ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಕರುಣಾಕರ ಶೆಟ್ಟಿ  (64), ತಂದೆ: ದಿ: ಅಣ್ಣಪ್ಪ ಶೆಟ್ಟಿ, ವಾಸ: ದೇವಸ್ಥಾನದ ಮನೆ, ಕಾಡೂರು ಬ್ರಹ್ಮಾವರ ತಾಲೂಕು ಇವರ ಪಕ್ಕದ ಮನೆಯಲ್ಲಿ ಪಿರ್ಯಾದಿದಾರರ ಹೆಂಡತಿಯ ಅಕ್ಕ ಲಕ್ಷೀ ಶೆಡ್ತಿಯವರು  ಮಗ ಪ್ರದೀಪ ಶೆಟ್ಟಿ (37) ಯವರೊಂದಿಗೆ ವಾಸವಾಗಿರುತ್ತಾರೆ.. ಪ್ರದೀಪ ಶೆಟ್ಟಿ ಮದ್ಯಪಾನ ಮಾಡುವ ಚಟವನ್ನು ಹೊಂದಿದ್ದು, ಅವರು ದಿನಾಂಕ  22/01/2023 ರಂದು ರಾತ್ರಿ ಮನೆಯಲ್ಲಿ ಮಲಗಿದ್ದವರು ದಿನಾಂಕ 23/01/2023 ರಂದು ಬೆಳಿಗ್ಗೆಯಾದರೂ ಏಳದೇ ಇದ್ದು, ಎಬ್ಬಿಸಿದಾಗ ಯಾವುದೇ ರೀತಿಯಲ್ಲಿ ಸ್ವಂದಿಸಿರುವುದಿಲ್ಲ. ಆಗ ಸ್ಥಳೀಯ ವೈಧ್ಯರನ್ನು ಮನೆಗೆ ಕರೆಯಿಸಿ ಪರೀಕ್ಷಿದಾಗ ವೈದ್ಯರು ಪ್ರದೀಪಶೆಟ್ಟಿಯವರನ್ನು ಪರೀಕ್ಷಿಸಿ ಅವರು ಹೃದಯಾಘಾತದಿಂದ ಮೃತಪಟ್ಟಿರಬಹುದಾಗಿದೆ ಎಂಬುವುದಾಗಿ  ತಿಳಿಸಿರುತ್ತಾರೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 08/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ಪಿರ್ಯಾದಿದಾರರಾದ ಕಮಲ್ ದೇಓರಿ (33), ತಂದೆ: ಬೀರೇಂದ್ರ ದೇಓರಿ, ವಾಸ: ಬಹಗಾರ, ಒಘೋರ, ದೇವರಿ, ಲಾಖಿಂಪುರ ಜಿಲ್ಲೆ, ಅಸ್ಸಾಂ ರಾಜ್ಯ, ಹಾಲಿ ವಾಸ: ಕೆ.ಎಂ.ಸಿ. ಪ್ರಿಯಾ ಹಾಸ್ಟೆಲ್, ಹೈಲ್ಯಾಂಡ್ ಆಸ್ಪತ್ರೆಯ ಎದುರು, ಫಳ್ನೀರು, ಮಂಗಳೂರು, ದ.ಕ. ಜಿಲ್ಲೆ ಇವರು ಅಸ್ಸಾಂ ಮೂಲದವರಾಗಿದ್ದು, 06 ವರ್ಷಗಳಿಂದ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದು, ಅವರ ಹೆಂಡತಿಯ ಮಾವ ದಿಗಂತ್ ದೇಓರಿ (45) ರವರು ಅವರದೇ ರಾಜ್ಯದ ಮುಕುಂದ ಮತ್ತು ರಾಧೆ ಎಂಬುವವರೊಂದಿಗೆ ಉಡುಪಿ ಜಿಲ್ಲೆ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಯ ಬಸ್ತಿಕಾರ್ ಸ್ಟೀಲ್ & ಸಿಮೆಂಟ್ಸ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಕುಡಿತದ ಚಟ ಹೊಂದಿದವರಗಿರುತ್ತಾರೆ.  ದಿಗಂತ್ ದೇಓರಿ ಯವರು ದಿನಾಂಕ 23/01/2023 ರಂದು ಬಸ್ತಿಕಾರ್ ಸ್ಟೀಲ್ & ಸಿಮೆಂಟ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಸಮಯ ಸುಮಾರು 16:30 ಗಂಟೆಗೆ ಒಮ್ಮೆಲೇ ಕುಸಿದು ಬಿದ್ದು, ಅಸ್ವಸ್ಥಗೊಂಡವರನ್ನು, ಜೊತೆಗಿದ್ದ ರಾಧೆ, ಅಂಗಡಿಯ ಧನಿ ಬಸ್ತಿ ಅಭಯ್ ಶೆಣೈ ಹಾಗೂ ಚಾಲಕ ಹಸನ್ ಎಂಬುವವರು ಚಿಕಿತ್ಸೆಯ ಬಗ್ಗೆ ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಅಲ್ಲಿನ ವೈದ್ಯರು ಪರೀಕ್ಷಿಸಿ ದಿಗಂತ್ ದೇಓರಿ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 01/2023, ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಶಿರ್ವಾ: ಪಿರ್ಯಾದಿದಾರರಾದ ಶ್ರೀಮತಿ ಹೇಮಲತಾ  ರಾವ್‌(67), ಗಂಡ: ರಘುರಾಮ ರಾವ್‌, ವಾಸ: ಯಶಕಿರಣ, ಬೆಳಪು ಗ್ರಾಮ, ಪಣಿಯೂರು,  ಕಾಪು  ತಾಲೂಕು,  ಉಡುಪಿ ಜಿಲ್ಲೆ ಇವರು  ತನ್ನ  ಗಂಡ  ರಘುರಾಮ  ರವರೊಂದಿಗೆ  ತನ್ನ ಹಿರಿಯರ  ಮನೆಯಾದ ಬೆಳಪು  ಗ್ರಾಮದಲ್ಲಿರುವ  ಯಶ್‌ಕಿರಣ್ ಎಂಬ  ಮನೆಯಲ್ಲಿ ವಾಸವಾಗಿರುತ್ತಾರೆ.  ಪಿರ್ಯಾದಿದಾರರ ಮನೆಯವರ  ಉಪಸ್ಥಿತಿಯಲ್ಲಿ ದಿನಾಂಕ 25/01/2023 ರಂದು ಪಡುಬಿದ್ರೆ  ಶ್ರೀ ಖಡ್ಗೇಶ್ವರಿ ದೇವಸ್ಥಾನದಲ್ಲಿ  ದಕ್ಕೆ  ಬಲಿ  ಸೇವೆ ಇದ್ದು,  ಈ ಕಾರ್ಯಕ್ರಮದ  ಬಗ್ಗೆ  ಅವರ  ಸಂಬಂಧಿಕರಾದ  ಶ್ರೀಮತಿ  ರಮಾ  ರಾವ್,  ರಾಮ ಮನೋಹರ ರಾವ್, ಅನುರಾಧ  ರಾವ್‌, ಅತುಲ್‌ ರಾವ್‌, ರಾಮ  ಮೋಹನ ರಾವ್‌, ರಜನಿ ರಾವ್, ನಿಕಿಲ್‌ರಾವ್‌ ಮತ್ತು  ಅವರ  ಮಕ್ಕಳು  ಪಿರ್ಯಾದಿದಾರರ ಮನೆಗೆ ಬಂದು ವಾಸ್ತವ್ಯ  ಇದ್ದರು.  ದಿನಾಂಕ 22/01/2023  ರಂದು ಪಿರ್ಯಾದಿದಾರರ  ಸಂಬಂಧಿಕರಾದ  ರಾಮ ಮನೋಹರ  ರಾವ್‌,  ಅನುರಾಧ ರಾವ್‌,  ನಿಖಿಲ್‌ರಾವ್‌,  ಅತುಲ್‌ರಾವ್ ಇವರುಗಳು  ಪಡುಬಿದ್ರೆ  ಶ್ರೀ ಖಡ್ಗೇಶ್ವರಿ ದೇವಸ್ಥಾನಕ್ಕೆ ಹೋಗಿ  ಅಲ್ಲಿನ  ಪೂಜಾ ಕಾರ್ಯಕ್ರಮ  ಮುಗಿಸಿ ರಾತ್ರಿ  12:00  ಗಂಟೆಗೆ ಮನೆಗೆ ವಾಪಾಸು ಬಂದಿರುತ್ತಾರೆ.  ನಂತರ  ಪಿರ್ಯಾದಿದಾರರು  ಮತ್ತು  ಅವರ  ಸಂಬಂಧಿಕರು ಮನೆಯ  ಬಾಗಿಲಿಗೆ  ಚಿಲಕ  ಹಾಕಿ ಮನೆಯೊಳಗಡೆ ಮಲಗಿದ್ದರು. ದಿನಾಂಕ 23/01/2023 ರಂದು  ಬೆಳಿಗ್ಗೆ 4:45  ಗಂಟೆಗೆ ಪಿರ್ಯಾದಿದಾರರು  ಎದ್ದು  ಬಾತ್‌ರೂಂ  ಬಳಿ  ಹೋದಾಗ  ಅಲ್ಲಿದ್ದ  ಮನೆಯೊಳಗಡೆ ಬರುವ ಬಾಗಿಲು  ತೆರೆದಿತ್ತು  ಇದನ್ನು  ನೋಡಿ ಮನೆಯಲ್ಲಿದ್ದವರು ಬಾಗಿಲು ತೆಗೆದು ಹೊರಗಡೆ ಹೋಗಿರಬಹುದೆಂದು ಭಾವಿಸಿ ಪಿರ್ಯಾದಿದಾರರು  ಮನೆಯ ಕೆಲಸದಲ್ಲಿದ್ದರು. ಬೆಳಿಗ್ಗೆ 6:00  ಗಂಟೆಗೆ  ಶ್ರೀಮತಿ  ಅನುರಾಧ  ರಾವ್‌ರವರು ಪಿರ್ಯಾದಿದಾರರ ಬಳಿ  ಬಂದು  ಕಪಾಟಿನೊಳಗಡೆ ಬ್ಯಾಗ್‌ನಲ್ಲಿರಿಸಿದ್ದ ಬಂಗಾರದ ಸೊತ್ತುಗಳು ತೋರುತ್ತಿಲ್ಲ. ತಾನು ಕೆಳಗಡೆ ಬಂದು  ನೋಡಿದಾಗ ತನ್ನ ಪರ್ಸ್‌ ನೆಲದ ಮೇಲೆ ಬಿದ್ದಿರುತ್ತದೆ ಎಂದು ತಿಳಿಸಿದ್ದು ಆವಾಗ ಪಿರ್ಯಾದಿದಾರರಿಗೆ ಸಂಶಯ ಬಂದು ನೋಡಿದಾಗ ಮನೆಯ ಹಿಂಬದಿಯ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಸಾಧನದಿಂದ ತೆರೆದು ಒಳಪ್ರವೇಶಿಸಿ ಮನೆಯೊಳಗಡೆ ಇದ್ದ ಬಂಗಾರದ ಸೊತ್ತುಗಳನ್ನು ಕಳವು ಮಾಡಿರುವುದು ಕಂಡು ಬಂತು. ಶ್ರೀಮತಿ ರಮಾ ರಾವ್‌ರವರು  ಮನೆಯ ಕೆಳಗಡೆ  ಕೋಣೆಯ ಒಳಗಡೆ ಒಬ್ಬರೇ ಮಲಗಿದ್ದು, ಅವರು  ಕೂಡಾ ಧರಿಸಿದ್ದ ಬಂಗಾರದ ಸೊತ್ತುಗಳನ್ನು ಪರ್ಸ್‌ನಲ್ಲಿ   ಹಾಕಿ  ಬೆಡ್‌ ಮೇಲೆ ಇಟ್ಟಿದ್ದು,  ಈ ಸೊತ್ತುಗಳು ಕೂಡಾ ಕಳವಾಗಿರುವುದು ಕಂಡು ಬಂತು. ರಾಮ ಮನೋಹರ ರಾವ್‌ರವರ  ಪ್ಯಾಂಟ್‌ನೊಳಗಡೆ  ಇದ್ದ ಕ್ರೆಡಿಟ್‌ಕಾರ್ಡ್‌ನ್ನು  ಪ್ಯಾಂಟ್‌ ಸಮೇತ ಕಳವು ಮಾಡಿದ್ದು ಕಂಡು ಬಂತು. ಕಳವಾದ ಬಂಗಾರ ಮತ್ತು ಡೈಮಂಡ್‌ ಸೊತ್ತುಗಳ ವಿವರ ಈ ಕೆಳಗಿನಂತಿರುತ್ತದೆ. 1. ಬೆಳ್ಳಿಯ ಕಲಶದಂತ ಗಿಂಡೆ -1  (300 ಗ್ರಾಂ) ಮೌಲ್ಯ  20,000/-, 2. ಬೆಳ್ಳಿಯ  ತಟ್ಟೆ  -2 ( 60 ಗ್ರಾಂ)  ಮೌಲ್ಯ  5,000/-, 3.  ಬಂಗಾರದ  ಬಳೆ  - 6 ( ತಲಾ  10 ಗ್ರಾಂ)  ಮೌಲ್ಯ  3.00.000/-, 4. ಬಂಗಾರದ  ಬ್ರಾಸ್‌ಲೈಟ್‌(ಪಿಂಕ್‌) – 1 (6 ಗ್ರಾಂ) ಮೌಲ್ಯ  30,000/-, 5. ಬಂಗಾರದ  ಬ್ರಾಸ್‌ಲೈಟ್‌(ನೀಲಿ) -1 ( 6 ಗ್ರಾಂ) ಮೌಲ್ಯ 30,000/-, 6. ಬಂಗಾರದ  ಬ್ರಾಸ್‌ಲೈಟ್‌ (ಕೆಂಪು) – 1 ( 6 ಗ್ರಾಂ) ಮೌಲ್ಯ 30,000/- , 7. ಬಂಗಾರದ  ಬ್ರಾಸ್‌ಲೈಟ್‌ – 1 ( 8 ಗ್ರಾಂ) ಮೌಲ್ಯ 40,000/-, 8. ವಿವಿಧ ಕಲ್ಲಿನ  ಬಂಗಾರದ  ನೆಕ್ಲೇಸ್‌- 1 (12 ಗ್ರಾಂ) ಮೌಲ್ಯ  60,000/-, 9. ಬಂಗಾರದ  ಸರ ( ಸಣ್ಣ ಪೆಂಡೆಂಟ್‌) – 1  (15 ಗ್ರಾಂ) ಮೌಲ್ಯ 70,000/-, 10.  ಬಂಗಾರದ ಮಿಶ್ರಿ – 2 (2 ಗ್ರಾಂ) ಮೌಲ್ಯ 20,000/-, 11.  ಬಂಗಾರದ ಮಿಶ್ರಿ – 2 (100 ಮೀ.ಗ್ರಾಂ) ಮೌಲ್ಯ 2,000/-, 12. ವಜ್ರದ ಮೂಗುತ್ತಿ -1 ಮೌಲ್ಯ 10,000/-, 13. ವಜ್ರದ ಬ್ರಾಸ್‌ಲೈಟ್‌2 ( ಬಂಗಾರ  16 ಗ್ರಾಂ) ಮೌಲ್ಯ  3,00,000/-, 14. ಹಾನ್ಕಿಸ್‌ಕಲ್ಲಿನ  ಪೆಂಡೆಂಟ್‌- 2 ( ಬಂಗಾರ 20 ಗ್ರಾಂ) ಮೌಲ್ಯ 1,00,000/-, 15. ಕಿವಿಯ ರಿಂಗ್‌- 2 ( 5 ಗ್ರಾಂ) ಮೌಲ್ಯ   30,000/-,16. ವಜ್ರದ  ಕಿವಿಯೋಲೆ -2 (  6 ಗ್ರಾಂ) ಮೌಲ್ಯ  1,00,000/- , 17. ವಜ್ರದ  ಪೆಂಡೆಂಟ್‌‌- 1 ( 5 ಗ್ರಾಂ) ಮೌಲ್ಯ 1,00,000/-, 18. ವಜ್ರದ  ಕಿವಿಯ ರಿಂಗ್‌-2 (ಬಂಗಾರ 5  ಗ್ರಾಂ) ಮೌಲ್ಯ 1,00,000/-, 19. ಕ್ರೆಡಿಟ್‌ಕಾರ್ಡ್‌ ( ಹೆಚ್‌ಡಿ ಎಫ್‌ಸಿ  ಎ.ಟಿ.ಎಂ.), 20. ಕ್ರೆಡಿಟ್‌ಕಾರ್ಡ್‌ ( ಕರ್ನಾಟಕ ಬ್ಯಾಂಕ್‌) , 21. ಕಂದು ಬಣ್ಣದ ಕೋಚ್‌ಹ್ಯಾಂಡ್‌ ಬ್ಯಾಗ್‌- 1 ( ಮೌಲ್ಯ 13,000/-), 22. ಅಮೇರಿಕನ್‌ ಎಕ್ಸ್‌ಪ್ರೆಸ್‌ ಕ್ರೆಡಿಟ್‌ಕಾರ್ಡ್‌ ಎಂಡಿಂಗ್‌ ನಂಬ್ರ  2007., 23. ಚೇಸ್‌ವೀಸಾ  ಕ್ರೆಡಿಟ್‌ ಕಾರ್ಡ್‌ಎಂಡಿಂಗ್‌ ನಂಬ್ರ  3128, 24. ಕಪ್ಪು  ಬಣ್ಣದ  ಪ್ಯಾಂಟ್‌ ಮತ್ತು  ನೀಲಿ  ಬಣ್ಣದ  ಅಂಗಿ., ಕಳವಾದ  ಸೊತ್ತುಗಳ  ಒಟ್ಟು  ಮೌಲ್ಯ  13,00,970/-  ಆಗಿರುತ್ತದೆ.  ಯಾರೋ  ಕಳ್ಳರು ದಿನಾಂಕ 23/01/2023 ರಂದು  00:00 ಗಂಟೆಯಿಂದ  23/01/2023 ರಂದು ಬೆಳಿಗ್ಗೆ  4:45  ಗಂಟೆಯ  ಮಧ್ಯಾವಧಿಯಲ್ಲಿ  ಪಿರ್ಯಾದಿದಾರರ ಮನೆಯ ಹಿಂದಿನ  ಬಾಗಿಲಿನ ಚಿಲಕವನ್ನು  ಮುರಿದು  ಒಳಪ್ರವೇಶಿಸಿ ಮನೆಯೊಳಗಡೆ ಇದ್ದ ಸೊತ್ತುಗಳನ್ನು  ಕಳವು  ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 05/2023 ಕಲಂ:  457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಉಡುಪಿ: ಪಿರ್ಯಾದಿದಾರರಾದ ಅಮಿತಾ ಜೆ ಸುವರ್ಣ(37), ಗಂಡ: ಜಗನ್ನಾಥ ಸುವರ್ಣ,ವಾಸ: ಅತುಲ್ಯಂ, ಮ.ನಂ:3-117(1), ವಿಷ್ಣುಮೂರ್ತಿ ದೇವಸ್ಥಾನದ ಹತ್ತಿರ, ಕೆಮ್ತೂರು, ಕೊರಂಗ್ರಪಾಡಿ ಗ್ರಾಮ, ಉಡುಪಿ ತಾಲೂಕು ಇವರು ದಿನಾಂಕ 13/01/2023 ರಂದು ಮಧ್ಯಾಹ್ನ 12:00 ಗಂಟೆಗೆ ಮನೆಗೆ ಬೀಗ ಹಾಕಿ ಕಾರ್ಯಕ್ರಮಕ್ಕೆ ಹೋಗಿದ್ದು, ಬೀಗದ ಕೀಯನ್ನು ವಿದ್ಯುತ್‌ ಮೀಟರ್‌ ನ ಬಾಕ್ಸ್‌ ನ ಒಳಗಡೆ ಇಟ್ಟಿದ್ದು, ಕಾರ್ಯಕ್ರಮ ಮುಗಿಸಿ  ಕಾರ್ಯಕ್ರಮಕ್ಕೆ ಹಾಕಿಕೊಂಡು ಹೋಗಿದ್ದ ಚಿನ್ನವನ್ನು ಕಪಾಟಿನ ಒಳಗಡೆ ಇಡಲು ಹೋದಾಗ ಒಳಗಿದ್ದ ಉಳಿದ ಬಂಗಾರದ ಆಭರಣಗಳು ಕಳುವಾಗಿದ್ದು ಆಭರಣಗಳು ಬಂಗಾರದ ಕೈ ಬಳೆ-7.700 ಗ್ರಾಂ, ಬಂಗಾರದ ರೋಪ್‌ ಚೈನ್‌ ಜೊತೆ ಅದರ ಪದಕ-11.800 ಗ್ರಾಂ, ಬಂಗಾರದ ಕ್ಯಾಂಡಿ ಚೈನ್‌ -6 ಗ್ರಾಂ ಕಳುವಾದ ಸೊತ್ತುಗಳ ಅಂದಾಜು ಮೌಲ್ಯ 1,27,000/- ಆಗಿರುತ್ತದೆ. ದಿನಾಂಕ 13/01/2023 ರಂದು ಮದ್ಯಾಹ್ನ 12:00 ಗಂಟೆಯಿಂದ 14:00 ಗಂಟೆಯ ನಡುವಿನ ಸಮಯದಲ್ಲಿ ಕಪಾಟಿನ ಒಳಗಡೆ ಇದ್ದ ಚಿನ್ನವನ್ನು ಕಳುವಾಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 15/2023 ಕಲಂ: 454, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾದ ಶ್ವೇತ ಎಸ್‌ ಸಾಲ್ಯಾನ್ (32), ಗಂಡ: ಸುಧಾಕರ ಎಸ್‌ ಸಾಲ್ಯಾನ್ , ವಾಸ: ಶಿವಂ, ಮ.ನಂ:3-117(2), ವಿಷ್ಣುಮೂರ್ತಿ ದೇವಸ್ಥಾನದ ಹತ್ತಿರ, ಕೆಮ್ತೂರು, ಕೊರಂಗ್ರಪಾಡಿ ಗ್ರಾಮ, ಉಡುಪಿ ತಾಲೂಕು ಇವರು ದಿನಾಂಕ 13/01/2023 ರಂದು ಮಧ್ಯಾಹ್ನ 10:00 ಗಂಟೆಯ ಸಮಯಕ್ಕೆ ಮನೆಗೆ ಬೀಗ ಹಾಕಿ ತಾಯಿಯ ಮನೆಗೆ  ಹೋಗಿದ್ದು, ಬೀಗದ ಕೀಯನ್ನು  ಪಿರ್ಯಾದಿದಾರರ ಸಂಬಂಧಿಕರ ಮನೆಯ ವಿದ್ಯುತ್‌ ಮೀಟರ್‌ ನ ಬಾಕ್ಸ್‌ ನ ಒಳಗಡೆ ಇಟ್ಟಿದ್ದು,  ಪಿರ್ಯಾದಿದಾರರು ಹಾಕಿಕೊಂಡು ಹೋಗಿದ್ದ ಚಿನ್ನವನ್ನು ತನ್ನ ಮನೆಯಲ್ಲಿದ್ದ ಕಪಾಟಿನ ಒಳಗಡೆ ಇಡಲು ಹೋದಾಗ ಒಳಗಿದ್ದ ಉಳಿದ ಬಂಗಾರದ ಆಭರಣಗಳು ಕಳುವಾಗಿದ್ದು, ಕಳುವಾದ ಬಂಗಾರದ ಆಭರಣಗಳು ,ಬಂಗಾರದ ರೋಪ್‌ ಚೈನ್‌ -12 ಗ್ರಾಂ, ಬಂಗಾರದ ಬೇಬಿ ಬ್ರಾಸ್‌ ಲೇಟ್‌ -1.400 ಗ್ರಾಂ, ಬಂಗಾರದ ಮೂಗುತಿ -300 ಮಿಲಿ ಗ್ರಾಂ, ಬಂಗಾರದ ಲೋಟಸ್‌ ಚೈನ್-9 ಗ್ರಾಂ ಕಳುವಾದ ಸೊತ್ತುಗಳ  ಮೌಲ್ಯ 1,13,500/- ಆಗಿರುತ್ತದೆ. ದಿನಾಂಕ 13/01/2023 ರಂದು ಬೆಳಿಗ್ಗೆ 10:00 ಗಂಟೆಯಿಂದ 16:00 ಗಂಟೆಯ ನಡುವಿನ ಸಮಯದಲ್ಲಿ ಕಪಾಟಿನ ಒಳಗಡೆ ಇದ್ದ ಚಿನ್ನವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 16/2023 ಕಲಂ: 454, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-01-2023 09:34 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080