ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಸುಧಾಕರ (53) ತಂದೆ: ದಿ. ಕಿಟ್ಟು, ವಾಸ: ಶುಭಾಷಯ ಮನೆ, ಪಲಿಮಾರು ಅಂಚೆ ಮತ್ತು ಗ್ರಾಮ, ಕಾಪು ತಾಲೂಕು, ಉಡುಪಿ ಇವರು ಕಾಪು ತಾಲೂಕು ಪಲಿಮಾರು ಗ್ರಾಮದಲ್ಲಿ ರಿಕ್ಷಾ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಪಲಿಮಾರು ಪರಿಸರದಲ್ಲಿ ಕಳೆದ 2-3 ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡು, ಬಂದ ಸ್ವಲ್ಪ ಹಣದಿಂದ ಮದ್ಯಪಾನ ಮಾಡಿಕೊಂಡು ತಿರುಗಾಡಿಕೊಂಡು, ಎಲ್ಲೆಂದರಲ್ಲಿ ಮಲಗುತ್ತಿದ್ದ ಕಿನ್ನಿಗೋಳಿಯ ಬೊಗ್ಗು(80) ಎಂಬುವರು ದಿನಾಂಕ 20/02/2023 ರ ರಾತ್ರಿ 21:00 ಗಂಟೆಯಿಂದ ದಿನಾಂಕ 21/02/2023 ರಂದು ಬೆಳಿಗ್ಗೆ 08:30 ಗಂಟೆಯ ಮಧ್ಯಾವಧಿಯಲ್ಲಿ ಪಲಿಮಾರು ಪೇಟೆಯಲ್ಲಿ ರಸ್ತೆ ಮೇಲೆ ಬಿದ್ದು ತಲೆ, ಮುಖಕ್ಕೆ ಗಾಯಗೊಂಡು ಬಿದ್ದಿದ್ದು, ಅವರನ್ನು ಸುಧಾಕರ ಇವರು ಮತ್ತು ಇತರರು 108 ಅಂಬ್ಯುಲೆನ್ಸ್ ನಲ್ಲಿ ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಬೊಗ್ಗುರವರನ್ನು ದಿನಾಂಕ 22/02/2023 ರಂದು ಮಂಗಳೂರಿನ ವೆನ್‌‌ಲಾಕ್‌ಆಸ್ಪತ್ರೆಗೆ ಸಾಗಿಸಿ ಪಡೆಯುತ್ತಿದ್ದು, ಬೊಗ್ಗುರವರು ದಿನಾಂಕ 22/03/2023 ರಂದು ಚಿಕಿತ್ಸೆ ಫಲಕಾರಿಯಾಗದೇ ವೆನ್‌ಲಾಕ್‌ಆಸ್ಪತ್ರೆಯಲ್ಲಿಯೇ ಮೃತಪಟ್ಟಿರುತ್ತಾರೆ. ಸದ್ರಿ ಬೊಗ್ಗುರವರು ಕುಡಿತದ ಅಮಲಿನಲ್ಲಿ ರಸ್ತೆ ಮೇಲೆ ಬಿದ್ದು ಉಂಟಾದ ಗಾಯದಿಂದ ಚೇತರಿಸಿಕೊಳ್ಳದೇ, ಅದೇ ಕಾರಣದಿಂದ ಮೃತಪಟ್ಟಿದ್ದು, ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ. ಮೃತರ ಹೆಂಡತಿ, ಮಕ್ಕಳು ಮತ್ತು ಸಂಬಂಧಿಕರು ಯಾರೂ ಮನೆಗೆ ಸೇರಿಸಿಕೊಳ್ಳದೇ ಇದ್ದು, ಈಗ ದೂರು ನೀಡಲೂ ಸಹ ಮುಂದೆ ಬಂದಿರುವುದಿಲ್ಲವಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯುಡಿಆರ್‌ ಕ್ರಮಾಂಕ 07/2023  ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಜಯಕರ.ಎ,  ಎಎಸ್ಐ , ಉಡುಪಿ  ನಗರ ಪೊಲೀಸ್ ಠಾಣೆ ಇವರು ದಿನಾಂಕ  22/03/2023 ರಂದು ಠಾಣಾ ಸರಹದ್ದಿನಲ್ಲಿ ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿದ್ದು, ದಿನಾಂಕ 23/03/2023 ರಂದು ಬೆಳಗಿನ ಜಾವ 00:15 ಗಂಟೆಗೆ ನಿಟ್ಟೂರು ಪರಿಸರದಲ್ಲಿ ಅತೀ ಕರ್ಕಶವಾದ ಡಿ.ಜೆ ಸೌಂಡ್‌ ಹಾಕಿ ಉಪದ್ರ ಮಾಡುತ್ತಿರುವ ಬಗ್ಗೆ ಶಬ್ದ ಕೇಳಿ ಬಂದ ಮೇರೆಗೆ, 00:30 ಗಂಟೆಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ಕೊಡಂಕೂರು ಪುತ್ರನ್‌ ಗ್ಯಾಸ್‌ ಗೋಡಾನ್‌ ಬಳಿ ಆಪಾದಿತ ರವಿರಾಜ್‌ (50) ತಂದೆ: ಲಕ್ಷಣ ವಾಸ: ಪುತ್ರನ್ ಗ್ಯಾಸ್ ಗೋಡೌನ್ ಬಳಿ ಕೊಡಂಕೂರು ಪುತ್ತೂರು ಗ್ರಾಮ ಉಡುಪಿ ಎಂಬಾತನ ಮನೆಯ ಅಂಗಳದಲ್ಲಿ ಶಾಮಿಯಾನ ಹಾಕಿ, ಯಾವುದೇ ಪರವಾನಿಗೆ ಅಥವಾ ಪೂರ್ವಾನುಮತಿ ಇಲ್ಲದೆ ಅತೀ ಕರ್ಕಶವಾದ ಡಿ.ಜೆ ಸೌಂಡ್ಸ್‌ ಹಾಕಿಕೊಂಡು 00:30 ಗಂಟೆ ತನಕ ನೃತ್ಯ ಮಾಡುತ್ತಿದ್ದು, ಮುಂದಿನ ಕ್ರಮದ ಬಗ್ಗೆ ಸೌಂಡ್ಸ್‌ ಮಿಕ್ಸರ್‌ ಹಾಗೂ 2 ಸೌಂಡ್‌ ಬಾಕ್ಸ್‌ ಗಳನ್ನು ಮುಂದಿನ ಕ್ರಮದ ಬಗ್ಗೆ ಮಹಜರು ಮುಖೇನ ಸ್ವಾಧೀನಪಡಿಸಿ, ಕಾನೂನು ಕ್ರಮಕ್ಕಾಗಿ ಕಳುಹಿಸಿಕೊಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 40/2023  ಕಲಂ: 109 ಕೆಪಿ ಯಾಕ್ಟ್‌ ರಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 24-03-2023 09:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080