ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಲ್ಪೆ: ದಿನಾಂಕ 21/05/2023 ರಂದು ಪಿರ್ಯಾದಿದಾರರಾದ ರುದ್ರ ನಾಯ್ಕ (40) ತಂದೆ ಮೇಗ್ಯಾ ನಾಯ್ಕ  ವಾಸ  ಹೂವಿನ ಹಡಗಲಿ ವಿಜಯ ನಗ ರ ಜಿಲ್ಲೆ ಇವರ ಉಡುಪಿ ಯಿಂದ  ಮಲ್ಪೆ  ಕಡೆಗೆ  ತನ್ನ  ಮೋಟಾರ್  ಸೈಕಲ್  ನಂಬ್ರ KA -20-EY-2497  ನೇದನ್ನು   ಸವಾರಿ ಮಾಡಿಕೊಂಡು ಹೊರಟು ರಾತ್ರಿ 7:30  ಗಂಟೆಗೆ  ಕಲ್ಮಾಡಿ  ಚರ್ಚ್  ಸಮೀಪ  ತಲುಪುವಾಗ ಎದುರಿನಿಂದ  ಉಡುಪಿ ಕಡೆಗೆ KA 20-EE-2223  ನೇ  ಮೋಟಾರ್   ಸೈಕಲ್  ಸವಾರನು ತನ್ನ  ಮೊಟಾರ್  ಸೈಕಲನ್ನು ಆತೀ ವೇಗ ಹಾಗೂ ಅಜಾಗರುಕತೆಯಿಂದ ತೀರ  ಎಡ ಭಾಗಕ್ಕೆ ಬಂದು ರುದ್ರ ನಾಯ್ಕ  ರವರ  ಮೋಟಾರ್  ಸೈಕಲಿಗೆ  ಡಿಕ್ಕಿ ಹೊಡೆದ  ಪರಿಣಾಮ ಇವರು ರಸ್ತೆಯ  ಬಲ ಬದಿಗೆ  ಬಿದ್ದು ರುದ್ರ ನಾಯ್ಕ ರವರ  ಬಲಕಾಲಿಗೆ  ತೀವ್ರ ಸ್ವರೂಪದ ಗಾಯ ಹಾಗೂ  ಬಲ ಕೈಯ  ಮೂಳೆ ಮುರಿತದ ಗಾಯ ಆಗಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 51/2023  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ಮಂಜುನಾಥ ತಂದೆ: ಲಿಂಗಪ್ಪ ವಾಸ: 3/7 ಎ ರೇಣುಕಾಂಬ ನಿಲಯ  ಮೂಡು ಪೆರಂಪಳ್ಳಿ .ಶಿವಳ್ಳಿ ಗ್ರಾಮ ಉಡುಪಿ ಇವರು ದಿನಾಂಕ 21/05/2023 ರಂದು ರಾತ್ರಿ ತಮ್ಮ ಎಲೆಕ್ಟ್ರೀಷನ್‌ ಕೆಲಸ ಮುಗಿಸಿಕೊಂಡು ಬಿಲ್ಲನ್ನು ಕ್ಲೇಮು ಮಾಡುವ ಸಲುವಾಗಿ ತನ್ನ KA-20-EE-2223 ನಂಬರನ ಮೋಟಾರ್‌ಸೈಕಲ್‌ನಲ್ಲಿ ಮಲ್ಪೆಗೆ ಹೋಗಿ ವಾಪಾಸ್ಸು ಉಡುಪಿಗೆ ಬರುವಾಗ ರಾತ್ರಿ 07:45 ಗಂಟೆಗೆ ಕಲ್ಮಾಡಿ ಚರ್ಚ್‌ನ ಹತ್ತಿರ ಎದುರಿನಿಂದ ಬರುತ್ತಿರುವ ಒಂದು ಮೋಟಾರ್‌ಸೈಕಲ್‌ನ್ನು ಅದರ ಸವಾರನು ಉಡುಪಿಯಿಂದ ಮಲ್ಪೆ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಬಲಭಾಗಕ್ಕೆ ಸವಾರಿ ಮಾಡಿಕೊಂಡು ಬಂದು ಮಂಜುನಾಥ ರವರ ಮೋಟಾರ್‌ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಮಂಜುನಾಥ ರವರು ನೆಲಕ್ಕೆ ಬಿದ್ದ ಪರಿಣಾಮ ಇವರ ಬಲಕಾಲಿನ ಮೂಳೆ ಮುರಿತ ಹಾಗೂ ಭುಜಕ್ಕೆ ಗಾಯವಾಗಿದ್ದು, ಅಲ್ಲಿ ನೆರೆದ ಸಾರ್ವಜನಿಕರು ಮಂಜುನಾಥ ರವರನ್ನು ಕೆ ಎಮ್‌ಸಿ ಮಣಿಪಾಲ್‌ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಅಪಘಾತ ಪಡಿಸಿದ ಮೋಟಾರ್‌ಸೈಕಲ್‌ನಂ KA-20 EY-2497 ಆಗಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 50/2023  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಫುರ: ದಿನಾಂಕ 14/05/2023 ರಂದು ರಾತ್ರಿ ಸುಮಾರು 8:30 ಗಂಟೆಗೆ ಕುಂದಾಪುರ ತಾಲೂಕಿನ ಕಾಳಾವರ ಗ್ರಾಮದ ಕಾಳಾವರ ಶಾಲೆಯ ಬಳಿ ರಸ್ತೆಯಲ್ಲಿ,  ಆಪಾದಿತ ನೊಂದಣಿ ನಂಬ್ರ ತಿಳಿದು ಬಾರದ ಯಾವುದೋ ವಾಹನದ ಚಾಲಕ, ವಾಹನವನ್ನು ಹುಣ್ಸೆಮಕ್ಕಿ ಕಡೆಯಿಂದ ಕೊಟೇಶ್ವರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಫೆಡ್ರಿಕ್‌‌ಡಿಮೆಲ್ಲೊ ರವರಿಗೆ  ಡಿಕ್ಕಿ ಹೊಡೆದು ನಿಲ್ಲಿಸದೇ ಹೋಗಿರುತ್ತಾನೆ.  ಈ ಅಪಘಾತದಿಂದ ಫೆಡ್ರಿಕ್‌‌ಡಿಮೆಲ್ಲೊ ರವರ ತಲೆಗೆ  ಗಂಭೀರ  ರಕ್ತಗಾಯ ಹಾಗೂ ಒಳಜಖಂ ಗಾಯವಾಗಿ ಕೊಟೇಶ್ವರ  ಎನ್‌. ಆರ್‌ಆಚಾರ್ಯ  ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು,  ಉಡುಪಿ ಜಿಲ್ಲಾ ಆಸ್ಪತ್ರೆಗೆ ಹೋಗಿ,ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ, ಮಂಗಳೂರು ವೆನ್‌ಲಾಕ್‌ ಚಿಕಿತ್ಸೆ ಪಡೆಯುತ್ತಿದ್ದ ಫೆಡ್ರಿಕ್‌‌ಡಿಮೆಲ್ಲೊ (50) ರವರು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 23/05/2023 ರಂದು ರಂದು 22:00 ಗಂಟೆಗೆ ಮೃತಪಟ್ಟಿರುವ  ಬಗ್ಗೆ  ಡೆತ್‌ಇಂಟಿಮೇಶನ್‌‌‌ನ್ನು ದಿನಾಂಕ 24/05/2023 ರಂದು 10:00 ಗಂಟೆಗೆ ಠಾಣೆಯಲ್ಲಿ ಸ್ವೀಕರಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 63/2023 ಕಲಂ: 279, 338  IPC & 134 (A)& (B)IMV ACT ರಂತೆ  ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 23/05/2023 ರಂದು 19:00 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಗುಂಡ್ಯಡ್ಕ ಇಳಿಜಾರು ರಸ್ತೆಯಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ ರೇಖಾ ಎಂಬಾಕೆಯು ತನ್ನ KA-20-EZ-7593 ನೇ ನಂಬ್ರದ ಸ್ಕೂಟಿಯನ್ನು  ಕಾರ್ಕಳ ಕಡೆಯಿಂದ ಕುಂಟಾಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ KA-20-ER-3594 ನೇ ನಂಬ್ರದ ಮೋಟಾರ್ ಸೈಕಲ್ ಸವಾರ ಗಣೇಶ್ ಆಚಾರ್ಯ ಎಂಬಾತನು ಆತನ ಮೋಟಾರ್ ಸೈಕಲ್ ನ್ನು ಕಾರ್ಕಳ ಕಡೆಯಿಂದ ಕುಂಟಾಡಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆದಿಂದ  ಸವಾರಿ ಮಾಡಿಕೊಂಡು ಹೋಗಿ ಹಿಂದಿನಿಂದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ  ಮೋಟಾರ್ ಸೈಕಲ್ ಸವಾರ  ಹಾಗೂ ಸ್ಕೂಟಿ ಸವಾರೆ ವಾಹನ ಸಮೇತ ರಸ್ತೆಗೆ ಬಿದ್ದಿದ್ದು, ಸ್ಕೂಟಿ ಸವಾರೆ ರೇಖಾಳ ಬೆನ್ನು ಬಲಕಾಲಿಗೆ ಗುದ್ದಿದ್ದ ಪೆಟ್ಟಾಗಿದ್ದು, ಆರೋಪಿ ಸವಾರನ ಕೈ-ಕಾಲು ಮುಖಕ್ಕೆ ತರಚಿದ ಗಾಯವಾಗಿರುತ್ತದೆ , ಎಂಬುದಾಗಿ ಶಶಿಕಾಂತ  (27), ತಂದೆ: ಕುಟ್ಟಿ ವಾಸ: ಕುಂಟಾಡಿ ಪಡ್ಯ ಮನೆ ಕುಂಟಾಡಿ  ಕಲ್ಯಾ ಇವರು ನೀಡದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 68/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ:  ತಾಲೂಕು, ನೀಲಾವರ  ಗ್ರಾಮದ ಪೀಟರ್‌ಡಿಸೋಜಾರವರ ತೋಟದ ಮನೆ  ಎಂಬಲ್ಲಿ ಗಂಡ  ಹಾಗೂ ಮಕ್ಕಳೊಂದಿಗೆ ವಾಸ ಮಾಡಿಕೊಂಡಿರುವ ಫಿರ್ಯಾದಿದಾರರಾಧ ಬಿನೋದ ಕೆರೆಕಟ್ಟೆ (23) ತಂದೆ: ಜೇಮ್ಸ್‌ಕೆರೆಕಟ್ಟೆ  ಇವರ ಎರಡನೇ ಅಕ್ಕ ಅಲೀಕಾ ದೇವಿ (25) ಇವರು ತೋಟದ ಕೆಲಸ ಹಾಗೂ ದನಗಳನ್ನು ಸಾಕುವ ಕೆಲಸ  ಮಾಡಿಕೊಂಡಿರುವವರು . ಗಂಡನು ವಿಪರೀತ ಕುಡಿಯುತ್ತಿರುವುದರಿಂದ ಹಾಗೂ ತನ್ನ ದೊಡ್ಡ ಮಗಳು ರೀತಿಕಾ ಇವಳು ಜಾರ್ಕಂಡಿನಲ್ಲಿದ್ದು  ಅಲ್ಲಿಗೆ ಹೋಗಿ ನೋಡಲು ಆಗುವುದಿಲ್ಲ ಎಂಬುವುದಾಗಿ ನೊಂದು ಅಥವಾ ಇನ್ನಾವುದೋ, ಯಾವುದೋ ಕಾರಣದಿಂದ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 23/05/2023 ರಂದು ರಾತ್ರಿ  9:00 ಗಂಟೆಯಿಂದ ರಾತ್ರಿ   09:15  ಗಂಟೆಯ ಮಧ್ಯಾವಧಿಯಲ್ಲಿ  ಪೀಟರ್‌ಡಿಸೋಜಾರವರ ತೋಟದ ಮನೆಯ ಎದುರಿನ  ಮಾವಿನ ಮರದ ಕೊಂಬೆಗೆ ಚೂಡಿದಾರ್‌ಶಾಲಿನಿಂದ ಕಟ್ಟಿ, ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 42/2023 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-05-2023 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080