ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು:

  • ಕಾಪು:ಪಿರ್ಯಾದಿ ಅಶೋಕ ಆಚಾರ್ಯ ಪ್ರಾಯ 37 ವರ್ಷ, ತಂದೆ: ಲಕ್ಷ್ಮಣ ಆಚಾರ್ಯ,ವಾಸ: ದೇವಿಪ್ರಸಾದ್, ಪೊಲ್ಯ ಉಚ್ಚಿಲ, ಬಡಾ ಗ್ರಾಮ,ಇವರು ದಿನಾಂಕ: 23-01-2022 ರಂದು ಉಚ್ಚಿಲ ಪೇಟೆಯಲ್ಲಿರುವಾಗ ಸಂಜೆ 5:45 ಗಂಟೆ ಸುಮಾರಿಗೆ ಪಿರ್ಯಾದಿದಾರರ ಅಣ್ಣ ಗಣೇಶ್ ಆಚಾರ್ಯ ಪ್ರಾಯ : 40 ವರ್ಷ  ರವರಿಗೆ ಮೂಳೂರು ಸಿ.ಎಸ್.ಐ. ಚರ್ಚ  ಎದುರು ಮಂಗಳೂರು ಉಡುಪಿ  ರಾಹೆ 66 ರಸ್ತೆಯಲ್ಲಿ  ಅಪಘಾತವಾಗಿರುವುದಾಗಿ ಸಂಜೆ 5 : 50 ಗಂಟೆಗೆ ಮಾಹಿತಿ ಬಂದಿದ್ದು ಕೂಡಲೇ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಿದಾಗ ಪಿರ್ಯಾದಿದಾರರ ಅಣ್ಣ ಮಂಗಳೂರು ಉಡುಪಿ ರಾ.ಹೆ 66 ರ ರಸ್ತೆ ವಿಭಜಕದ ಮಧ್ಯದಲ್ಲಿದ್ದು ಅವರ ಬಾಬ್ತು ಮೋಟಾರು ಸೈಕಲ್ ನ್ನು  ರಸ್ತೆಯಲ್ಲಿದ್ದು, ಅವರ  ತಲೆಗೆ ಮತ್ತು ಕೈ ಕಾಲುಗಳಿಗೆ ರಕ್ತಗಾಯವಾಗಿದ್ದು, ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು ಕೂಡಲೇ ಪಿರ್ಯಾದಿದಾರರು ಸ್ಥಳೀಯರ ಸಹಾಯದಿಂದ ಗಣೇಶ ಆಚಾರ್ಯ ರವರನ್ನು ಒಂದು ವಾಹನದಲ್ಲಿ ಚಿಕಿತ್ಸೆಯ  ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪಿರ್ಯಾದಿದಾರರ  ಅಣ್ಣನನ್ನು ಪರೀಕ್ಷಿಸಿ ಸಂಜೆ 6:15 ಗಂಟೆಗೆ  ಪಿರ್ಯಾದಿದಾರರ ಅಣ್ಣ ಗಣೇಶ್ ಆಚಾರ್ಯ ರವರು ಮೃತ ಪಟ್ಟಿರುವುದಾಗಿ ತಿಳಿಸಿದ್ದು, ಘಟನೆಯ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸಲಾಗಿ ಪಿರ್ಯಾದಿದಾರರ ಅಣ್ಣ ಗಣೇಶ ಆಚಾರ್ಯ ರವರು ಅವರ ಬಾಬ್ತು  ಮೋಟಾರ್ ಸೈಕಲ್ ನಂಬ್ರ ಕೆ.ಎ. 20 ಈ.ಜೆ. 9593 ನೇದರಲ್ಲಿ ಕಾಪು ಕಡೆಗೆ ಮಂಗಳೂರು ಉಡುಪಿ ರಾ.ಹೆ. 66 ರಲ್ಲಿ ಹೋಗುತ್ತಿರುವಾಗ ಅದೇ ರಸ್ತೆಯಲ್ಲಿ ಅಂದರೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅನ್ವರುದ್ದೀನ್ ರವರು ಅವರ ಬಾಬ್ತು ಲಾರಿ ನಂಬ್ರ ಕೆ.ಎಲ್. 07 ಬಿ.ಡಬ್ಲ್ಯೂ 8807 ನೇದನ್ನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಅಣ್ಣ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ಗೆ ಢಿಕ್ಕಿ ಹೊಡೆದಿರುವುದಾಗಿ ತಿಳಿಸಿರುತ್ತಾರೆ.ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 10/2022  ಕಲಂ 279,304(A) ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಗಂಗೊಳ್ಳಿ: ಫಿರ್ಯಾದಿದಾರರಾದಸಂತೋಷ ಎನ್ ಪೂಜಾರಿ ಪ್ರಾಐ: 36 ವರ್ಷ, ತಂದೆ: ನಾಗರಾಜ ಪೂಜಾರಿ ವಾಸ: ಕೋಣ್ಕಿ, ಆಸನಬೈಲು, ನಾಡ ಗ್ರಾಮ, ಬೈಂದುರು ತಾಲೂಕು ಇವರು ದಿನಾಂಕ: 23-01-2022 ರಂದು ರಾತ್ರಿ ಸಚಿನ್ ಪೂಜಾರಿಯವರು ಸವಾರಿ ಮಾಡಿಕೊಂಡಿದ್ದ KA-01 HT-3458 ನೇ ಹೋಂಡಾ  ಡಿಯೋ ಬೈಕ್ ನಲ್ಲಿ ಸಹ ಸವಾರನಾಗಿ ಕುಳಿತುಕೊಂಡು ನಾಡ ಪೇಟೆ ಕಡೆಯಿಂದ ತ್ರಾಸಿ ಮಯೂರ ಡಾಬಾಕ್ಕೆ ಹೋಗುತ್ತಿರುವಾಗ  ಸಚಿನ್ ಪೂಜಾರಿಯವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡಿದ್ದು ರಾತ್ರಿ ಸಮಯ ಸುಮಾರು 11:20 ಗಂಟೆಗೆ  ಬೈಂದೂರು ತಾಲೂಕು ನಾಡ ಗ್ರಾಮದ ನಾಡ ಸೇತುವೆ ಹತ್ತಿರ ತಲುಪುವಾಗ್ಗೆ ಬೈಕ್ ಸ್ಕಿಡ್ ಆಗಿ  ಫಿರ್ಯಾದಿದಾರರು ಹಾಗೂ ವಾಹನ ಸವಾರ ವಾಹನ ಸಮೇತ ರಸ್ತೆಗೆ ಬಿದ್ದಿದ್ದು ಫಿರ್ಯಾದಿದಾರರಿಗೆ ಎಡ ಭುಜಕ್ಕೆ ಒಳಜಖಂ ಹಾಗೂ ತಲೆಯ ಹಿಂಬದಿ ರಕ್ತಗಾಯವಾಗಿರುತ್ತದೆ. ಆಪಾದಿತ ಬೈಕ್ ಸವಾರನಿಗೆ ತಲೆ ಹಿಂದೆ ರಕ್ತಗಾಯವಾಗಿದ್ದು ಕಿವಿಯಲ್ಲಿ ರಕ್ತ ಬಂದಿರುತ್ತದೆ. ಗಾಯಗೊಂಡ ಫಿರ್ಯಾದಿದಾರರನ್ನು ಹಾಗೂ ಸವಾರ ಸಚಿನ್ ಪೂಜಾರಿಯವರನ್ನು  ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಫಿರ್ಯಾದಿದಾರರನ್ನು ಒಳರೋಗಿಯಾಗಿ ದಾಖಲು ಮಾಡಿಕೊಂಡಿದ್ದು ಸವಾರ ಸಚಿನ್ ಪೂಜಾರಿಯವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಆಸ್ಪತ್ರೆಗೆ  ಕರೆದುಕೊಂಡು ಹೋಗಿರುತ್ತಾರೆ.ಈ ಬಗ್ಗೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 08/2022 ಕಲಂ:279,337 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  
  • ಗಂಗೊಳ್ಳಿ: ಫಿರ್ಯಾದಿದಾರರಾದ ಗೋಪಾಲ ಮೊಗವೀರ ಪ್ರಾಯ: 35 ವರ್ಷ, ತಂದೆ: ಮಂಜು ಮೊಗವೀರ, ವಾಸ: ಬ್ರಹ್ಮಶ್ರೀ ಅನುಗ್ರಹ, ಮೇಲ್ಬೆಟ್ಟು, ಹಕ್ಲಾಡಿ ಅಂಚೆ ಮತ್ತು ಗ್ರಾಮ,  ಇವರ ದಿನಾಂಕ: 23-01-2022 ರಂದು ಎಂದಿನಂತೆ ಮೀನುಗಾರಿಕೆ ಕೆಲಸದ ಬಗ್ಗೆ ತನ್ನ ಬಾಬ್ತು ಮೋಟಾರ್ ಸೈಕಲ್  ನಂಬ್ರ KA-20 EF-4920 ನೇದನ್ನು ಮುಳ್ಳಿಕಟ್ಟೆಯಿಂದ ನಾಯಕ್ ವಾಡಿ ರಸ್ತೆಯಲ್ಲಿ ಗಂಗೊಳ್ಳಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ ಮಂಕಿ ಕ್ರಾಸ್ ಬಳಿ ತಲುಪುವಾಗ್ಗೆ ಸಮಯ ಸುಮಾರು ಸಂಜೆ 4:45 ಗಂಟೆಗೆ ನಾಯಕ್ ವಾಡಿ ಕಡೆಯಿಂದ ಮುಳ್ಳಿಕಟ್ಟೆ ಕಡೆಗೆ ಕಿರಣ್ ಎಂಬವರು KA-20 AA-1072 ನೇ ಬೊಲೆರೋ ಪಿಕ್ ಅಪ್ ವಾಹನವನ್ನು ಅತೀವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಫಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದು ನಂತರ ಪಿಕ್ಅಪ್ ವಾಹನ ಚಾಲಕನ ನಿಯಂತ್ರಣತಪ್ಪಿ ರಸ್ತೆಯ ಬದಿಯಲ್ಲಿ ಮಗುಚಿ ಬಿದ್ದಿದ್ದು ಫಿರ್ಯಾದಿದಾರರು ವಾಹನ ಸಮೇತ ರಸ್ತೆಗೆ ಬಿದ್ದು ಫಿರ್ಯಾದಿದಾರರ ಎದೆಗೆ, ಕೈಕಾಲುಗಳಿಗೆ ಗಾಯವಾಗಿದ್ದು ಆಪಾದಿತ ಬೊಲೆರೋ ವಾಹನ ಚಾಲಕನಿಗೂ ಸಣ್ಣ ಪುಟ್ಟ ಗಾಯವಾಗಿದ್ದು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ  ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 07/2022 ಕಲಂ:279,337 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು

  • ಶಿರ್ವ: ಮಾನ್ಯ ನ್ಯಾಯಾಲಯದ ಖಾಸಗಿ ದೂರು ನಂಬ್ರ: 835/2021 ರ ಸಾರಾಂಶವೆನೆಂದರೆ ಪಿರ್ಯಾದಿದಾರರಾದ ಜುಬೇದ ಪ್ರಾಯ 55 ವರ್ಷ ಗಂಡ: ದಿವಂಗತ ದಾವೂದ್ ಸಾಹೇಬ್‌, ವಾಸ: ಕಕ್ಕುಂಜೆ ಅಂಬಾಗಿಲು, ಉಡುಪಿ ತಾಲೂಕು ಇವರು ಮನೆವಾರ್ತೆ ಕೆಲಸ ಮಾಡಿಕೊಂಡಿರುತ್ತಾರೆ ಪಿರ್ಯಾದಿದಾರರ ಗಂಡ ಮೃತರಾಗಿರುತ್ತಾರೆ. ಕಾಪು ತಾಲೂಕು ಬೆಳಪು ಗ್ರಾಮದ ಸರ್ವೇ ನಂಬ್ರ 174/8 ರಲ್ಲಿ 29 ಸೆಂಟ್ಸ್ ಸ್ಥಿರಾಸ್ತಿಯನ್ನು  ಪಿರ್ಯಾದುದಾರರ ಗಂಡ ದಾವೂದ್‌  ಸಾಹೇಬ್‌ ಈ ಹಿಂದೆ  ದಿನಾಂಕ: 07.09.2017 ರಂದು ಮೂಲ್ಕಿ ಸಬ್‌  ರಿಜಿಸ್ಟ್ರಾರ್‌ ಆಫೀಸಿನಲ್ಲಿ ನೊಂದಾವಣೆಯಾದ  ನಂಬ್ರ: MLK 1-02189-2017-18  ಸಿ.ಡಿ.ನಂಬರ MLKD 174 ರಂತೆ ನೀಡಿದ ದಾನ ಪತ್ರದಂತೆ ಪಿರ್ಯಾದಿದಾರರ  ಸ್ವಾಧೀನಕ್ಕೆ ಬಂದಿರುತ್ತದೆ. ಸದ್ರಿ ಸ್ಥಿರಾಸ್ತಿಯು ಖಾಲಿಯಾಗಿರುತ್ತದೆ. ಹೀಗಿರುವಾಗ ಇತ್ತೀಚೆಗೆ ಪಿರ್ಯಾದುದಾರರಿಗೆ ನೋಡಿ ಪರಿಚಯ ಇರುವ ಆರೋಪಿ ಅಬ್ದುಲ್‌ ಹಕೀಂ ಪಿರ್ಯಾದುದಾರರಿಗೆ ಸೇರಿದ ಜಾಗದ ಪೈಕಿ 3 ಸೆಂಟ್ಸ್‌ ಸ್ಥಿರಾಸ್ತಿಯನ್ನು ತಾನು ಖರೀದಿಸಿದ್ದೇನೆಂದು ಊರಿನಲ್ಲಿ ಹೇಳುತ್ತಿರುವುದು ತಿಳಿದು ಬಂದು  ವಿಚಾರಿಸಿದಾಗ  ಆರೋಪಿಯು  ಪಿರ್ಯಾದುದಾರರ ಸಹಿಯನ್ನು ನಕಲಿ ಮಾಡಿ ಸರ್ವೇ ನಡೆಸದೇ ಪಿರ್ಯಾದುದಾರರ ಜಾಗಕ್ಕೆ ಸೇರಿದಂತೆ 11 ಇ ನಕ್ಷೆ  ಸಂಖ್ಯೆ 16061119983904001  ಅರ್ಜಿ ಸಂಖ್ಯೆ 1606119983904 ಮುಖಾಂತರ ಪಡೆದಿರುವುದು ತಿಳಿದುಬಂದು ದಾಖಲೆಯನ್ನು  ತೆಗೆದು  ನೋಡಿದಾಗ ಅದರಲ್ಲಿರುವ ಸಹಿ ಪಿರ್ಯಾದುದಾರದಲ್ಲ  ಪಿರ್ಯಾದುದಾರರ  ಸಹಿಯನ್ನು ಆರೋಪಿಯು ನಕಲಿ ಮಾಡಿ  ಭೂಮಾಪಕರು ಇವರಲ್ಲಿ ಹಾಜರುಪಡಿಸಿ 11ಇ ನಕ್ಷೆ ಪಡೆದಿರುತ್ತಾನೆ. ಅಲ್ಲದೆ ಸದ್ರಿ ನಕಲು  11ಇ ನಕ್ಷೆ  ಆಧಾರದಲ್ಲಿ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿ ಪಿರ್ಯಾದುದಾರರ ಜಾಗವನ್ನು ಮಾರಾಟ  ಮಾಡದಂತೆ ತಡೆಯಾಜ್ಞೆಯನ್ನು ಪಡೆದಿರುತ್ತಾನೆ.ಅಲ್ಲದೆ ಸ್ಥಿರಾಸ್ತಿಯನ್ನು ತನ್ನ ಹೆಸರಿಗೆ ಮಾಡಿಸಿಕೊಂಡು ಮಾರಾಟ ಮಾಡುವ ಹುನ್ನಾರ ನಡೆಸುತ್ತಿದ್ದಾನೆ. ಸದ್ರಿ ದಾಖಲೆಯಲ್ಲಿರುವ ಸಹಿಯು ನಕಲಿ ಮಾಡಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಈ ಕಾರಣದಿಂದಾಗಿ ಪಿರ್ಯಾದುದಾರರ ಸಹಿಯನ್ನು ನಕಲಿ ಮಾಡಿ ದಾಖಲೆಗಳನ್ನು ಸೃಷ್ಟಿಸಿ ಸಾರ್ವಜನಿಕ ಅಧಿಕಾರಿಯಾದ ಭೂ ಮಾಪಕರು  ಹಾಗೂ ತಹಶೀಲ್ದಾರರ ಮುಂದೆ ಹಾಜರು ಪಡಿಸಿ ಪಿರ್ಯಾದುದಾರರ  ಅನುಪಸ್ಥಿತಿಯಲ್ಲಿ 11 ಇ ನಕ್ಷೆಯನ್ನು  ಪಡೆದು  ಮೋಸ ಮಾಡಿರುತ್ತಾನೆ. ಆರೋಪಿ ಅಬ್ದುಲ್‌  ಹಕೀಂ ವಿರುದ್ದ  ಸೂಕ್ತ ಕಾನೂನು ಕ್ರಮ ಜರಗಿಸಿರುವುದಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 07/2022 US 418,420,465,467,468,474 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 24-01-2022 06:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080