಂದಾಪುರ: ದಿನಾಂಕ 23/06/2021 ರಂದು ಬೆಳಿಗ್ಗೆ  ಸುಮಾರು 9:00 ಗಂಟೆಗೆ, ಕುಂದಾಪುರ ತಾಲೂಕು, ಕೊಟೇಶ್ವರ ಗ್ರಾಮದ ಕಿನಾರಾ ಜಂಕ್ಷನ್‌‌ ಬಳಿಯ, ಗುರುಪ್ರಸಾದ್‌ ಹೊಟೇಲ್‌‌ ಎದುರುಗಡೆ ಪೂರ್ವ ಬದಿಯ NH66 ರಸ್ತೆಯಲ್ಲಿ,  ಆಪಾದಿತ ಬಾಬು ಎಂಬವರು KA20-D-8990 EECO ನೇ ಕಾರನ್ನು ಕುಂದಾಪುರ ಕಡೆಯಿಂದ ಕುಂಭಾಶಿ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು, ಅದೇ ದಿಕ್ಕಿನಲ್ಲಿ ಪಿರ್ಯಾದಿದಾರರಾದ ಶೇಖರ್‌ ಕೆ  ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ  KA20-L6495 ನೇ ಬೈಕಿಗೆ ಹಿಂದಿನಿಂದ  ಡಿಕ್ಕಿ ಹೊಡೆದ ಪರಿಣಾಮ ಶೇಖರ್‌ ಕೆ ರವರ ಸೊಂಟಕ್ಕೆ  ಮೂಳೆ  ಮುರಿತವಾದ ಗಾಯ, ಹಣೆಗೆ, ತಲೆಗೆ, ಬಲಕೈ  ಹಾಗೂ ಬಲಾಲಿಗೆ ತರಚಿದ ಗಾಯವಾಗಿ ಕೊಟೇಶ್ವರ  ಎನ್‌. ಆರ್‌ ಆಚಾರ್ಯ  ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆದಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 57/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಉಡುಪಿ  ತಾಲೂಕು  76ನೇ ಬಡಗುಬೆಟ್ಟು  ಗ್ರಾಮದ ಇಂದಿರಾನಗರ 1ನೇ ಅಡ್ಡರಸ್ತೆಯ ಮನೆನಂಬ್ರ: 2ಬಿ-24 'ಸಂತೋಷ ನಿಲಯ'ದಲ್ಲಿ  ವಾಸವಿದ್ದ ಧನಂಜಯ ಎಸ್. (36 ವರ್ಷ)ನು  ಅವಿವಾಹಿತರಾಗಿದ್ದು, ಕಳೆದ  ಐದು  ವರ್ಷಗಳಿಂದ ಮಾನಸಿಕ  ಖಿನ್ನತೆಯಿಂದ  ಬಳಲುತ್ತಿದ್ದು,  ಇದರಿಂದಾಗಿ ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ 23/06/2021 ರಂದು ಬೆಳಿಗ್ಗೆ 5:45 ಗಂಟೆಯಿಂದ ರಾತ್ರಿ  8:30 ಗಂಟೆಯ ಮಧ್ಯಾವಧಿಯಲ್ಲಿ ಮನೆಯ  ಬಳಿಯ ಸರ್ಕಾರಿ ಬಾವಿಯ ನೀರಿಗೆ ಹಾರಿ ಆತ್ಮಹತ್ಯೆಯನ್ನು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 26/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-06-2021 05:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080