ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ: ದಿನಾಂಕ 21/01/2022 ರಂದು ರಾತ್ರಿ 10:30  ಗಂಟೆಗೆ ಪಿರ್ಯಾದಿದಾರರಾದ ವಿಶ್ವ (21), ತಂದೆ: ಅಂಬು, ವಾಸ: ಶ್ರೀ ಮಹಾಕಾಳಿ ನಿಲಯ ರಾಜೀವ ನಗರ 8 ನೇ ಕ್ರಾಸ್‌80 ಬಡಗುಬೆಟ್ಟು ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಶಾಂತಿ ನಗರ ಬಳಿ ನಿಂತುಕೊಂಡಿದ್ದಾಗ ಆರೋಪಿ ತೈಬು ತನ್ನ KA-20-EV-5511 ನೇ ಸ್ಕೂಟರ್‌ ರನ್ನು ರಾಜೀವ ನಗರ ಕಡೆಯಿಂದ ಮಣಿಪಾಲ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಕ್ಕೆ ಚಲಾಯಿಸಿಕೊಂಡು ಬಂದು, ಮಣಿಪಾಲ ಕೆಡೆಯಿಂದ ಅಲೆವೂರು ಕಡೆಗೆ ಜಗದೀಶ ನಾಯಕ್ ರವರು ಚಲಾಯಿಸಿಕೊಂಡು ಹೋಗುತ್ತಿದ್ದ  KA-20-EB-4250 ನೇ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಸ್ಕೂಟರ್ ಸವಾರರು ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದ ಪರಿಣಾಮ ಜಗದೀಶ ನಾಯಕ್ ರವರಿಗೆ ಮುಖ ಮತ್ತು ಬಲಕಾಲಿಗೆ ತೀವ್ರ ಸ್ವರೂಪದ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 09/2022  ಕಲಂ:279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರಾದ ಪ್ರದೀಪ್ ಕಾಮತ್ (31), ತಂದೆ: ದಿ. ಪ್ರಬಾಕರ್ ಕಾಮತ್, ವಾಸ :ಕಾಮಾಕ್ಷಿ ಕೃಪ ಬೆಳ್ಮಣ್  ಸರ್ಕಾರಿ ಪದವಿ ಪೂರ್ವ ಕಾಲೇಜ್ ಹತ್ತಿರ , ಬ್ರಳ್ಮಣ್ ಗ್ರಾಮ ಕಾರ್ಕಳ ತಾಲೂಕು ಇವರ ಅಣ್ಣ  ಪ್ರಶಾಂತ್ ಕಾಮತ್ (35) ಇವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದವರು ಪ್ರತಿದಿನ ಮನೆಯಿಂದ ಬೆಳ್ಮಣ್ ಪೇಟೆಗೆ ಹೋದವರು ಗೆಳೆಯರೊಂದಿಗೆ ಮಾತನಾಡಿಕೊಂಡು ಮನೆಗೆ ವಾಪಾಸು ಬರುತ್ತಿದ್ದರು. ದಿನಾಂಕ 15/01/2022 ರಂದು ಬೆಳಿಗ್ಗೆ 10:00 ಗಂಟೆಗೆ ತಮ್ಮ ವಾಸ್ತವ್ಯದ  ಮನೆಯಿಂದ ಬೆಳ್ಮಣ್ ಪೇಟೆ ಕಡೆ ಹೋಗಿದ್ದು ಸಂಜೆಯಾದರು ಮನೆಗೆ ಬಂದಿರುವುದಿಲ್ಲ, ಇವರು ಈ ಹಿಂದೆ ಕೂಡ ಮನೆಯಿಂದ ಹೋದವರು ಎರಡು, ಮೂರು ದಿನ  ಬಿಟ್ಟು ಮನೆಗೆ ವಾಪಾಸು ಬರುತ್ತಿದ್ದು ಅದೆ ರೀತಿ ಈ ಬಾರಿಯೂ ವಾಪಾಸು ಬರಬಹುದೆಂದು ಬಾವಿಸಿ ನಂತರವೂ ಬಾರದಿರುವುದರಿಂದ  ಸಂಬಂಧಿಕರ ಮನೆಯಲ್ಲಿ ಹಾಗೂ ಇತರೆ ಕಡೆಗಳಲ್ಲಿ ಹುಡುಕಲಾಗಿ ಪತ್ತೆಯಾಗದೆ ಇರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 08/2022 ಕಲಂ: ಗಂಡಸು  ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 24-01-2022 09:28 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080