ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕುಂದಾಪುರ: ದಿನಾಂಕ 23/04/2023 ರಂದು ಸಂಜೆ 4:45 ಗಂಟೆಗೆ ಕುಂದಾಪುರ ತಾಲೂಕಿನ ಕುಂಭಾಶಿ ಗ್ರಾಮದ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ/ ಸುರಭಿ ಕೊಲ್ಡ್ ಡ್ರಿಂಕ್ಸ್‌‌ ಶಾಫ್‌‌  ಎದುರುಗಡೆ ಪಶ್ಚಿಮ ಬದಿಯ  NH 66 ರಸ್ತೆಯಲ್ಲಿ ಆಪಾದಿತ ಆದರ್ಶ ಶೆಟ್ಟಿ KA-20-ME-7887ನೇ ಮಹೀಂದ್ರ ಥಾರ್‌ ಜೀಪನ್ನು ಉಡುಪಿ ಕಡೆಯಿಂದ  ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು ಅದೇ ದಿಕ್ಕಿನಲ್ಲಿ ನಾಗರಾಜ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20-EQ-4722 ಟಿವಿಎಸ್‌ ಜುಪಿಟರ್‌‌ ಸ್ಕೂಟರ್‌  ಹಾಗೂ ಕೃಷ್ಣ ದೇವಾಡಿಗ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸೈಕಲ್‌‌ಗೆ ಹಿಂದಿನಿಂದ ಡಿಕ್ಕಿ ಹೊಡೆದು ಬಳಿಕ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಪಿರ್ಯಾದಿದಾರರಾದ ಸಂತೋಷ  (24), ತಂದೆ:ಕೃಷ್ಣ ದೇವಾಡಿಗ,  ವಾಸ: ಮಾರ್ಕೋಡು, ಕೊಟೇಶ್ವರ  ಗ್ರಾಮ,  ಕುಂದಾಪುರ ಇವರ KA-20-EZ-5734 ನೇ  ಬೈಕಿಗೆ ಡಿಕ್ಕಿ ಹೊಡೆದ  ಪರಿಣಾಮ, ನಾಗರಾಜ ರವರ ತಲೆಗೆ, ಹೊಟ್ಟೆ ಹಾಗೂ ಮೈಕೈಗೆ  ಒಳಜಖಂ ಹಾಗೂ ರಕ್ತಗಾಯವಾಗಿ ಮೃತಪಟ್ಟಿದ್ದು, ಕೃಷ್ಣ ದೇವಾಡಿಗರವರ ತಲೆಗೆ, ಕೈ ಕಾಲುಗಳಿಗೆ ರಕ್ತಗಾಯ ಹಾಗೂ ಒಳನೋವಾದ  ಗಾಯವಾಗಿ, ಕೊಟೇಶ್ವರ  ಎನ್‌. ಆರ್‌ ಆಚಾರ್ಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ. ಸಿ ಆಸ್ಪತ್ರೆಗೆ ಹೋಗಿರುತ್ತಾರೆ. ಅಲ್ಲದೇ ಈ ಅಪಘಾತದಿಂದ ಪಿರ್ಯಾದಿದಾರರ ಮೋಟಾರ ಸೈಕಲ್‌, ನಾಗರಾಜ ರವರ ಜುಪಿಟರ್‌ ಟಿವಿಎಸ್‌ , ಕೃಷ್ಣ ದೇವಾಡಿಗರವರ ಸೈಕಲ್‌ ಜಖಂಗೊಂಡಿರುತ್ತದೆ.  ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 55/2023  ಕಲಂ: 279, 338, 304 (A)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಮಲ್ಪೆ: ಪಿರ್ಯಾದಿದಾರರಾದ ರಮೇಶ್‌ ಸುದರ್ಶನ್‌ (33), ತಂದೆ:ಲಕ್ಷ್ಮಣ್‌ ಕಾಂಚನ್‌, ವಾಸ:ಈದ್‌ ಬೈಲು, ಉದ್ಯಾವರ, ಉಡುಪಿ ಇವರು ಮಲ್ಪೆಯ ಅಯ್ಯಪ್ಪ ಮಂದಿರದ ಬಳಿ  ಶ್ರೀ ಸಿದ್ದಿವಿನಾಯಕ ಮೊಬೈಲ್‌ ಶಾಪ್‌ ಹೊಂದಿದ್ದು ದಿನಾಂಕ 22-04-2023 ರಂದು ರಾತ್ರಿ 9:00 ಗಂಟೆಗೆ ಮೊಬೈಲ್ ಅಂಗಡಿ ಬೀಗ ಹಾಗಿ ಮನೆಗೆ ಹೋಗಿರುತ್ತಾರೆ. ದಿನಾಂಕ 23/04/2023 ರಂದು ಬೆಳಿಗ್ಗೆ 4:35 ಗಂಟೆಗೆ ಪಿರ್ಯಾದಿದಾರರ ಸ್ನೇಹಿತ ಶಿವರಾಜ್‌  ಕರೆ ಮಾಡಿ ಮೊಬೈಲ್‌ ಅಂಗಡಿ ಕಳುವಾದ ಬಗ್ಗೆ ಮಾಹಿತಿ ತಿಳಿಸಿದ್ದು ಪಿರ್ಯಾದಿದಾರರು ಮೊಬೈಲ್‌ ಅಂಗಡಿಗೆ ಬಂದು ನೋಡಿದಾಗ ಮೊಬೈಲ್ ಅಂಗಡಿಯ ಮುಖ್ಯ ಶೆಟರೀನ್ ಬೀಗವನ್ನು ಯಾರೋ ಕಳ್ಳರು ಕಬ್ಬಿಣದ ರಾಡಿನಿಂದ ಬೀಗವನ್ನು ಮೀಟಿ ಮುರಿದಿದ್ದು  ಪಿರ್ಯಾದಿದಾರರು ಅಂಗಡಿಯ ಒಳಗೆ ಹೋಗಿ ಪರಿಶೀಲಿಸಿದಾಗ ಅಂಗಡಿಯಲ್ಲಿ ವ್ಯಾಪಾರಕ್ಕೆ ಇಟ್ಟಿದ್ದ ಸ್ವತ್ತುಗಳು ಇರದೇ ಇದ್ದು 1) Cellcore C9i mobile- 2 , 2) cellcore e3+ mobile-1, 3) Caul  C 7Pro Mobile-2 ,4) Caul C2430 Mobile -1, 5) Benco E5 Mobile-1, 6) Lava Gem Mobile -1, 7) Lava A3 Power Moile-1, 8) Itel Magic 4G mobile-1, 9) Magic X Mobile -1, 10) Mafe Atom+ Mobile -1, 11) Caul C5 Mobile -1, 12) I Kall mobile -2, 13) Nokia Mobile -1, 14)Itell  it 6350 mobile-1 15) Volt 10x itell Charger  -2 16) Itell C 21 Charger cable -3 17) Itell M21s Charger cable -5 18) Itell L21 Power  cable-5 19)Itell icw 2077 Charger -2, 20)Itell 18W Charger -1, 21)U&I 3.0 A Charger -4 22) Icall 3.1 AMP Adopter -3, 23) ERD USB Data  cable-2, 24) U&I Lion Battery-2, 25) U&I data Cable-2, 26) U&I Battery F90-2, 27) Itell Fast Connect Icc-2 , 28) RapiPay Micro Atm-1, 29) Syska NeckBand -1, 30)Itell Star 100 power Go-1, 31) Itell Star 200 power Go-1, 32)Itell N53  Neck Band-2, 33) U&I Magnetic Controle-1, 34) U&I data cable-1, 35) U&I lollipop series-2, 36) syska cto c32 data cable-11, 37)Accede cable-2, 38) U&I Auto ID -1, 39) Smart Watch FireBolt -1, 40) charger(without Box)-7, 41)EarPhone-2, 42)Power Bank cable-3, 43) Caul Battery-1, 44)Data cable White-1, 45) U&I Neck Band-1, 46)EarPhone Buds-1 pak, 47)Mobile Case Black colour-1, 48)vivo Mobile-4, 49)Keypad set(nokia, ziox,itel)-3. ಈ ಮೇಲಿನ ಸೊತ್ತುಗಳನ್ನು ಯಾರೋ ಕಳ್ಳರು ಅಂಗಡಿಯ ಶೆಟರಿನ  ಬೀಗ ಮುರಿದು ಕಳುವು ಮಾಡಿಕೊಂಡು ಹೋಗಿದ್ದು ಕಳುವಾದ ಸೊತ್ತಿನ ಒಟ್ಟು  ಮೌಲ್ಯ 1,09,371/- ರೂಪಾಯಿ ಆಗಿರುತ್ತದೆ.  ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 42/2023 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಲ್ಪೆ: ಪಿರ್ಯಾದಿದಾರರಾದ ಪ್ರಸಾದ್ (29), ತಂದೆ:ರಾಘು, ವಾಸ:ನರ್ನಾಡು ಮದಗ ಅಮ್ಮುಂಜೆ ,ಉಪ್ಪೂರು ಗ್ರಾಮ,ಕೊಳಲಗಿರಿ ಪೋಸ್ಟ್ ಇವರು ಮಲ್ಪೆಯ ಅಯ್ಯಪ್ಪ ಮಂದಿರದ ಬಳಿ  SMART.COM MOBILE SHOP  ಹೊಂದಿದ್ದು ದಿನಾಂಕ 22/04/2023 ರಂದು ರಾತ್ರಿ 9:00 ಗಂಟೆಗೆ ಮೊಬೈಲ್ ಅಂಗಡಿ ಬೀಗ ಹಾಗಿ ಮನೆಗೆ ಹೋಗಿರುತ್ತಾರೆ. ದಿನಾಂಕ 23/04/2023 ರಂದು ಬೆಳಿಗ್ಗೆ 07:00 ಗಂಟೆಗೆ ಪಿರ್ಯಾದಿದಾರರು ಅಂಗಡಿಯ ಬಾಗಿಲನ್ನು ತೆರಯಲು ಹೋದಾಗ ಮೊಬೈಲ್ ಅಂಗಡಿಯ ಶೆಟರೀನ್ ಬೀಗ ಮುರಿದಿದ್ದು ಪಿರ್ಯಾದಿದಾರರು ಅಂಗಡಿಯ ಒಳಗೆ ಹೋಗಿ ಪರಿಶೀಲಿಸಿದಾಗ ಅಂಗಡಿಯಲ್ಲಿ ವ್ಯಾಪಾರಕ್ಕೆ ಇಟ್ಟಿದ್ದ ಸಾಮಾಗ್ರಿಗಳು ಇರದೇ ಇದ್ದು 1) RD Charger A140 -2 Box, 2) RD C type charger-5 Box, 3) RD Boat charger -3 Box 4) 3.4 A charging cable-1,5) RD Neck band-1 Box,6) Varni Neck band-1 Box, 7) Carreto neck band-2 Box, 8) RD MS neck band-1, 9) Core neck band-1, 10) yucor Airphone-1, 11) Boat airphone-1, 12) Varni airphone-2. ಈ ಮೇಲಿನ ಸೊತ್ತುಗಳನ್ನು ಯಾರೋ ಕಳ್ಳರು ಅಂಗಡಿಯ ಶೆಟರೀನ್ ಬೀಗ ಮುರಿದು ಕಳುವು ಮಾಡಿಕೊಂಡು ಹೋಗಿದ್ದು ಕಳುವಾದ ಸೊತ್ತಿನ ಒಟ್ಟು ಮೌಲ್ಯ 11,187/- ರೂಪಾಯಿ ಆಗಿರುತ್ತದೆ.  ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 41/2023 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಶಿರ್ವಾ: ಪಿರ್ಯಾದಿದಾರರಾದ ವಿನ್ಸೆಂಟ್‌ ರಾಡ್ರಿಗಸ್‌ (62),  ತಂದೆ: ದಿ. ಜೋನ್‌ ರಾಡ್ರಿಗಸ್‌, ವಾಸ: ಡ್ರೀಮ್ಸ್‌ಹೌಸ್‌, ಸಾಲ್ಮರ , ಕುರ್ಕಾಲು ಗ್ರಾಮ, ಶಂಕರಪುರ ಅಂಚೆ ಕಾಪು ತಾಲೂಕು ಇವರ  ಅಣ್ಣನ ಮಗ  ಜೋಸೆಫ್‌ ರಾಡ್ರಿಗಸ್‌(53)  ರವರು  ದಿನಾಂಕ 23/04/2023  ರಂದು  ಬೆಳಿಗ್ಗೆ 10:30  ಗಂಟೆಯಿಂದ  ಮಧ್ಯಾಹ್ನ 12:30  ಗಂಟೆಯ ನಡುವಿನ  ಅವಧಿಯಲ್ಲಿ  ಯಾವುದೋ ಕಾರಣಕ್ಕೆ ಮನನೊಂದು ಕುರ್ಕಾಲು ಗ್ರಾಮದ ಅಗರೊಳಗೆ ಎಂಬಲ್ಲಿರುವ ಮನೆಯ ಪಡ್ಸಾಲೆಯ  ಲಿಂಟಲ್‌ಗೆ  ಅಳವಡಿಸಿದ  ಕಬ್ಬಿಣದ ಕೊಂಡಿಗೆ  ನೈಲಾನ್‌ ಹಗ್ಗವನ್ನು  ಬಿಗಿದು ಇನ್ನೊಂದು  ತುದಿಯನ್ನು  ಕುತ್ತಿಗೆಗೆ  ಬಿಗಿದು ನೇಣು ಹಾಕಿಕೊಂಡು  ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.  ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 08/2023  ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಾಣೆ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಸಾಹಿಲ್‌ಎ ಖಾದರ್‌  (24), ತಂದೆ:ಅಬ್ದುಲ್‌ ಖಾದರ್‌, ವಾಸ:ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಗಲಬಾಗಿಲು ಆರಗ ಗ್ರಾಮ ತೀರ್ಥಹಳ್ಳಿ ತಾಲೂಕು ಶಿವಮೊಗ್ಗ ಜಿಲ್ಲೆ ಇವರು ದಿನಾಂಕ 23/04/2023 ರಂದು ಸಂಜೆ 5:00 ಗಂಟೆಗೆ  ಅತ್ತೆಯ ಮಗ ಮಾಹೀಮ್‌, ಸಾಹಿಲ್‌ ತಮ್ಮಂದಿರಾದ ಮಹಮ್ಮದ್‌ ಸುಫಾನ್‌ (20),  ಮಹಮ್ಮದ್‌ ಫೈಜಾನ್‌ (18).  ಮಹಮ್ಮದ್‌ ಇಬಾದ್‌ (25 ) ಮತ್ತು ಮಹಮ್ಮದ್‌ ಫರಾನ್‌ರವರೊಂದಿಗೆ  ಹೊಳೆಯಿಂದ ಮಳಿ ( ಕಪ್ಪೆಚಿಪ್ಪು) ಹೆಕ್ಕಲು ಹೊಡೆಯಿಂದ ದೋಣಿಯಲ್ಲಿ ಬ್ರಹ್ಮಾವರ  ಹಾರಾಡಿ ಗ್ರಾಮದ ಕಿಣಿಯಾರ ಕುದ್ರು ಎಂಬಲ್ಲಿಗೆ  ಹೊಳೆಯನ್ನು ದಾಟಿ ಬಂದು ಸಂಜೆ 5:30 ಗಂಟೆಗೆ  ಕುದ್ರು ದಡದಲ್ಲಿ ದೋಣಿಯನ್ನು ನಿಲ್ಲಿಸಿ ದೋಣಿಯನ್ನು ಕಟ್ಟಿ ಎಲ್ಲರೂ ದೋಣಿಯಿಂದ ಇಳಿದು ಸಂಜೆ 6:30 ಗಂಟೆ ಸುಮಾರಿಗೆ  ಮಳಿಯನ್ನು  ಹೆಕ್ಕುತ್ತಾ  ಹೊಳೆಯ ನೀರಿನಲ್ಲಿ  ಮುಂದೆ ಮುಂದೆ  ಹೋದಾಗ ಮೊಹಮ್ಮದ್‌ ಫರನ್‌  ಜೊತೆಯಲ್ಲಿ ಮಹಮ್ಮದ್‌ ಸುಫಾನ್‌, ಮಹಮ್ಮದ್‌ ಇಬಾದ್‌, ಮಹಮ್ಮದ್‌ ಫೈಜಾನ್‌ ರವರು ನೀರಿನ ಆಳದಲ್ಲಿ  ಮುಳುಗಿ ಹೋದರು, ಪಿರ್ಯಾದಿದಾರರು,  ಶಾಹಿಲ್‌ ಎ ಖಾದರ್‌ ಮತ್ತು  ಮಾಹಿಮ್‌ ರವರು ಸೇರಿ ನಾಲ್ಕು ಜನರನ್ನು ರಕ್ಷಿಸಲು ಎಷ್ಟೇ ಪ್ರಯತ್ನ ಪಟ್ಟರೂ ಅವರು ನೀರಿನಲ್ಲಿಮುಳುಗಿ ಹೋದರು  ಕೂಡಲೇ ಈ ವಿಷಯನ್ನು ಅಲ್ಲಿಯ ಸ್ಥಳಿಯ ಜನರಿಗೆ  ಹಾಗೂ ಪಿರ್ಯಾದಿದಾರರ ಸಂಬಂಧಿಕರಿಗೆ ಮಾಹಿತಿ ತಿಳಿಸಿದ್ದು ಅವರೆಲ್ಲರ ಸಹಾಯದಿಂದ  ಹೊಳೆಯಲ್ಲಿ ಮುಳುಗಿ  ಹುಡುಕಾಡಿದಾಗ  ರಾತ್ರಿ 8:30 ರಿಂದ 9:00 ಗಂಟೆಯ ಮಧ್ಯಾವದಿಯಲ್ಲಿ  ಮಹಮ್ಮದ್‌ ಸುಫಾನ್‌ , ಮಹಮ್ಮದ್‌ ಪೈಜಾನ್‌ ಮತ್ತು ಮಹಮ್ಮದ್‌ ಇಬಾದ್‌ ರವರ ಮೃತ ಶರೀರ ದೊರೆತಿದ್ದು  ಮೊಹಮ್ಮದ್‌  ಫರಾನ್‌ರವರು ನೀರಿನಲ್ಲಿ ಮುಳುಗಿ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 84/2023 ಕಲಂ: ಮನುಷ್ಯ ಕಾಣೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಮಲ್ಪೆ:  ದಿನಾಂಕ 23/04/2023 ರಂದು ಬೆಳಿಗ್ಗೆ 11:30 ಗಂಟೆ ಸಮಯಕ್ಕೆ ಗುರುನಾಥ ಬಿ ಹೆಚ್, ಪೊಲೀಸ್‌ ಉಪನಿರೀಕ್ಷಕರು, ಮಲ್ಪೆ ಪೊಲೀಸ್ ಠಾಣೆ ಇವರು ರೌಂಡ್ಸ್‌ ನಲ್ಲಿರುವಾಗ ಸಾರ್ವಜನಿಕರಿಂದ ಧ್ವನಿವರ್ಧಕದಿಂದಾಗಿ ಉಂಟಾದ ಉಪದ್ರದ ಬಗ್ಗೆ ಮಾಹಿತಿ ಬಂದಂತೆ ಮಲ್ಪೆ ಗಾಂಧಿ ಶತಾಬ್ದಿ ಶಾಲೆ  ಹತ್ತಿರ ಬಂದು ನೋಡಲಾಗಿ  300-400 ಜನರು  ಜೈ ಭೀಮ  ಎಂದು ಬರೆದಿರುವ  ಬಾವುಟಗಳನ್ನು  ತಮ್ಮ ವಾಹನಕ್ಕೆ  ಕಟ್ಟಿಕೊಂಡು,   20 - ನಾಲ್ಕು ಚಕ್ರ ವಾಹಗಳಲ್ಲಿ ,  50 ದ್ವಿಚಕ್ರ ವಾಹನಗಳಲ್ಲಿ , 10 ಮಿನಿ ಬಸ್‌  ಗಳಲ್ಲಿ  ಸಾರ್ವಜನಿಕರು ಗಾಡಿ ನಂಬ್ರ KA-20-4609,  KA-51-0523  ರಲ್ಲಿ ಧ್ವನಿವರ್ಧಕವನ್ನು  ಅಳವಡಿಸಿಕೊಂಡು   ಉಡುಪಿಯ ಅಮ್ಮಣ್ಣಿ ರಮಣ ಸಭಾಭವನದಲ್ಲಿ ನಡೆಯುವ  ಅಂಬೇಡ್ಕರ ರವರ 132 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಭಾರತ ಭಾಗ್ಯವಿಧಾತಾ  ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ  ತೆರಳುತ್ತಿದ್ದು , ಈ ಬಗ್ಗೆ ನಾನು ಹಾಲಿ ಕೊಡವೂರು ಗ್ರಾಮದಲ್ಲಿ ಕರ್ತವ್ಯದ ಮೇಲಿದ್ದ  ಈಶ್ವರಪ್ಪ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಉಡುಪಿ ಪ್ರೈಯಿಂಗ್‌ ಸ್ವಾಡ್‌ ಆಪೀಸರ್‌ ರವರಿಗೆ ವಿಷಯ ತಿಳಿಸಿ ಸ್ಥಳಕ್ಕೆ ಕರೆಯಿಸಿ ಅವರ ಸಮಕ್ಷಮ ಈ ಬಗ್ಗೆ  ಅನುಮತಿ ಪತ್ರದ ಬಗ್ಗೆ ಕೇಳಲಾಗಿ  ಒಂದು ಅನುಮತಿ ಪತ್ರವನ್ನು ಹಾಜರುಪಡಿಸಿದ್ದು , ಅದು ದಿನಾಂಕ 23/04/2023 ರಂದು ಅಮ್ಮಣ್ಣಿ  ರಮಣ ಸಭಾಭವನ ದಲ್ಲಿ ನಡೆಯುವ ಕಾರ್ಯಕ್ರಮದ ಅನುಮತಿ ಪತ್ರವಾಗಿದ್ದು , ಇದು ಉಡುಪಿಯ  ಬೋರ್ಡ್‌ ಶಾಲೆಯಿಂದ ಅಮ್ಮಣ್ಣಿ ರಮಣ  ಸಭಾಭವನದವರೆಗೆ ಮಾತ್ರ ಅನುಮತಿ ಇದ್ದು , ಮಲ್ಪೆ ಗಾಂಧಿ ಶತಾಭ್ದಿ ಶಾಲೆಯಿಂದ  ಹೊರಡುವ ಬಗ್ಗೆ ಯಾವುದೇ ಅನುಮತಿ  ಇರುವುದಿಲ್ಲ.  ಹಾಗೂ KA-20-4609,  KA-51-0523 ವಾಹನಗಳಲ್ಲಿ  ಅಳವಡಿಸಿದ ಧ್ವನಿವರ್ಧಕದ ಬಗ್ಗೆ ಅನುಮತಿ  ಪತ್ರ ಕೇಳಲಾಗಿ ಯಾವುದೇ ಅನುಮತಿ  ಪಡೆದಿರುವುದಿಲ್ಲ. ಈ ಬಗ್ಗೆ ವಿಚಾರಿಸಲಾಗಿ KA-51-0523  ರಲ್ಲಿ ಅಳವಡಿಸಿದ ಧ್ವನಿವರ್ಧಕವು ಲಕ್ಷ್ಮೀನಗರದ  ನಿವಾಸಿ ಮೈಕಲ್‌ ರವರಿಗೆ ಹಾಗೂ KA-20-4609 ರಲ್ಲಿ ಅಳವಡಿಸಿದ ಧ್ವನಿವರ್ಧಕವು  ಸಂಪ್ರೀತ್‌ ಸೌಂಡ್ಸ್‌ ರವರಿಗೆ ಸಂಬಂದಿಸಿರುವುದಾಗಿ ತಿಳಿದು ಬಂದಿರುತ್ತದೆ. ಅತೀ ಕರ್ಕಶವಾಗಿ ಸಾರ್ವಜನಿಕರಿಗೆ ಉಪದ್ರವಾಗುವ ರೀತಿಯಲ್ಲಿ ಈ ಕಾರ್ಯಕ್ರಮದ ಸಂಘಟಕರಾದ ಹರೀಶ ಸಾಲಿಯಾನ್‌ ನೆರ್ಗಿ ಇವರು ಬಳಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಾ ಇವುಗಳನ್ನು ಜಾಥದೊಂದಿಗೆ ತೆಗೆದುಕೊಂಡು ಉಡುಪಿ ಕಡೆಗೆ ಹೋಗಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 43/2023 ಕಲಂ: 109 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 24-04-2023 09:45 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080