ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಗಿರೀಶ್ ಕುಮಾರ್ (35), ತಂದೆ: ದಿ.ರಾಘವ ಪೂಜಾರಿ,  ವಾಸ: ಶಾರದಾಂಭ, ನ್ಯಾಯಾಧೀಶರ ಮನೆಯ ಬಳಿ,ಕಕ್ಕುಂಜೆ,ಸಂತೆಕಟ್ಟೆ ಅಂಚೆ, ಶಿವಳ್ಳಿ ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಆಟೋ ಚಾಲಕರಾಗಿದ್ದು, ದಿನಾಂಕ 24/04/2023 ರಂದು ಬೆಳಿಗ್ಗೆ ಪಿರ್ಯಾದಿದಾರರು ರೊನಾಲ್ಟ್ ಶೋ ರೂಂ ಬಳಿಯ ರಿಕ್ಷಾ ನಿಲ್ದಾಣದಲ್ಲಿರುವಾಗ 10:45 ಗಂಟೆಗೆ ಪುತ್ತೂರು ಗ್ರಾಮದ ಸಂತೆಕಟ್ಟೆ ರೊನಾಲ್ಟ್ ಶೂ ರೂಂ ಬಳಿ ಇರುವ ಎವರ್‌ಗ್ರೀನ್ ನರ್ಸರಿ ಬಳಿ ರಾಷ್ಟ್ರೀಯ ಹೆದ್ದಾರಿ 66 ನೇ ಸಾರ್ವಜನಿಕ ರಸ್ತೆಯಲ್ಲಿ ಸಂತೆಕಟ್ಟೆ ಕಡೆಯಿಂದ ಎವರ್ಗ್ರೀನ್ ನರ್ಸರಿ ಕಡೆಗೆ KA-19-C-0287ನೇ ಟಿಪ್ಪರ್ ಚಾಲಕ ಧರ್ಮಣ್ಣ  ತಾನು ಚಲಾಯಿಸುತ್ತಿದ್ದ ಟಿಪ್ಪರನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಏಕಾಏಕಿಯಾಗಿ ನರ್ಸರಿ ಕಡೆಯ ಮಣ್ಣು ರಸ್ತೆಗೆ ತಿರುಗಿಸಿದ್ದರಿಂದ ನರ್ಸರಿ ಕಡೆಯಿಂದ ರೋನಾಲ್ಡ್  ಶೋ ರೂಮ್ ಕಡೆಗೆ ಬಾಬು  ನಾಯ್ಕ್ (64) ರವರು ಸವಾರಿ ಮಾಡುತ್ತಿದ್ದ  ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸಮೇತ ರಸ್ತೆಗೆ ಬಿದ್ದು ತಲೆಗೆ ಒಳ ಜಖಂ, ಎಡಕೈಗೆ ಮೂಳೆ ಮುರಿತ ಹಾಗೂ ಕಾಲಿಗೆ ತರಚಿದ ಗಾಯ ಆದವರನ್ನು ಚಿಕಿತ್ಸೆಯ ಬಗ್ಗೆಉಡುಪಿ ಗಾಂಧೀ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕೆಎಮ್‌ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿನ  ವೈದ್ಯರು  11:25 ಗಂಟೆಗೆ ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 40/2023 ಕಲಂ: 279, 337,304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ರಾಜ್ ಶೆಟ್ಟಿ (34), ತಂದೆ: ರಘುರಾಮ ಶೆಟ್ಟಿ ವಾಸ: ಹಾಡಿ ಮನೆ, ಬಳ್ಕೂರು, ಬಳ್ಕೂರು ಗ್ರಾಮ ಕುಂದಾಫುರ ತಾಲೂಕು. ಉಡುಪಿ ಜಿಲ್ಲೆ ಇವರು  ದಿನಾಂಕ 23/04/2023 ರಂದು ಸಾಬ್ರಕಟ್ಟೆ ಕಡೆಯಿಂದ  ಬಳ್ಕೂರ ಕಡೆಗೆ ಹೋಗುತ್ತಿರುವಾಗ ಮಧ್ಯಾಹ್ನ 3:15 ಗಂಟೆಗೆ ಶಿರಿಯಾರ ಗ್ರಾಮದ ಕಳ್ಳಾಡಿ ಎಂಬಲ್ಲಿ ತಲುಪಿದಾಗ ಅದೇ ಮಾರ್ಗದಲ್ಲಿ ಎದುರಿನಲ್ಲಿ ಹೋಗುತ್ತಿದ್ದ KA-20-ED-2968 ನೇ ಹೀರೋ ಹೊಂಡಾ ಫ್ಯಾಶನ್ ಬೈಕ್ ನ ಸವಾರನಿಗೆ  ಬಜಾಜ್ ಗೂಡ್ಸ್ ವಾಹನದ ನಂಬ್ರ  KA-20-AA-8234 ನೇದರ ಚಾಲಕ ವಿಜಯ ಕಾಂಚನ್  ಗೂಡ್ಸ್ ವಾಹನವನ್ನು ಅತೀವೇಗ, ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರಿನಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದ KA-20-ED-2968 ನೇ ಹೀರೋ ಹೊಂಡಾ ಫ್ಯಾಶನ್ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಾದ ರಾಮ ದೇವಾಡಿಗ  (40) ರವರಿಗೆ ಬಲಬದಿಯ ಸೊಂಟ ಬಳಿ, ಬಲಬದಿಯ ಸೊಂಟದಿಂದ ಕೆಳಭಾಗದಲ್ಲಿ ತೀವೃ ತರಹದ ಗಾಯವಾಗಿದ್ದು. ಅಲ್ಲದೇ ಬಲಬದಿಯ ಕೆಳಗಡೆಯ ಗಂಟಿನ ಬಳಿ ರಕ್ತಗಾಯವಾಗಿರುತ್ತದೆ. ಬಜಾಜ್ ಗೂಡ್ಸ್ ವಾಹನದ ಚಾಲಕನ ಹೆಸರು ವಿಜಯ ಕಾಂಚನ್  ಎಂಬುದಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 67/2023 ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 24/04/2024 ರಂದು ಬೆಳಿಗ್ಗೆ 11:00 ಗಂಟೆಗೆ, ಕುಂದಾಪುರ  ತಾಲೂಕಿನ, ವಡೇರಹೋಬಳಿ ಗ್ರಾಮದ LIC ಆಪೀಸ್‌‌ ಕ್ರಾಸ್‌‌ ಬಳಿ ಪಶ್ಚಿಮ ಬದಿಯ NH 66 ರಸ್ತೆಯಲ್ಲಿ,ಆಪಾದಿತ ಇಸ್ಮಾಯಿಲ್‌  ಶೇಕ್‌ KA-25-Z-8942 ನೇ ಟೋವಿಂಗ್‌ ವಾಹನವನ್ನು ಕೊಟೇಶ್ವರ ಕಡೆಯಿಂದ  ಕುಂದಾಪುರ ಕಡೆಗೆ  ಅತೀವೇಗ  ಹಾಗೂ ನಿರ್ಲಕ್ಷತನದ ಚಾಲನೆ ಮಾಡಿಕೊಂಡು ಬಂದು, ವಾಹನವನ್ನು ರಸ್ತೆಯ  ಎಡಬದಿಗೆ ಚಲಾಯಿಸಿ,  ರಸ್ತೆ ದಾಟುತ್ತಿದ್ದ ನಾರಾಯಣ ಶೆಟ್ಟಿ (83) ಎಂಬುವವರಿಗೆ ಡಿಕ್ಕಿ ಹೊಡೆದ ಪರಿಣಾಮ, ನಾರಾಯಣ ಶೆಟ್ಟಿಯವರ ತಲೆಗೆ, ಎಡಕಾಲಿಗೆ ಒಳಜಖಂ ಗಾಯ ಹಾಗೂ ಮೈಕೈಗೆ ತರಚಿದ ಗಾಯವಾಗಿ, ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ  ಹೋಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 56/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ನಾಗರಾಜ್‌ ಎಂ ಮೊಗೇರ(33), ತಂದೆ: ಮಂಜುನಾಥ ಮೊಗೇರ, ವಾಸ: ಕಾಯ್ಕಿಣಿ , ಭಟ್ಕಳ, ಉತ್ತರ ಕನ್ನಡ ಜಿಲ್ಲೆ ಇವರು  ಮಲ್ಪೆ ಬಂದರಿನಲ್ಲಿ ನಿತಿನ್‌ ಎಂಬುವವರ ಮಾಲಕತ್ವದ ಹನುಮಗಿರಿ ಎಂಬ ಹೆಸರಿನ ಮೀನುಗಾರಿಕಮಾ ಬೋಟ್‌ ನಲ್ಲಿ ತಾಂಡೇಲನಾ ಗಿ ಕೆಲಸ ಮಾಡಿಕೊಂಡಿದ್ದು ,  ಬೋಟ್‌ ನಲ್ಲಿ ಸುನೀಲ್‌ ರಂಗ ಮೊಗೇರ (31) ಹಾಗೂ ಇತರರು ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ಸಮುದ್ರದಲ್ಲಿ ಮೀನುಗಾರಿಕೆ  ಮುಗಿಸಿ ದಿನಾಂಕ 22/04/2023 ರಂದು ಬಂದು ಮಲ್ಪೆ ಬಂದರಿನಲ್ಲಿ ಬೋಟ್‌ ನ್ನು  ದಕ್ಕೆಕಗೆ ಕಟ್ಟಿದ್ದು ದಿನಾಂಕ 23/04/2023 ರಂದು  ಬೆಳಿಗ್ಗೆ 06:00 ಗಂಟೆಗೆ ಬೋಟ್‌ ನಿಂದ ಮೀನು ಖಾಲಿ ಮಾಡುವ ಸಮಯ  ಸುನಿಲ್‌ ರಂಗ ಮೊಗೇರಾ ಬೋಟ್‌ ನಿಂದ ಆಯ ತಪ್ಪಿ ಆಕಸ್ಮಿಕವಾಗಿ ದಕ್ಕೆಯ ನೀರಿಗೆ ಬಿದ್ದು ಕಾಣೆಯಾಗಿರುತ್ತಾರೆ. ದಿನಾಂಕ 24/04/2023 ರಂದು ಬೆಳಿಗ್ಗೆ 06:30 ಗಂಟೆಗೆ ಸುನಿಲ್‌ ರಂಗ ಮೊಗೇರಾ ರವರ ಮೃತ ದೇಹವು ಮಲ್ಪೆ ಬಂದರಿನ ಸ್ಲಾಬ್‌ ದಕ್ಕೆಯ ನೀರಿನಲ್ಲಿ ಪತ್ತೆಯಾಗಿರುತ್ತದೆ . ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 23/2023 ಕಲಂ: 174 ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಪಿರ್ಯಾದಿದಾರರಾದ ಸಾಹಿಲ್‌ಎ ಖಾದರ್‌(24) , ತಂದೆ: ಅಬ್ದುಲ್‌ಖಾದರ್‌, ವಾಸ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಗಳಬಾಗಿಲು,  ಆರಗ ಗ್ರಾಮ ತೀರ್ಥಹಳ್ಳಿ  ತಾಲೂಕು, ಶಿವಮೊಗ್ಗ ಜಿಲ್ಲೆ ಇವರು   ದಿನಾಂಕ 23/04/2023 ರಂದು ಸಂಜೆ 5:00 ಗಂಟೆಗೆ ಪಿರ್ಯಾದಿದಾರರ ಅತ್ತೆಯ ಮಗ ಮಾಹೀಮ್‌, ಸಾಹಿಲ್‌ ತಮ್ಮಂದಿರಾದ ಮಹಮ್ಮದ್‌ ಸುಫಾನ್‌ (20),  ಮಹಮ್ಮದ್‌ ಫೈಜಾನ್‌ (18),  ಮಹಮ್ಮದ್‌ ಇಬಾದ್‌ (25) ಮತ್ತು ಮಹಮ್ಮದ್‌ ಫರಾನ್‌ರವರೊಂದಿಗೆ  ಹೊಳೆಯಿಂದ ಮಳಿ ( ಕಪ್ಪೆಚಿಪ್ಪು) ಹೆಕ್ಕಲು ಹೊಡೆಯಿಂದ ದೋಣಿಯಲ್ಲಿ ಬ್ರಹ್ಮಾವರ  ಹಾರಾಡಿ ಗ್ರಾಮದ ಕಿಣಿಯಾರ ಕುದ್ರು ಎಂಬಲ್ಲಿಗೆ  ಹೊಳೆಯನ್ನು ದಾಟಿ ಬಂದು ಸಂಜೆ 5:30 ಗಂಟೆಗೆ  ಕುದ್ರು ದಡದಲ್ಲಿ ದೋಣಿಯನ್ನು ನಿಲ್ಲಿಸಿ ದೋಣಿಯನ್ನು ಕಟ್ಟಿ ಎಲ್ಲರೂ ದೋಣಿಯಿಂದ ಇಳಿದು ಸಂಜೆ 6:30 ಗಂಟೆ ಸುಮಾರಿಗೆ  ಮಳಿಯನ್ನು  ಹೆಕ್ಕುತ್ತಾ  ಹೊಳೆಯ ನೀರಿನಲ್ಲಿ  ಮುಂದೆ ಮುಂದೆ  ಹೋದಾಗ ಮೊಹಮ್ಮದ್‌ ಫರನ್‌  ಜೊತೆಯಲ್ಲಿ ಮಹಮ್ಮದ್‌ ಸುಫಾನ್‌, ಮಹಮ್ಮದ್‌ ಇಬಾದ್‌, ಮಹಮ್ಮದ್‌ ಫೈಜಾನ್‌ ರವರು ನೀರಿನ ಆಳದಲ್ಲಿ  ಮುಳುಗಿ ಹೋದರು, ಪಿರ್ಯಾದಿದಾರರು,  ಶಾಹಿಲ್‌ ಎ ಖಾದರ್‌ ಮತ್ತು  ಮಾಹಿಮ್‌ ರವರು ಸೇರಿ ನಾಲ್ಕು ಜನರನ್ನು ರಕ್ಷಿಸಲು ಎಷ್ಟೇ ಪ್ರಯತ್ನ ಪಟ್ಟರೂ ಅವರು ನೀರಿನಲ್ಲಿಮುಳುಗಿ ಹೋದರು  ಕೂಡಲೇ ಈ ವಿಷಯನ್ನು ಅಲ್ಲಿಯ ಸ್ಥಳಿಯ ಜನರಿಗೆ  ಹಾಗೂ ಪಿರ್ಯಾದಿದಾರರ ಸಂಬಂಧಿಕರಿಗೆ ಮಾಹಿತಿ ತಿಳಿಸಿದ್ದು ಅವರೆಲ್ಲರ ಸಹಾಯದಿಂದ  ಹೊಳೆಯಲ್ಲಿ ಮುಳುಗಿ  ಹುಡುಕಾಡಿದಾಗ  ರಾತ್ರಿ 8:30 ರಿಂದ 9:00 ಗಂಟೆಯ ಮಧ್ಯಾವದಿಯಲ್ಲಿ  ಮಹಮ್ಮದ್‌ ಸುಫಾನ್‌ , ಮಹಮ್ಮದ್‌ ಪೈಜಾನ್‌ ಮತ್ತು ಮಹಮ್ಮದ್‌ ಇಬಾದ್‌ ರವರ ಮೃತ ಶರೀರ ದೊರೆತಿದ್ದು  ಮೊಹಮ್ಮದ್‌  ಫರಾನ್‌ರವರು ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದು,  ದಿನಾಂಕ 24/04/2023 ರಂದು ಬೆಳಗ್ಗಿನ ಜಾವ 01:30 ಗಂಟೆಗೆ ಮೊಹಮ್ಮದ್‌ ಫರಾನ್‌ ರವರ ಮೃತದೇಹವು ಬ್ರಹ್ಮಾವರ ಹಾರಾಡಿ ಗ್ರಾಮದ ಕಿಣಿಯರ ಕುದ್ರುವಿನಲ್ಲಿ ಸುಳಿಯಲ್ಲಿ ಸಿಕ್ಕಿ ಮುಳುಗಿದ್ದ  ಜಾಗದಲ್ಲಿಯೇ ಸಿಕ್ಕಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 34/2023 ಕಲಂ: 174 ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ:  ಪಿರ್ಯಾದಿದಾರರಾದ ಅವಲೇನೆ ಮರಿಯಾ  ಡಿಸೋಜ (25),  ತಂದೆ:ಪೀಟರ್ ಡಿಸೋಜ, ವಾಸ: ಮನೆ ನಂಬ್ರ  10-35 –ಗುರುಂಜೆ ಹೌಸ್ , ಶಿರ್ವ ಅಂಚೆ ಮತ್ತು  ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ತಾಯಿ ಶ್ರೀಮತಿ ಜೂಲಿಯನ್ ಎ ಡಿಸೋಜ (54) ರವರು ಶಿರ್ವ ಗ್ರಾಮದ ಗುರುಂಜೆ ಮನೆಯಲ್ಲಿ ಒಬ್ಬರೇ ವಾಸವಾಗಿದ್ದು, ಸುಮಾರು 4 ವರ್ಷಗಳ ಹಿಂದೆ ಶುಗರ್ ಖಾಯಿಲೆಯಿಂದ ಬಳಲುತ್ತಿದ್ದು ,ಈ ಬಗ್ಗೆ  ಚಿಕಿತ್ಸೆ ಪಡೆಯುತ್ತಿದ್ದರು,. ಖಾಯಿಲೆಯು ಉಲ್ಬಣಗೊಂಡು  ಉಸಿರಾಟದ ತೊಂದರೆಯಿಂದ ಅಸ್ವಸ್ತ ರಾಗಿ ಅಡುಗೆ ಕೋಣೆಯಲ್ಲಿ ಬಿದ್ದವರನ್ನು ಪಿರ್ಯಾದಾರರ ಅತ್ತೆ ಮಾವನವರು  ಉಪಚರಿಸಿ ಕೂಡಲೇ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ  ಆಸ್ಪತ್ರೆಗೆ  ಕರೆದುಕೊಂಡು  ದಾಖಲಿಸಿದ್ದು, ದಿನಾಂಕ 24/04/2023 ರಂದು ಬೆಳಿಗ್ಗೆ ಜಾವ 00:06 ಗಂಟೆಗೆ ಪರೀಕ್ಷಿಸಿದ ವೈದ್ಯರು  ಮೃತಪಟ್ಟಿರುವುದಾಗಿದೆ ತಿಳಿಸಿರುತ್ತಾರೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 09/2023 ಕಲಂ: 174 ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ರಾಧಾಕೃಷ್ಣ ಅನಂತ ಪ್ರಭು (66), ತಂದೆ: ದಿ. ಎಸ್. ಅನಂತ ಪ್ರಭು, ವಾಸ: ಮಾಲ್ ಮ್ಯಾನೇಜರ್, ಸಿಟಿ ಸೆಂಟರ್ ಮಾಲ್, ಉಡುಪಿ, ಉಡುಪಿ ಜಿಲ್ಲೆ ಇವರು ಉಡುಪಿ ಸಿಟಿ ಸೆಂಟರ್‌ ಮಾಲ್‌ ನಲ್ಲಿ ಮಾಲ್‌ ಮ್ಯಾನೇಜರ್‌ ಆಗಿ ಕೆಲಸ ನಿರ್ವಹಿಸಿಕೊಂಡಿದ್ದು, ದಿನಾಂಕ 19/04/2023 ರಂದು ಜಿಲ್ಲಾ ಪ್ರಧಾನ ನ್ಯಾಯಾಲಯದ ಕಮರ್ಷಿಯಲ್‌ ಒ.ಎಸ್‌ ನಂಬ್ರ 14/2020 ರಲ್ಲಿ ಮಾನ್ಯ ನ್ಯಾಯಾಲಯವು ನೇಮಿಸಿದ ಮದ್ಯಸ್ಥಿಕೆದಾರರಾದ  ಎ.ವಿ ಭಟ್‌ ರವರ ಕಛೇರಿಯಲ್ಲಿ ರಾಜಿ ಮಾತುಕತೆಗೆ ಹಾಜರಾಗಿದ್ದು, ಪಿರ್ಯಾದಿದಾರರು ತಮ್ಮ ಅಭಿಪ್ರಾಯವನ್ನು ಹೇಳುತ್ತಿರುವಾಗ 15:30 ಗಂಟೆಗೆ 1ನೇ ಆಪಾದಿತ ಯು. ರವೀಂದ್ರನಾಥ ಭಟ್‌ ರವರ ಮಗ  ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ಮುಂದುವರಿದು ಪಿರ್ಯಾದಿದಾರರು ಕೋರ್ಟಿನ ಮಹಡಿಯ ಮೆಟ್ಟಿಲಿನಿಂದ ಇಳಿದು ಬರುತ್ತಿರುವಾಗ ಆಪಾದಿತನು ಪಿರ್ಯಾದಿದಾರನ್ನು ಅಡ್ಡಗಟ್ಟಿ  ಪುನಃ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದು, 2 ನೇ ಆರೋಪಿಗೆ  1ನೇ ಆರೋಪಿ ಯು. ರವೀಂದ್ರ ನಾಥ್‌ ಭಟ್‌,ವಾಸ: ಶ್ರೀನಿವಾಸ, ಬೈಲ್‌ ಜಿಡ್ಡ, ಉದ್ಯಾವರ, ಉಡುಪಿ ತಾಲೂಕು ಇವರು ಕೃತ್ಯಕ್ಕೆ ಪ್ರಚೋದನೆ ನೀಡಿದ್ದು, ಇಬ್ಬರೂ ಆಪಾದಿತರು ಸಮಾನ ಉದ್ದೇಶದಿಂದ ಈ ಕೃತ್ಯವನ್ನು ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 58/2023  ಕಲಂ:  341, 504, 506, 109  ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 24-04-2023 06:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080