ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ಫಿರ್ಯಾದಿದಾರರಾದ ರತ್ನಾಕರ ಆಚಾರ್ಯ, (52), ತಂದೆ: ಜನಾರ್ಧನ ಆಚಾರ್ಯ, ವಾಸ: ಅಯ್ಯಪ್ಪನಗರ, ಕುಕ್ಕುಂದೂರು ಅಂಚೆ ಮತ್ತು ಗ್ರಾಮ, ಕಾರ್ಕಳ ಇವರು ಕಾರ್ಕಳ ತಾಲೂಕು ಕುಕ್ಕುಂದೂರು  ಗ್ರಾಮದ ಅಯ್ಯಪ್ಪ ನಗರ ದೇವಿಕೃಪಾ  ಕಟ್ಟಡದಲ್ಲಿ  ಫೈಬರ್  ಡೋರ್  ಮಾಡುವ  ಕೆಲಸ  ಮಾಡಿಕೊಂಡಿದ್ದು, ದಿನಾಂಕ  22/05/2023 ರಂದು ಜೋಡುರಸ್ತೆಗೆ ಹೋಗಿದ್ದು ಅಲ್ಲಿಂದ ವಾಪಾಸು ಕಾರ್ಕಳ-ಬೈಲೂರು ರಾಜ್ಯ ಹೆದ್ದಾರಿಯಲ್ಲಿ ತನ್ನ ಬಾಬ್ತು ದ್ವಿಚಕ್ರ ವಾಹನ ಸಂಖ್ಯೆ KA-20 EU-4675 ನೇದರಲ್ಲಿ ತನ್ನ ಪಾಲುದಾರರಾದ ಅಶೋಕ್  ನಾಯ್ಕ್ ಎಂಬುವವರನ್ನು ಹಿಂಬದಿ ಸವಾರರಾಗಿ ಕುಳ್ಳಿರಿಸಿಕೊಂಡು ರತ್ನಾಕರ ಆಚಾರ್ಯ ರವರು ಸವಾರಿ ಮಾಡಿಕೊಂಡು ಸಮಯ ಸುಮಾರು ಸಂಜೆ 5:00 ಗಂಟೆಗೆ ದೇವಿಕೃಪಾ ಕಟ್ಟಡದ ಬಳಿ ತಲುಪಿದಾಗ ಅಂಗಡಿಗೆ ತಿರುಗುವರೇ ದ್ವಿಚಕ್ರ ವಾಹನದ ಸಿಗ್ನಲ್‌ಮತ್ತು ನನ್ನ ಕೈಸನ್ನೆಯನ್ನು ಹಾಕಿ ದ್ವಿಚಕ್ರ ವಾಹನವನ್ನು ರತ್ನಾಕರ ಆಚಾರ್ಯ ರವರ ಬಲಗಡೆಗೆ ತಿರುಗಿಸಿಕೊಂಡು ಸವಾರಿ ಮಾಡುವಾಗ ಕಾರ್ಕಳ ಕಡೆಯಿಂದ KA-20 MB-2498 ನೇ ನೋಂದಣಿ ಸಂಖ್ಯೆಯ ಕಾರನ್ನು ಅದರ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಹಿಂದಿನಿಂದ ಡಿಕ್ಕಿ ಹೊಡೆದಿರುತ್ತಾನೆ. ಡಿಕ್ಕಿ ಹೊಡೆದ ಪರಿಣಾಮ ರತ್ನಾಕರ ಆಚಾರ್ಯ ರವರು ಹಾಗೂ ಸಹ ಸವಾರ ಅಶೋಕ್  ನಾಯ್ಕ್ ರವರು ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದಿದ್ದು ಈ ಅಪಘಾತದಿಂದ ರತ್ನಾಕರ ಆಚಾರ್ಯ ರವರ ಎಡಕೈ ಅಂಗೈಯಲ್ಲಿ ಮೂಳೆ ಮುರಿತದ ರಕ್ತಸ್ರಾವವಾಗಿರುತ್ತದೆ ಹಾಗೂ ಸಹ ಸವಾರ ಅಶೋಕ್  ನಾಯ್ಕ್ ರವರಿಗೆ ತಲೆಯ ಬಲಭಾಗದಲ್ಲಿ ಬಲಕೈಯ ಮೊಣಗಂಟಿನ ಕೆಳಗಡೆ ಮತ್ತು ಬಲಭುಜದಲ್ಲಿ ರಕ್ತಗಾಯಗಳಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 65/2023 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ದಿನಾಂಕ 22/05/2023 ರಂದು 15:00 ಗಂಟೆಗೆ ಫಿರ್ಯಾದಿದಾರರಾಧ ನಾಗರಾಜ (25) ತಂದೆ: ಬಾಬು ವಾಸ: ಬವಳಾಡಿ , ಬಿಜೂರು ಗ್ರಾಮ,ಬೈಂದೂರು ತಾಲೂಕು ಇವರು ಬಿಜೂರಿನಿಂದ ಕಾಲ್ತೋಡು ಕಡೆಗೆ ಮೋಟಾರು ಸೈಕಲ್ ನಲ್ಲಿ ಹೊರಟು ಕಂಬದಕೋಣೆ ಗ್ರಾಮದ ಕಂಬದಕೋಣೆ ಕಾಲ್ತೋಡು ರಸ್ತೆಯಲ್ಲಿ  ಸೇಡಿಗುಡ್ಡೆ ಎಂಬಲ್ಲಿ ತಲುಪಿದಾಗ ನಾಗರಾಜ ರವರ ಎದುರಿನಿಂದ ಕಂಬದಕೋಣೆ ಯಿಂದ ಕಾಲ್ತೋಡು ಕಡೆಗೆ  ಪರಿಚಯದ ಗಣೇಶ್ ಶೆಟ್ಟಿ  ರವರು KA-20 EM-3720 ನೇ ಮೋಟಾರು ಸೈಕಲ್ ನಲ್ಲಿ ಅವರ ಹೆಂಡತಿ ಸರೋಜಿನಿ ಶೆಡ್ತಿ ರವರನ್ನು ಸಹ ಸವಾರಳಾಗಿ ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮೋಟಾರು ಸೈಕಲ್ ನ್ನು ಸವಾರಿ ಮಾಡಿಕೊಂಡು   ಹೋಗುತ್ತಿದ್ದಾಗ  ಸೇಡಿಗುಡ್ಡೆ ಎಂಬಲ್ಲಿ ರಸ್ತೆಯ  ಬದಿಯಲ್ಲಿ ಜೆಸಿಬಿ ಕೆಲಸ ಮಾಡಿ  ರಸ್ತೆಯಲ್ಲಿದ್ದ  ಕಲ್ಲು  ಮೋಟಾರು ಸೈಕಲ್ ನ  ಚಕ್ರಕ್ಕೆ ಸಿಕ್ಕಿ  ಮೋಟಾರು ಸೈಕಲ್  ಮಗುಚಿ ಬಿದ್ದು ಮೋಟಾರು ಸೈಕಲ್ ಸವಾರ ಹಾಗೂ ಸಹ ಸವಾರಳು  ರಸ್ತೆಗೆ ಬಿದ್ದಿದ್ದು   ಅಪಘಾತದ ಪರಿಣಾಮ ಮೋಟಾರು ಸೈಕಲ್  ಸಹ ಸವಾರಳಾದ  ಸರೋಜಿನಿ ಶೆಡ್ತಿ ರವರಿಗೆ ಹಣೆಗೆ ಕೈಗೆ ರಕ್ತಗಾಯ ಹಾಗೂ ಎಡ ಭುಜಕ್ಕೆ ಒಳನೋವು ಉಂಟಾಗಿದ್ದು , ಮೋಟಾರು ಸೈಕಲ್ ಸವಾರ ಗಣೇಶ್ ಶೆಟ್ಟಿ ರವರಿಗೆ ತರಚಿದ ಗಾಯ ಉಂಟಾಗಿರುತ್ತದೆ. ಗಾಯಗೊಂಡ ಸರೋಜಿನಿ ಶೆಡ್ತಿ ಹಾಗೂ ಮೋಟಾರು ಸೈಕಲ್ ಸವಾರ ಗಣೇಶ ಶೆಟ್ಟಿ ರವರನ್ನು ನಾಗರಾಜ ರವರು   ಚಿಕಿತ್ಸೆ ಬಗ್ಗೆ ಬೈಂದೂರಿನ ಅಂಜಲಿ ಆಸ್ಪತ್ರೆಗೆ ಕರೆ ತಂದಲ್ಲಿ ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಸೂಚಿಸಿದ ಮೇರೆಗೆ  ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಗಾಯಾಳುಗಳನ್ನು ಪರೀಕ್ಷಿಸಿ  ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 84/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ದಿನಾಂಕ 23/05/2023 ರಂದು ಪಿರ್ಯಾದಿದಾರರಾದ  ಅರುಣ್ ಕುಮಾರ ಮೊಗವೀರ, (39) ತಂದೆ: ಶ್ರೀನಿವಾಸ ಎಂ.ಪಿ , ವಾಸ: ಶ್ರೀನಿವಾಸ ನಿಲಯ, ಬೆಳವಿನ ಕೊಡ್ಲು, ಹೊಸಾಡು ಗ್ರಾಮ, ಕುಂದಾಪುರ ಇವರು KA-20 EV-2214  ನೇ ಬೈಕಿನಲ್ಲಿ ತಮ್ಮ ಅಕ್ಕ ಶೋಭಾ ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಮೋವಾಡಿ ಕ್ರಾಸ್ ನಿಂದ ನಾಡ ಗುಡ್ಡೆಯಂಗಡಿ ಕಡೆಗೆ ಹೋಗುವ ರಸ್ತೆಯಲ್ಲಿ ಸಮಯ ಸುಮಾರು ಬೆಳಿಗ್ಗೆ 11:30 ಗಂಟೆಗೆ ಡಾನ್ ಬಾಸ್ಕೋ ಶಾಲೆಯಿಂದ ಸ್ವಲ್ಪ ಮುಂದೆ ಹೋಗುತ್ತಿರುವಾಗ ನಾಡ ಕಡೆಯಿಂದ ಮೋವಾಡಿ ಕ್ರಾಸ್ ಕಡೆಗೆ MH-03 AW-8739 ನೇ ಕಾರು ಚಾಲಕನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾಬಲಬದಿಗೆ ಬಂದು ಅರುಣ್ ಕುಮಾರ ಮೊಗವೀರ ರವರು ಚಲಾಯಿಸುತ್ತಿದ್ದ ಮೋಟಾರು ಸೈಕಲ್ಲಿನ ಹ್ಯಾಂಡಲ್ ಬಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ಹಾಗೂ ಸಹಸವಾರಳು ರಸ್ತೆಗೆ ಬಿದ್ದ ಪರಿಣಾಮ ಸಹಸವಾರಳಿಗೆ ಎಡಕೈಯ ತೋಳಿನ ಮಧ್ಯಭಾಗದಲ್ಲಿ ಮೂಳೆ ಮುರಿತದ ಗಾಯ ಉಂಟಾಗಿರುವುದಾಗಿದೆ.  ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 59/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾಧ ಸುಮ ಬಿ ಪಿ.ಎಸ್.ಐ ಕಾಪು ಪೊಲೀಸ್‌ ಠಾಣೆ ಇವರು ದಿನಾಂಕ 23/05/2023 ರಂದು ಠಾಣೆಯಲ್ಲಿರುವ ಸಮಯ 19:00 ಗಂಟೆಯ ಸುಮಾರಿಗೆ ಭಾತ್ಮೀದಾರರೋರ್ವರು ಕರೆಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಕಾಪು ಪೊಲೀಸ್‌ಠಾಣಾ ವ್ಯಾಪ್ತಿಯ ರಾ.ಹೆ 66 ರಸ್ತೆಯಲ್ಲಿ 1 ಜೀಪು ಹಾಗೂ 3 ಕಾರುಗಳನ್ನು ಅದರ ಚಾಲಕರುಗಳು ಅತೀ ವೇಗ & ತೀವ್ರ ಅಜಾಗರೂಕತೆಯಿಂದ ಸಾರ್ವಜನಿಕರ ಪ್ರಾಣಕ್ಕೆ ಅಪಾಯಕರವಾಗುವ ರೀತಿಯಲ್ಲಿ ರಸ್ತೆಯ ತುಂಬಾ ಅಡ್ಡದಿಡ್ಡಿಯಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ ವಿಡಿಯೋ ವೈರಲ್‌ ಆಗುತ್ತಿರುವ ಬಗ್ಗೆ ಮಾಹಿತಿ ನೀಡಿದಂತೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸಲಾಗಿ ವಿಡಿಯೋದಲ್ಲಿನ ಸ್ಥಳವು ಕಾಪು ಪೊಲೀಸ್‌ಠಾಣಾ ವ್ಯಾಪ್ತಿಯ ಮೂಡಬೆಟ್ಟು ಗ್ರಾಮದಿಂದ ಮೂಳೂರು ಗ್ರಾಮದವರೆಗಿನ ರಾ.ಹೆ 66 ಉಡುಪಿ- ಮಂಗಳೂರು ರಸ್ತೆಯಾಗಿರುತ್ತದೆ. ವಿಡಿಯೋದಲ್ಲಿ ವಾಹನಗಳ ನಂಬ್ರಗಳನ್ನು ಪರಿಶೀಲಿಸಲಾಗಿ KA-20 MD-6767 ನೇ ನೀಲಿ ಬಣ್ಣದ ಮಹೀಂದ್ರಾ ಜೀಪು, KA-20 MH-9370 ನೇ ಕಪ್ಪು ಬಣ್ಣದ CRETA ಕಾರು, KA-20 ME-6996 ನೇ ಬಿಳಿ ಬಣ್ಣದ ಫಾರ್ಚುನರ್‌ಕಾರು, KA 20 MD 8078 ನೇ ಬಿಳಿ ಬಣ್ಣದ ಸ್ವಿಫ್ಟ್ ಕಾರುಗಳಾಗಿರುತ್ತವೆ. ಠಾಣಾ ವ್ಯಾಪ್ತಿಯಲ್ಲಿ ಅತೀ ವೇಗ & ತೀವ್ರ ಅಜಾಗರೂಕತೆಯಿಂದ ಸಾರ್ವಜನಿಕರ ಪ್ರಾಣಕ್ಕೆ ಅಪಾಯಕರವಾಗುವ ರೀತಿಯಲ್ಲಿ ರಸ್ತೆಯ ತುಂಬಾ ಅಡ್ಡದಿಡ್ಡಿಯಾಗಿ ವಾಹನಗಳನ್ನು ಚಲಾಯಿಸಿಕೊಂಡು ಹೋಗುತ್ತಿರುವುದಾಗಿದೆ.  ಈ ಬಗ್ಗೆ ಕಾಫು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 87/2023 ಕಲಂ: 279, 336 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಉಡುಪಿ: ಪಿರ್ಯಾದುದಾರರಾದ ಉದಿತ್‌ (20) ತಂದೆ: ರತನ್‌ಕುಮಾರ್‌ ವಾಸ: ಪಾಲನ್‌ನಿವಾಸ್‌, ವಿಶಾಲ್‌ಮಾರ್ಟ್‌ ಎದುರು, ಗುಂಡಿಬೈಲು, ಶಿವಳ್ಳಿ ಗ್ರಾಮ, ಉಡುಪಿ ಎಂಬವರು KSP App ಮುಖೇನ ನೀಡಿದ E-FIR ಸಾರಾಂಶದಂತೆ ಉದಿತ್‌ ರವರ ಮಾಲಕತ್ವದ ಬಜಾಜ್‌ಪಲ್ಸರ್‌200 ಸಿಸಿ ಮೋಟಾರ್‌ಸೈಕಲ್‌ನಂಬ್ರ KA-20 ED-0160 (Engine No: JLZCCG35976, Chassis No: MD2A36FZ5CCG36868) ನೇದನ್ನು ದಿನಾಂಕ 23/05/2023 ರಂದು 00:05 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಗುಂಡಿಬೈಲು ವಿಶಾಲ್‌ಮಾರ್ಟ್‌ ಎದುರು ಇರುವ ಉದಿತ್‌ ರವರ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದು, ಬೆಳಗಿನ ಜಾವ 03:30 ಗಂಟೆಗೆ ಪಿರ್ಯಾದುದಾರರ ತಾಯಿ ನೋಡಲಾಗಿ ಮೋಟಾರ್‌ ಸೈಕಲ್‌ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೆ ಇದ್ದು, ಯಾರೋ ಕಳ್ಳರು ಸದರಿ ಮೋಟಾರ್‌ಸೈಕಲ್‌ ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರ್‌ಸೈಕಲ್‌ನ ಅಂದಾಜು ಮೌಲ್ಯ ರೂ. 35,000/- ಆಗಬಹುದುದಾಗಿದೆ.  ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 72/2023 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾಧ ಗಣೇಶ್‌ (50) ತಂದೆ: ದಿ: ರಮನಾಥ ನಾಯ್ಕ್‌, ವಾಸ: ಪಯ್ಯಾರು ಹೊಸ ಮನೆ, ಕಳತ್ತೂರು ಅಂಚೆ ಮತ್ತು  ಗ್ರಾಮ ಕಾಪು ತಾಲೂಕು, ಉಡುಪಿ ಇವರ ಮಾಲಕತ್ವದ ಶಿರ್ವ ಪೇಟೆಯಲ್ಲಿ ನಿಸರ್ಗ  ಸರ್ವಿಸಸ್ ಕಚೇರಿಯಲ್ಲಿ  ಟ್ರಾವೆಲ್‌ಏಜೆನ್ಸಿಯಾಗಿ  ಕೆಲಸ ಮಾಡುತ್ತಿದ್ದು, ದಿನಾಂಕ 21/05/2023 ರಂದು  ಗ್ರಾಹಕರಾಗಿ ಅಭಿಷೇಕ್‌ಶೆಟ್ಟಿ ಹಾಗೂ ಸಂತೋಷ್‌ಶೆಟ್ಟಿ ರವರು ದಿನಾಂಕ 22/05/2023 ರಂದು ಮುಂಬೈಗೆ ಹೋಗಲು ಸಂತೋಷ್‌ಶೆಟ್ಟಿ ಹಾಗೂ  ಅಂಬಿಕಾರವರಿಗೆ  ರೈಲ್ವೆ  ಟಿಕೆಟ್‌ ಬುಕ್‌ಮಾಡಲು  ಬಂದಿದ್ದು, ಟಿಕೆಟ್‌ನ  ಹಣ ರೂ. 3,200/-ನ್ನು ಪಾವತಿಸಿರುತ್ತಾರೆ. ಬುಕ್‌ಮಾಡಿದ  ಟಿಕೆಟ್‌ ವೈಟಿಂಗ್‌ಲಿಸ್ಟ್‌‌ನಲ್ಲಿ  ಬಂದಿದ್ದು, ದಿನಾಂಕ 22/05/2023  ರಂದು  ಕನ್‌ಫರ್ಮ್‌ ಆಗದೇ  ಇದ್ದುದರಿಂದ  ಟಿಕೆಟ್‌ನ್ನು  ಕ್ಯಾನ್ಸಲ್‌ ಮಾಡಲು ತಿಳಿಸಿರುತ್ತಾರೆ.  ಅವಾಗಲೇ  ಟಿಕೆಟ್‌ಚಾರ್ಟ್‌ ಆಗಿರುವುದರಿಂದ ಕ್ಯಾನ್ಸಲ್‌ ಮಾಡಲು ಆಗುವುದಿಲ್ಲ ಮೂರು ದಿವಸ  ಬಿಟ್ಟು ಹಣ ಕ್ಯಾನ್ಸ್‌ಲೇಶನ್‌ ಕಟ್ಟಾಗಿ  ಗಣೇಶ ರವರ ಅಕೌಂಟ್‌ಗೆ  ಬರುತ್ತದೆ ಎಂದು ಹೇಳಿದ್ದಲ್ಲದೆ ಸಂತೋಷ್‌ನಿಗೆ ದಿನಾಂಕ 22/05/2023 ರಂದು  ಟಿಕೆಟ್‌ ಹಣ 2,500/- ಹಣವನ್ನು  ನೀಡಿದ್ದು,  ಉಳಿದ  ಹಣವನ್ನು ಎರಡು ದಿವಸ ಬಿಟ್ಟು  ಗೂಗಲ್‌ ಪೇ  ಮಾಡುತ್ತೇನೆಂದು  ತಿಳಿಸಿದೆ ಅದಕ್ಕೆ ಒಪ್ಪಿ ಹೋಗಿರುತ್ತಾರೆ.  ದಿನಾಂಕ 23/05/2023 ರಂದು  ಮಧ್ಯಾಹ್ನ 1.15  ಗಂಟೆ  ಸುಮಾರಿಗೆ ಶಿರ್ವ ಪೇಟೆಯಲ್ಲಿರುವ ನಿಸರ್ಗ ಸರ್ವಿಸಸ್  ಕಚೇರಿಗೆ ಅಭಿಷೇಕ್‌ಶೆಟ್ಟಿ  ಹಾಗೂ ಸಂತೋಷ್‌ಶೆಟ್ಟಿ ರವರು ಕಚೇರಿಗೆ ಏಕಾಏಕಿ ಹೊಡೆಯುವ  ಉದ್ದೇಶದಿಂದಲೇ ಅಕ್ರಮ ಪ್ರವೇಶ ಮಾಡಿ ಅಭಿಷೇಕ್‌ಶೆಟ್ಟಿ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ  ತಲೆಗೆ ಹೊಡೆದಿರುತ್ತಾನೆ. ಸಂತೋಷ್‌ಶೆಟ್ಟಿ ಕೈಯಿಂದ ತುಟಿಗೆ ಹಾಗೂ ಮೂಗಿಗೆ ಹೊಡೆದುದಲ್ಲದೆ ಸಂಜೆಯೊಳಗೆ  ನಿನ್ನನ್ನು ತೆಗೆಯುತ್ತೇನೆಂದು ಜೀವ ಬೆದರಿಕೆ  ಹಾಕಿರುತ್ತಾರೆ. ರೈಲ್ವೆ  ಟಿಕೆಟ್‌ ವಿಚಾರದಲ್ಲಿ ಇಬ್ಬರೂ ಕಚೇರಿಗೆ ಏಕಾಏಕಿ ಅಕ್ರಮ ಪ್ರವೇಶ ಮಾಡಿ ಕಚೇರಿಯಲ್ಲಿದ್ದ ಸೊತ್ತುಗಳನ್ನು ಹಾನಿ ಮಾಡಿ 2,00,000/- ರೂ.   ನಷ್ಟವುಂಟು  ಮಾಡಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 46/23 ಕಲಂ: 448, 323, 427, 504, 506 RW 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-05-2023 11:55 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080