ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

 • ಕುಂದಾಪುರ: ಪಿರ್ಯಾದಿ: ಶ್ರೀಮತಿ ಪದ್ಮಾ ವಿ ಶೆಟ್ಟಿ, ಪ್ರಾಯ: 59 ವರ್ಷ, ಶಾಖಾಧಿಕಾರಿಗಳು,  ಪ್ರಾಥಮಿಕ ಸಹಕಾರಿ ಕೃಷಿ ಮತ್ತುಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿಯಮಿತ ಕುಂದಾಪುರ ಇವರು ಕುಂದಾಪುರದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿಯಮಿತ ಇದರ ಶಾಖಾಧಿಕಾರಿಯಾಗಿದ್ದು, ಕುಂದಾಪುರ ತಾಲೂಕು ವಡೇರ ಹೋಬಳಿ ಗ್ರಾಮದ ನಾನಾ ಸಾಹೇಬ್‌  ರಸ್ತೆಯ ಕೊಲ್ಲೂ ಮನೆ ಎಂಬಲ್ಲಿ ವಾಸವಾಗಿರುವ ದಿ ಕಾಳಪ್ಪ ಬಂಗೇರ ಇವರ ಹೆಂಡತಿ ರತ್ನ ಮೋಗೇರ್ತಿ ಇವರ ಮಕ್ಕಳಾದ ಚೈತ್ರ, ಮೇಘನಾ, ಪ್ರಜ್ವಲ್‌, ರತ್ನ ಮೋಗೆರ್ತಿ ಇವರ ಸಹೋದರ ದಿವಂಗತ ಗಣಪ ಇವರ ಮಗ ಉದಯ ಮೆಂಡನ್‌ ಇವರು  ಎನ್ನುವವರು ಸದ್ರಿ  ಬ್ಯಾಂಕ್ ನಿಂದ ಜಮೀನು ಆಧಾರಿತ 10 ಲಕ್ಷ ರೂಪಾಯಿ ಹಣವನ್ನು ಸಾಲವನ್ನು ಪಡೆದಿದ್ದು, ದಿನಾಂಕ 15/04/2017 ರಂದು ಕುಂದಾಪುರ ಉಪನೊಂದಣಾಧಿಕಾರಿ ಆಫೀಸಿನ ದಸ್ತಾವೇಜು ನಂಬ್ರ BKI 210/2017-18 ನ್ನು ಸದ್ರಿ ಸಾಲಕ್ಕೆ ಅಡಮಾನವಾಗಿ ಅಡವು ಪತ್ರ ಮತ್ತು ಸಾಲದ ದಾಖಲಾತಿಗಳನ್ನು ಬ್ಯಾಂಕ್ ಗೆ ಬರೆದುಕೊಟ್ಟಿರುವುದಾಗಿದೆ. ಆಪಾದಿತರು ಪಡೆದುಕೊಂಡ ಸಾಲಕ್ಕೆ ಪ್ರತಿಯಾಗಿ ಸಾಲದ ಕಂತನ್ನು ಸರಿಯಾಗಿ ಮರು ಪಾವತಿ ಮಾಡದೇ ಇದ್ದು,  ಈ ಬಗ್ಗೆ ಪಿರ್ಯಾದಿದಾರರ ಬ್ಯಾಂಕಿನ ವತಿಯಿಂದ ಸಹಕಾರಿ ಸಂಘಗಳ ಉಪನಿಭಂದಕರು ಉಡುಪಿ ಇವರ ನ್ಯಾಯಾಲಯದಲ್ಲಿ ಸದ್ರಿ ಆಪಾದಿತರ ವಿರುದ್ದ ದಾವೆ ನಂಬ್ರ 233/20-21 ದಿನಾಂಕ 26/08/2021 ರಂದು ದಾವೆ ಹೂಡಿದ್ದು, ನಂತರ ಸದ್ರಿ ನ್ಯಾಯಾಲಯದ ತೀರ್ಪಿನಂತೆ  ಹಣದ ವಸೂಲಾತಿ ಬಾಬ್ತು ಕುಂದಾಪುರ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಅಮಲ್ ಜ್ಯಾರಿ ನಂಬ್ರ EX:c No 30/2021 ರಂತೆ ಅಮಲ್ ಜ್ಯಾರಿ ಅರ್ಜಿಯನ್ನು ದಾಖಲಿಸಿದ್ದು, ಸದ್ರಿ ಅಮಲ್ ಜ್ಯಾರಿಯಲ್ಲಿ ನೋಟಿಸ್ ಆದೇಶವಾಗಿರುತ್ತದೆ. ಸದ್ರಿ ಬ್ಯಾಂಕ್ ಅಡಮಾನ ಇಟ್ಟ ವಡೇರ ಹೋಬಳಿ ಗ್ರಾಮದ  ಸ.ನಂ 166-7 ನಂಜ 0.27, ಸರ್ವೆ ನಂಬರ್‌ 104-7 ನಂಜ 0.35 ಸರ್ವೆ ನಂಬ್ರ 104 ಜಮೀನಿನ ಸಾಲದ ಬಗ್ಗೆ ಆಪಾದಿತರು ಪಿರ್ಯಾದಿದಾರರ ಬ್ಯಾಂಕ್ ನ ಸಾಲವು ಮರು ಸಂದಾಯವಾಗಿರುವುದಾಗಿ ಪೋರ್ಜರಿ ದೃಡೀಕರಣವನ್ನು ಸೃಷ್ಟಿಸಿ ದಿನಾಂಕ 04/05/2017 ರಂದು ಕುಂದಾಪುರ ಸ.ರಿ ಆಫೀಸಿನ ದಸ್ತಾವೇಜು ನಂಬ್ರ 01058/2017-18 ರಂತೆ ನೋಂದಾವಣಿ ಮಾಡಿದ್ದು ಬ್ಯಾಂಕ್ ನ ಗಮನಕ್ಕೆ ಬಂದಿದ್ದು, ಸದ್ರಿ ಸಾಲ ಚುಕ್ತಾ ದೃಡೀಕರಣ ಪತ್ರವನ್ನು  ಪೋರ್ಜರಿಯಾಗಿ  ಸೃಷ್ಠಿಸಿಕೊಂಡು  ಕುಂದಾಪುರ ನೋಂದಣಿ ಕಛೇರಿಯಲ್ಲಿ ನೋಂದಾವಣೆ ಮಾಡಿ ಬ್ಯಾಂಕ್ ಗೆ ಮೋಸ ಮತ್ತು ವಂಚನೆಯನ್ನುಂಟು ಮಾಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 27/2023 ಕಲಂ: 465, 468, 471, 420 R/W 34    ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಲಾಗಿದೆ.

 ಅಸ್ವಾಭಾವಿಕ ಮರಣ ಪ್ರಕರಣ

 •  ಹೆಬ್ರಿ: ಪಿರ್ಯಾದಿ: ಪ್ರತೀಕ ಪ್ರಾಯ 25 ವರ್ಷ ತಂದೆ: ಶೇಖರ ಶೆಟ್ಟಿ ವಾಸ: ಗುಳಕಾಡು ಮೇಲ್ಮನೆ ಸೀತಾನದಿ ಅಂಚೆ ನಾಡ್ಪಾಲು ಗ್ರಾಮ ಇವರ ಅಜ್ಜ ಕುಶಲ ಶೆಟ್ಟಿ ಪ್ರಾಯ 77 ವರ್ಷ ರವರು ಪ್ರಾಯಸ್ಥರಾಗಿದ್ದು ರಕ್ತದೊತ್ತಡ ಮತ್ತು ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದರು ಅಲ್ಲದೇ ಅವರಿಗೆ ಸುಮಾರು 5 ವರ್ಷಗಳ ಹಿಂದೆ ಮೆದುಳಿಗೆ ಪಾರ್ಶ್ವ ವಾಯು ಉಂಟಾಗಿರುತ್ತದೆ ಇತ್ತೀಚಿಗೆ ಅವರಿಗೆ ರಕ್ತದೊತ್ತಡ ಮತ್ತು ಮಧುಮೇಹ ಖಾಯಿಲೆ ಉಲ್ಬಳಗೊಂಡ ವಿಚಾರದಲ್ಲಿ ಕುಶಲ ಶೆಟ್ಟಿ ರವರು ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕ ಖಿನ್ನತೆಗೆ ಒಳಗಾಗಿ ನಾಡ್ಪಾಲು ಗ್ರಾಮದ ಗುಳಕಾಡು ಮೇಲ್ಮನೆ ಎಂಬಲ್ಲಿರುವ ಮನೆಯಲ್ಲಿ ದಿನಾಂಕ: 23/02/2023 ರಂದು ರಾತ್ರಿ ಸಮಯ ಸುಮಾರು 11:30 ಗಂಟೆಗೆ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥರಾದವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ಮಾಡಿಸುವಾಗ ದಿನಾಂಕ; 24/02/2023 ರಂದು ಮುಂಜಾನೆ 02:15 ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೇ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ನಂಬ್ರ:06/2023 U/s 174 CRPC ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಉಡುಪಿ: ಪಿರ್ಯಾದಿ: ರೆ. ಪ್ರವೀಣ್‌ ಎಂ ಮಾಬೆನ್ ಪ್ರಾಯ: 44  ವರ್ಷ ತಂದೆ: ಎಡ್ವರ್ಡ್‌ ಮನೋಹರ್‌ ಮಾಬೆನ್‌ ವಾಸ: ಸಿಎಸ್‌ಐ ಕ್ರಿಸ್ತ ಮಹಿಮಾ ದೇವಾಲಯ, ಮಣಿಪುರ ಅಂಚೆ, ಕಾಪು ಇವರ ತಮ್ಮ ಮಾರ್ಟಿನ್‌ ಪ್ರಸಾದ್‌ ಮಾಬೆನ್‌ ಪ್ರಾಯ 39 ವರ್ಷ ಎಂಬವರು 12 ವರ್ಷಗಳ ಹಿಂದೆ ಮದುವೆಯಾಗಿದ್ದು, ಸಂಸಾರದಲ್ಲಿ ಸರಿ ಹೊಂದದೆ ಇರುವುದರಿಂದ ಅವರ ಹೆಂಡತಿ ಬಿಟ್ಟು ಹೋಗಿದ್ದು, ಇದೇ ಕಾರಣದಿಂದ ಮಾನಸಿಕವಾಗಿ ನೊಂದು ವಿಪರೀತ ಮದ್ಯಪಾನ ಮಾಡಿ, ಅಲೆಮಾರಿಯಾಗಿ ಸಂಚರಿಸುತ್ತಿದ್ದು, ದಿನಾಂಕ 23/02/2023 ರಂದು 17:30 ಗಂಟೆಗೆ ಉಡುಪಿ ಕ್ಲಾಕ್‌ ಟವರ್‌ ಬಳಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದವರನ್ನು ಉಡುಪಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದಲ್ಲಿ 18:08 ಗಂಟೆಗೆ ಮೃತಪಟ್ಟಿದ್ದು, ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ  ಯುಡಿಆರ್ ನಂಬ್ರ: 09/2023 ಕಲಂ 174   CrPC ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಅಮಾಸ್ಸೆಬೈಲು: ಫಿರ್ಯಾದಿ :ನರಸಿಂಹ ಪೂಜಾರಿ ಪ್ರಾಯ  60ವರ್ಷ ತಂದೆ ದಿ ಚನ್ನ ಪೂಜಾರಿ ವಾಸ ಹೊನದನೆ ಮನೆ ಜೆಡ್ಡು ಮಚ್ಚಟ್ಟು  ಗ್ರಾಮ ಇವರ  ಮಗ ರಾಜೇಶನು  ಹಂಚಿಕಟ್ಟೆ ಅಂಚೆ ಕಚೇರಿಯಲ್ಲಿ ತಾತ್ಕಾಲಿಕ ಪೋಸ್ಟಮೆನ್ ಆಗಿ ಕೆಲಸ ಮಾಡಿಕೊಂಡಿದ್ದು ಮನೆಯ ಕೃಷಿ ಕೆಲಸದ ಬಗ್ಗೆ ಸಾಲ ಮಾಡಿಕೊಂಡಿದ್ದು ಸಾಲತೀರಿಸಲಾಗದೇ  ಜೀವನದಲ್ಲಿ  ಜೀಗುಪ್ಸೆ ಗೊಂಡು ಈ ದಿನ ದಿನಾಂಕ 24/02/2023 ರಂದು ಬೆಳಿಗ್ಗೆ ೦6:೦೦ ಗಂಟೆಯ ಸಮಯಕ್ಕೆ ಮನೆಯ ಎದುರಿನ ದನದ ಕೊಟ್ಟಿಗೆಯ ಪಕ್ಕಾಸಿಗೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿದೆ . ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ  ಯು.ಡಿ.ಆರ್ ನಂ 01/2023 ಕಲಂ  :  174   CRPC . ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಹಿರಿಯಡ್ಕ: ಪಿರ್ಯಾದಿ: ಗೌರಿ ಗಂಡ: ರಾಮ ವಾಸ: ಪ್ರೇಮಾವತಿ ಹೆಗ್ಡೆ , ಸಣ್ಣಮನೆ, ಬೆಳ್ಳಂಪಳ್ಳಿ , ಕುಕ್ಕಿಕಟ್ಟೆರವರ ಕಟ್ಟಡ,ಬೆಳ್ಳಂಪಳ್ಳಿ, ಕುಕ್ಕಿಕಟ್ಟೆ ಇವರ ಗಂಡ ರಾಮ (80) ರವರು ವಯೋವೃದ್ದರಾಗಿದ್ದು ಪಿರ್ಯಾದುದಾ ರರಿಗೆ ಹಾಗೂ ಅವರ ಗಂಡನಿಗೆ ಮಕ್ಕಳಾಗಲಿ ಹಾಗೂ ರಕ್ತ ಸಂಬಂದಿಕರಾಗಲಿ ಯಾರು ಇಲ್ಲದೆ ಇದ್ದು ಒಟ್ಟಿಗೆ ಬಿಳ್ಳಂಪಳ್ಳಿಯ ಪ್ರೇಮಾವತಿ ಹೆಗ್ಡೆರವರ ಹಳೆಯ ಕಟ್ಟಡದಲ್ಲಿ ವಾಸಮಾಡಿಕೊಂಡಿದ್ದು ಪಿರ್ಯಾದುದಾರರ  ಗಂಡ ವಿಪರೀತ ಮಧ್ಯಪಾನ ಮಾಡುವ ಅಭ್ಯಾಸ ಹೊಂದಿದ್ದು ಅಲ್ಲದೆ ವಯೋವೃದ್ದರಾಗಿದ್ದರಿಂದ ಜೀವದಲ್ಲಿ ಕೃಷರಾಗಿದ್ದು ನಡೆಯಲು ಅಗದೆ ಸುಮಾರು ಮೂರು ತಿಂಗಳಿನಿಂದ ಮಲಗಿದಲ್ಲಿಯೇ ಇದ್ದು ನಿನ್ನ ದಿನ ದಿನಾಂಕ: 23/02/2023 ರಂದು  ರಾತ್ರಿ 8:30 ಗಂಟೆಯಿಂದ ಈ ದಿನ ಬೆಳಿಗ್ಗೆ 6:00 ಗಂಟೆಯ ಮಧ್ಯಾವಧಿಯಲ್ಲಿ  ಮಲಗಿದಲ್ಲಿಯೇ  ಮೃತಪಟ್ಟಿರುವುದಾಗಿದೆ. ಈ  ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ. ಯುಡಿಆರ್ ನಂಬ್ರ: 09/2023 ಕಲಂ: 174  ಸಿ ಆರ್ ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 24-02-2023 06:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080