ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಕಾಪು : ಪಿರ್ಯಾದಿ ರಾಘವೇಂದ್ರ ಕಿಣಿ(43), ತಂದೆ: ನಾರಾಯಣ ಕಿಣಿ ವಾಸ; ಮಹಾಲಸಾ, ಭಾರತ್ ನಗರ, ಕಲ್ಯಾ ಉಳಿಯಾರಗೋಳಿ ಗ್ರಾಮ ಕಾಪು ತಾಲೂಕು ಉಡುಪಿ ಇವರು ಕಾಪು ಪೇಟೆಯಲ್ಲಿ ಮಹಾಲಸಾ ಎಂಬ ಹಾರ್ಡ್ ವೇರ್ ಅಂಗಡಿಯನ್ನು ನಡೆಸಿಕೊಂಡಿರುವುದಾಗಿದೆ. ದಿನಾಂಕ: 22-12-2022 ರಂದು ರಾತ್ರಿ 9 ಗಂಟೆಯಿಂದ 10:00 ಗಂಟೆಯ ಸಮಯದಲ್ಲಿ ವ್ಯವಹಾರದ ಹಣ 3 ಲಕ್ಷವನ್ನು ಲೆಕ್ಕಮಾಡಿ ಅದರೊಂದಿಗೆ ದಿನಾಂಕ: 21-12-2022 ರ 3 ಲಕ್ಷ ಒಟ್ಟು 6 ಲಕ್ಷ ಹಣವನ್ನು ಹಾಗೂ ವ್ಯವಹಾರದ ಬಿಲ್ಲುಗಳನ್ನು ಕಂದು ಬಣ್ಣದ ಬ್ಯಾಗಿನಲ್ಲಿ ಹಾಕಿ ಅಂಗಡಿಯ ಎದುರಿನಲ್ಲಿ ನಿಲ್ಲಿಸಿದ್ದ ಫಿರ್ಯಾದುದಾರರ ಬಾಬ್ತು KA-20-EY-5682 ನಂಬ್ರದ ಸ್ಕೂಟರ್ ನ ಡಿಕ್ಕಿಯಲ್ಲಿ ಬ್ಯಾಗ್ ನ್ನು ಹಾಕಿರುತ್ತಾರೆ. ಬಳಿಕ ಅಂಗಡಿಗೆ ಬೀಗ ಹಾಕುವ ಸಮಯದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಅಂಗಡಿಯ ಬಳಿ ಬಂದಿದ್ದು, ಅದರಲ್ಲಿ ಓರ್ವ ವ್ಯಕ್ತಿ ಹಾಲು ಕೇಳುವ ಸೋಗಿನಲ್ಲಿ ಅಂಗಡಿಗೆ ಬಂದಿದ್ದು, ಇನ್ನೋರ್ವ ವ್ಯಕ್ತಿ ಹಣವಿರಿಸಿದ್ದ ಸ್ಕೂಟರ್ ಬಳಿ ನಿಂತಿದ್ದು, ಇಬ್ಬರೂ ಸೇರಿ ಹೊಂಚು ಹಾಕಿ ಫಿರ್ಯಾದುದಾರ ಸ್ಕೂಟರ್ ನಲ್ಲಿದ್ದ ಹಣದ ಬ್ಯಾಗ್ ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದ್ರಿ ವಿಚಾರವೂ ಫಿರ್ಯಾದುದಾರರು ಮನೆಗೆ ಹೋದ ಬಳಿಕ ಸ್ಕೂಟರ್ ನಲ್ಲಿದ್ದ ಹಣವನ್ನು ತೆಗೆಯಲು ಡಿಕ್ಕಿ ತೆರೆದ ಸಮಯ ಹಣದ ಬ್ಯಾಗ್ ಕಾಣದೇ ಇದ್ದು, ಫಿರ್ಯಾದುದಾರು ಪುನಃ ಅಂಗಡಿಯ ಬಳಿ ಹೋಗಿ ಅಂಗಡಿಯಲ್ಲಿ ಅಳವಡಿಸಿದ್ದ ಸಿ.ಸಿ ಟಿವಿ ಪೂಟೇಜ್ ನ್ನು ನೋಡಲಾಗಿ ದಿನಾಂಕ: 22-12-2022 ರಂದು ರಾತ್ರಿ 9:00 ಗಂಟೆಯಿಂದ 10:00 ಗಂಟೆಯ ಮಧ್ಯಾವಧಿಯಲ್ಲಿ ಇಬ್ಬರು ವ್ಯಕ್ತಿಗಳು ಹೊಂಚು ಹಾಕಿ ಸ್ಕೂಟರ್ ನಲ್ಲಿದ್ದ ಹಣವನ್ನು ಕಳವು ಮಾಡಿಕೊಂಡು ಕಾಪು ಪೇಟೆ ಕಡೆಗೆ ಹೋಗಿರುವ ದೃಶ್ಯಾವಳಿಗಳು ಕಂಡುಬಂದಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್‌ಠಾಣೆ ಅಪರಾಧ ಕ್ರಮಾಂಕ : 143/2022 ಕಲಂ 379 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತರ ಪ್ರಕರಣ :

  • ಕೋಟ : ಫಿರ್ಯಾದಿ ಜಯಂತ್ ಪುತ್ರನ್ 35 ವರ್ಷ),  ತಂದೆ  ಕೃಷ್ಣ ಮರಕಾಲ,   ಗೊಬ್ಬರ ಬೆಟ್ಟು ಕೊಟತಟ್ಟು ಗ್ರಾಮ. ಇವರು ದಿನಾಂಕ: 22/12/2022 ರಂದು ಸುಮಾರು 20:10 ಗಂಟೆಗೆ ಕೋಟತಟ್ಟು ಗ್ರಾಮದ ಗೊಬ್ಬರಬೆಟ್ಟುವಿನ ತನ್ನ ಮನೆಯ ಅಂಗಳದಲ್ಲಿ ನಿಂತುಕೊಂಡಿರುವಾಗ, ಫಿರ್ಯಾದಿದಾರರ ನೆರೆಮನೆಯವರಾದ ನಾಗರಾಜ್ ಪುತ್ರನ್ ಎಂಬವರು ಫಿರ್ಯಾದುದಾರರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಫಿರ್ಯಾದುದಾರರನ್ನು ಉದ್ದೇಶಿಸಿ, “ ನೀನು ಮಾಡಿದ್ದು ಸರಿಯಾ, ನಿನ್ನನ್ನು ನೋಡಿಕೊಳ್ಳುತ್ತೇನೆ ” ಎಂದು ಪ್ರಶ್ನಿಸಿ ಜೀವ ಬೆದರಿಕೆ ಹಾಕಿದ್ದೂ ಅಲ್ಲದೇ ಆಗ ಫಿರ್ಯಾದಿದಾರರು ಏನು ವಿಷಯ ಎಂದು ಆತನಲ್ಲಿ ಕೇಳಿದಾಗ ನಾಗರಾಜ್ ಪುತ್ರನ್ ರವರು, “ನನ್ನ ವಿಷಯಕ್ಕೆ ಬಂದರೆ ನಿನ್ನನ್ನು ಕೊಂದು ಹಾಕುತ್ತೇನೆ” ಎಂದು ಫಿರ್ಯಾದಿದಾರರಿಗೆ ಕೊಲೆ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ಠಾಣೆ ಅಪರಾಧ ಕ್ರಮಾಂಕ : 230/2022 ಕಲಂ: 447, 506 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಗಾಂಜಾ ಸೇವನೆ ಪ್ರಕರಣ :

  • ಮಣಿಪಾಲ : ದಿನಾಂಕ  21.12.2022 ರಂದು 11.00 ಗಂಟೆಗೆ ಮಣಿಪಾಲ ಪೊಲೀಸ್‌ ಠಾಣಾ ಪ್ರೋ.ಪಿ.ಎಸ್‌ಐ ನಿಧಿ ಮತ್ತು ಹೆಚ್‌ಸಿ 2170 ಉಮೇಶ್ ಇವರುಗಳು ಮಾದಕ ವಸ್ತು ಗಾಂಜಾವನ್ನುಸೇವಿಸಿರುವ ಸಂದೇಹದ ಮೇಲೆ ಕಾರ್ತಿಕ್ ಪ್ರಾಯ : 22 ವರ್ಷ, ತಂದೆ: ಮುದ್ದು ಪೂಜಾರಿ ವಾಸ : 5 ನೇ ಕ್ರಾಸ್, ಪ್ರಗತಿ ನಗರ, ಅಲೆವೂರು ಗ್ರಾಮ, ಉಡುಪಿ ತಾಲೂಕು. ಉಡುಪಿ ಜಿಲ್ಲೆ. ಎಂಬಾತನನ್ನು ಉಡುಪಿ ತಾಲೂಕು ಅಲೆವೂರು ಗ್ರಾಮದ ಶಾಂತಿನಗರದ ಬಳಿ ಸಾರ್ವಜನಿಕ ಸ್ಥಳದಲ್ಲಿ ವಶಕ್ಕೆ ಪಡೆದು ಠಾಣೆಗೆ ಹಾಜರುಪಡಿಸಿರುತ್ತಾರೆ.  ಅದೇ ದಿನ ಮಣಿಪಾಲ ಪೊಲೀಸ್‌ ಠಾಣಾ ಪ್ರಭಾರದಲ್ಲಿದ್ದ ಎ ಎಸ್ ಐ ಉಮೇಶ್ ಜೋಗಿ ರವರು  ಸದರಿ ವ್ಯಕ್ತಿ ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಪಿಸಿ 40 ಆನಂದಯ್ಯ ರವರ ಜೊತೆಯಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲು ಕಳುಹಿಸಿಕೊಟ್ಟಿರುತ್ತಾರೆ. ಆರೋಪಿ ಕಾರ್ತಿಕ್ ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ: 23.12.2022 ರಂದು ದೃಢಪತ್ರವನ್ನು ನೀಡಿರುತ್ತಾರೆ,  ಈ ಬಗ್ಗೆ ಮಣಿಪಾಲ ಪೊಲೀಸ್‌ಠಾಣೆ ಅಪರಾಧ ಕ್ರಮಾಂಕ : 222/2022 ಕಲಂ: 27(b) NDPS Act  ರಂರೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 23-12-2022 06:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080