ಅಭಿಪ್ರಾಯ / ಸಲಹೆಗಳು


ಅಪಘಾತ ಪ್ರಕರಣಗಳು

  • ಪಡುಬಿದ್ರಿ: ಪಿರ್ಯಾದಿ: ಮಂಗಳಪ್ಪ, ಪ್ರಾಯ: 39 ವರ್ಷ, ತಂದೆ: ಪರಸಪ್ಪ, ವಾಸ: ಎಸ್.ಟಿ. ಕಾಲೋನಿ, ಐಹೊಳೆ, ಹುನಗುಂದ ತಾಲೂಕು, ಇವರು ಬಾಗಲಕೋಟೆ ಜಿಲ್ಲೆಯವರಾಗಿದ್ದು, ಪಡುಬಿದ್ರಿಯಲ್ಲಿ ಬಾಡಿಗೆ ಮನೆಯಲ್ಲಿ  ವಾಸವಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಅವರ ದೊಡ್ಡಪ್ಪನ ಮಗ  ಮಂಗಳಪ್ಪ ಎಂಬವರು ಕೂಡಾ  ಅವರ ಇಬ್ಬರು ಮಕ್ಕಳಾದ ಹನುಮಂತಪ್ಪ ಮತ್ತು ನಿಂಗರಾಜು (19) ರವರ ಜೊತೆ ಕಂಚಿನಡ್ಕದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ.  ದಿನಾಂಕ: 22.12.2022 ರಂದು ಬೆಳಿಗ್ಗೆ 08:00 ಗಂಟೆಯ ವೇಳೆಗೆ  ಪಡುಬಿದ್ರಿ ಪೇಟೆಯಲ್ಲಿ ಕೆಲಸಕ್ಕೆಂದು ಕಾದು ಕುಳಿತಿದ್ದಾಗ ಪಡುಬಿದ್ರಿಯ ಇಲೆಕ್ಟ್ರಿಕ್ ಕಾಂಟ್ರ್ಯಾಕ್ಟರ್ ಶಿವರಾಮ ಶೆಟ್ಟಿ ಎಂಬುವರು ಬಂದು ಎಲೆಕ್ಟ್ರಿಕ್ ಅರ್ತ್ ಹೊಂಡ ತೋಡಲು ಜನ ಬೇಕೆಂದು ಹೇಳಿ ಪಿರ್ಯಾದಿದಾರರು, ಅವರ ಅಣ್ಣನ ಮಗ ನಿಂಗರಾಜು ಹಾಗೂ ಹುನಗುಂದ ತಾಲೂಕಿನ ಯಲ್ಲಪ್ಪ ಮತ್ತು ಕಿರಣ ಎಂಬುವರನ್ನು  ಕರೆದುಕೊಂಡು   ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಯ ಭವ್ಯ ಪೆಟ್ರೋಲ್ ಪಂಪ್ ಗೆ ಕರೆದುಕೊಂಡು  ಹೋಗಿದ್ದು,  ಅಲ್ಲಿ  ಎಲ್ಲರೂ ಹೊಂಡ ತೋಡುತ್ತಿದ್ದ  ಸಮಯದಲ್ಲಿ ಮಧ್ಯಾಹ್ನ 13:00 ಗಂಟೆಯ ವೇಳೆಗೆ ನಿಂಗರಾಜನು ಕಬ್ಬಿಣದ ಹಾರೆಯಿಂದ ಹೊಂಡ ತೋಡುತ್ತಿದ್ದಾಗ  ನೆಲದಡಿಯಲ್ಲಿ ಅಳವಡಿಸಿದ್ದ ವಿದ್ಯುತ್  ವಯರ್ ಜಖಂಗೊಂಡು  ಕಬ್ಬಿಣದ ಹಾರೆ ಮೂಲಕ  ವಿದ್ಯುತ್  ಪ್ರವಹಿಸಿ  ನಿಂಗರಾಜು ವಿದ್ಯುತ್ ಶಾಕ್ ಗೆ  ಒಳಗಾಗಿ ಬಿದ್ದಿದ್ದು, ಅವನನ್ನು ಕೂಡಲೇ  ಚಿಕಿತ್ಸೆಗಾಗಿ  ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ನಿಂಗರಾಜು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಪೆಟ್ರೋಲ್ ಬಂಕ್  ನ  ಆವರಣದ ನೆಲದಡಿ  ವಿದ್ಯುತ್ ವಯರ್ ಗಳನ್ನು ಅಳವಡಿಸಿದ್ದನ್ನು ಹೇಳದೇ, ಯಾವುದೇ ಮುನ್ನೆಚ್ಚರಿಕೆ ಕ್ರಮ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಮತ್ತು ಕೆಲಸಗಾರರು ವಿದ್ಯುತ್ ಸಂಪರ್ಕಕ್ಕೆ ಬಾರದಂತೆ ಸೂಕ್ತ ಸಲಕರಣೆಗಳನ್ನು ಒದಗಿಸದೇ ನಿರ್ಲಕ್ಷತನದಿಂದ  ಕೆಲಸ ಮಾಡಿಸಿದ ಎಲೆಕ್ಟ್ರಿಕ್  ಕಾಂಟ್ರ್ಯಾಕ್ಟರ್  ಶಿವರಾಮ ಶೆಟ್ಟಿ ಮತ್ತು  ಪೆಟ್ರೋಲ್ ಬಂಕ್ ನ  ಮಾಲೀಕರಾದ  ಸುರೇಶ ಶೆಟ್ಟಿ ಎಂಬವರ ದೂರು ನೀಡಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 162/2022 ಕಲಂ 304(A) ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಹೆಬ್ರಿ: ದಿನಾಂಕ; 19/12/2022 ರಂದು ಸಂದೀಪ.ವಿ ರವರು ಅವರ ಸ್ನೇಹಿತ ಪೂರ್ಣಾನಂದ ಪ್ರಭು ರವರ KA51 H1469 ನೇ ಮೋಟಾರ್‌ ಸೈಕಲ್‌ ನಲ್ಲಿ ಸಹ ಸವಾರನಾಗಿ ಕುಳಿತುಕೊಂಡು ದೇವಸ್ಥಾನಬೆಟ್ಟು ಕಡೆಯಿಂದ ಸೂರಿಮಣ್ಣು ಕಡೆಗೆ ಹೋಗುತ್ತಿರುವಾಗ ಅವರು ಸಂಜೆ ಸಮಯ ಸುಮಾರು 06:30 ಗಂಟೆಗೆ ಶಿವಪುರ ಗ್ರಾಮದ ದೇವಸ್ಥಾನಬೆಟ್ಟು ಶಂಕರಲಿಂಗೇಶ್ವರ ದೇವಸ್ಥಾನದ ತಿರುವಿನಲ್ಲಿ ತಲುಪುವಾಗ ಪೂರ್ಣಾನಂದ ಪ್ರಭು ರವರು ಮೋಟಾರ್‌ ಸೈಕಲ್‌ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಒಮ್ಮೇಲೆ ಬ್ರೇಕ್‌ ಹಾಕಿದ ಪರಿಣಾಮ ಮೋಟಾರ್‌ ಸೈಕಲ್‌ ಸವಾರನ ನಿಯಂತ್ರಣ ತಪ್ಪಿ ಸವಾರ ಮತ್ತು ಸಹ ಸವಾರ ಮೋಟಾರ್‌ ಸೈಕಲ್‌  ಸಮೇತ ರಸ್ತೆಗೆ ಬಿದ್ದಿರುತ್ತಾರೆ. ಈ ಘಟನೆಯಿಂದ ಸಂದೀಪ.ವಿ ರವರಿಗೆ ಬಲಕೈ ಮತ್ತು ಬಲಕಾಲಿಗೆ ತರಚಿದ ಗಾಯವಾಗಿದ್ದು ಬಲಕಾಲಿನ ಮೊಣಗಂಟಿನ ಕೆಳಗೆ ತೀವ್ರ ಸ್ವರೂಪದ ಗಾಯವಾಗಿರುತ್ತದೆ. ಸವಾರ ಪೂರ್ಣಾನಂದ ಪ್ರಭು ರವರಿಗೆ ಸಣ್ಣ ಪುಟ್ಟ ತರಚಿದ ಗಾಯಗಳು ಆಗಿರುತ್ತದೆ . ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 73/2022 ಕಲಂ:279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಶಂಕರನಾರಾಯಣ:  ದಿನಾಂಕ  22.12.2022 ರಂದು   ಮದ್ಯಾಹ್ನ ಸುಮಾರು  1;00 ಘಂಟೆಗೆ   ಹಿಲಿಯಾಣ ತಾಲೂಕಿನ ಹಿಲಿಯಾಣ ಗ್ರಾಮದ ಬಸವ ಶೆಟ್ಟಿ ರವರ ಮನೆಯ  ಎದುರುಗಡೆ  ಆಮ್ರಕಲ್ಲು ಕಡೆಗೆ  ಫಿರ್ಯಾದಿ ಮಣಿಕಂಠ ಪ್ರಾಯ 26 ವರ್ಷ ತಂದೆ, ರಮೇಶ ಮೊಗವೀರ ವಾಸ, ಪಾರ್ವತಿ ನಿಲಯ ಕೊಂಡಳ್ಳಿ, ಶಂಕರನಾರಾಯಣ ಗ್ರಾಮ  ಇವರು  ಕೆಎ,20 ಝಡ್, 2826 ನೇ ನಂಬ್ರದ ಕಾರನ್ನು  ಚಲಾಯಿಸಿಕೊಂಡು  ಹೋಗುತ್ತಿರುವಾಗ   ಆರೋಪಿಯು ಕೆಎ 19 ಎಬಿ. 7820  ನೇ ನಂಬ್ರದ  ಕ್ಯಾಂಟರ ವಾಹನವನ್ನು  ಮಂದಾರ್ತಿ ಕಡೆಯಿಂದ ಅತೀ  ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಕಾರನ್ನು ಡಿಕ್ಕಿ ಹೊಡೆದಿರುತ್ತಾನೆ, ಇದರ  ಪರಿಣಾಮ ಎರಡು ವಾಹನಗಳು ಜಖಂಗೊಂಡಿರುತ್ತದೆ, ಈ ಬಗ್ಗೆ    ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ   140/2022  ಕಲಂ: 279,   ಐ.ಪಿಸಿ      ಯಂತೆ ಪ್ರಕರಣ ದಾಖಲಿಸಲಾಗಿದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿ: ಶ್ರೀಧರ (30), ತಂದೆ: ದಯಾನಂದ ಗಾಣಿಗ ವಾಸ: ಉಗ್ರಾಣಿ ಬೆಟ್ಟು, 52ನೇ ಹೇರೂರು  ಗ್ರಾಮ ಇವರ  ಭಾವನಾದ ಉದಯ ಗಾಣಿಗ, ಪ್ರಾಯ 50 ವರ್ಷ ಎಂಬವರು ವಿಪರೀತ ಕುಡಿತದ ಚಟ ಹೊಂದಿದ್ದು, ಅವರು ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಕೆಲವೊಂದು ಸಮಯ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇರುತ್ತಿದ್ದರು. ಅವರು ಕುಡಿತದ ಚಟದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂದು ದಿನಾಂಕ 22.12.2022 ರಂದು ಮಧ್ಯಾಹ್ನ  2:30 ಗಂಟೆಯಿಂದ 4:30 ಗಂಟೆಯ ಮಧ್ಯಾವಧಿಯಲ್ಲಿ ಅವರಿಗೆ ಸಂಬಂಧಿಸಿದ ಇನ್ನೊಂದು ಮನೆಯಲ್ಲಿ ಮಲಗಲಿಕ್ಕೆ ಹೋದವರು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆ  ಯುಡಿಆರ್ ನಂ. 66/2022 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣದಾಕಲಿಸಲಾಗಿದೆ.
  • ಕುಂದಾಪುರ: ಪಿರ್ಯಾದಿ ಶೇರಿಗಾರ್, ಪ್ರಾಯ: 34 ವರ್ಷ, ತಂದೆ: ತಿಮ್ಮಪ್ಪ ಶೇರಿಗಾರ್, ವಾಸ: ಅಮ್ಮ ನಿಲಯ, ಬುಕ್ಕನಬೈಲು ರಸ್ತೆ, ಮೇಪು, ಕೋಟೆಶ್ವರ ಗ್ರಾಮ ಇವರ ತಂದೆ ತಿಮ್ಮಪ್ಪ ಶೇರಿಗಾರ್ ಪ್ರಾಯ: 75 ವರ್ಷ ಎಂಬುವವರು ಸುಮಾರು 15 ವರ್ಷಗಳಿಂದ ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದು, ಇದೇ ವಿಚಾರದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ, ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದಿನಾಂಕ 22/12/2022 ರಂದು ರಾತ್ರಿ 07:30 ಗಂಟೆಯಿಂದ ರಾತ್ರಿ 08:30 ಗಂಟೆಯ ನಡುವಿನ ಸಮಯ ಕೋಟೆಶ್ವರ ಗ್ರಾಮದ ಮೇಪು, ಬುಕ್ಕನಬೈಲು ರಸ್ತೆಯ ಪಿರ್ಯಾದಿದಾರರ ಮನೆಯ ಬಳಿ ಇರುವ  ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. I ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ  UDR No 47-2022 ಕಲಂ: 174 CrPC  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು

  • ಶಂಕರನಾರಾಯಣ:  ದಿನಾಂಕ 22.12.2022 ರಂದು 16;30 ಘಂಟೆಗೆ ಪಿರ್ಯಾದಿ: ಶ್ರೀಧರ ನಾಯ್ಕ  ಪಿಎಸ್ಐ  ಶಂಕರನಾರಾಯಣ ಪೊಲೀಸ್  ಠಾಣೆ  ರವರಿಗೆ  ಖಚಿತ ಮಾಹಿತಿಯೊಂದಿಗೆ ಬ್ರಹ್ಮಾವರ ತಾಲೂಕಿನ ಹಿಲಿಯಾಣ ಗ್ರಾಮದ  ಹೈಕಾಡಿ ಎಂಬಲ್ಲಿ ಇಮ್ತಿಯಾಜ್ ಎಂಬುವರಿಗೆ ಸೇರಿದ ವಾಸ್ತವ್ಯದ ಮನೆಯ ಬದಿಯ ಶೆಡ್‌ಗೆ ದಾಳಿ ಮಾಡಿದ್ದು, ಈ ಸಮಯ ಸದ್ರಿ ಶೆಡ್‌‌ನಲ್ಲಿ  ಆರೋಪಿಗಳು ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ ಕಸಾಯಿಖಾನೆ ಮಾಡಿ ಹೈಕಾಡಿ ನೀರಿನ ಟ್ಯಾಂಕ್ ಬಳಿ ಮೇಯಲು ಬಿಟ್ಟಿದ ಗಂಡು ದನದ ಕರುವನ್ನು  ಕಳವು   ಮಾಡಿಕೊಂಡು  ಬಂದು   ಹತ್ಯೆ  ಮಾಡಿ  ಮಾಂಸ ಮಾಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 141/2022  ಕಲಂ: 379 ಐ.ಪಿ.ಸಿ. ಮತ್ತು ಕಲಂ  4,12 ಕರ್ನಾಟಕ  ಜಾನುವಾರು ಹತ್ಯೆ ಪ್ರತಿಬಂಧಕ  ಮತ್ತು ಸಂರಕ್ಷಣಾ ಆಧ್ಯಾದೇಶ  2020   ಯಂತೆ ಪ್ರಕರಣದಾಕಲಿಸಲಾಗಿದೆ.

ಇತ್ತೀಚಿನ ನವೀಕರಣ​ : 23-12-2022 10:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080