ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹೆಬ್ರಿ: ಪಿರ್ಯಾದಿದಾರರಾದ ಪ್ರದೀಪ್‌ ಕುಮಾರ್‌(38), ತಂದೆ:  ನಾರಾಯಣ ಕರ್ಕೇರ, ವಾಸ: ಓಂಕಾರ ನಿಲಯ ದುಡ್ಡಿನಜೆಡ್ಡು ಮನೆ ಹೆಬ್ರಿ , ಗ್ರಾಮ, ಹೆಬ್ರಿ ತಾಲೂಕು ಇವರು ದಿನಾಂಕ 21/02/2022 ರಂದು ಗ್ರಾಮದ ವಾರ್ಷಿಕ ಮಾರಿ ಪೂಜೆಯ ಪ್ರಯುಕ್ತ ಬೆಳಿಗ್ಗೆ 06:00 ಗಂಟೆಗೆ ಹೆಬ್ರಿ ಗ್ರಾಮದ ನಿಸರ್ಗಧಾಮದ ಬಳಿ ಹೆಬ್ರಿ – ಸೋಮೇಶ್ವರ ರಸ್ತೆಯ ಬದಿಯಲ್ಲಿ ಕೋಳಿ ಕೊಯ್ಯಲು ನಿಂತಿರುವಾಗ  ಹೆಬ್ರಿ ಕಡೆಯಿಂದ ಅಗುಂಬೆ ಕಡೆಗೆ KA-20-AA-4148 ನೇ ಲಾರಿಯನ್ನು ಅದರ ಚಾಲಕ ಸತೀಶ್ ನಾಯ್ಕ್ ಲಾರಿಯನ್ನು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ರಸ್ತೆಯ ಬದಿಯಲ್ಲಿ ಕೋಳಿ ಕೊಯ್ಯಲು ನಿಂತಿದ್ದ ಪ್ರದೀಪ್ ಕುಮಾರ್ ಇವರ ಎಡಕಾಲಿನ ಪಾದದ ಮೇಲೆ ಲಾರಿಯ ಮುಂಭಾಗದ ಚಕ್ರವು ಹರಿದು ಹೋದ ಪರಿಣಾಮ ಅವರ ಎಡಕಾಲಿನ ಪಾದದ ಬಳಿ ಜಖಂ ಅಗಿದ್ದು. ಅಸ್ಪತ್ರೆಯ ಖರ್ಚನ್ನು ಲಾರಿಯವರು ನೀಡುತ್ತೇನೆಂದು ಭರವಸೆಯನ್ನು ನೀಡಿ ನಂತರ ಅಸ್ಪತ್ರೆಯ ಖರ್ಚು ವೆಚ್ಚವನ್ನು ನೀಡಲು ನಿರಾಕರಿಸಿರುವುದರಿಂದ ದೂರು ನೀಡಲು ವಿಳಂಬವಾಗಿರುವುದಾಗಿ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 08/2022 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 23/02/2022 ರಂದು KA-20-MA-1712 ನೇ ಕಾರಿನ ಚಾಲಕ ಸಿರಾಜ್ ಅಲ್ಲಾಭಕ್ಷ ಮುಲ್ಲಾ ತನ್ನ ಕಾರನ್ನು ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 169(ಎ) ರಲ್ಲಿ ಚಲಾಯಿಸಿಕೊಂಡು ಬಂದು ಬೆಳಿಗ್ಗೆ 10:45 ಗಂಟೆಗೆ ಶಿವಳ್ಳಿ ಗ್ರಾಮದ ಶಾರದ ಕಲ್ಯಾಣ ಮಂಟಪ ಜಂಕ್ಷನ್ ಬಳಿ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ತೀರಾ ಎಡಬದಿಗೆ ಬಂದು  ಕುಂಜಿಬೆಟ್ಟು ಶಾಖಾ ವ್ಯಾಪ್ತಿಯ ಮೆಸ್ಕಾಂ ವಿಭಾಗಕ್ಕೆ ಸಂಬಂಧಪಟ್ಟ ಸ್ಟನ್ ಪೋಲ್ ಕಂಬಕ್ಕೆ  ಡಿಕ್ಕಿ ಹೊಡೆದ ಪರಿಣಾಮ ಸ್ಟನ್ ಪೋಲ್ ಕಂಬ ಜಖಂಗೊಂಡಿದ್ದು ಕಾರಿನ ಮುಂಭಾಗ ಜಖಂಗೊಂಡಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾದ ಕ್ರಮಾಂಕ 18/2022 ಕಲಂ: 279 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 23/02/2022  ರಂದು ಪಿರ್ಯಾದಿದಾರರಾದ ನಾಗರಾಜ ಭಂಡಾರಿ (30), ತಂದೆ:ಗೋಪಾಲ ಭಂಡಾರಿ, ವಾಸ: ಜನ್ಸಾಲೆ ಅಂಚೆ ಸಿದ್ದಾಪುರ ಗ್ರಾಮ ಕುಂದಾಪುರ ತಾಲೂಕು ಇವರ ತಂದೆ ಗೋಪಾಲ  ಭಂಡಾರಿ ಇವರು ಬೈಂದೂರು ತಾಲೂಕಿನ  ಹಳ್ಳಿಹೊಳೆ ಗ್ರಾಮದ ಶೆಟ್ಟಿಪಾಲು ಎಂಬಲ್ಲಿ KA-20-ER-8119 ನೇ ನಂಬ್ರದ ಸ್ಕೂಟಿ ಚಲಾಯಿಸಿಕೊಂಡು ಸಿದ್ದಾಪುರ ಕಡೆಗೆ ಬರುತ್ತಿರುವಾಗ ಆರೋಪಿ  KA-20-EM-1843 ನೇ ನಂಬ್ರದ ಮೋಟಾರ್ ಸೈಕಲ್‌‌ನ್ನು ಸಿದ್ದಾಪುರ ಕಡೆಯಿಂದ ಅತೀವೇಗ ಹಾಗೂ  ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು    ಡಿಕ್ಕಿ  ಹೊಡೆದ ಪರಿಣಾಮ KA-20-ER-8119  ನೇ  ನಂಬ್ರದ   ಸ್ಕೂಟಿ   ಸವಾರ     ಗೋಪಾಲ  ಭಂಡಾರಿ   ಇವರ   ಕಣ್ಣು  , ಕೈ  ಎದೆಯ ಬಳಿ,  ಸೊಂಟಕ್ಕೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2022  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ     

  • ಉಡುಪಿ: ಪಿರ್ಯಾದಿದಾರರಾದ ನೊಯಲ್ ಪ್ರಶಾಂತ್ ಕರ್ಕಡ (39), ತಂದೆ :ದಿ. ಜೋಸೆಫ್ ಕರ್ಕಡ, ವಾಸ: ಮನೆ ನಂಬ್ರ 5-1-64 ಯು.ಬಿ.ಎಮ್. ಜುಬಲಿ ಚರ್ಚ ಹತ್ತಿರ, ಮಿಷನ್ ಕಂಪೌಂಡ್ , 76 ಬಡಗುಬೆಟ್ಟು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ದಿನಾಂಕ 23/02/2022 ರಂದು ಕರ್ತವ್ಯದ ಸಲುವಾಗಿ ಹೋಗಿದ್ದು ಮನೆಯಲ್ಲಿ ವಯಸ್ಸಾದ ತಾಯಿ ಒಬ್ಬರೇ ಇದ್ದು, ಮಧ್ಯಾಹ್ನ 12:00 ಗಂಟೆಯಿಂದ ಸಂಜೆ 4:00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲನ್ನು ದೂಡಿಕೊಂಡು ಪಿರ್ಯಾದಿದಾರರ ತಾಯಿಗೆ ತಿಳಿಯದಂತೆ ಮನೆಯ ಒಳಗೆ ಬಂದು ಹಾಲ್ ನಲ್ಲಿ ಇಟ್ಟಿದ್ದ ಹೆಚ್ ಪಿ ಕಂಪೆನಿಯ ಲ್ಯಾಪ್ ಟಾಪ್ ಮತ್ತು ನೋಕಿಯ ಕಂಪೆನಿಯ ಮೊಬೈಲ್ ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತಿನ ಒಟ್ಟು ಮೌಲ್ಯ 52 ಸಾವಿರ ರೂಪಾಯಿ ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 35/2022, ಕಲಂ: 454,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.       

ಇತರ ಪ್ರಕರಣ

  • ಶಂಕರನಾರಾಯಣ: ಆರೋಪಿಗಳಾದ 1. ಸಂಜೀವ ನಾಯ್ಕ, 2.ಶ್ರೀನಿವಾಸ  ನಾಯ್ಕ, 3. ಆನಂದ  ನಾಯ್ಕ ವಾಸ: ಯಡಮೊಗ್ಗೆ ಗ್ರಾಮ  ಕುಂದಾಪುರ  ತಾಲೂಕು ಇವರು ಪಿರ್ಯಾದಿದಾರರಾದ ಸಂತೋಷ  ನಾಯ್ಕ(45),  ತಂದೆ: ಚಿಕ್ಕ ನಾಯ್ಕ,  ವಾಸ: ಕಾರಿಗದ್ದೆ  ಯಡಮೊಗ್ಗೆ  ಗ್ರಾಮ  ಕುಂದಾಪುರ  ತಾಲೂಕು ಇವರ  ನೆರೆಕೆರೆಯವರಾಗಿದ್ದು, ಹಲವು ದಿನಗಳಿಂದ ಪಿರ್ಯಾದಿದಾರರಿಗೆ ಹಾಗೂ  ಅವರ  ಮನೆಯವರಿಗೆ  ಮಾನಸಿಕ ಹಿಂಸೆ ನೀಡುತ್ತಿದ್ದು,  ಅದರಂತೆ ದಿನಾಂಕ 23/02/2022 ರಂದು ಪಿರ್ಯಾದಿದಾರರು ಮನೆಯಲ್ಲಿ  ಇರುವಾಗ ಅರೋಪಿಗಳು ಕೈಯಲ್ಲಿ  ಮಾರಕಾಯುಧ  ಹಿಡಿದುಕೊಂಡು  ಬಂದು ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ  ಶಬ್ದದಿಂದ  ಬೈದು   ಹಲ್ಲೆ ಮಾಡಲು  ಮುಂದಾಗಿ  ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2022  ಕಲಂ: 447, 504, 506  ಜೊತೆಗೆ  34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-02-2022 09:33 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080