ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಬ್ರಹ್ಮಾವರ: ದಿನಾಂಕ 22/03/2022 ರಂದು ಆರೋಪಿ ಮಹಮ್ಮದ್ ಯಾಸೀನ್  ಚಲಾಯಿಸುತ್ತಿದ್ದ  KA-27-M-9116 ನೇ ನಂಬ್ರದ ಮಾರುತಿ ರಿಟ್ಜ್ ಕಾರಿನಲ್ಲಿ ಪಿರ್ಯಾದಿದಾರರಾದ ಸುಲೇಮಾನ್ ಲಕ್ಷ್ಮೀಶ್ವರ(23),  ತಂದೆ: ಖಾಜಾವೋದ್ದೀನ್, ವಾಸ: ಹುಜರ, ಸವಣೂರು ನಗರ, ಹಾವೇರಿ ಜಿಲ್ಲೆ ಹಾಗೂ ಶಾಯಬ್ ಜಾನ್ ಅಕ್ತರ್, ಸಾದಿಕ್ ವಾಯ್ ಮಂಕಾಂದರ್ ರವರು ಸಹ ಪ್ರಯಾಣಿಕರಾಗಿ ಕುಳಿತುಕೊಂಡು ಕೋಟೇಶ್ವರ ಕಡೆಯಿಂದ ಉಡುಪಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗುತ್ತಾ ಮಧ್ಯಾಹ್ನ 4:25 ಗಂಟೆಗೆ ಉಪ್ಪೂರು ಗ್ರಾಮದ  ಕೆ.ಜಿ ರೋಡ್ ಕ್ರಾಸ್ ಬಳಿ ಸ್ವಲ್ಪ ತಿರುವು ರಸ್ತೆಯಲ್ಲಿ ಆರೋಪಿಯು ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಆತನ ಹತೋಟಿ ತಪ್ಪಿ ರಸ್ತೆಯ ಎಡಬದಿಯ ಡಿವೈಡರ್ ಗೆ ಡಿಕ್ಕಿಯಾಗಿ ಅಲ್ಲಿಂದ ಹಾರಿ ಮುಂದಕ್ಕೆ ಹೋಗಿ ರಸ್ತೆಯ ಎಡಬದಿ ಆಳದಲ್ಲಿರುವ ಕೆ. ಜಿ ರೋಡ್ ಜಂಕ್ಷನ್ ರಸ್ತೆಯಲ್ಲಿ ಕಾರು ಪಲ್ಟಿಯಾಗಿ ಬಿದ್ದಿರುವುದಾಗಿದೆ. ಈ ಅಪಘಾತದ ಪರಿಣಾಮ ಪಿರ್ಯಾದಿದಾರರ ಎಡ ಕಿವಿಗೆ, ಹಣೆಗೆ ತರಚಿದ ಗಾಯ, ತಲೆಯ ಎಡಭಾಗ ತರಚಿದ ಗಾಯವಾಗಿರುತ್ತದೆ. ಕಾರಿನ ಹಿಂದಿನ ಸೀಟಿನಲ್ಲಿ ಪಿರ್ಯಾದಿದಾರರ ಪಕ್ಕದಲ್ಲಿ ಕುಳಿತಿದ್ದ  ಸಾದಿಕ್ ವಾಯ್ ಮಂಕಾಂದರ್ (44) ರವರ ಎಡಕೈಗೆ ಮೂಳೆ ಮುರಿತದ ತೀವ್ರ ಒಳ ಜಖಂ, ಹಣೆಗೆ, ಮುಖಕ್ಕೆ ಅಲ್ಲಲ್ಲಿ ತರಚಿದ ಗಾಯವಾಗಿರುತ್ತದೆ. ಆರೋಪಿಯ ಎಡ ಬದಿಯಲ್ಲಿ ಎದುರು ಸೀಟಿನಲ್ಲಿ ಕುಳಿತಿದ್ದ  ಶಾಯಬ್ ಜಾನ್ ಅಕ್ತರ್ (28) ರವರ ಬಲಕೈ, ಮೊಣಗಂಟಿಗೆ ತರಚಿದ ಗಾಯ, ಸೊಂಟಕ್ಕೆ ಗುದ್ದಿದ ಒಳನೋವು ಆಗಿರುತ್ತದೆ ಹಾಗೂ ಆರೋಪಿಗೂ ಕೂಡ ಎದೆಗೆ ಗುದ್ದಿದ ಒಳನೋವು, ಎಡಕೆನ್ನೆಗೆ ತರಚಿದ ಗಾಯವಾಗಿರುತ್ತದೆ. ಗಾಯಗೊಂಡ ನಾಲ್ಕು ಜನರನ್ನು ಚಿಕಿತ್ಸೆ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿರುವುದಾಗಿದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 47/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಪಡುಬಿದ್ರಿ: ಪಿರ್ಯಾದಿದಾರರಾದ ಮಹಮ್ಮದ್ ಇಲಿಯಾಸ್ ಪಡುಬಿದ್ರಿ(42), ತಂದೆ: ದಿ. ಕೆ ಅಹಮ್ಮದ್, ವಾಸ: #1-5 ಎಫ್, ಕಂಚಿನಡ್ಕ, ಪಡುಬಿದ್ರಿ ಅಂಚೆ, ನಡ್ಸಾಲು ಗ್ರಾಮ, ಕಾಪು ತಾಲೂಕು ಇವರ ಅಣ್ಣ ಅಬ್ದುಲ್ ಬಶೀರ್(47) ಎಂಬುವವರು ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಯ ಬಾಲಗಣಪತಿ ದೇವಸ್ಥಾನದ ರಸ್ತೆಯಲ್ಲಿರುವ ಗಿರಿ ಚಿಕನ್ ಸ್ಟಾಲ್ ಹೆಸರಿನ ಕೋಳಿ ಅಂಗಡಿಯಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ಕೆಲಸ ಮಾಡಿಕೊಂಡಿದ್ದು, ದಿನಾಂಕ 23/03/2022 ರಂದು ಗಿರಿ ಚಿಕನ್ ಸ್ಟಾಲ್ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಸಮಯ 13:30 ಗಂಟೆಯ ವೇಳೆಗೆ ಅಲ್ಲಿ ಕೆಲಸ ಮಾಡುತ್ತಿದ್ದ ಪಿರ್ಯಾದಿದಾರರ ಅಣ್ಣ ಅಬ್ದುಲ್  ಬಶೀರ್ ಮತ್ತು ಇನ್ನೋರ್ವ ಮಹಮ್ಮದ್  ಖುರ್ಷಿದ್ ಶೇಕ್ ಎಂಬುವವರಿಗೆ ವಿದ್ಯುತ್ ಶಾಕ್ ಉಂಟಾಗಿ ಅಸ್ವಸ್ಥಗೊಂಡು ಬಿದ್ದಿದ್ದು, ನಂತರ ಅವರನ್ನು ಚಿಕಿತ್ಸೆಯ ಬಗ್ಗೆ ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಗೆ 14:30 ಗಂಟೆಗೆ ಕರೆದುಕೊಂಡು ಹೋದಾಗ,  ಮಹಮ್ಮದ್ ಖುರ್ಷಿದ್ ಶೇಕ್ ನಿಗೆ ಅಲ್ಲಿಯೇ ಚಿಕಿತ್ಸೆ ನೀಡಿ, ಅಬ್ದುಲ್ ಬಶೀರ್‌‌ನನ್ನು ಅಲ್ಲಿನ ವೈದ್ಯರ ಸಲಹೆಯಂತೆ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಅಬ್ದುಲ್  ಬಶೀರ್‌ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಅವಘಡಕ್ಕೆ ಸದ್ರಿ ಕೋಳಿ ಅಂಗಡಿಯ ಮಾಲಕ ಪ್ರವೀಣ್ ಶೆಟ್ಟಿ ರವರು ಯಾವುದೇ ಮುನ್ನೆಚ್ಚರಿಕೆ ಕ್ರಮ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಮತ್ತು ಕೆಲಸಗಾರರು ವಿದ್ಯುತ್ ಸಂಪರ್ಕಕ್ಕೆ ಬಾರದಂತೆ ಸೂಕ್ತ ಸಲಕರಣೆಗಳನ್ನು ಒದಗಿಸದೇ ನಿರ್ಲಕ್ಷತನ ಮಾಡಿರುವುದೇ ಅವಘಡಕ್ಕೆ ಕಾರಣವಾಗಿರುವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 32/2022 ಕಲಂ: 304(A),  338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಗಂಗೊಳ್ಳಿ: ಪಿರ್ಯಾದಿದಾರರಾದ ರಾಜೇಶ ಪೂಜಾರಿ (33), ತಂದೆ: ನರಸಿಂಹ ಪೂಜಾರಿ ವಾಸ: ಕನಕ, ಚುಂಗಿಗುಡ್ಡೆ, ನಾಡ, ನಾಡ ಗ್ರಾಮ, ಬೈಂದೂರು ತಾಲೂಕು ಇವರು ಮೋಟಾರ್ ಸೈಕಲ್ ನಲ್ಲಿ ದಿನಾಂಕ 23/03/2022 ರಂದು ಮದ್ಯಾಹ್ನ ಮಾರಸ್ವಾಮಿ ದೇವಸ್ಥಾನ ಕಡೆಯಿಂದ ನಾಡ ಕಡೆಗೆ ಹೋಗುತ್ತಿರುವಾಗ 13:15 ಗಂಟೆಗೆ ಬೈಂದೂರು ತಾಲೂಕು ಹಡವು ಗ್ರಾಮದ ಹಡವು ಪಡುಕೋಣೆ ಪಟೇಲರ ಮನೆಯ ಹತ್ತಿರ ತಲುಪುವಾಗ ಎದುರಿನಿಂದ ನಾಡಾ ಕಡೆಗೆ  ಮಮತಾ ಎಂಬುವವರು ತನ್ನ KA-20-EU-7889 ಡಿಯೋ ಸ್ಕೂಟರ್ ನಲ್ಲಿ ಹಿಂದುಗಡೆ ಸ್ವರ್ಣ ಹಾಗೂ ಸಿರಿ ಎಂಬ ಎರಡು ಮಕ್ಕಳನ್ನು ಕೂರಿಸಿಕೊಂಡು ಹೋಗುತ್ತಿರುವಾಗ ಹಿಂದಿನಿಂದ ರಾಧಾಕೃಷ್ಣ ಎಂಬುವವರು KA-20-C-8835 ನೇ ಪಿಕ್ ಅಪ್ ಗೂಡ್ಸ್ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಮೋಟಾರ್ ಸೈಕಲ್ ನ್ನು ಓವರ್ ಟೇಕ್ ಮಾಡಿ ಮುಂದಿನಿಂದ ಮಮತಾರವರು ಸವಾರಿ ಮಾಡಿಕೊಂಡಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಮಮತಾ ಹಾಗೂ ಅವರ ಮಕ್ಕಳು ವಾಹನ ಸಮೇತ ರಸ್ತೆಗೆ ಬಿದ್ದಿರುತ್ತಾರೆ. ಈ ಅಪಘಾತದಿಂದ ಮಮತಾರವರಿಗೆ ಎಡಕೈ, ಮುಖಕ್ಕೆ ಗಾಯವಾಗಿದ್ದು ಎರಡು ಮಕ್ಕಳಿಗೂ ಸಣ್ಣಪುಟ್ಟ ಗಾಯವಾಗಿದ್ದು ಮಮತಾರವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಕಾರ್ತಿಕ್ ಮಂಡಲ್ (28), ತಂದೆ:- ಪಲ್ಗುಣಿ ಮಂಡಲ್, ವಾಸ:- ಪಾರಲ್‌ವಾಡಿ, ನಂದಿ ಗ್ರಾಮ, ಪಶ್ಚಿಮ ಬಂಗಾಳ ರಾಜ್ಯ  ಅವರ ದೊಡ್ಪಪ್ಪನ ಮಗ ಸಮೂಲ್ ಮಂಡಲ್ (30) ಹಾಗೂ ಊರಿನ ಇತರರೊಂದಿಗೆ ಪಶ್ಚಿಮ ಬಂಗಾಳದಿಂದ ದಿನಗೂಲಿ ಕೆಲಸಕ್ಕೆಂದು ಬ್ರಹ್ಮಾವರ  ತಾಲೂಕು ಹೆಗ್ಗುಂಜೆ ಗ್ರಾಮಕ್ಕೆ ಬಂದು ಶ್ರೀ ಮಂದಾರ್ತಿ ದುರ್ಗಾ ಪರಮೇಶ್ವರಿ ದೇವಸ್ಥಾನದ ವಸತಿ ಗೃಹದಲ್ಲಿ ವಾಸವಾಗಿದ್ದು ಮಂದಾರ್ತಿಯಲ್ಲಿ ದಿನಗೂಲಿ ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ 23/03/2022 ರಂದು ಬೆಳಿಗ್ಗೆ 08:00 ಗಂಟೆಗೆ ಎಂದಿನಂತೆ ಎಲ್ಲಾರು ಕೆಲಸಕ್ಕೆ ಹೋಗಲು ತಯಾರಿ ನಡೆಸಿದಾಗ ಸಮೂಲ್ ಮಂಡಲ್ ರವರು ನನಗೆ ತುಂಬಾ ಸುಸ್ತಾಗಿದೆ, ನನಗೆ ಹುಷಾರಿಲ್ಲ ನಾನು ಈ ದಿನ ಕೆಲಸಕ್ಕೆ ಬರುವುದಿಲ್ಲ ನೀವೆಲ್ಲಾ ಹೋಗಿ ಎಂದು ತಿಳಿಸಿ, ಅವರು ರೂಮ್‌ನಲ್ಲಿಯೇ ಉಳಿದಿರುತ್ತಾರೆ. ನಂತರ ಪಿರ್ಯಾದಿದಾರರು ಮೈರ್‌ಕೋಮೆಯಲ್ಲಿ ಕೆಲಸ ಮುಗಿಸಿ ವಾಪಾಸ್ಸು ರೂಮ್‌ಗೆ ಸಂಜೆ 5:30 ಗಂಟೆಗೆ ಬಂದು ನೋಡಿದಾಗ ಅವರ ಅಣ್ಣ ಸಮೂಲ್ ಮಂಡಲ್  ಸಿಮೆಂಟ್ ಬೆಂಚಿನ ಮೇಲೆ ಮಲಗಿದಲ್ಲಿಯೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 16/2022 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

 • ಕುಂದಾಪುರ: ಪಿರ್ಯಾದಿದಾರರಾದ ಸುಧೀರ (31), ತಂದೆ: ಸಂಜೀವ, ವಾಸ: ಸಲ್ವಾಡಿ, ಕಾಳಾವರ ಗ್ರಾಮ ಕುಂದಾಪುರ ತಾಲೂಕು , ಉಡುಪಿ ಜಿಲ್ಲೆ ಇವರು   ದಿನಾಂಕ 18/03/2022 ರಂದು ತಾನು ಈ ಮೊದಲು ಕೆಲಸ ಮಾಡಿಕೊಂಡಿದ್ದ ನಾಗೇಶ್ ಕಾಮತ್ ಎಂಬುವವರನ್ನು ಭೇಟಿ ಮಾಡಲು ಕುಂದಾಪುರ ಪೊಲೀಸ್ ಠಾಣೆಯ ಹತ್ತಿರ ಹೋಗಿ ಠಾಣೆಯಿಂದ ಸ್ವಲ್ಪ ದೂರದಲ್ಲಿ ನಿಂತಿದ್ದಾಗ ಮಧ್ಯಾಹ್ನ 12:00 ಗಂಟೆಗೆ ನಾಗೇಶ್ ಕಾಮತ್ ರವರ ಮೇಲೆ ಪ್ರಕರಣ ದಾಖಲಿಸಿದ ಕೋಣಿ ಗ್ರಾಮದ ಗಜೇಂದ್ರ ಪೂಜಾರಿ ಎಂಬುವವರು ಪಿರ್ಯದಿದಾರರ ಬಳಿ ಬಂದು ಅವಾಚ್ಯವಾಗಿ ಬೈದು  ಜೀವ ಬೆದರಿಕೆ ಹಾಕಿ ನಿಂದನೆ ಮಾಡಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 36/2022 ಕಲಂ: 504, 506 ಐಪಿಸಿ ಮತ್ತು ಕಲಂ: 3 (1) (r) (s), 3(2)(va) SC/ST POA Act 1989 ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾದ ನಿವೇದಿತಾ ಶೆಟ್ಟಿ (39), ಗಂಡ:ಕವೀಶ್  ಶೆಟ್ಟಿ, ವಾಸ: #3- 11 3 ಬಿ, ಮಾರಾಳಿ ನಾಲ್ಕೂರು, ಉಡುಪಿ ಇವರು ಅಪಾದಿತ ಕವೀಶ್ ಶೆಟ್ಟಿ (40), ತಂದೆ: ಸಂಜೀವ ಶೆಟ್ಟಿ, ವಾಸ: # 423, ಸೌರಭ, 18 ನೇ ಕ್ರಾಸ್, ಸರಸ್ವತಿ ನಗರ ಸ್ಟಾಪ್ ನ ಹತ್ತಿರ, ವಿಜಯನಗರ , ಬೆಂಗಳೂರು ಇವರೊಂದಿಗೆ  ಗುರು ಹಿರಿಯರು ನಿಶ್ಚಯಿಸಿದಂತೆ ಆರೋಪಿಯ ಬೇಡಿಕೆಯಂತೆ 6 ಲಕ್ಷ ವರದಕ್ಷಿಣೆಯನ್ನು ನೀಡಿ ಮದುವೆಯ ಎಲ್ಲಾ ಖರ್ಚನ್ನು ಪಿರ್ಯಾದಿದಾರರ ತಂದೆ ತಾಯಿ ಭರಿಸಿ  ದಿನಾಂಕ 07/12/2008  ರಂದು ಹೋಟೇಲ್ ದೀಪಾ ಕಂಪರ್ಟ್  ಮಂಗಳೂರು  ಇಲ್ಲಿ  ವಿವಾಹವಾಗಿದ್ದು, ಮದುವೆಯ ನಂತರ ಪಿರ್ಯಾದಿದಾರರು ತನ್ನ ಗಂಡನ ಮನೆಯಾದ ಬೆಂಗಳೂರಿನಲ್ಲಿ ವಾಸ ಮಾಡಿಕೊಂಡಿದ್ದು, ಮದುವೆ ಆಗಿ ಕೆಲವು ತಿಂಗಳುಗಳ ನಂತರ ಆರೋಪಿಯು ಪಿರ್ಯಾದಿದಾರರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ಯನ್ನು ನೀಡಿ ಅವಾಚ್ಯ ಶಬ್ದಗಳಿಂದ ಬೈದು ತೊಂದರೆ ನೀಡುತ್ತಿದ್ದು, ಮಾತ್ರವಲ್ಲದೇ ಪಿರ್ಯಾದಿದಾರರಿಗೆ ಬೆಲ್ಟ್ ನಿಂದ ಹೊಡೆದು ದೈಹಿಕ ಹಿಂಸೆಯನ್ನು ನೀಡಿರುತ್ತಾನೆ. 2018 ನೇ ಜೂನ್ ತಿಂಗಳಿನಲ್ಲಿ ಇಸವಿಯಲ್ಲಿ ಪಿರ್ಯಾದಿದಾರರು ಉಡುಪಿಯಲ್ಲಿ ಬಂದು ನಿಂತಿದ್ದು, ಡಿಸೆಂಬರ್ 31 2018 ರಲ್ಲಿ ಆರೋಪಿಯು ಕೆಲವು ಪೇಪರ್ ಹಾಗೂ ಚೆಕ್ ಗಳನ್ನು ತಂದು ಸಹಿ ಹಾಕುವಂತೆ ಪಿರ್ಯಾದಿದಾರರನ್ನು ಒತ್ತಾಯಿಸಿದಾಗ ಪಿರ್ಯಾದಿದಾರರು ನಿರಾಕರಿಸಿದ್ದು ಆಗ ಆರೋಪಿಯು  ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹೊಡೆದಿದ್ದು, ಕೊಲ್ಲದೇ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 24/2022  ಕಲಂ: 498(ಎ), 323, 324, 504,506 ಐಪಿಸಿ ಮತ್ತು ಕಲಂ: 3, 4 ಡಿಪಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-03-2022 09:48 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080