ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 23/03/2021 ರಂದು ಪಿರ್ಯಾದಿದಾರರಾದ ಸಂಜೀವ ಪೂಜಾರಿ (52), ತಂದೆ: ದಿ. ಕೊರಗ ಪೂಜಾರಿ, ವಾಸ: ರಾಜೀವನಗರ, ಕೊಳಂಬೆ, ಹೇರೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಮಹೇಶ್ ಆಸ್ಪತ್ರೆಯ ಎದುರು ಇರುವ ರಿಕ್ಷಾ ನಿಲ್ದಾಣದಲ್ಲಿ ಕುಳಿತಿರುವಾಗ ಮಧ್ಯಾಹ್ನ 2:30 ಗಂಟೆಯ ಸಮಯಕ್ಕೆ ಬ್ರಹ್ಮಾವರ ಕಡೆಯಿಂದ ಸಂತೋಷ್ ಎಂಬುವವರು ಅವರ KA-20-EU-5477ನೇ HONDA UNICORN ಮೋಟಾರ್ ಸೈಕಲ್‌ನ ಇಂಡಿಕೇಟರ್ ಹಾಕಿಕೊಂಡು ಮಹೇಶ್ ಆಸ್ಪತ್ರೆಯ ರಾಷ್ಟ್ರೀಯ ಹೆದ್ದಾರಿ 66 ರ ‘U’ ಟರ್ನ್‌ ನಲ್ಲಿ  ಟರ್ನ್‌ ಮಾಡುವಾಗ ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ ಆರೋಪಿ ಮೊಹಮ್ಮದ್ ರಹೀಂ ರವರು ತನ್ನ KA-19-EZ-6992 ನೇ ಬಜಾಜ್ ಪಲ್ಸರ್ ಮೋಟಾರ್‌ ಸೈಕಲ್‌ನಲ್ಲಿ ಸಹಸವಾರನನ್ನು ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಸಂತೋಷ್ ರವರು  ‘U’ ಟರ್ನ್‌ ಮಾಡುವುದನ್ನು ನೋಡಿಯೂ ಸಹ ತನ್ನ ಮೊಟಾರ್‌ ಸೈಕಲ್‌ನ್ನು ನಿಧಾನಿಸದೇ ರಭಸವಾಗಿ ಸಂತೋಷ್‌ ರವರ ಮೋಟಾರ್‌ ಸೈಕಲ್‌ನ ಹ್ಯಾಂಡಲ್ ಬಾರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ಮೋಟಾರ್ ಸೈಕಲ್‌ ಸಮೇತ ಸವಾರರು ಹಾಗೂ ಸಹಸವಾರ ರಸ್ತೆಗೆ ಬಿದ್ದು, ಸಂತೋಷ್‌ ರವರ ಎಡಕೈ ಭುಜದ ಕೆಳಗೆ  ಮೂಳೆಮುರಿತ, ಬಲಭಾಗದ ಮುಖದ ತುಟಿ ಹಾಗೂ ಹಲ್ಲಿಗೆ ರಕ್ತಗಾಯ, ಬಲಕೈ ಬೆರಳು ಮುರಿತ,ಎಡಕಾಲು ಮುಂಗಟ್ಟು  ಮತ್ತು ಪಾದದಲ್ಲಿ ತರಚಿದ ಗಾಯವಾಗಿರುತ್ತದೆ. ಅಲ್ಲದೇ ಆರೋಪಿಯ ಮೋಟಾರ್‌ ಸೈಕಲ್‌ನಲ್ಲಿ ಸಹಸವಾರನಾಗಿದ್ದ ನಿಹಾಲ್ ಎಂಬುವವರಿಗೆ ಬಲಕೈ ತರಚಿದ್ದು, ಎಡಕೈಯ ಬೆರಳುಗಳಿಗೆ ರಕ್ತ ಗಾಯವಾಗಿರುತ್ತದೆ ಹಾಗೂ ಆರೋಪಿ ಮೊಹಮ್ಮದ್ ರಹೀಂ ರವರ ಎರಡೂ ಕೈ ತರಚಿದ ಗಾಯವಾಗಿರುತ್ತದೆ. ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಮಹೇಶ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 45/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ವಿಲ್ಸನ್ ತಾವ್ರೋ (40), ತಂದೆ: ದಿ. ಹೆನ್ರಿ ತಾವ್ರೋ, ವಾಸ: ಮನೆ ನಂಬರ್ 306, ಹಿರೇಕೆರೆ, ಕೊಪ್ಪ ಅಂಚೆ ಮತ್ತು ತಾಲೂಕು, ಚಿಕ್ಕಮಗಳೂರು ಜಿಲ್ಲೆ ಇವರು ದಿನಾಂಕ 22/03/2021 ರಂದು ಕೆಲಸಕ್ಕೆ ರಜೆ ಇದ್ದುದರಿಂದ ಅತ್ತೂರು ಚರ್ಚಿಗೆ ಹೋಗಿ, ನಂತರ ಸ್ವಂತ ಕೆಲಸದ ನಿಮಿತ್ತ 12:00 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿಗೆ ಬಂದು ಬಸ್ಸಿನಿಂದ ಇಳಿದು ರಾಷ್ಟ್ರೀಯ ಹೆದ್ದಾರಿ 66 ರ ಉಡುಪಿ-ಮಂಗಳೂರು ಏಕಮುಖ ಸಂಚಾರ ರಸ್ತೆಯಲ್ಲಿ ಯಾವುದೇ ವಾಹನ ಬಾರದಿರುವುದನ್ನು ಖಚಿತಪಡಿಸಿಕೊಂಡು ರಸ್ತೆಯನ್ನು ದಾಟುತ್ತಿರುವ ಸಮಯ  MH-43-BG-1480 ನೇ ನಂಬ್ರದ ಟ್ಯಾಂಕರ್‌ ಚಾಲಕ ಫರೀದ್ ಅನ್ಸಾರಿ ತನ್ನ ಟ್ಯಾಂಕರನ್ನು ಉಡುಪಿ ಕಡೆಯಿಂದ  ಮಂಗಳೂರು ಕಡೆಗೆ ಅತೀ ವೇಗ ಹಾಗೂ  ನಿರ್ಲಕ್ಷವಾಗಿ ಚಲಾಯಿಸಿಕೊಂಡು ಬಂದು ವಿಲ್ಸನ್ ತಾವ್ರೋ ರವರಿಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು, ಅವರ ಹಣೆಯ ಮೇಲ್ಭಾಗಕ್ಕೆ, ತಲೆಯ ಬಲಬದಿಗೆ, ಬಲ ಪಕ್ಕೆಗೆ, ಬಲ ತೋಳಿಗೆ, ಬಲಕಾಲಿಗೆ, ಬಲತೊಡೆಯ ಮೂಳೆ ಮುರಿತದ ಗಾಯವಾಗಿರುತ್ತದೆ. ನಂತರ ಗಾಯಾಳುವಿಗೆ  ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ವೆನ್‌‌ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2021 ಕಲಂ: 279,  338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಬ್ರಹ್ಮಾವರ: ದಿನಾಂಕ 22/03/2021 ರಂದು ಪಿರ್ಯಾದಿದಾರರಾದ ಪ್ರವೀಣ ಪೂಜಾರಿ (37), ತಂದೆ: ಶೇಖರ ಪೂಜಾರಿ, ವಾಸ: ಲಕ್ಷ್ಮೀ ನಿಲಯ, ತೆಂಕಬೆಟ್ಟು, ಚಾಂತಾರು ಗ್ರಾಮದ, ಬ್ರಹ್ಮಾವರ ತಾಲೂಕು ಇವರು ತನ್ನ ಮೋಟಾರ್ ಸೈಕಲ್‌ನಲ್ಲಿ ಚಾಂತಾರುವಿನ ಮನೆಯಿಂದ ಉಡುಪಿಗೆ ಹೋಗುತ್ತಿರುವಾಗ ಬೆಳಿಗ್ಗೆ  09:30 ಗಂಟೆಗೆ ಚಾಂತಾರು ಗ್ರಾಮದ ಯಕ್ಕಿಣಿ ನಗರ ಕ್ರಾಸ್‌ ಬಳಿ ತಲುಪುವಾಗ ಹಿಮಾಯತ್ ಎಂಬುವವರು ತನ್ನ KA-20-EW-0451 ನೇ ACCESS SCOOTY ನ್ನು ಯಕ್ಷಿಣಿ ನಗರ ಕಡೆಯಿಂದ ಬ್ರಹ್ಮಾವರ-ಹೆಬ್ರಿ ಮುಖ್ಯರಸ್ತೆ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಒಮ್ಮೆಲೆ ಬ್ರಹ್ಮಾವರ ಕಡೆಗೆ ತಿರುಗಿಸಿದಾಗ ಸವಾರನ ಹತೋಟಿ ತಪ್ಪಿ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ತಲೆ ಹಾಗೂ ಹೊಟ್ಟೆಯ ಭಾಗಕ್ಕೆ ತೀವ್ರ ಒಳ ಜಖಂವುಂಟಾಗಿ ಸರಿಯಾಗಿ ಮಾತನಾಡದೇ ಇರುವ ಸ್ಥಿತಿಯಲ್ಲಿ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿರುವುದಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 46/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಸಂದೇಶ (26), ತಂದೆ: ರಾಮ ಕುಲಾಲ, ವಾಸ: ಹಿಲಿಯಾಣ ಜೆಡ್ಡು ಹಿಲಿಯಾಣ ಅಂಚೆ ಮತ್ತು  ಗ್ರಾಮ  ಬ್ರಹ್ಮಾವರ ತಾಲೂಕು ಉಡುಪಿ ಜಿಲ್ಲೆ ಇವರ ಅಕ್ಕ ಶ್ರೀಮತಿ  ಸವಿತಾ (33) ಎಂಬುವವರು ದಿನಾಂಕ 22/03/2021  ರಂದು 17:45  ಗಂಟೆಗೆ ಮನೆಯ ಹತ್ತಿರದ ಹಾಡಿಯಿಂದ  ಉರುವಲು ಸೌದೆ ಹೊರೆಯನ್ನು ಹೊತ್ತುಕೊಂಡು ಇಳಿಜಾರಿನಿಂದ ಕೂಡಿದ ಜಾಗದಲ್ಲಿ ಬರುವಾಗ ಸೌದೆ ಹೊರೆಯೊಂದಿಗೆ ಬಿದ್ದು ಗಾಯಗೊಂಡವರನ್ನು ಕೊಟೇಶ್ವರ ಎನ್‌ ಆರ್‌ ಆಚಾರ್ಯ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋದಲ್ಲಿ ಚಿಕಿತ್ಸೆಗೆ ಬರುವಾಗಲೇ ಮೃತ ಪಟ್ಟಿರುವುದಾಗಿ ವೈದ್ಯಾಧಿಕಾರಿಯರು  ತಿಳಿಸಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 11/2021 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಶ್ಯಾಮಸುಂದರ (55) ಎಂಬುವವರು ಮನೆಗೆ ಬಾರದೇ ವಿಪರೀತ ಮದ್ಯ ಸೇವನೆ ಮಾಡಿ ಅಂಗಡಿಯ ಜಗಲಿಯಲ್ಲಿ ಹಾಗೂ ಬಸ್ ನಿಲ್ದಾಣಗಳಲ್ಲಿ ರಾತ್ರಿ ಮಲಗುತ್ತಿದ್ದವರು ದಿನಾಂಕ 23/03/2021 ರಂದು ಬೆಳಿಗ್ಗೆ 08:30 ಗಂಟೆಗೆ ಕುಂದಾಪುರ ಪೇಟೆ ಆಂಜನೇಯ ದೇವಸ್ಥಾನದ ಪಕ್ಕದಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಕಟ್ಟಡದ ಹೊರಗಿನ ಜಗುಲಿಯಲ್ಲಿ ಮಲಗಿದ್ದಲ್ಲಿಯೇ ಮೃತಪಟ್ಟಿರುವುದು ಕಂಡುಬಂದಿದ್ದು ಅವರು ವಿಪರೀತ ಮದ್ಯ ಸೇವನೆ ಮಾಡುವ ಚಟದಿಂದಲೋ ಅಥವಾ ಇನ್ಯಾವುದೋ ಕಾಯಿಲೆಯಿಂದಲೋ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 13/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ:ದಿನಾಂಕ 23/03/2021 ರಂದು ಪಿರ್ಯಾದಿದಾರರಾದ ಶ್ರೀಮತಿ ಜಾಸ್ಪಿನ್ ಜೂಲೆಟ್, ಗಂಡ:ಸೆಲ್ವರಾಜ್, ವಾಸ: 2ಬಿ, 125 ಸಿ, ಅಡ್ಡರಸ್ತೆ 76 ಬಡಗುಬೆಟ್ಟು , ಉಡುಪಿ ಜಿಲ್ಲೆ ಇವರ ಗಂಡ ಸೆಲ್ವರಾಜ್‌(64) ರವರು ಮನೆಯಲ್ಲಿ  ಮಲಗಿಕೊಂಡಿದ್ದವರನ್ನು ಮಧ್ಯಾಹ್ನ 1:00 ಗಂಟೆಗೆ ಎಬ್ಬಿಸಲು ಪ್ರಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆಯನ್ನು ತೋರದಿದ್ದವರನ್ನು ಚಿಕಿತ್ಸೆಯ  ಬಗ್ಗೆ  ಉಡುಪಿಯ  ಆದರ್ಶ ಆಸ್ಪತ್ರೆಗೆ  ಕರೆದುಕೊಂಡು ಬಂದಲ್ಲಿ ಮಧ್ಯಾಹ್ನ 1:30 ಗಂಟೆಗೆ ಪರೀಕ್ಷಿಸಿದ  ವೈದ್ಯರು  ಸೆಲ್ವರಾಜ್‌ರವರು  ಅದಾಗಲೇ  ಮೃತಪಟ್ಟಿರುವುದಾಗಿ ತಿಳಿಸಿದ್ದು,  ಮೃತರು  ಹೃದಯಾಘಾತದಿಂದಲೋ ಅಥವಾ ಇನ್ನಾವುದೋ ಕಾಯಿಲೆಯಿಂದ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 12/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ಆಪಾದಿತ ಪ್ರಮೋದ ತಲ್ಲೂರು ಪಿರ್ಯಾದಿದಾರರಾದ   ನಾಗೇಶ್ ರಾಮ ಚಂದನ್ (30), ತಂದೆ:ರಾಮ ಚಂದನ್, ವಾಸ:  ಕೆಳಹಿತ್ಲು ಮನೆ, ಉಪ್ಪಿನಕುದ್ರು ರೋಡ್,ತಲ್ಲೂರು  ಗ್ರಾಮ  ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇವರನ್ನು ಸಂಪರ್ಕಿಸಿ ತಾನು ಬೆಂಗಳೂರಿನ ನಾಗರಬಾವಿ ನಿವಾಸಿಯಾದ ಸುಷ್ಮಾ ಎಂಬುವವರ ಜೊತೆ ಪಾಲುದಾರಿಕೆ ಮಾಡಿಕೊಂಡು ಕಾರು ವ್ಯವಹಾರ ಮಾಡುವುದಾಗಿ ತಿಳಿಸಿದ್ದು ಕಾರು ಮಾರಾಟದ ವ್ಯವಹಾರಕ್ಕೆ ಸಂಬಂಧಿಸಿ ವ್ಯವಹಾರದಲ್ಲಿ ಹಣ ತೊಡಗಿಸಿದರೇ 20% ಲಾಭವನ್ನು  ಪಡೆಯಬಹುದಾಗಿ ಪಿರ್ಯಾದಿದಾರರನ್ನು ನಂಬಿಸಿ ದಿನಾಂಕ 13/03/2019 ರಿಂದ ಈವರೆಗೆ ಒಟ್ಟು ರೂಪಾಯಿ 29,12,212/- ಹಣವನ್ನು ಆಪಾದಿತರ ಖಾತೆಗೆ ಜಮಾ ಮಾಡಿಸಿಕೊಂಡು ಅದರಲ್ಲಿ ರೂಪಾಯಿ 21,38,712/- ನ್ನು ವಾಪಾಸ್ಸು ನೀಡದೇ ನಂಬಿಕೆ ದ್ರೋಹ ಹಾಗೂ  ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 35/2021 ಕಲಂ: 406, 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಉಡುಪಿ: ಪಿರ್ಯಾದಿದಾರರಾದ ಸುಂದರ ರಾಮ ನಾಯಕ್ ತಂದೆ:ದಿ.ರಾಮ ನಾಯಕ್, ವಾಸ: ‘’ಸೀತಾರಾಮ” H.I.G.65, 2nd Stage, ಅನಂತ ನಗರ, ಮಣಿಪಾಲ, ಉಡುಪಿ ಇವರ ಪರಿಚಯದವರಾದ ಅರೋಪಿ 2 ಸಂಜಯ್ ಶೆಟ್ಟಿ ವಾಸ:ಕೊರಂಗ್ರಪಾಡಿ  ಉಡುಪಿ ಇವರು  ಮೂಡಬಿದರೆಯಲ್ಲಿ ಜಾಗ ಇರುವುದಾಗಿ ತಿಳಿಸಿ ಅರೋಪಿ 1 ಧನಂಜಯ್ ಜೈನ್ ,ತಂದೆ:ಬೋಜರಾಜ ಅರಿಗ, ವಾಸ: ಅಂತರಗುಟ್ಟು ಹೌಸ್, ಮಾನುನಲ್ಕೂರು ಅಂಚೆ ಮತ್ತು ಗ್ರಾಮ ,ಬಂಟ್ವಾಳ ತಾಲೂಕು , ಮಂಗಳೂರು ಮತ್ತು 2 ನೇಯವರು ಪಿರ್ಯಾದಿದಾರರ ಬನ್ನಂಜೆ ಕಚೇರಿಗೆ ಬಂದು ಜಾಗದ ಬಗ್ಗೆ ತಿಳಿಸಿದ್ದು ಪಿರ್ಯಾದಿದಾರರು ಒಪ್ಪಿ 1,25,000/- ರೂಪಾಯಿ ಹಣವನನ್ನು ಮುಂಗಡವಾಗಿ ನೀಡಿದ್ದು ನಂತರ ಪಿರ್ಯಾದಿದಾರರಿಂದ ಅರೋಪಿತರು 20,00,000/- ಹಣವನ್ನು ಪಡೆದಿದ್ದು ಪಿರ್ಯಾದಿದಾರರಿಗೆ ಜಾಗದ ನೊಂದಣಿ ಮಾಡಿಕೊಟ್ಟಿರುವುದಿಲ್ಲ ಪಿರ್ಯಾದುದಾರರು ಅರೋಪಿತರಲ್ಲಿ ಈ ಬಗ್ಗೆ ವಿಚಾರಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ನಿನಗೆ ಜಾಗ ಕೊಡುವುದಿಲ್ಲ ಹಣವೂ ನೀಡುವುದಿಲ್ಲ. ನಿನಗೆ  ಮೋಸ ಮಾಡುವ ಉದ್ದೇಶದಿಂದಲೇ ನಿನ್ನೊಂದಿಗೆ ವ್ಯವಹಾರ ಮಾಡಿ ಬೇರ ಕಡೆಗಳಲ್ಲಿ ಅಡವು ಹಾಕಿ ಸಾಲ ಮಾಡಿರುತ್ತೇವೆ ಎಂದು ಬೆದರಿಕೆ ಹಾಕಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 50/2021 ಕಲಂ: 420,406, 196, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 24-03-2021 09:04 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080