ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ವೆಂಕಟು  ಪೂಜಾರಿ (41), ತಂದೆ:ರಾಮ ಪೂಜಾರಿ, ವಾಸ: ಚಂದ್ರಳ್ಳಿ ಮನೆ ಹೇರೂರು ಗ್ರಾಮ ಬೈಂದೂರು ತಾಲೂಕು  ಇವರು ದಿನಾಂಕ 23/02/2021 ರಂದು ಅವರ ಮೋಟಾರ್ ಸೈಕಲ್ ನಲ್ಲಿ ಹೇರೂರಿನಿಂದ ಹೊರಟು ರಾಷ್ಟ್ರೀಯ ಹೆದ್ದಾರಿ 66 ರ ಪಶ್ಚಿಮ ಬದಿಯ ರಸ್ತೆಯಲ್ಲಿ 4:30 ಗಂಟೆಗೆ ಕಂಬದ ಕೋಣೆ ಪದವಿ ಪೂರ್ವ ಕಾಲೇಜು ಹತ್ತಿರ ಹೋಗುತ್ತಿರುವಾಗ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಒಂದು ಮೋಟಾರು ಸೈಕಲ್ ಸವಾರನು ಅತೀವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ರಸ್ತೆಯ ತೀರ ಎಡಬದಿಗೆ ಚಲಾಯಿಸಿ ಪಶ್ಚಿಮ ಬದಿಯ ರಸ್ತೆಯಲ್ಲಿ ರಸ್ತೆ ದಾಟಲು ನಿಂತುಕೊಂಡಿದ್ದ ಹುಡುಗನಿಗೆ ಢಿಕ್ಕಿ ಹೊಡೆದು ಬೈಕ್  ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಪಿರ್ಯಾದಿದಾರರು ಹೋಗಿ ನೋಡಲಾಗಿ ಗಾಯಗೊಂಡ ಹುಡುಗ ಪಿರ್ಯಾದಿದಾರರ ಪರಿಚಯದ ರಾಘವೇಂದ್ರ ಶೆಟ್ಟಿ ಎಂಬುವವನಾಗಿದ್ದು ಮೋಟಾರ್ ಸೈಕಲ್ ಡಿಕ್ಕಿ ಹೊಡೆದ ಪರಿಣಾಮ ರಾಘವೇಂದ್ರ ಶೆಟ್ಟಿಯ ಬಲಕಾಲಿಗೆ, ಬಲಕೈಗೆ ರಕ್ತಗಾಯವಾಗಿದ್ದು ಮೋಟಾರ್ ಸೈಕಲ್ ಸವಾರನಿಗೆ ಸಣ್ಣಪುಟ್ಟ ತರಚಿದ ಗಾಯವಾಗಿರುತ್ತದೆ. ಗಾಯಗೊಂಡ ರಾಘವೇಂದ್ರ ಶೆಟ್ಟಿಯವರನ್ನು 108 ನೇ ಅಂಬುಲೆನ್ಸ್ ವಾಹನದಲ್ಲಿ ಚಿಕಿತ್ಸೆಯ ಬಗ್ಗೆ  ಕುಂದಾಪುರದ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 48/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ಪಿರ್ಯಾದಿದಾರರಾದ ಡೇವಿಡ್ ಕರ್ಕಡ (64), ತಂದೆ: ದಿ. ಜೆ.ಪಿ ಕರ್ಕಡ , ವಾಸ: ಕರ್ಕಡ ಕಾಂಪೌಂಡು, ಪಿತ್ರೋಡಿ ಉದ್ಯಾವರ ಗ್ರಾಮ ಉಡುಪಿ ತಾಲೂಕು ಇವರು ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 22/02/2021 ರಂದು ತನ್ನ ಆಟೋ ರಿಕ್ಷಾ ನಂಬ್ರ KA-20-C-3751ನ್ನು ಚಲಾಯಿಸಿಕೊಂಡು ಉಡುಪಿ –ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ಲ್ಲಿ  ಹೋಗುತ್ತಿದ್ದಾಗ ಸಂಜೆ 5:45 ಗಂಟೆಗೆ ಉದ್ಯಾವರ ಹಲಿಮಾ ಸಬ್ಜು ಹಾಲ್‌ ‌ಬಳಿ ತಲುಪುತ್ತಿದ್ದಂತೆ  ಪಿರ್ಯಾದಿದಾರರ ಹಿಂದಿನಿಂದ ಉಡುಪಿ ಕಡೆಯಿಂದ ಓರ್ವ ಕಾರು ಚಾಲಕ ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ರಿಕ್ಷಾಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಿಕ್ಷಾದಿಂದ ಹಾರಿ ರಸ್ತೆಗೆ ಬಿದ್ದಿದ್ದು,  ರಿಕ್ಷಾವು ಮುಂದಕ್ಕೆ ಚಲಿಸಿ ಹೊಂಡಕ್ಕೆ ಬಿದ್ದಿರುತ್ತದೆ.  ಇದರಿಂದ ಪಿರ್ಯಾದಿದಾರರ ಹಣೆಯ ಎಡಬದಿಗೆ, ಮೂಗಿನ ಎಡಬದಿ, ಎಡ ಕಣ್ಣಿನ ಕೆಳಭಾಗಕ್ಕೆ  ರಕ್ತ ಗಾಯವಾಗಿದ್ದು,  ಹೊಟ್ಟೆಯ ಎಡಬದಿಗೆ, ಬಲ ಕೈ ಮುಂಗೈಗೆ, ಮಣಿಗಂಟಿನ ಬಳಿ, ಎಡಕೈ ಮಣಿಗಂಟಿನ ಬಳಿ ಎರಡೂ ಕಾಲುಗಳ ಮೊಣಗಂಟಿಗೆ, ಬಲಕಾಲಿನ ಕೋಲು ಕಾಲಿಗೆ ಬಲಕಾಲಿನ ಪಾದದ ಮೇಲ್ಬಾಗಕ್ಕೆ  ತರಚಿದ ಗಾಯವಾಗಿರುತ್ತದೆ.  ಅಪಘಾತ ಉಂಟು ಮಾಡಿದ ಕಾರಿನ ನಂಬ್ರ ನೋಡಲಾಗಿ KL-42-Q-5776 ಆಗಿದ್ದು ಅದರ ಚಾಲಕನ ಹೆಸರು ಬೇಜಿಯೋ ಮ್ಯಾಥ್ಯೂ ಆಗಿರುತ್ತದೆ. ಪಿರ್ಯಾದಿದಾರರು ತನಗಾದ ಗಾಯದ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 25/2021  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಕೋಟ: ದಿನಾಂಕ  20/02/2021 ರ ಬೆಳಿಗ್ಗೆ 11:00 ಗಂಟೆಗೆ  ಪಿರ್ಯಾದಿದಾರರಾದ ಕೆ.ಗಿರೀಶ  ನಾಯಕ್‌ (55), ತಂದೆ: ದಿ. ಬಾಬುರಾಯ  ನಾಯಕ್‌, ವಾಸ: ಹಿರೇ  ಮಹಾಲಿಂಗೇಶ್ವರ  ದೇವಸ್ಥಾನದ  ಹತ್ತಿರ, ಕೋಟ ಬ್ರಹ್ಮಾವರ  ತಾಲೂಕು,  ಉಡುಪಿ ಜಿಲ್ಲೆ ಇವರು ಹೆಂಡತಿಯ ಸಂಬಂಧಿಯವರ ಗೃಹ  ಪ್ರವೇಶಕ್ಕೆ ಕೋಟಾದಿಂದ ಕಾರ್ಕಳಕ್ಕೆ ಅವರ  ಹೆಂಡತಿ  ಮತ್ತು  ಮಗನೊಂದಿಗೆ ಹೋಗಿದ್ದು ಹೋಗುವಾಗ ಮನೆಯಲ್ಲಿ ಪಿರ್ಯಾದಿದಾರರ ತಾಯಿ ಶ್ರೀಮತಿ ವಿಮಲಾ ನಾಯಕ್‌ (90) ರವರು ಒಬ್ಬರೇ  ಇದ್ದಿರುತ್ತಾರೆ. ಹೆಂಡತಿ  ಮನೆಯಾದ ಕಾರ್ಕಳದಲ್ಲಿ ಪಿರ್ಯಾದಿದಾರರು ಗೃಹ ಪ್ರವೇಶ ಕಾರ್ಯಕ್ರಮ ಮುಗಿಸಿ ಅದೇ ದಿನ  ಸಂಜೆ 7:00 ಗಂಟೆಗೆ ಹೆಂಡತಿ ಮತ್ತು ಮಗನೊಂದಿಗೆ ಅವರ ಕೋಟದ  ಮನೆಗೆ ವಾಪಸು  ಬಂದಿರುತ್ತಾರೆ. ಕಾರ್ಯಕ್ರಮಕ್ಕೆ ಹೋಗುವಾಗ ಧರಿಸಿಕೊಂಡ ಆಭರಣಗಳನ್ನು ಸ್ವಚ್ಚಗೊಳಿಸಿ ದಿನಾಂಕ 23/02/2021 ರಂದು ಮಧ್ಯಾಹ್ನ 3:00 ಗಂಟೆಗೆ  ಮನೆಯ ಗೊದ್ರೇಜ್‌ನಲ್ಲಿ ಇಡಲು ಪಿರ್ಯಾದಿದಾರರು ಗೋದ್ರೇಜನ ಬಾಗಿಲನ್ನು ತೆಗೆದು ಒಳ ಬಾಗಿಲಿನಲ್ಲಿ ಅಂದರೆ ಲಾಕರ್‌ನಲ್ಲಿ ನೋಡುವಾಗ ಬಾಗಿಲು ಒಪನ್‌ ಆಗಿದ್ದು  ಅದರಲ್ಲಿದ್ದ ಪಿರ್ಯಾದಿದಾರರ ಹೆಂಡತಿಯ  ಚಿನ್ನದ  ಆಭರಣಗಳಾದ 1)  ಚಿನ್ನದ ಒಂದು  ಜೊತೆ ಬೆಂಡೋಲೆ-1 ½  ಪವನ್‌ ಇರುತ್ತದೆ. 2) ಚಿನ್ನದ ಚಕ್ರ ಸರ-1 , ತೂಕ  4  ಪವನ್‌, 3) ರೇಡಿಯೋ ಚೈನ್‌ ಕನ್ನಡದಲ್ಲಿ ಗಿರೀಶ ಎಂದು ಪೆಂಡೆಂಟ್‌ ಇರುತ್ತದೆ. ತೂಕ  2 ½ ಪವನ್‌, 4) ಅರ್ಧ ಪವನ  ಉಂಗುರಗಳು-05, ತೂಕ 2 ½ ಪವನ್‌, 5) ಚಿನ್ನದ  ಉಂಗುರ-01, ತೂಕ 1 ½ ಪವನ್‌, 6)  ಬೆಳ್ಳಿಯ ಕಾಲು ದೀಪ-1, 7) ಬೆಳ್ಳಿಯ ಕಾಲು ಉಂಗುರ -01, 8) ಬೆಳ್ಳಿಯ ಸೊಂಟದ ದಾರ-01 ಒಟ್ಟು 12 ಪವನ್‌ ತೂಕದ  ಚಿನ್ನಾಭರಣಗಳನ್ನು ಯಾರೋ ಕಳ್ಳರು ಲಾಕರ್‌ನ  ಕೀಯನ್ನು  ತಗೆದು ಲಾಕರ್‌ನಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಹೋಗಿ, ಬಳಿಕ ಲಾಕರ್‌ ಬಾಗಿಲನ್ನು ಹಾಕಿ  ಗೊದ್ರೇಜ್‌ನ  ಬಾಗಿಲನ್ನು ಲಾಕ್‌ ಮಾಡಿ ಅದರ ಬೀಗದ ಕೀಯನ್ನು ಕೋಣೆಯ ಇನ್ನೊಂದು ಬದಿಯಲ್ಲಿ  ಚೀಲದಲ್ಲಿ ಇಟ್ಟಿರುತ್ತಾರೆ. ಪಿರ್ಯಾದಿದಾರರ ಮನೆಯಿಂದ ಕಳ್ಳತನವಾದ  ಚಿನ್ನಾಭರಣಗಳ ಹಾಗೂ ಬೆಳ್ಳಿಯ ಒಟ್ಟು ಮೌಲ್ಯ  5,00,000/-  ರೂಪಾಯಿ ಆಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 35/2021  ಕಲಂ : 454, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಶಂಕರನಾರಾಯಣ: ದಿನಾಂಕ 22/02/2021 ರಂದು 13:30 ಗಂಟೆಗೆ ಪಿರ್ಯಾದಿದಾರರಾದ ಸುದ್ರೀಂದ್ರ  ಕುಲಾಲ್ (30), ತಂದೆ: ನಾಗು ಕುಲಾಲ್, ವಾಸ: ಮಡವಳ್ಳಿ  76 ಹಾಲಾಡಿ ಗ್ರಾಮ ಕುಂದಾಪುರ  ತಾಲೂಕು ಇವರ ತಂದೆ ನಾಗು ಕುಲಾಲ್ (65) ಇವರು ಕುಂದಾಪುರ ತಾಲೂಕಿನ 76 ಹಾಲಾಡಿ ಗ್ರಾಮದ ಮುಡವಳ್ಳಿ ಎಂಬಲ್ಲಿ ಮನೆಯ ಹತ್ತಿರದ  ಹೊಲಕ್ಕೆ ದರಲೆ  ತರಲು ಹೋದವರು ವಾಪಸು ಮನೆಗೆ ಬಾರದೇ ಇದ್ದು ಅವರನ್ನು ಹುಡುಕುತ್ತಾ ಹೋಗಿದ್ದು ದಿನಾಂಕ 23/02/2021 ರಂದು 15:00 ಗಂಟೆಗೆ ನಾಗು  ಕುಲಾಲ್ ಇವರ ಮೃತದೇಹ ದಬ್ಬಾಡಿ ಹೊಳೆಯ ನೀರಿನಲ್ಲಿ ತೇಲುತ್ತಿತ್ತು, ನಾಗು ಕುಲಾಲ್ ಇವರು ದರಲೆ ತರಲು ಹೋದವರು ಅಕಸ್ಮಾತ್ ಕಾಲು ಜಾರಿ ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ  ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 06/2021 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      

ಇತ್ತೀಚಿನ ನವೀಕರಣ​ : 24-02-2021 09:45 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080