ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಉಡುಪಿ: ಪಿರ್ಯಾಧಿ   ಸಚಿನ್ ಎಸ್ ಪೂಜಾರಿ ಇವರು ದಿನಾಂಕ: 23/04/2021 ರಂದು ತನ್ನ ಬಾಬ್ತು ಕಾರು ನಂಬ್ರ KA 20 M 2922 ನೇ ಕಾರಿನಲ್ಲಿ ಅಂಬಲಪಾಡಿ ಕಡೆಯಿಂದ ಉದ್ಯಾವರದ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 4:00 ಗಂಟೆಗೆ 76 ಬಡಗುಬೆಟ್ಟು ಗ್ರಾಮದ ಕಿನ್ನಿಮುಲ್ಕಿಯ ಆಟೋಲ್ಯಾಂಡ್ ಎದುರು ರಾ.ಹೆ-66 ರಲ್ಲಿ ರಸ್ತೆ ವಿಭಾಜಕದ ಬಳಿ RJ 19 CH 7286 ನೇ ಕಾರಿನ ಚಾಲಕ ನರೇನ್ ಸಿಂಗ್ ಶೌಕೀನ್ ಎಂಬಾತ ತನ್ನ ಕಾರನ್ನು ಅಂಬಲಪಾಡಿ ಕಡೆಯಿಂದ ಉದ್ಯಾವರದ ಕಡೆಗೆ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು  ಯಾವುದೇ ಸೂಚನೆ ನೀಡದೇ ಒಮ್ಮೇಲೆ ಬಲಕ್ಕೆ ತಿರುಗಿಸಿದ ಪರಿಣಾಮ ಪಿರ್ಯಾದಿದಾರರ ಕಾರಿನ ಎದುರುಭಾಗಕ್ಕೆ ಡಿಕ್ಕಿ ಹೊಡೆದು ಪಿರ್ಯಾದಿದಾರರ ಕಾರಿನ ಎದುರು ಭಾಗ ಸಂಪೂರ್ಣ ಜಖಂಗೊಂಡಿದ್ದು, ಪಿರ್ಯಾದಿದಾರರಿಗೆ ಎದೆಗೆ ಮತ್ತು ಕುತ್ತಿಗೆಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 32/2021  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಲ್ಪೆ: ದಿನಾಂಕ : 24-04-2021 ರಂದು ಪಿರ್ಯಾದಿ ನಿತಿನ್ ಇವರ ಮಾವನಾದ ಶಶಿಧರ ಪೂಜಾರಿ  (52 ವರ್ಷ)ರವರು ಅವರ ಬಾಬ್ತು  ಕೆಎ 20-  ಇಪಿ -8689 ನೇ  ಟಿಎವಿಎಸ್ ಲೂನಾದಲ್ಲಿ  ಅವರ ಮನೆಯಾದ  ಮಜ್ಜಿಗೆ ಪಾದೆ ಕಿದಿಯೂರಿನಿಂದ ಅಂಬಲಪಾಡಿ ಗೆ ಹೋಗುತ್ತಿರುವಾಗ ಮಜ್ಜಗೆಪಾದೆ ಸೇತುವೆ ಬಳಿ ತಲುಪುವಾಗ  ಸಮಯ ಸುಮಾರು ಬೆಳಿಗ್ಗೆ 07:00 ಗಂಟೆಗೆ ಅಂಬಲಪಾಡಿ ಕಡೆಯಿಂದ  ಕಿದಿಯೂರು ಕಡೆಗೆ  ಕೆಎ 20 Z 0211 ನೇ ಕಾರು ಚಾಲಕನು ನಿರ್ಲಕ್ಷ್ಯತನ ಹಾಗೂ ಅಜಾಕರುಕತೆಯಿಂದ ಚಲಾಯಿಸಿಕೊಂಡು  ಒಂದು ಮೋಟಾರು ಸೈಕಲ್  ನ್ನು ಓವರ್ ಟೇಕ್ ಮಾಡುತ್ತಾ ರಸ್ತೆಯ  ತೀರ ಬಲಬದಿಗೆ ಬಂದು  ಶಶಿಧರ  ರವರ ಲೂನ ಕ್ಕೆ ಢಿಕ್ಕಿ ಹೊಡೆದ ಪರಿಣಾಮ  ಲೂನಾ ಸಮೇತ ರಸ್ತೆಗೆ ಬಿದ್ದು ಅವರ ಬಲಬದಿಯ ಕೆನ್ನೆಯ ಮೇಲೆ  ತಲೆಯಲ್ಲಿ ತೀವ್ರ ರಕ್ತ ಗಾಯ ವಾಗಿದ್ದು ಅಲ್ಲದೆ ಮೂಗಿನಲ್ಲಿ  ರಕ್ತ ಬರುತ್ತಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು  ಚಿಕಿತ್ಸೆಯ ಬಗ್ಗೆ  ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಿಸಿದ್ದು  ಆಸ್ಪತ್ರೆಯಲ್ಲಿ  ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ 09:00 ಗಂಟೆಗೆ  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 36/2021  ಕಲಂ  279, 304(A)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಮಲ್ಪೆ: ಪ್ರಸನ್ನ ಡಿ ಅಲ್ಮೇಡ (26 ವರ್ಷ) ಶ್ಯಾಮಿಲಿ ಗ್ಯಾಸ್ ಗೋಡೌನ್ ರಸ್ತೆ,   ಕೆಳಾರ್ಕಳಬೆಟ್ಟು ಈತನು ಸುಮಾರು 1 ತಿಂಗಳ ಹಿಂದೆ ಮಾನಸಿಕ ಖಿನ್ನತೆಗೆ ಒಳ ಪಟ್ಟಂತೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು, ಅಣ್ಣನು ದೆಹಲಿಯಲ್ಲಿ ಉದ್ಯೋಗದಲ್ಲಿದ್ದು ಅಲ್ಲಿ ಕರೋನ ಖಾಯಿಲೆಯು ಹೆಚ್ಚುತ್ತಿರುವ ಬಗ್ಗೆ ಮಾನಸಿಕವಾಗಿ  ತುಂಬಾ ಚಿಂತಿತರಾಗಿದ್ದು, ದಿನಾಂಕ 23-04-21 ರಂದು ರಾತ್ರಿ 20:00 ಗಂಟೆಯಿಂದ ದಿನಾಂಕ 24-04-21 ರಂದು ಬೆಳಿಗ್ಗೆ 1:30 ಗಂಟೆಯ ಮಧ್ಯಾವಧಿಯಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 22/2021 ಕಲಂ: 174 ಸಿ.ಅರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಲ್ಪೆ: ಪಿರ್ಯಾದಿ ನಾಗರಾಜ ಇವರು  ದಿನಾಂಕ 22-04-2021 ರಂದು  ಕೆಲಸಕ್ಕಾಗಿ ತನ್ನ ಜೊತೆಯಲ್ಲಿ  ಹರಿಕುಮಾರ (50 ವರ್ಷ), ಮದ್ಯಪ್ರದೇಶ ಇತನನ್ನು ಕರೆದುಕೊಂಡು  ಸ್ವರ್ಣ ಜ್ಯುವೆಲ್ಲರ್ ಹತ್ತಿರ  ಕೆಳಾರ್ಕಳಬೆಟ್ಟು ತೆಂಕನಿಡಿಯೂರು ಗೆ ಹೋಗಿದ್ದು  ,ಅಲ್ಲಿ ಮನೆಯಲ್ಲಿ ಪಾಯ ತೆಗೆಯುವಾಗ  ಮದ್ಯಾಹ್ನ   ಸಮಯ 12:00 ಗಂಟೆಗೆ  ಹರಿಕುಮಾರ್  ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದು , ಚಿಕಿತ್ಸೆಯ ಬಗ್ಗೆ  ಪಿರ್ಯಾದಿದಾರರು ಮತ್ತು ಇತರ ಕೆಲಸಗಾರರು  ಒಂದು ಕಾರಿನಲ್ಲಿ  ಗೊರಟ್ಟಿ ಆಸ್ಪತ್ರೆ ಸಂತೆಕಟ್ಟೆ ಗೆ ಕರೆದುಕೊಂಡು ಹೋಗಿದ್ದು , ಅಲ್ಲಿ  ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಉಡುಪಿ ಆದರ್ಶ ಆಸ್ಪತ್ರೆಗೆ  ಕರೆದುಕೊಂಡು ಹೋಗುವಂತೆ ತಿಳಿಸಿದ್ದು   ಉಡುಪಿ ಆದರ್ಶ ಆಸ್ಪತ್ರೆಗೆ  ಕರೆದುಕೊಂಡು ಹೋದಾಗ  ವೈದ್ಯರು ಮದ್ಯಾಹ್ನ1 ಗಂಟೆಗೆ  ಪರೀಕ್ಷಿಸಿ  ಈಗಾಗಲೇ   ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 21/2021 ಕಲಂ: 174 ಸಿ.ಅರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿ ಶ್ರೀಮತಿ ಪವಿತ್ರಾ ಇವರ ತಂದೆ ಪ್ರಭಾಕರ ಪೂಜಾರಿ (50) ಇವರು ಕೂಲಿ ಕೆಲಸ ಮಾಡಿಕೊಂಡಿದ್ದು ಅವರ ಹೆಂಡತಿ 04 ವರ್ಷಗಳ ಹಿಂದೆ ಮೃತಪಟ್ಟಿದ್ದು ಅವರು ಅದೇ ಕಾರಣದಿಂದ ಮನನೊಂದು ದಿನಾಂಕ: 22/04/2021 ರಂದು ಮಧ್ಯಾಹ್ನ 2:00 ಗಂಟೆಗೆ ಮನೆಯಿಂದ ಹೋದವರು ಕಾರ್ಕಳ ತಾಲೂಕು ಬೋಳ ಗ್ರಾಮದ ಹಾಡಿಯಲ್ಲಿ ತನ್ನ ಸಾವಿಗೇ ತಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಶರಾಬಿನೊಂದಿಗೆ ಯಾವುದೇ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 13/2021 ಕಲಂ: 174 ಸಿ.ಅರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 24-04-2021 06:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ