ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಕಾರ್ಕಳ: ಪಿರ್ಯಾದಿದಾರರಾದ ಲಕ್ಷ್ಮಣ ಕಾಳೆ, ಪ್ರಾಯ 22 ವರ್ಷ, ತಂದೆ: ಫಕೀರಪ್ಪ ಕಾಳೆ, ವಾಸ: ಅಂಬೇಡ್ಕರ್ ಓಣಿ, ಮಾಳವಾಡ ಗ್ರಾಮ, ರೋಣ ತಾಲೂಕು, ಗದಗ ಜಿಲ್ಲೆ ಇವರು 1 ವರ್ಷಗಳಿಂದ ಕಾರ್ಕಳ ಜೋಡುರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ಸಂಬಂಧಿ ಗಿರೀಶ ಛಲವಾದಿ ಪ್ರಾಯ 38 ವರ್ಷ, ಇವರೊಂದಿಗೆ ವಾಸವಾಗಿದ್ದು ದಿನಾಂಕ 24/04/2022 ರಂದು ಬೆಳಿಗ್ಗೆ ಗಿರೀಶನು ಟಾಟಾ ಇಂಡಿಗೋ ಕಾರು ನಂಬ್ರ KA-20-A-5290 ರಲ್ಲಿ ಕೆಲಸದವರಾದ ದುರ್ಗಪ್ಪ, ಕೃಷ್ಣ ಪ್ರಾಯ 22 ವರ್ಷ, ಬಸಪ್ಪ ಇವರನ್ನು ಕರೆದುಕೊಂಡು ಬೆಳಿಗ್ಗೆ ಜೋಡುರಸ್ತೆಯಿಂದ ಆತನೇ ಕಾರು ಚಲಾಯಿಸಿಕೊಂಡು ಬಜಗೋಳಿಗೆ ಬಾವಿ ಕೆಲಸಕ್ಕೆ ಹೊರಟಿದ್ದು ಪಿರ್ಯಾದಿದಾರರು ಗಿರೀಶನ ಮೋಟಾರ್ ಸೈಕಲ್‌ನಲ್ಲಿ ಬಜಗೋಳಿಗೆ ಹೊರಟಿದ್ದು ಗಿರೀಶನು ಕಾರನ್ನು ಪುಲ್ಕೇರಿ ಬೈಪಾಸ್ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಜಗೋಳಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಬೆಳಿಗ್ಗೆ 07-30 ಗಂಟೆಗೆ ಕರಿಯಕಲ್ಲು ರುದ್ರಭೂಮಿಯ ಹತ್ತಿರ ತಲುಪುವಾಗ ಕಾರಿನ ಸೈಲೆನ್ಸರ್‌ನಿಂದ ಜಾಸ್ತಿ ಹೊಗೆ ಬರುತ್ತಿದ್ದುದನ್ನು ಗಮನಿಸಿ ಕಾರನ್ನು ನಿಲ್ಲಿಸಿದ್ದು ಪಿರ್ಯಾದಿದಾರರು ಸಹಾ ಮೋಟಾರ್ ಸೈಕಲ್ ನಿಲ್ಲಿಸಿ ಚಾಲಕ ಗಿರೀಶನು ಕಾರಿನ ಬಳಿ ನಿಂತುಕೊಂಡಿದ್ದನು ಮತ್ತು ಕಾರಿನಲ್ಲಿದ್ದ ಕೃಷ್ಣನು ಕಾರಿನಿಂದ ಇಳಿದು ಕಾರಿನ ಮುಂಭಾಗದಲ್ಲಿ ನಿಂತುಕೊಂಡಿದ್ದನು. ಅದೇ ಸಮಯಕ್ಕೆ ಪುಲ್ಕೇರಿ ಕಡೆಯಿಂದ KA-20-B-5797 ಬಸ್ಸೊಂದನ್ನು ಅದರ ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಿಲ್ಲಿಸಿದ್ದ ಕಾರಿಗೆ ಮತ್ತು ಕಾರಿನ ಚಾಲಕನ ಬಾಗಿಲಿನ ಬಳಿ ನಿಂತುಕೊಂಡಿದ್ದ ಗಿರೀಶನಿಗೆ ಮತ್ತು ಕಾರಿನ ಮುಂದೆ ನಿಂತುಕೊಂಡಿದ್ದ ಕೃಷ್ಣನಿಗೆ ಡಿಕ್ಕಿ ಹೊಡೆದ ಅಪಘಾತದಿಂದ ಗಿರೀಶ ಮತ್ತು ಕೃಷ್ಣ ರಸ್ತೆಗೆ ಬಿದ್ದಿದ್ದು ಅವರನ್ನು ಉಪಚರಿಸಿ ನೋಡಿದಾಗ ಗಿರೀಶನ ತಲೆಗೆ ತೀವ್ರ ರಕ್ತಗಾಯವಾಗಿದ್ದು, ದೇಹದ ಇತರ ಭಾಗಗಳಿಗೆ ಗಾಯಗಳಾಗಿದ್ದವು .ಗಿರೀಶನು ಮಾತನಾಡುತ್ತಿರಲಿಲ್ಲ. ಕೃಷ್ಣನಿಗೆ ಮುಖಕ್ಕೆ ಹಾಗೂ ಬಲಕೈಗೆ ರಕ್ತಗಾಯವಾಗಿತ್ತು ಡಿಕ್ಕಿಹೊಡೆದ ಬಸ್ ನಂಬ್ರ KA-20-B-5797 ಆಗಿದ್ದು ಅದರ ಚಾಲಕನು ಬಸ್ಸಿನಿಂದ ಇಳಿದು ಬಂದಿದ್ದು ಆತನು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಹಕರಿಸಲಿಲ್ಲ. ಅದೇ ದಾರಿಯಾಗಿ ಬಂದ ರಿಕ್ಷಾದಲ್ಲಿ ಪಿರ್ಯಾದಿದಾರರು ಗಾಯಗೊಂಡ ಗಿರೀಶ ಮತ್ತು ಕೃಷ್ಣನನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಬೆಳಿಗ್ಗೆ 07-45 ಗಂಟೆಗೆ ಕರೆದುಕೊಂಡು ಹೋದಾಗ ವಿಷಯ ತಿಳಿದು ಗಿರೀಶನ ಸಂಬಂಧಿಕರಾದ ಪ್ರೇಮ ಮತ್ತು ಮುಡಿಯಪ್ಪರವರು ಬಂದಿದ್ದು ಗಿರೀಶ ಮತ್ತು ಕೃಷ್ಣನನ್ನು ಪರೀಕ್ಷಿಸಿದ ವೈದ್ಯರು ಒಳ ರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಿದ್ದು ಚಿಕಿತ್ಸೆಗೆ ಸ್ಪಂದಿಸದೇ ಗಿರೀಶನು ಬೆಳಿಗ್ಗೆ 08-05 ಗಂಟೆಗೆ ಮೃತಪಟ್ಟಿರುತ್ತಾನೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 59/2022 ಕಲಂ 279, 337, 338, 304(A) IPC ಮತ್ತು 134(A) IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಮಾಸೆಬೈಲು: ಪಿರ್ಯಾದಿದಾರರಾದ ಕೇಶವ ಕೆ (29), ತಂದೆ: ಕೃಷ್ಣ ಆಚಾರ್ಯ, ವಾಸ: ಚೂರಿಕಟ್ಟೆ ತಾಳಗುಪ್ಪ ಪೊಸ್ಟ ಸಾಗರ ತಾಲೂಕು ಶಿವಮೊಗ್ಗ ಜಿಲ್ಲೆ ಇವರು ದಿನಾಂಕ 23/04/2022 ರಂದು ಸಾಗರ - ಮಂಗಳೂರು ಮಾರ್ಗವಾಗಿ ಮಾಸ್ತಿಕಟ್ಟೆ ಕಡೆಯಿಂದ ಹೊಸಂಗಡಿ ಕಡೆಗೆ KA-15- A- 1764 ನೇ ನಂಬ್ರದ ಬಸ್ಸಿನಲ್ಲಿ ಚಾಲಕನಾಗಿ ಬರುತ್ತಿರುವಾಗ ದಿನಾಂಕ 24/04/2022 ರಂದು ಬೆಳಿಗ್ಗೆ 00:50 ಗಂಟೆಗೆ ಹೊಸಂಗಡಿ ಗ್ರಾಮದ ಹುಲಿಕಲ್ ಘಾಟಿಯ ತಿರುವಿನಲ್ಲಿ ಎದುರುಗಡೆಯಿಂದ ಅಂದರೆ ಹೊಸಂಗಡಿ ಕಡೆಯಿಂದ ಮಾಸ್ತಿಕಟ್ಟೆ ಕಡೆಗೆ KA-19-D-5216 ನೇ ಅಶೋಕ್ ಲೈಲೆಂಡ್ ಲಾರಿಯೊಂದನ್ನು ಅದರ ಚಾಲಕ ಕಾಂತರಾಜು ಎಂಬುವವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯಲ್ಲಿ ತೀರಾ ಬಲ ಭಾಗಕ್ಕೆ ಬಂದು ಲಾರಿಗೆ ಸೈಡ್ ಕೊಡಲೆಂದು ನಿಲ್ಲಿಸಿದ್ದ ಬಸ್ಸಿನ ಮುಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಎದರು ಗಡೆಯ ಗಾಜು, ಬಲ ಬದಿಯ ಹೆಡ್ ಲೈಟ್ ಜಖಂ ಗೊಂಡಿರುತ್ತದೆ ಹಾಗೂ ಬಲ ಬದಿಯ ಶೇಪ್ ಪೂರಾ ಜಖಂ ಗೊಂಡಿರುವುದಾಗಿದೆ.ಈ ಅಪಘಾತದಿಂದ ಯಾರಿಗೂ ಯಾವುದೇ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 08/ 2022 ಕಲಂ: 279 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 24-04-2022 07:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080