ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ವಿಠಲ್ ಹಾಲನ್ನವರ್ (25), ತಂದೆ: ನಾಗಪ್ಪ, ವಾಸ: 6ನೇ ವಾರ್ಡ್‌, ಗುಳೆದಗುಡ್ಡ, ಮುಖೇಶ್ವರಿ ನಗರ, ಬಾಗಲಕೋಟೆ ಹಾಗೂ ಅವರ ಅಕ್ಕನ ಗಂಡ ಸಿದ್ದಪ್ಪ ಎಂಬುವವರು ದಿನಾಂಕ 23/02/2021 ರಂದು ಕೆಲಸ ಮುಗಿಸಿಕೊಂಡು ರಾತ್ರಿ ಇಬ್ಬರೂ ಮನೆಯ ಸಾಮಾನು ತರಲು ನಡೆದುಕೊಂಡು ಅಂಗಡಿಗೆ ಹೊರಟು ಉಪ್ಪೂರು ಗ್ರಾಮದ ಕೊಳಲಗಿರಿಯಲ್ಲಿರುವ ಗೇರು ಬೀಜದ ಫ್ಯಾಕ್ಟರಿ ಎದುರು ರಸ್ತೆ ದಾಟಲು ಸಿದ್ದಪ್ಪನವರು ನಿಂತುಕೊಂಡಿದ್ದು ಅವರಿಂದ ಸ್ವಲ್ಪ ಹಿಂದುಗಡೆಯಿಂದ ಪಿರ್ಯಾದಿದಾರರು ನಡೆದುಕೊಂಡು ಬರುತ್ತಿರುವಾಗ ರಾತ್ರಿ  8:30 ಗಂಟೆಗೆ ಆರೋಪಿ ದೀಕ್ಷಿತ್ ತನ್ನ KA-20-EV-5927 ನೇ ನಂಬ್ರದ ಹೊಂಡಾ ಶೈನ್ ಮೋಟಾರ್ ಸೈಕಲ್‌ನ್ನು ಕೆ.ಜಿ ರೋಡ್‌ ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಂದು ವಾಹನವನ್ನು ಓವರ್ ಟೇಕ್ ಮಾಡಿ ರಸ್ತೆಯ ತೀರಾ ಬಲ ಭಾಗಕ್ಕೆ ಬಂದು ರಸ್ತೆ ದಾಟಲು ನಿಂತಿದ್ದ ಸಿದ್ಧಪ್ಪ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಸಿದ್ಧಪ್ಪ ರವರು ರಸ್ತೆಗೆ ಬಿದ್ದಿದ್ದು ಹಾಗೂ ಅವರ ಬಲಕಾಲಿನ ಕೋಲು(ಪಾದದಿಂದ ಮೇಲ್ಭಾಗ) ಕಾಲಿನ ಮೂಳೆ ಮುರಿದು ನೇತಾಡುತ್ತಿದ್ದು, ಎಡಕೈಗೆ ತರಚಿದ ಗಾಯವಾಗಿರುತ್ತದೆ. ಗಾಯಾಳು ಸಿದ್ದಪ್ಪ ರವರನ್ನು ಚಿಕಿತ್ಸೆ ಬಗ್ಗೆ ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 30/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಜುಗಾರಿ ಪ್ರಕರಣ

 • ಕೊಲ್ಲೂರು: ದಿನಾಂಕ 24/02/2021 ರಂದು ನಾಸೀರ್ ಹುಸೇನ್, ಪೊಲೀಸ್ ಉಪನಿರೀಕ್ಷಕರು ಕೊಲ್ಲೂರು ಪೊಲೀಸ್ ಠಾಣೆ ಇವರಿಗೆ ಬೈಂದೂರು ತಾಲೂಕು ಜಡ್ಕಲ್‌ ಗ್ರಾಮದ ಬಸ್ರೀಬೇರು ಎಂಬಲ್ಲಿ ಸಾರ್ವಜನಿಕ ಹಾಡಿ ಸ್ಥಳದಲ್ಲಿ ಆರೋಪಿ 1] ಸಿಯಾನ್‌ (35), ತಂದೆ: ಮ್ಯಥ್ಯೋ  ಕುರಿಯನ್‌, ವಾಸ:ಕರ್ಕಾಡಿ ಹೌಸ್‌ ಜಡ್ಕಲ್‌ ಗ್ರಾಮ ಬೈಂದೂರು ತಾಲೂಕು, 2] ಹನಿ  ಕೆ.ಕೆ (46), ತಂದೆ: ಕೆ.ಎಮ್‌. ಕುರಿಯ ಕೋಸ್‌, ವಾಸ: ಸಿಮ್‌ಸಾಲ್‌ ಸೆಳ್ಕೋಡು  ಜಡ್ಕಲ್  ಗ್ರಾಮ  ಬೈಂದೂರು ತಾಲೂಕು,  3] ಗಿರೀಶ .ಟಿ.ಕೆ (42), ತಂದೆ: ದಿ: ಕುರಿಯ ಕೋಸ್‌, ವಾಸ:ತೆಂಗಿನಹಳ್ಳಿ ಮನೆ  ಬೀಸಿನಪಾರೆ  ಜಡ್ಕಲ್‌ ಗ್ರಾಮ  ಬೈಂದೂರು ತಾಲೂಕು,  4] ಸನೀಶ (36), ತಂದೆ:ದಿ. ಕುರಿಯನ್‌, ವಾಸ: ಪೂತ್ತೂರು ಹೌಸ್ ಕೋರೆಮುಖ ಮುದೂರು ಗ್ರಾಮ ಬೈಂದೂರು ತಾಲೂಕು, 5] ಸಜಿ ಜಾರ್ಜ್‌ (38), ತಂದೆ: ಜಾರ್ಜ್‌, ವಾಸ: ಜೋಶನಾಡಿ ಹೌಸ್‌ ಬೀಸಿನಪಾರೆ ಜಡ್ಕಲ್‌ ಗ್ರಾಮ ಬೈಂದೂರು ತಾಲೂಕು, 6] ಸಂತೋಷ (38), ತಂದೆ: ದಿ.ಅಪ್ಪಚ್ಚನ್‌, ವಾಸ:ಕಲ್ಯಾಣಿಗುಡ್ಡೆ  ಕೊಲ್ಲೂರು ಗ್ರಾಮ  ಬೈಂದೂರು ತಾಲೂಕು  ಮತ್ತು  7] ಅನಿಲ್‌ (42), ತಂದೆ: ಅಪ್ಪಚ್ಚನ್‌, ವಾಸ: ಬಸ್ರೀ ಬೇರು ಜಡ್ಕಲ್‌ಗ್ರಾಮ ಬೈಂದೂರು ತಾಲೂಕು ಇವರು ಇಸ್ಪೀಟು ಎಲೆಗಳಿಂದ ಅಂದರ್‌ಬಾಹರ್‌ ಆಡುತ್ತಿರುವುದಾಗಿ ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದು ಆರೋಪಿಗಳು ಜೂಜಾಟಕ್ಕೆ ಉಪಯೋಗಿಸಿದ ನಗದು ರೂಪಾಯಿ 2,640 /-, ಇಸ್ಪೀಟು ಎಲೆಗಳು-52, ಹಳೆಯ  ನ್ಯೂಸ್‌ಪೇಪರ್‌-1 ನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 08/2021  ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.   

ಗಂಡಸು ಕಾಣೆ ಪ್ರಕರಣ

 • ಹೆಬ್ರಿ: ಪಿರ್ಯಾದಿದಾರರಾದ ಶ್ರೀಮತಿ ದೀಪಾ (27), ಗಂಡ: ಬಸವರಾಜ ಶಿವಪ್ಪ ಬದ್ರ ಶೆಟ್ಟಿ, ವಾಸ: ಆದರ್ಶ ನಗರ ಚಿಕ್ಕಮಲ್ಲಿಗವಾಡ ರಸ್ತೆ ಧಾರವಾಡ ತಾಲೂಕು ಮತ್ತು ಜಿಲ್ಲೆ ಇವರ ಗಂಡ ಬಸವರಾಜ್ ಶಿವಪ್ಪ ಬದ್ರಶೆಟ್ಟಿ  (27)  ಇವರು ಒಂದು ತಿಂಗಳಿಂದ ಧಾರವಾಡ ಜಿಲ್ಲೆಯ ಕರಡಿಕೊಪ್ಪ ನಿವಾಸಿ ಶಿವಾನಂದ ಇವರ ಮಾಲಕತ್ವದ KA-26-A-0761 ನೇ ಟಾಟಾ 1109 ಲಾರಿಯಲ್ಲಿ ಚಾಲಕರಾಗಿರುತ್ತಾರೆ. ಅವರು ದಿನಾಂಕ 19/02/2021 ರಂದು KA-26-A-0761 ನೇ ಟಾಟಾ 1109 ಲಾರಿಯಲ್ಲಿ ಧಾರವಾಡದ ಬೇಲೂರು ಇಂಡಸ್ಟೀಸ್ ಏರಿಯದಲ್ಲಿರುವ ಸೌರ್ತನ್ ಪೆರೋ ಸ್ಟೀಲ್ ಲಿಮಿಟೆಡ್ ಕಂಪನಿಯಿಂದ ಕ್ರಷರ್ ಗೆ ಸಂಬಂದಿಸಿದ ಮಿಷನರಿ ಸರಕುಗಳನ್ನು ಲೋಡ್ ಮಾಡಿಕೊಂಡು ಅದನ್ನು ಉಡುಪಿ ಜಿಲ್ಲೆಯ ಶಿವಪುರದ ಖಜಾನೆಯಲ್ಲಿರುವ ಯು.ಎಸ್.ಕೆ ಕ್ರಷರ್ ಗೆ ಮತ್ತು ಕಾರ್ಕಳದ ರೇಂಜಾಳ ಮತ್ತು ಸೂಡಾ ಎಂಬಲ್ಲಿರುವ ಕ್ರಷರ್ ಗೆ ಕಳುಹಿಸಿಕೊಟ್ಟಿದ್ದು. ಅದರಂತೆ ಚಾಲಕ ಬಸವರಾಜ್ ದಿನಾಂಕ 20/02/2021 ರಂದು ಲಾರಿಯಲ್ಲಿರುವ ಮಿಷನರಿ ಸರಕು ಸಮೇತ ಸಂಜೆ 4:18 ಗಂಟೆಗೆ ಉಡುಪಿ ಜಿಲ್ಲೆಯ ಶಿವಪುರ ಖಜಾನೆ ಎಂಬಲ್ಲಿರುವ ಯು.ಎಸ್.ಕೆ ಕ್ರಷರ್ ಗೆ ಮಿಷನರಿ ಸರಕನ್ನು ಅನ್ ಲೋಡ್ ಮಾಡಿ ನಂತರ ಅಲ್ಲಿಂದ ಸಂಜೆ 4:55 ಗಂಟೆಗೆ ಹೊರಟು ಉಳಿದ ಮಿಷನರಿ ಸರಕುಗಳನ್ನು ಕಾರ್ಕಳದ ರೇಂಜಳ ಮತ್ತು ಸೂಡಾ ಕ್ರಷರ್ ಗೆ  ಹಾಕುತ್ತೇನೆಂದು ಲಾರಿಯನ್ನು ಚಲಾಯಿಸಿಕೊಂಡು ಹೋದವರು ಅಲ್ಲಿಗೂ ಮಿಷನರಿ ಸರಕುಗಳನ್ನು ಹಾಕದೇ ಲಾರಿಯಲ್ಲಿರುವ ಮಿಷನರಿ ಸರಕು ಸಮೇತ ಚಾಲಕ ಬಸವರಾಜ್  ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 11/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

  ಇತರ ಪ್ರಕರಣ

 • ಮಣಿಪಾಲ: ಪಿರ್ಯಾದಿದಾರರಾದ ಕಾಳು ನಾಯ್ಕ (75) , ತಂದೆ: ದಿ. ವಿಟ್ಟು ನಾಯ್ಕ, ವಾಸ: ಕಂಚಿನ ಬೈಲು, ಹಿರೇಬೆಟ್ಟು ಗ್ರಾಮ, ಉಡುಪಿ ತಾಲೂಕು ಹಾಗೂ ನೆರೆಯವರಾದ ಆರೋಪಿತರಾದ 1. ಭಾಸ್ಕರ ಶೆಟ್ಟಿ (60), ತಾಯಿ: ಶಾರಾದ ಹೆಗ್ಗಡ್ತಿ, 2. ಶಾರಾದ ಹೆಗ್ಗಡ್ತಿ, ಗಂಡ: ದಿ. ದೇವದಾಸ್ ಹೆಗ್ಡೆ ಇವರಿಗೂ ಜಾಗದ ವಿಷಯದಲ್ಲಿ ತಂಟೆ-ತಕರಾರುಗಳಿದ್ದು, ದಿನಾಂಕ 21/12/2020 ರಂದು ಆರೋಪಿತರುಗಳು ಪಿರ್ಯಾದಿದಾರರಿಗೆ ಸೇರಿದ ಉಡುಪಿ ತಾಲೂಕು ಹಿರೇಬೆಟ್ಟು ಗ್ರಾಮದ ಕಂಚಿನಬೈಲು ಎಂಬಲ್ಲಿ ಸರ್ವೇ ನಂ-117/2 ನೇದಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ.  ಇದನ್ನು ಪಿರ್ಯಾದಿದಾರರು ಪ್ರಶ್ನಿಸಿದಾಗ ಆರೋಪಿತರುಗಳು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 24/2021 ಕಲಂ : 447, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-02-2021 06:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080