ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕುಂದಾಪುರ: ದಿನಾಂಕ 24/03/2023 ರಂದು ಬೆಳಿಗ್ಗೆ  08:45 ಗಂಟೆಗೆ ಕುಂದಾಪುರ  ತಾಲೂಕಿನ, ವಡೇರಹೋಬಳಿ  ಗ್ರಾಮದ  ನೆಹರೂ ಮೈದಾನದ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ , ಆಪಾದಿತ  ಮಣಿಕಂಠ ರವರು KA-20-AB-4202 ನೇ ಮಿನಿ ಟಿಪ್ಪರ್ ನ್ನು ಕೋಟೇಶ್ವರ ಕಡೆಯಿಂದ ತಲ್ಲೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು , ರಸ್ತೆ ದಾಟುತ್ತಿದ್ದ ಕುಮಾರ್‌ ಎಂಬುವವರಿಗೆ ಡಿಕ್ಕಿ ಹೊಡೆದ ಪರಿಣಾಮ ಕುಮಾರ್‌ ರವರ ತಲೆಗೆ ಹಾಗೂ ಮೈ ಕೈಗೆ ಗಂಭೀರ ಗಾಯ ನೋವಾಗಿ ಪ್ರಜ್ಙೆ  ಕಳೆದುಕೊಂಡವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದು ಕುಮಾರ್‌ ರವರು ಚಿಕಿತ್ಸೆ ಫಲಕಾರಿಯಾಗಧೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 34/2023  ಕಲಂ 279, 304(A)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಜುಗಾರಿ ಪ್ರಕರಣ

 • ಕಾಪು:  ದಿನಾಂಕ 23/03/2023 ರಂದು ದೇವರಾಜ್, ‌ ಪೊಲೀಸ್‌ ನಿರೀಕ್ಷಕರು, ಮಣಿಪಾಲ ಪೊಲೀಸ್‌ ಠಾಣೆ ಇವರು ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿರುವ ಸಮಯ ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯ ಕಾಪು ತಾಲೂಕು, ಉಳಿಯಾರಗೋಳಿ ಗ್ರಾಮದ, ಕಲ್ಯಾ ಪಡುಮನೆ ಎಂಬ ಪರಿಸರದಲ್ಲಿನ ನಿವಾಸಿ ಶ್ರೀಕರ್‌ ಶೆಟ್ಟಿ ಎಂಬುವವರ ವಾಸದ ಮನೆಯಲ್ಲಿ ಸುಮಾರು 25-30 ಜನರು ಸೇರಿಕೊಂಡು ಅಕ್ರಮವಾಗಿ ಅಂದರ್‌ಬಾಹರ್‌ ಎಂಬ ಇಸ್ಪೀಟ್‌ ಜುಗಾರಿ ಆಟ ಆಡುತ್ತಿದ್ದಾರೆ ಎಂಬುದಾಗಿ  ಬಂದ ಮಾಹಿತಿಯಂತೆ  ದಾಳಿ ನಡೆಸುವ ಬಗ್ಗೆ ಕಾಪು ಪೊಲೀಸ್‌ ಠಾಣೆಗೆ ಬಂದು ಠಾಣಾ ಸಿಬ್ಬಂದಿಯವರೊಂದಿಗೆ ಹೊರಟು ತಾಲೂಕು, ಉಳಿಯಾರಗೋಳಿ ಗ್ರಾಮದ, ಕಲ್ಯಾ ಪಡುಮನೆ ಪರಿಸರದಲ್ಲಿನ ನಿವಾಸಿ ಶ್ರೀಕರ್‌ ಶೆಟ್ಟಿ ರವರ ಹಳೆಯ ಮನೆಯ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಹೊರಗಡೆ ನೋಡಲಾಗಿ ಮನೆಯ ಹೊರಗಿನ ಜಾಗದಲ್ಲಿ ಹಲವು ಕಾರುಗಳು, ಮೋಟಾರ್‌ ಸೈಕಲ್‌ ಗಳು, ರಿಕ್ಷಾಗಳು ನಿಂತಿರುವುದು ಕಂಡುಬಂದಿದ್ದು, ಪಿರ್ಯಾದಿದಾರರು ಹಾಗೂ ಸಿಬ್ಬಂದಿಯವರು ಮನೆಯ ಬಳಿ ಹೋಗಿ ತೆರೆದಿದ್ದ ಮನೆಯ ಕಿಟಕಿಯಿಂದ ಇಣುಕಿ ನೋಡಲಾಗಿ ಮನೆಯ ಒಳಗಿನ ಹಾಲ್‌ ನಲ್ಲಿ ಹಲವು ಜನ ಸುತ್ತಲೂ ಕುಳಿತುಕೊಂಡಿದ್ದು, ಅದರಲ್ಲಿ ಓರ್ವ ವ್ಯಕ್ತಿ ಕೈಯಲ್ಲಿ ಇಸ್ಪೀಟ್‌ ಗರಿಗಳನ್ನು ಹಿಡಿದುಕೊಂಡು ಅಂದರ್‌–ಬಾಹರ್‌ ಎಂದು ಕೂಗುತ್ತಾ ಸುತ್ತಲೂ ಕುಳಿತುಕೊಂಡಿದ್ದ ಜನಗಳ ಎದುರಿನಲ್ಲಿ ಇಸ್ಪೀಟ್‌ ಎಲೆಗಳನ್ನು ಹಾಕುತ್ತಿದ್ದು, ಜನಗಳು ಹಣವನ್ನು ಪಣವಾಗಿ  ಕಟ್ಟುತ್ತಿದ್ದರು. ಒಳಗಡೆ ಸೇರಿದ್ದ ಜನರು ಅಕ್ರಮವಾಗಿ ಅಂದರ್‌–ಬಾಹರ್‌ ಎಂಬ ಇಸ್ಪೀಟ್‌ ಆಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ದಾಳಿ ನಡೆಸಿ ಇಸ್ಪೀಟ್‌ ಆಟ ಆಡುತ್ತಿದ್ದ 1) ಸಂಪತ್ ಶೆಟ್ಟಿ,  2)ಸೂರಜ್ ಶೆಟ್ಟಿ, 3)ಹೇಮಚಂದ್ರ, 4)ಪ್ರಶಾಂತ್ ಸುವಣ೯(37), 5)ಬಿಕೆಟ್(34), 6)ಅಕ್ಷಯ್ (30),  7)ಯಂಕಪ್ಪ (46),  8)ಸಿದ್ದೀಕ್ (41), 9)ರಾಜೇಶ್ (41), 10)ಸತೀಶ್(54),11)ರತ್ನಾಕರ್ ಶೆಟ್ಟಿ (34), 12)ನಾರಾಯಣ ಮೆಂಡನ್ (37), 13)ವಿಶ್ವನಾಥ ಬೋಜ ಶೆಟ್ಟಿ (33), 14)ವಿನೋಧ ಶೆಟ್ಟಿ (38), 15)ಅಶ್ರಫ್ (40), 16)ವಿನಯ್ (31) , 17) ಶಶಿಕುಮಾರ (30), 18)ಕಿಶೋರ್ ಕುಮಾರ್ (41), 19) ರಾಧಾಕೃಷ್ಣ(54), 20)ಪ್ರಿತೇಶ(26), 21) ಮಣಿಕಂಠ(32), 22)ಚೇತನ್ (29),  23)ಚರಣ್ ಕುಮಾರ್ (38),  24)ಅಶ್ವತ್ (30), 25)ರಕ್ಷಿತ್ (24), 26) ಪಾಂಡು ಟಿ (32),  27)ಅನ್ವರ್, 28) ಸಂತೋಷ್ (30), 29)ಅರ್ಪಿತ್ (32),  30)ಪ್ರಜ್ವಲ್ (27), 31)ಪ್ರಶಾಂತ್ (23), 32)ಬೋಜರಾಜ್(47) ಇವರನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಇಸ್ಪೀಟ್‌ ಜುಗಾರಿ ಆಟ ಆಡಲು ಅನುಮತಿ ಹಾಗೂ ಮನೆಯ ವ್ಯವಸ್ಥೆಯನ್ನು ಶ್ರೀಕರ ಶೆಟ್ಟಿ ನೀಡಿದ್ದು, ಇಸ್ಪೀಟ್‌ ಜೂಗಾರಿ ಆಟವನ್ನು ತುಳಸಿ & ದಿನೇಶ್‌ ಶೆಟ್ಟಿ ರವರು ಸೇರಿಕೊಂಡು ನಮ್ಮನ್ನೆಲ್ಲಾ ಇಲ್ಲಿಗೆ ಕರೆಯಿಸಿ ಆಡಿಸುತ್ತಿರುವ ಬಗ್ಗೆ ಆರೋಪಿತರುಗಳು ತಿಳಿಸಿರುತ್ತಾರೆ. ಆರೋಪಿತರ ವಶದಲ್ಲಿದ್ದ ಇಸ್ಪೀಟ್‌ ಜುಗಾರಿ ಆಟ ಆಡಲು ಬಳಸಿದ ಸ್ವತ್ತುಗಳಾದ ವಿವಿಧ ಬಣ್ಣಗಳ ಇಸ್ಪೀಟ್‌ ಎಲೆಗಳು – 4 ಸೆಟ್‌,  3,37,400/- ರೂಪಾಯಿ ನಗದು ಹಣ,  37 ಮೊಬೈಲ್‌ ಫೋನ್‌ ಗಳು,  ತರ್ಪಾಲ್‌ -1, 7 ಕಾರುಗಳು, 6 ಮೋಟಾರ್‌ ಸೈಕಲ್‌ ಗಳು, 2 ಆಟೋ ರಿಕ್ಷಾ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 53/2023 ಕಲಂ: 79, 80 ಕೆ. ಪಿ. ಆಕ್ಟ್  ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಉಡುಪಿ: ದಿನಾಂಕ 18/03/2023 ರಂದು ಉಡುಪಿ ತಾಲೂಕು, ಹೆರ್ಗ ಗ್ರಾಮದ ಈಶ್ವರ ನಗರದ ಶಾಂಭವಿ ಪ್ಯಾಲೇಸ್ ಅಪಾರ್ಟ್‌ಮೆಂಟ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ ಹೃದಯ ಶೌರ್ಯ (19) ಎಂಬಾತನನ್ನು ಕೇಶವ ಗೌಡ, ಸಹಾಯಕ ಪೊಲೀಸ್ ಉಪನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ ಇವರು ವಶಕ್ಕೆ ಪಡೆದು ಮೆಡಿಕಲ್ ತಪಾಸಣೆಗೊಳಪಡಿಸಿದ್ದು, ದಿನಾಂಕ 24/03/2023 ರಂದು  ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ಬಂದಿರುವ ತಜ್ಞ ವರದಿಯನ್ನು ಸ್ವೀಕರಿಸಿದ್ದು ವರದಿಯಲ್ಲಿ ಆರೋಪಿ ಹೃದಯ ಶೌರ್ಯ  ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 45/2023 ಕಲಂ: 27 (b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಉಡುಪಿ: ದಿನಾಂಕ 18/03/2023 ರಂದು ಉಡುಪಿ ತಾಲೂಕು, ಹೆರ್ಗ ಗ್ರಾಮದ ಸರಳಬೆಟ್ಟು, ಮಾವಿನಕಟ್ಟೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ ಆರ್.ಆರ್‌ ಶಹರ್ಷ ಶಿವ ರೆಡ್ಡಿ(20) ಎಂಬಾತನನ್ನು ಕೇಶವ ಗೌಡ, ಸಹಾಯಕ ಪೊಲೀಸ್ ಉಪನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ ಇವರು ವಶಕ್ಕೆ ಪಡೆದು ಮೆಡಿಕಲ್ ತಪಾಸಣೆಗೊಳಪಡಿಸಿದ್ದು , ದಿನಾಂಕ 24/03/2023  ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ಬಂದಿರುವ ತಜ್ಞ ವರದಿಯನ್ನು ಸ್ವೀಕರಿಸಿದ್ದು, ವರದಿಯಲ್ಲಿ ಆರೋಪಿ ಆರ್.ಶಹರ್ಷ. ಶಿವ ರೆಡ್ಡಿ ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 46/2023 ಕಲಂ: 27 (b) ಎನ್.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ .ಕೆ ನಝೀಬ್ (66), ತಂದೆ: ಸಿ.ಕೆ ಮಾಹೀನ್, ವಾಸ: ಆಭರಣ ಮಾರುತಿ ಕಾರ್ ಶೋ ರೂಮ್ ಹತ್ತಿರ, ತೆಕ್ಕಟ್ಟೆ ರಾ.ಹೆ 66, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇವರು ಕೆನರಾ ಬ್ಯಾಂಕ್, ನ್ಯೂ ಮಾರ್ಕೇಟ್  ಯಾರ್ಡ ಕುಂದಾಪುರ ಶಾಖೆಯಲ್ಲಿ ಖಾತೆ ಹೊಂದಿದ್ದು, ದಿನಾಂಕ 22/03/2023 ರಂದು  ರಂದು ಪಿರ್ಯಾದಿದಾರರ ಮೊಬೈಲ್ ಗೆ ಯಾರೋ ಅಪರಿಚಿತ ವ್ಯಕ್ತಿ ಕರೆ ಮಾಡಿ 24 ಗಂಟೆಯೊಳಗೆ ಕೆವೈಸಿ ಅಪ್ ಡೇಟ್ ಮಾಡಲು ಸಂದೇಶ ಕಳುಹಿಸಿ ಅದರಲ್ಲಿ ಕಸ್ಟಮರ್ ಕೇರ್ ಗೆ ಕರೆ ಮಾಡಿ ಎಂದು ಮೊಬೈಲ್ ನಂಬ್ರ 9178686237 ವನ್ನು ನಮೂದಿಸಿದ್ದು,  ಸಂದೇಶದಲ್ಲಿರುವ ಮೊಬೈಲ್ ನಂಬ್ರಕ್ಕೆ ಪಿರ್ಯಾದಿದಾರರು ಕರೆ ಮಾಡಿದಾಗ  ಬ್ಯಾಂಕ್‌ ಅಧಿಕಾರಿ ಎಂದು ಹೇಳಿ ನಂಬಿಸಿ, ಆಧಾರ್ ಕಾರ್ಡ, ಎ.ಟಿ.ಎಮ್ ಕಾರ್ಡ ವಿವರ, ಸಿವಿವಿ ನಂಬ್ರ ಹಾಗೂ  ಓಟಿಪಿಯ ವಿವರ ಪಡೆದು  ಪಿರ್ಯಾದಿದಾರರ ಖಾತೆಯಿಂದ ರೂಪಾಯಿ 96,403/- ಹಣ ಆನ್ ಲೈನ್ ಮುಖೇನ ವರ್ಗಾವಣೆ ಮಾಡಿಕೊಂಡಿರುತ್ತಾರೆ.  ಯಾರೋ ಅಪರಿಚಿತ ವ್ಯಕ್ತಿಗಳು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ  ಪಿರ್ಯಾದಿದಾರರನ್ನು ವಂಚಿಸಿ  ಮೋಸದಿಂದ ಹಣ ವರ್ಗಾವಣೆ ಮಾಡಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 47/2023  ಕಲಂ: 66(C), 66(D), ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಗುಲಾಬಿ (55), ಗಂಡ: ಸಂಜೀವ ಮರಕಾಲ , ವಾಸ: ಮಾತೃಶ್ರೀ ನಿಲಯ ಕಾದಾಡಿ ಮನೆ ಹಲುಹಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು ಇವರ ಗಂಡ ಸಂಜೀವ ಮರಕಾಲ (70)ಎಂಬುವವರಿಗೆ  ಸುಮಾರು 5 ವಷಗಳ ಹಿಂದೆ ಹೃದಯದ ಆಪರೇಷನ್‌ ಆಗಿದ್ದು ಆ ಬಳಿಕ ಅವರಿಗೆ ಕೆಲಸ ಮಾಡಲು ಆಗದೆ ಮನೆಯಲ್ಲಿಯೇ ಇದ್ದಿದ್ದರು. ಅವರು ಮಂದವಾಗಿದ್ದು ಅದೇ ಚಿಂತೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 24/03/2023 ದಂದು ಬೆಳಗಿನ ಜಾವ 01:00 ಗಂಟೆಯಿಂದ 02:15 ಗಂಟೆಯ ಮಧ್ಯಾವಧಿಯಲ್ಲಿ  ಮನೆಯ ಅಂಗಳದಲ್ಲಿರುವ  ಜಿ-ಹಲಸಿನ ಮರದ ಕೊಂಬೆಗೆ ನೈಲಾನ್‌ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 21/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹೆಬ್ರಿ: ಪಿರ್ಯಾದಿದಾರರಾದ ಅವಿನಾಶ ಶೆಟ್ಟಿಗಾರ (27), ತಂದೆ: ನಾರಾಯಣ ಶೆಟ್ಟಿಗಾರ, ವಾಸ: ಮುದ್ದೂರು ನಾಲ್ಕೂರು ಗ್ರಾಮ ಬ್ರಹ್ಮಾವರ ತಾಲೂಕು ಇವರ ತಾಯಿ ರತ್ನಾ (58) ರವರು ಮನೆವಾರ್ತೆ ಕೆಲಸ ಮಾಡಿಕೊಂಡಿರುವುದಾಗಿದೆ. ರತ್ನಾ ರವರು ಕಳೆದ ಮೂರು ವರ್ಷಗಳಿಂದ low BP ಖಾಯಿಲೆಯಿಂದ ಬಳಲುತ್ತಿರುವುದಾಗಿದೆ. ದಿನಾಂಕ 23/03/2023 ರಂದು ಮುದ್ದೂರು ನಾಲ್ಕೂರು ಗ್ರಾಮ ಬ್ರಹ್ಮಾವರ ತಾಲೂಕು ಎಂಬಲ್ಲಿರುವ ಮನೆಯಲ್ಲಿ ರಾತ್ರಿ 07:00 ಗಂಟೆಗೆ ಬಚ್ಚಲು ಮನೆಯಿಂದ ಸ್ನಾನ ಮುಗಿಸಿ ಬರುತ್ತಿರುವಾಗ ಅವರಿಗೆ low BP ಉಂಟಾಗಿ ನೆಲದ ಮೇಲೆ ಬಿದ್ದಿರುತ್ತಾರೆ ಪರಿಣಾಮ ಅವರ ಎಡಕೈಗೆ ಅಲ್ಲಿಯೇ ಪಕ್ಕದಲ್ಲಿದ್ದ ಒಲೆಯ ಬೆಂಕಿ ತಾಗಿ ಸುಟ್ಟಿರುವುದಾಗಿದೆ. ಅವರನ್ನು ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ರಾತ್ರಿ ಸಮಯ ಸುಮಾರು 09:20 ಗಂಟೆಗೆ ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 11/2023 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.


   

ಇತ್ತೀಚಿನ ನವೀಕರಣ​ : 24-03-2023 06:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080