ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕುಂದಾಪುರ: ದಿನಾಂಕ 23/02/2023  ರಂದು  15:45  ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ನಾಗರತ್ನ (47),  ಗಂಡ:  ಜಗದೀಶ್,  ವಾಸ: ಎಂ.ಡಿ ರೆಸಿಡೆನ್ಸಿ ಹೆಮ್ಮಾಡಿ  ಗ್ರಾಮ ಕುಂದಾಪುರ ತಾಲೂಕು ಇವರು  ತನ್ನ ಗಂಡ ಜಗದೀಶ್ ರವರ ಕಾರು ನಂಬ್ರ KA-20-MA-9866   ನೇದರಲ್ಲಿ ಕುಳಿತುಕೊಂಡು ಕೊಲ್ಲೂರು ಕಡೆಯಿಂದ ಹೆಮ್ಮಾಡಿ ಕಡೆಗೆ ಹೋಗುವಾಗ ದೇವಲಕುಂದ  ಗ್ರಾಮದ ದೇವಲ್ಕುಂದ ಬಸ್ ನಿಲ್ದಾಣದ  ಬಳಿ  ರಸ್ತೆಯಲ್ಲಿ ಆಪಾದಿತ ಜಗದೀಶ್ KA-20-MA-9866   ನೇ ಕಾರನ್ನು ಅತೀವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಗೆ ಅಡ್ಡ ಬಂದ ದನವನ್ನು ತಪ್ಪಿಸಲು ಹೋಗಿ ಒಂದೇ ಸಮನೇ ಬ್ರೇಕ್ ಹಾಕಿದ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಎಡ ಬದಿಯ ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ  ಪಿರ್ಯಾದಿದಾರರಿಗೆ ಎದೆಗೆ ಒಳನೋವು ಹಾಗೂ ಚಾಲಕನಿಗೆ ಎಡ ಕೈ ಗೆ  ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ  ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 23/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಕಳವು ಪ್ರಕರಣ

 • ಕಾರ್ಕಳ: ದಿನಾಂಕ 23/02/2023 ರಂದು ಬೆಳಿಗ್ಗೆ 10:30 ಗಂಟೆಯಿಂದ 11:30 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರಾದ ಶ್ರೀಮತಿ ಸಾವಿತ್ರಿ ರಾಘವೆಂದ್ರ ಭಟ್ಟ(36) , ಗಂಡ: ರಾಘವೆಂದ್ರ ಭಟ್ಟ, ವಾಸ: ಕೈಲಾಜೆ ಪಾದೆಮನೆ ಬೈದಾಳ್ ನಿಟ್ಟೆ   ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರ  ಮನೆಯ ಬಾಗಿಲಿನ ಬೀಗವನ್ನು ತೆರೆದು ಹೊರಗಿನ ಕೊಠಡಿ ಮತ್ತು ಒಳಗಿನ ಕೊಠಡಿಯಲ್ಲಿ ಇದ್ದ ಕಪಾಟಿನ ಬಾಗಿಲನ್ನು  ತೆರೆದು 4,92,000/- ರೂಪಾಯಿ ಮೌಲ್ಯದ ಸುಮಾರು 164 ಗ್ರಾಂ ತೂಕದ ಬಂಗಾರದ ಒಡವೆಗಳನ್ನು ಹಾಗೂ ನಗದು ಹಣ 5500/-  ರೂಪಾಯಿ    ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 25/2023 ಕಲಂ: 454, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಗಂಡಸು ಕಾಣೆ ಪ್ರಕರಣ

 

 • ಉಡುಪಿ: ಪಿರ್ಯಾದಿದಾರರಾದ ಶ್ರೀಪತಿ ಕಾಮತ್‌ (51) , ತಂದೆ: ದಿ. ಗೋಪಾಲ ಕಾಮತ್‌, ವಾಸ: ಮಹಾಮಾಯಿ ಕೃಪಾ, ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ, ಬೆಳ್ಳಂಪಳ್ಳಿ ಗ್ರಾಮ, ಉಡುಪಿ ತಾಲೂಕು  ಇವರ ತಮ್ಮ ಜಯರಾಮ್‌ ಕಾಮತ್‌(46) ರವರು ಜಾಂಡಿಸ್‌ ಖಾಯಿಲೆಯಿಂದ ಬಳಲುತ್ತಿದ್ದು, ದಿನಾಂಕ 16/02/2023 ರಂದು ಬೆಳಿಗ್ಗೆ ಜಾಂಡಿಸ್‌ ಖಾಯಿಲೆ ಉಲ್ಭಣಗೊಂಡಿರುವುದರಿಂದ, ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಹಗಲು ಹೊತ್ತಿನಲ್ಲಿ ಪಿರ್ಯಾದಿದಾರರು ಆರೈಕೆಯಲ್ಲಿದ್ದು, ದಿನಾಂಕ 21/02/2023 ರಂದು 15:30 ಗಂಟೆಗೆ ಪಿರ್ಯಾದಿದಾರರು ಮನೆಗೆ ಹೋಗಿದ್ದು, ಮರುದಿನ ಪಿರ್ಯಾದಿದಾರರು ಆಸ್ಪತ್ರೆಗೆ ಹೋದಾಗ ಅಲ್ಲಿ ಜಯರಾಮ್‌ ಕಾಮತ್‌ ರವರು ಇಲ್ಲದೆ ಇದ್ದು,  ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 28/2023 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಮಣಿಪಾಲ: ಪಿರ್ಯಾದಿದಾರರಾದ ಸುರೇಶ (60), ಗಂಡ: ದಿ. ಬೂದ,  ವಾಸ: ಮಂಜಶ್ರೀ ನಗರ ಕುಂಜಿಬೆಟ್ಟು ಅಂಚೆ ಶಿವಳ್ಳಿ ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ ಸೊಸೆ ಜ್ಯೋತಿ (33) ಇವರು ದಿನಾಂಕ 22/02/2023 ರಂದು ಬೆಳಿಗ್ಗೆ 09:00 ಗಂಟೆಗೆ ಮಕ್ಕಳ ನ್ನು ಶಾಲೆಗೆ ಕಳುಹಿಸಿದ್ದು ಸಂಜೆ ಮಗ ಮನೋಜ ಶಾಲೆಯಿಂದ ಮನೆಗೆ ಬಂದು ನೋಡಿದಾಗ ಮನೆಯ ಒಳಗಿನ ಕೊಣೆಯಲ್ಲಿ ತಾಯಿ ಜ್ಯೊತಿ ನೇಣು ಬೀಗಿದುಕೊಂಡಿದ್ದು ಪಿರ್ಯಾದಿದಾರರಿಗೆ ತಿಳಿಸಿದ್ದು ಪಿರ್ಯಾದದಾರರು ಬಂದು ನೋಡಿದಾಗ ಮನೆಯ ಮರದ ಜಂತಿಗೆಚೂಡಿದಾರ ವೇಲ್ ನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯ ಮಾಡಿಕೊಂಡಿದ್ದು, ಅವರು ಗಂಡ ಬಿಟ್ಟಿದ್ದು ಇದೇ ವೇದನೆಯಲ್ಲಿ ಜೀವನದಲ್ಲಿ ಜೀಗುಪ್ಸೆಗೊಂಡ ದಿನಾಂಕ 22/02/2023 ರಂದು ಬೆಳಗ್ಗೆ 09:00 ಗಂಟೆಯಿಂದ ಸಂಜೆ 16:30 ಗಂಟೆಯ ನಡುವಿನ ಸಮಯ ಆತ್ಮಹತ್ಯೆ ಮಾಡಿಕೊಂಡಿರುದಾಗಿದೆ. ಈ ಬಗ್ಗ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 08/2023 ಕಲಂ: : 174 ಸಿ.ಆರ್.ಪಿ.ಸಿಯಂತೆ ಪ್ರಕರಣ  ದಾಖಲಾಗಿರುತ್ತದೆ.
 • ಮಣಿಪಾಲ: ಪಿರ್ಯಾದಿದಾರರಾದ ಮೆಹದಿ ಮಿರ್ಜಾ (71), ತಂದೆ:, ಮಿರ್ಜಾ ಶಾನ ಮೆಹದಿ, ವಾಸ: 293/ 530 ಎ ಹೈಡರಿಂಗೇಜ್  ಲಕ್ನೋ  ಉತ್ತರ ಪ್ರದೇಶ ರಾಜ್ಯ ಇವರ ಮಗ ಅಮದ್ ಮೆಹದಿ ಮಿರ್ಜ (38) ರವರು ಮಣಿಪಾಲ ವಾಸ್ತು ಶಿಲ್ಪ ವಿದ್ಯಾಲಯದಲ್ಲಿ ಪ್ರಾದ್ಯಪಕರಾಗಿ ಕೆಲಸ ಮಾಡುತ್ತಿದ್ದು, ಾವರು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು  ಈ ಬಗ್ಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಈ ಬಗ್ಗೆ ಜೀವನದಲ್ಲಿ ಜಿಗುಪ್ಸೆಗೊಂಡು ಅಥವಾ ಇನ್ನಾವುದೋ ಸಮಸ್ಯೆಯಿಂದ ದಿನಾಂಕ 19/02/2023 ರಂದು 07:45 ಗಂಟೆಯಿಂದ 22/02/2023 ರ ಬೆಳಿಗ್ಗೆ 08:00 ಗಂಟೆಯ ಮಧ್ಯಾವಧಿಯಲ್ಲಿ ತಾನು ವಾಸವಿದ್ದ 80 ಬಡಗಬೆಟ್ಟು  ಗ್ರಾಮದ  ಮಣಿಪಾಲದ ಎಂ ಎಂ ಟವರ್ ಕಟ್ಟಡದ 4 ನೇ ಅಂತಸ್ತಿನ 405 ನೇ ರೂಮಿನ ಮಹಡಿಯ ಕೊಂಡಿಗೆ ನೈಲಾನ ಹಗ್ಗದಿಂದ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 09/2023‌ ಕಲಂ: : 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ನೇತ್ರಾವತಿ (35), ಗಂಡ: ನಾಗರಾಜ ಪೂಜಾರಿ, ವಾಸ:ಗೋಳಿಗುಂಡಿ, ಶಿರೂರು ಗ್ರಾಮ ಬೈಂದೂರು ತಾಲೂಕು ಶಿರೂರು ಗ್ರಾಮದ ಗೋಳಿಗುಂಡಿ ಎಂಬಲ್ಲಿ ವಾಸವಾಗಿದ್ದು  ಶಿರೂರು ಗ್ರಾಮದಲ್ಲಿನ  ಸರ್ವೆ ನಂಬ್ರ 72 ರಲ್ಲಿ 1.40 ಎಕ್ರೆ  ಕುಮ್ಕಿ ಜಾಗವನ್ನು ಅನಾದಿ ಕಾಲದಿಂದಲೂ  ಅನುಭವಿಸಿಕೊಂಡು ಬಂದಿರುತ್ತಾರೆ. ಆರೋಪಿತರಾದ ಭರತ್ ಮೇಸ್ತ, ಕೌಶಿಕ್ ಮೇಸ್ತ ಮತ್ತು ಪಾಂಡುರಂಗ ಮೇಸ್ತ ಇವರು ಪಿರ್ಯಾದಿದಾರರ ಜಾಗಕ್ಕೆ ಪದೇ ಪದೇ ಅಕ್ರಮ ಪ್ರವೇಶ ಮಾಡಿ ಹೆದರಿಸುತ್ತಿದ್ದು , ದಿನಾಂಕ 23/02/2023 ರಂದು ಬೆಳಿಗ್ಗೆ  09:00 ಗಂಟೆಗೆ ಪಿರ್ಯಾದಿದಾರರು ಒಬ್ಬರೇ ಮನೆಯಲ್ಲಿರುವ ಸಮಯ ಆರೋಪಿ ಪಾಂಡುರಂಗ ಮೇಸ್ತ ಮದ್ಯಪಾನ ಮಾಡಿಕೊಂಡು   ಬಂದು ಪಿರ್ಯಾದಿದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಹೋಗಿದ್ದು ಅಲ್ಲದೇ  ನಂತರ ಬಂದ ಆರೋಪಿ ಕೌಶಿಕ್ ಮೇಸ್ತ ಪಿರ್ಯಾದಿದಾರರಿಗೆ ಜೀವ ಬೆದರಿಕೆ ಹಾಕಿರುತ್ತಾನೆ.  ಭರತ್ ಮೇಸ್ತ ಸಹ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 31/2023 ಕಲಂ: 448, 354, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 24-02-2023 09:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080