ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿ ಶಿಲ್ಪಾ ಎಂ ಶೆಟ್ಟಿ ಇವರ ಅಣ್ಣ ಅವಿನಾಶ್ (46) ಎಂಬವರು ದಿನಾಂಕ 23/04/2021 ರಂದು ತನ್ನ ಬಾಬ್ತ ಆಟೋ ರಿಕ್ಷಾ ನಂಬ್ರ KA20C-3765 ನೇದರಲ್ಲಿ ಜಲಂಜಾರು ದೇವಸ್ಥಾನದ ಬಳಿಯಿಂದ  ಹಾಲು ತರಲು ಹೋಗಲು  ರಿಕ್ಷಾವನ್ನು ಮನೆಯಿಂದ ಮಜೂರು ಕಡೆಯಿಂದ ಜಲಂಜಾರು ದೇವಸ್ಥಾನ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಬೆಳಿಗ್ಗೆ 06:45 ಗಂಟೆಯ ಸಮಯ ಪಿರ್ಯಾದಿದಾರರ ಅಣ್ಣನ ರಿಕ್ಷಾಕ್ಕೆ ನಾಯಿ ಅಡ್ಡ ಬಂದಿದ್ದು, ಪರಿಣಾಮ ಪಿರ್ಯಾದಿದಾರರ ಅಣ್ಣ ಒಮ್ಮೆಲೇ ಬ್ರೇಕ್ ಹಾಕಿದ ಕಾರಣ ಆಟೋ ರಿಕ್ಷಾ ಹತೋಟಿ ತಪ್ಪಿ ಮಗುಚಿ ಬಿದ್ದ ಕಾರಣ ಪಿರ್ಯಾದಿದಾರರ ಅಣ್ಣ ಅವಿನಾಶ್ ಎಂಬವರು ನೆಲಕ್ಕೆ ಬಿದ್ದು ಅವರ ತಲೆಗೆ, ಕಿವಿಗೆ, ಬೆನ್ನಿಗೆ ತೀವ್ರ ತರವಾದ ರಕ್ತಗಾಯವಾಗಿದ್ದು ಅಲ್ಲದೇ ದೇಹದ ಇತರ ಕಡೆ ತರಚಿದ ಗಾಯವಾಗಿರುತ್ತದೆ. ಅವಿನಾಶ್ ರವರು ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು  ಈ ಅಪಘಾತಕ್ಕೆ ಕೆ.ಎ 20 ಸಿ-3765 ನೇ ಆಟೋ ರಿಕ್ಷಾ ಚಾಲಕ ಅವಿನಾಶ್ ಶೆಟ್ಟಿ ರವರ ಅತೀ ವೇಗ ಹಾಗೂ ಅಜಾಗರೂಕತೆಯೇ ಕಾರಣ ವಾಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 56/2021  ಕಲಂ 279 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾಧಿ ಸುರೇಶ್‌ ಶೆಟ್ಟಿಗಾರ್‌ ಇವರು ದಿನಾಂಕ: 23.04.2021 ರಂದು ಸಂಜೆ ಅಗತ್ಯ ಕೆಲಸದ ನಿಮಿತ್ತ ಸಾಸ್ತಾನಕ್ಕೆ ಹೋದಾಗ ಅವರ ಸ್ನೇಹಿತರಾದ ಗಣೇಶ್‌ ಪೂಜಾರಿಯು ಸಿಕ್ಕಿದ್ದು, ನಂತರ ಅವರನ್ನು ಮನೆಗೆ ಬಿಡಲು ಪಿರ್ಯಾಧಿದಾರರ ಬಾಬ್ತು KA 20 EU 4438 ನೇ Star City ಮೋಟಾರು ಸೈಕಲ್‌ನಲ್ಲಿ ಗಣೇಶ್‌ ಪೂಜಾರಿಯನ್ನು ಹಿಂಬದಿ ಸವಾರನಾಗಿ ಕುಳ್ಳಿರಿಸಿಕೊಂಡು ಪಾಂಡೇಶ್ವರಕ್ಕೆ ಹೋಗುವಾಗ ಸಮಯ 20:00 ಗಂಟೆಗೆ ಪಾಂಡೇಶ್ವರ - ಬೆಣ್ಣೆಕುದ್ರು ಕಾಂಕ್ರೀಟ್‌ ರಸ್ತೆಯ ತೋಟದ ಮನೆ ಹೋಗುವ ರಸ್ತೆಯ ಬಳಿ ಇರುವ ತಿರುವಿನ ರಸ್ತೆಯಲ್ಲಿ ಎದುರಿನಿಂದ ಅಂದರೆ ಬೆಣ್ಣೆಕುದ್ರು ಕಡೆಯಿಂದ KA 20 MC 3611 ನಂಬ್ರದ Maruthi IGNIS ಕಾರನ್ನು ಅದರ ಚಾಲಕ ಸುಗಮ್‌ ಶೆಟ್ಟಿ ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಕ್ರಮದಂತೆ ಬರುತ್ತಿದ್ದ ಪಿರ್ಯಾದಿದಾರರ ಬಾಬ್ತು ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್‌ ಸಮೇತ ಸವಾರರಿಬ್ಬರು ರಸ್ತೆಯ ಬದಿಗೆ ಇರುವ ಚರಂಡಿಗೆ ಬಿದ್ದಿದ್ದು ಇದರಿಂದ ಪಿರ್ಯಾದಿದಾರರ ಬಲ ಕಾಲಿನ ಸೊಂಟದ ಬಳಿ ಇರುವ ಕೀಲು ಜಾರಿ ಹೋಗಿದ್ದು, ಮತ್ತು ಬಲ ಕಾಲಿನ ಮಣಿ ಗಂಟಿನ ಬಳಿ ರಕ್ತ ಗಾಯವಾಗಿರುತ್ತದೆ. ಹಾಗೂ ಹಿಂಬದಿ ಸವಾರ ಗಣೇಶ್‌ ಪೂಜಾರಿಗೆ ಬಲಕಾಲಿನ ಪಾದದ ಮೇಲ್ಭಾಗದಲ್ಲಿ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 69/2021  ಕಲಂ: 279,337, 338  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ದಿನಾಂಕ: 22/04/2021 ರಂದು ಪಿರ್ಯಾದಿ ಶ್ರೀಮತಿ ಸಿಂಧು ಇವರು ಹಾಗೂ ಪಿರ್ಯಾದಿದಾರ ಸಹೋದರ ದೇವಿಪ್ರಸಾದ್ ರೊಂದಿಗೆ ಉದ್ಯಾವರದ ಪಂಜುರ್ಲಿ ದೇವಸ್ಥಾನಕ್ಕೆ ಹೋದವರು ವಾಪಾಸ್ಸು ಬೈಕಿನಲ್ಲಿ ಬರುತ್ತಿರುವಾಗ ಸುಮಾರು 06:00 ಗಂಟೆ ಹೊತ್ತಿಗೆ ಅಂಬಲಪಾಡಿಯ ಫಾಸ್ಟ್ ಫುಡ್ ಹತ್ತಿರ ಮುನ್ಸಿಪಾಲಿಟಿಯ ವಾಹನವೊಂದು ಬರುತ್ತಿದ್ದು ವಾಹನದ ಡ್ರೈವರ್ ಪಿರ್ಯಾದಿದಾರರ ಬೈಕಿಗೆ ಅಡ್ಡ ತಂದು ನಿಲ್ಲಿಸಿದ್ದು ಅದಕ್ಕೆ ಪಿರ್ಯಾದಿದಾರರ ಸಹೋದರ ಡ್ರೈವರನ್ನುಉದ್ದೇಶಿಸಿ ನಿನಗೆ ಕಣ್ಣು ಕಾಣುದಿಲ್ಲವಾ ಗಾಡಿಯನ್ನು ಯಾಕೆ ಅಡ್ಡ ತಂದೆ ಎಂದು ಕೇಳಿದಕ್ಕೆ ಆಪಾದಿತ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು , ಕೆನ್ನೆಗೆ ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿದ್ದಲ್ಲದೇ ಅಲ್ಲೇ ಇದ್ದ ಅಕ್ಕನ ಮಗಳಿಗೂ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ ಎಂಬಿತ್ಯಾದಿಯಾಗಿರುತ್ತದೆ. ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 20/2021ಕಲಂ: 354, 323, 341, 504, 506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-04-2021 10:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080