ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣಗಳು

  • ಬೈಂದೂರು: ಪಿರ್ಯಾದಿದಾರರಾದ ಮಂಜುನಾಥ ಶೇಟ್ (48) ತಂದೆ: ನಾರಾಯಣ ಶೇಟ್ ವಾಸ: ಹೊಸೂರುಮನೆ, ಉಪ್ಪುಂದ ಗ್ರಾಮ ಬೈಂದೂರು ಇವರ ಚಿಕ್ಕಪನ ಮಗನಾದ ಸುಬ್ರಹ್ಮಣ್ಯ ಶೇಟ್(32)  ರವರು (32) ರವರು ಅವರ ಮನೆಯಲ್ಲಿಯೇ ಚಿನ್ನದ ಕೆಲಸವನ್ನು ಮಾಡಿಕೊಂಡಿರುತ್ತಾರೆ. ದಿನಾಂಕ 23/03/2021 ರಂದು  ಸಮಯ ಸುಮಾರು ರಾತ್ರಿ 9:30 ಗಂಟೆಗೆ  ಶೌಚಾಲಯಕ್ಕೆ  ಹೋದವರು ಸುಮಾರು ಹೊತ್ತಿನಿಂದ ಬಾರದೇ ಇದ್ದುದ್ದರಿಂದ ಸರೋಜಿನಿ ರವರು ಬೊಬ್ಬೆ ಹಾಕಿದಾಗ ಮಂಜುನಾಥ ಶೇಟ್‌ ರವರು ಅಲ್ಲಿಗೆ ಹೋಗಿ ನೋಡಿದಾಗ ಶೌಚಾಲಯಕ್ಕೆ ಹೋದ ಸುಬ್ರಹಮ್ಮಣ್ಯ ಶೆಟ್ ರವರು ಬಾರದೇ ಇರುವುದಾಗಿ ಹೇಳಿದ್ದು ಆಗ ಇವರು ಶೌಚಾಲಯದ ಬಾಗಿಲನ್ನು ತೆಗೆದು ನೋಡಿದಾಗ ಸುಬ್ರಹ್ಮಣ್ಯ ಶೇಟ್ ರವರು ಅಲ್ಲೆ ಕುಸಿದು ಬಿದ್ದಿದ್ದು ಅವರನ್ನು 108 ವಾಹನದಲ್ಲಿ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಾಗ ಪರೀಕ್ಷಿಸಿದ ವೈದ್ಯರು ಸುಬ್ರಹ್ಮಣ್ಯ ಶೇಟ್ ರವರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಸುಬ್ರಹ್ಮಣ್ಯ ಶೇಟ್ ರವರು ಶೌಚಾಲಯಕ್ಕೆ ಹೋದಾಗ ಹೃದಯಾಘಾತದಿಂದ ಕುಸಿದು ಬಿದ್ದು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 10/2021 ಕಲಂ 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಪಿರ್ಯಾದಿದಾರರಾಧ ಪುಟ್ಟಯ್ಯ ಪೂಜಾರಿ (65), ತಂದೆ: ದಿ. ದೇವಪ್ಪ ಪೂಜಾರಿ, ವಾಸ: ಪಾಗರ್‌ಮನೆ, ಜ್ಯೋತಿ ನಿಲಯ, ದಾಕುಹಿತ್ಲು, ಗಂಗೊಳ್ಳಿ ಇವರ ಮಗ ಶಿವರಾಜ್ ಪೂಜಾರಿ (26) ಎಂಬುವವರು ಅವಿವಾಹಿತರಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದರು. ಇತ್ತೀಚೆಗೆ ಪ್ರತಿನಿತ್ಯ ವಿಪರೀತ ಮದ್ಯಪಾನ ಮಾಡಿಕೊಂಡು ಮನೆಗೆ ತಡವಾಗಿ ಬರುತ್ತಿದ್ದ ಶಿವರಾಜ್ ಪೂಜಾರಿ ಯವರು ದಿನಾಂಕ 23/03/2021 ರಂದು ರಾತ್ರಿ 9:00 ಗಂಟೆಯಿಂದ  ದಿನಾಂಕ 24/03/2021 ರಂದು ಬೆಳಿಗ್ಗೆ 10:30 ಗಂಟೆಯ ನಡುವೆ ಮದ್ಯಪಾನ ಮಾಡಿದ ಅಮಲಿನಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ಮನೆಯ 1ನೇ ಮಹಡಿಯ ರೂಮ್‌ನಲ್ಲಿನ ಬ್ಲೇಡ್‌ನಿಂದ ಎಡ ಕೈ ರಕ್ತನಾಳವನ್ನು ಕೊಯ್ದುಕೊಂಡು, ಫ್ಯಾನ್ ಹುಕ್ಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.  ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 12/2021 ಕಲಂ 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣಗಳು

  • ಕಾಪು: ಪಿರ್ಯಾದಿದಾರರಾದ ಎಮ್. ಆರ್. ತ್ರಿನೇಶ್ (39) ತಂದೆ : ರೇವಣ್ಣ ಎನ್. ವಾಸ : 1ನೇ ಕ್ರಾಸ್, ಮಾರುತಿನಗರ ರೈಲ್ವೆ ಸ್ಟೇಷನ್ ರಸ್ತೆ ಗುಬ್ಬಿ ತಾಲೂಕು ತುಮಕೂರು ಇವರು ದಿನಾಂಕ 20/03/2021 ರಂದು ತನ್ನ KA-02-AD-7281 EICHER ವಾಹನಕ್ಕೆ ಉಡುಪಿಯ ಕಾಪು ಕಡೆಗೆ ಮನೆಯ ಸಾಮಾನುಗಳನ್ನು ಬೆಂಗಳೂರಿನಿಂದ ಕೊಂಡು ಹೋಗಲು ಬಾಡಿಗೆಗೆ ಬಂದಿದ್ದು, ಈ ಬಗ್ಗೆ ಸ್ನೇಹಿತ ಶಿವಕುಮಾರ ರವರ ಪರಿಚಯದ ಜಯಕುಮಾರವರಿಗೆ ಪರಿಚಯಿಸಿಕೊಂಡು ತನ್ನ ವಾಹನಕ್ಕೆ ಜಯಕುಮಾರನನ್ನು ಡ್ರೈವಿಂಗ್‌ಗೆ ನೇಮಿಸಿ ಸಂಜೆ 4:00 ಗಂಟೆಗೆ ಬೆಂಗಳೂರಿನ ಜಯನಗರದಿಂದ ಮನೆಯ ಸಾಮಾನುಗಳನ್ನು ತುಂಬಿಸಿ ಕಳುಹಿಸಿಕೊಟ್ಟಿದ್ದು, ದಿನಾಂಕ 21/03/2021 ರಂದು ರಾತ್ರಿ 9.39 ಗಂಟೆಯ ಸಮಯಕ್ಕೆ ಜಯಕುಮಾರನು ತನ್ನ ಮೊಬೈಲ್ ಯಿಂದ ಕರೆ ಮಾಡಿ ಎಮ್. ಆರ್. ತ್ರಿನೇಶ್ ಇವರಲ್ಲಿ ಕಾಪುವಿನಲ್ಲಿ ಸದ್ರಿ ಮನೆ ಸಾಮಾನುಗಳನ್ನು ಖಾಲಿ ಮಾಡಿರುತ್ತೇನೆ. ಮುಂದೆ ಏನು...? ಮಾಡಬೇಕು. ಎಂದು ಕೇಳಿದಂತೆ ಎಮ್. ಆರ್. ತ್ರಿನೇಶ್ ರವರು ಮಂಗಳೂರಿನ ಟ್ರಾನ್ಸ್‌ ಪೋರ್ಟ್‌ ಕಂಪನಿಯನ್ನು ಭೇಟಿ ಆಗಲು ಹೇಳಿ ಫೋನ್ ಕರೆಯನ್ನು ಕಟ್ ಮಾಡಿರುತ್ತಾರೆ. ದಿನಾಂಕ 22/03/2021 ರಂದು ಬೆಳಗ್ಗೆ ಎಮ್. ಆರ್. ತ್ರಿನೇಶ್ ರವರು ಜಯಕುಮಾರನ ಮೊಬೈಲ್‌ಗೆ 09.37 ಸಮಯಕ್ಕೆ ಫೋನ್ ಮಾಡಿದ್ದಲ್ಲಿ ಪೋನ್ ಸ್ವಿಚ್‌ ಆಫ್‌ ಬಂದಿದ್ದು, ಎಮ್. ಆರ್. ತ್ರಿನೇಶ್ ರವರು ಮಂಗಳೂರಿನ ಟ್ರಾನ್ಸ್‌ಪೋರ್ಟ್‌ಕಂಪನಿಗೂ ಫೋನ್ ಕರೆ ಮಾಡಿ ವಿಚಾರಿಸಿದ್ದು, ಅಲ್ಲಿಗೂ ಜಯಕುಮಾರ ಬಂದಿಲ್ಲವೆಂದು ತಿಳಿಸಿದ್ದು, ಆತನ ತಾಯಿ ಇವರಿಗೆ ಕರೆ ಮಾಡಿ ಕೇಳಿದಲ್ಲಿಯೂ ಜಯಕುಮಾರ ಬಂದಿಲ್ಲವೆಂದು ತಿಳಿಸಿದ್ದು, ಅಲ್ಲದೇ ದಿನಾಂಕ 21/03/2021 ರಂದು ಸಾಮಾನು ಖಾಲಿ ಮಾಡಿದ ಮನೆಯವರಿಗೂ ಕರೆ ಮಾಡಿ ಕೇಳಿದ್ದು ಅವರೂ ಸಹ ಸಾಮಾನು ಖಾಲಿ ಮಾಡಿ 21/03/2021 ರಂದು ಸಂಜೆ ಹೋಗಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 46/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 17/03/2021 ರಂದು ಬೆಳಿಗ್ಗೆ 07:00 ಗಂಟೆಗೆ ಪಿರ್ಯಾದಿದಾರರಾದ ಸುಗುಣ ನಾಯಕ್ ಗಂಡ:ನರಸಿಂಹ ನಾಯಕ್ ವಾಸ: ದಾದಬೆಟ್ಟು ಶಾಲಾ ಬಳಿ ಪಳ್ಳಿ ಗ್ರಾಮ ಕಾರ್ಕಳ ತಾಲೂಕು ಇವರ ಮಗ ದಿನೇಶ್‌ (45) ರವರು ಯಾರಲ್ಲಿಯೂ ಹೇಳದೇ ಮನೆಯಿಂದ ಹೊರಗೆ ಹೋದವರು ಈತನಕ ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ, ಚಹರೆ: ಎಣ್ಣೆ ಕಪ್ಪು ಬಣ್ಣ ಎತ್ತರ:5’8”, ಕನ್ನಡ, ಹಿಂದಿ, ತುಳು, ಕೊಂಕಣಿ ಭಾಷೆ ಮಾತನಾಡುತ್ತಾರೆ, ಕುರುಚಲು ಗಡ್ಡ, ಪ್ಯಾಂಟ್‌ ಮತ್ತು ಶರ್ಟ್ ಧರಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 38/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-03-2021 06:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080