ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ದಿನಾಂಕ 22/12/2021 ರಂದು ಪಿರ್ಯಾದಿದಾರರಾದ ಕಾರ್ತಿಕ್ (30), ತಂದೆ: ಬಾಬು, ವಾಸ: ನಿಟ್ಟೂರು, ವಿಷ್ಣುಮೂರ್ತಿ ನಗರ, 8ನೇ ಕ್ರಾಸ್, ಮನೆ ನಂಬ್ರ 753 ಎಮ್‌ 96, ಪುತ್ತೂರು ಗ್ರಾಮ, ಉಡುಪಿ ಜಿಲ್ಲೆ ಇವರು KA-20-EH-9782 ನೇ ನಂಬ್ರದ ಮೋಟಾರು ಸೈಕಲಿನಲ್ಲಿ ಕರಾವಳಿ ಕಡೆಯಿಂದ ಬಲಾಯಿಪಾದೆ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸವಾರಿ ಮಾಡಿಕೊಂಡು ಬರುತ್ತಿರುವಾಗ ಬೆಳಿಗ್ಗೆ 09:00 ಗಂಟೆಗೆ ಕೊರಂಗ್ರಪಾಡಿ ಗ್ರಾಮದ ಕಿನ್ನಿಮುಲ್ಕಿ ಕಾರ್‌ ಸರ್ವಿಸ್ ಸೆಂಟರ್ ಬಳಿ ತಲುಪುವಾಗ ಅದೇ ಮಾರ್ಗದಲ್ಲಿ ಬಲಬದಿಯಿಂದ ಕರಾವಳಿ ಕಡೆಯಿಂದ ಬಲಾಯಿಪಾದೆ ಕಡೆಗೆ KA-20-MA-6282 ಕಾರು ಚಾಲಕ ತನ್ನ ಕಾರನ್ನು ಯಾವುದೇ ಸೂಚನೆ ನೀಡದೆ ಒಮ್ಮೆಲೆ ಎಡಕ್ಕೆ ತಿರುಗಿಸಿದ ಪರಿಣಾಮ ನೇರವಾಗಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಮುಖಕ್ಕೆ ಎಡಕಾಲು ಎಡಕೈಗೆ ಗುದ್ದಿದ ನೋವಾಗಿರುತ್ತದೆ, ಹಲ್ಲು ಮುರಿದಿದ್ದು ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 93/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ನಾರಾಯಣ ಮಾಸ್ತಿ ಮುಕ್ರಿ (54),ತಂದೆ: ದಿ. ಮಾಸ್ತಿ  ನಾಗು ಮುಕ್ರಿ, ವಾಸ: ಕಸ್ಟಮ್ ಕ್ವಾರ್ಟಸ್ ಎದುರು  ಮಲ್ಪೆ ,ಕೊಡವೂರು ಇವರು ದಿನಾಂಕ 29/11/2021 ರಂದು  ಮಧ್ಯಾಹ್ನ 1:00 ಗಂಟೆಗೆ  ಮಲ್ಪೆ ಬಸ್ ನಿಲ್ದಾಣದ ಹತ್ತಿರವಿರುವ  ಔಷಧಿ  ತೆಗೆದುಕೊಂಡು  ವಾಪಸ್ಸು ತನ್ನ KA-47-H-7441 ನೇ ಮೋಟಾರು ಸೈಕಲ್ ನಲ್ಲಿ ಬರುತ್ತಿರುವಾಗ ಕಸ್ಟಮ್  ಕ್ವಾರ್ಟಸ್  ಗೇಟಿನ ಎದುರುಗಡೆ  ಕೊಳದಿಂದ  ಮಲ್ಪೆ ಬಸ್ ಸ್ಟ್ಯಾಂಡ್  ಕಡೆಗೆ ಓರ್ವ ಗೂಡ್ಸ್ ಟೆಂಪೋ ಚಾಲಕನು ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಟೆಂಪೋ ವನ್ನು ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ಮೋಟಾರು ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ  ಮೋಟಾರು ಸೈಕಲ್ ಸಮೇತ ಪಿರ್ಯಾದಿದಾರರು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲ ಕೈ ಕಿರುಬೆರಳು ಮೂಳೆ ಮುರಿತವಾಗಿದ್ದು ಅಲ್ಲದೆ ಕಾಲಿನ  4 ನೇ ಬೆರಳಿಗೆ  ರಕ್ತಗಾಯವಾಗಿದ್ದು , ಗಾಯಗೊಂಡ ಪಿರ್ಯಾದಿದಾರರನ್ನು ಟೆಂಪೋ ರಿಕ್ಷಾ ಚಾಲಕರು ಮತ್ತು ಪಿರ್ಯಾದಿದಾರರ ಮಗ ಪ್ರಜ್ವಲ್ ಉಪಚರಿಸಿ ಚಿಕಿತ್ಸೆಯ ಬಗ್ಗೆ  ಮಲ್ಪೆ ನರ್ಸಿಂಗ್ ಹೋಮ್  ಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ  ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಆದರ್ಶ  ಆಸ್ಪತ್ರೆ  ಉಡುಪಿಯಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ , ಅಫಘಾತಗೊಳಿಸಿಸದ  ಗೂಡ್ಸ್ ಆಟೋ ಟೆಂಪೋ ನಂಬ್ರ  KA-20-C-1128 ಆಗಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 138/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು:     ಪಿರ್ಯಾದಿದಾರರಾದ ರಾಜೇಶ್ ಕೆ (35), ತಂದೆ:ನಾರಾಯಣ ಕೋಟೆಗಾರ್, ವಾಸ: ಕೆ.ಕೆ ಹೌಸ್ ಸೋಮೇಶ್ವ್ರ ರಸ್ತೆ, ಪಡುವರಿ ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 22/12/2021 ರಂದು  ಸಂಜೆ 5:00 ಗಂಟೆಗೆ ಬೈಂದೂರು ತಾಲೂಕು ಪಡುವರಿ ಗ್ರಾಮದ  ದೊಂಬೆ ಸಾಯಿ ವಿಶ್ರಾಮ್  ರೆಸಾರ್ಟ ಬಳಿ ಸಮುದ್ರ ತೀರದಲ್ಲಿ ವಾಯು ವಿಹಾರ ಮಾಡುತ್ತಿದ್ದ ಸಮಯ 40 ರಿಂದ 45 ವರ್ಷ ಪ್ರಾಯದ ಅಪರಿಚಿತ ಗಂಡಸಿನ  ಮೃತ ದೇಹವು ಸಮುದ್ರದ ದಡದಲ್ಲಿ ಅಂಗಾತನೆ ಬಿದ್ದು ಕೊಂಡು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದ್ದು  ಮೃತ ವ್ಯಕ್ತಿಯು ಸುಮಾರು 20 ದಿನಗಳ ಹಿಂದೆ ಎಲ್ಲಿಯೋ ಆಕಸ್ಮಿಕವಾಗಿ  ಕಾಲು ಜಾರಿ ಸಮುದ್ರಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರಬಹುದಾಗಿ ಕಂಡು ಬಂದಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 52/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಸತೀಶ್ ಬೆಲ್ಚಡ (46), ತಂದೆ: ದೇಜು ಪಾಲನ್‌, ವಾಸ: ಶ್ರೀ ಭಗವತಿ ನಿಲಯ ಸರಕಾರಿಗುಡ್ಡೆ ಮೂಡಬೆಟ್ಟು ಗ್ರಾಮ ಕಾಪು ತಾಲೂಕು ಇವರ ತಮ್ಮ ರವಿ (42 ) ಎಂಬುವವರು ವೆಲ್ಡಿಂಗ್  ಕೆಲಸ ಮಾಡಿಕೊಂಡಿದ್ದು, ಅವರು ವಿಪರೀತ ಮದ್ಯಪಾನ ಮಾಡುವ ಅಭ್ಯಾಸವನ್ನು ಹೊಂದಿದ್ದು ಅಲ್ಲದೇ ಅವರಿಗೆ ಮದುವೆ ಆಗದೇ ಇದ್ದು ಇದೇ ವಿಚಾರದಲ್ಲಿ  ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 16/12/2021 ರಂದು ಮಧ್ಯಾಹ್ನ 2:00 ಗಂಟೆಯ ಸಮಯಕ್ಕೆ  ಬಿಯರ್‌ನಲ್ಲಿ ಇಲಿ ಪಾಷಾಣ ಸೇರಿಸಿ ಕುಡಿದು ಮನೆಗೆ ಬಂದವರು ಸಂಜೆ ಮನೆಯಲ್ಲಿ ವಾಂತಿ ಮಾಡುತ್ತಿದ್ದವರನ್ನು ಪಿರ್ಯಾದಿದದಾರರು ಹಾಗೂ ಇತರರು ಉಡುಪಿ ಜಿಲ್ಲಾ ಸರಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಅವರನ್ನು ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಿದ್ದು  ಚಿಕಿತ್ಸೆಯಲ್ಲಿರುತ್ತಾ ರವಿಯವರು ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ 22/12/2021 ರಂದು 17:40 ಗಂಟೆಗೆ ಮೃತಪಟ್ಟಿರುವುದಾಗಿದೆ.  ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 46/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಪಿರ್ಯಾದಿದಾರರಾದ ದಯಾನಂದ ಶೆಟ್ಟಿ (52), ತಂದೆ: ದಿ. ದೇಜು ಶೆಟ್ಟಿ, ವಾಸ: ಪದ್ಮ ಶ್ರಿ ಹೋಳಿಂಜೆ ನಡು ಮನೆ ಪೆರ್ಡೂರು ಗ್ರಾಮ ಮತ್ತು ಅಂಚೆ ಉಡುಪಿ ತಾಲೂಕು ಇವರ ಕರಿಮರದ  ಹಾಡಿಯಲ್ಲಿ ಸುಮಾರು 55-60 ವರ್ಷ ಪ್ರಾಯದ ದೃಢಕಾಯ ಶರೀರವನ್ನು ಹೊಂದಿರುವ ಮೃತ ದೇಹದ ಮೈ ಮೇಲೆ ಕಾಡಿನ ಹುಳ- ಹುಪ್ಪಟ್ಟೆ ನೊಣ ಮುತ್ತಿಕೊಂಡಿದ್ದು  ಮೃತ ದೇಹವು ಸಂಪೂರ್ಣವಾಗಿ  ಕೊಳೆತು ದುರ್ನಾತ ಬೀರುತ್ತಿದ್ದು ಮೃತ ದೇಹದ ಮುಖ,ಕಣ್ಣು, ಬಾಯಿ ಸಂಪೂರ್ಣವಾಗಿ ಕೊಳೆತಿದ್ದು ಗುರುತಿಸಲು ಅಸಾದ್ಯವಾಗಿರುತ್ತದೆ. ಅವರು ಕರಿಮರಕ್ಕೆ ಬಿಳಿ ಬಣ್ಣದ ಬೈರಸ್ ನ್ನು  ಕಟ್ಟಿ , ಕುತ್ತಿಗೆಗೆ ನೇಣು ಬಿಗಿದು ಕುತ್ತಿಗೆಯ ಗಂಟು ಬಿಚ್ಚಿ ನೆಲಕ್ಕೆ ಬಿದ್ದಿರಲೂಬಹುದು .ಮೃತ ಶರೀರವು  ನೆಲದ ಮೇಲೆ ಅಂಗಾತನೇ ಬಿದ್ದಿರುವ ಸ್ಥಿತಿಯಲ್ಲಿ  ಕಂಡು ಬರುತ್ತದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 29/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಮನುಷ್ಯ ಕಾಣೆ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಶ್ರೀಮತಿ ಸೀತಾ (59), ಗಂಡ: ಪಂಜು ಪೂಜಾರಿ, ವಾಸ: ವಿಶ್ರಿತಾ ನಿಲಯ, ಮಕ್ಕಿಮನೆ, ಸಂತೋಷನಗರ ಹೆಮ್ಮಾಡಿ ಗ್ರಾಮ, ಕುಂದಾಪುರ  ತಾಲೂಕು ಇವರ ಮಗ  ದಿನೇಶ ಪೂಜಾರಿ (35) ಎಂಬುವವರು  ದಿನಾಂಕ 21/12/2021 ರಂದು 18:15 ಗಂಟೆಗೆ ಫೋನಿನಲ್ಲಿ ಮಾತನಾಡುತ್ತಾ ಹೆಮ್ಮಾಡಿಯ ವಾಸದ ಮನೆಯಿಂದ ಹೊರಟವರು ಮನೆಗೆ ವಾಪಾಸು ಬಂದಿರುವುದಿಲ್ಲ.  ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 135/2021 ಕಲಂ: Man  Missing ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಅಮಾಸೆಬೈಲು: ದಿನಾಂಕ 18/12/2021 ರಂದು  ರಾತ್ರಿ 11:00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಅಶೋಕ ಶೆಟ್ಟಿಗಾರ (49),  ತಂದೆ: ದಿ ಹುಲಿ ಮಹಾಬಲ ಶೆಟ್ಟಿಗಾರ, ವಾಸ: ತೊಂಬಟ್ಟು ಕಬ್ಬಿನಾಲೆ ಮಚ್ಚಟ್ಟು ಗ್ರಾಮ  ಕುಂದಾಫುರ ತಾಲೂಕು ಉಡುಪಿ ಜಿಲ್ಲೆ ಇವರ  ಪಟ್ಟಾಸ್ಥಳದ ತೋಟದಲ್ಲಿ ಶಬ್ದ ಆಗುತ್ತಿದ್ದು ಈ ಬಗ್ಗೆ ಪಿರ್ಯಾದಿದಾರರು ಹಾಗೂ ಅವರ ಅಕ್ಕನ ಮಗ ಶಿವಕುಮಾರ ಎಂಬುವವರೊಂದಿಗೆ ಹೋದಾಗ  ರವೀಂದ್ರ ಹಾಗೂ ಸುರೇಂದ್ರ ಎಂಬುವವರು ತೋಟದ ಪೈಪ್ ಲೈನ್ ಕೀಳುತ್ತಿದ್ದು  ಪಿರ್ಯಾದಿದಾರರು ಹತ್ತಿರ ಹೋದಾಗ ಅಡ್ಡಗಟ್ಟಿ ಕೈಯಿಂದ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದ್ದು ಹಾಗೂ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುತ್ತಾರೆ   ಈ ಬಗ್ಗೆ  ಪಿರ್ಯಾದಿದಾರರು ದಿನಾಂಕ 19/12/2021 ರಂದು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದುಕೊಂಡಿದ್ದು ನಂತರ ದಿನಾಂಕ 20/12/2021 ರಂದು ವಾಪಾಸು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ  ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 42/2021 ಕಲಂ: 341 323, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಗಂಗೊಳ್ಳಿ: ದಿನಾಂಕ:29/11/2021 ರಂದು ಬೆಳಿಗ್ಗೆ 9:30 ಗಂಟೆಗೆ ಜಾಗದ ವಿಚಾರದ ವೈಷಮ್ಯದಿಂದ  ಆಲೂರು ಗ್ರಾಮದ ತಾರೀಬೇರು ಎಂಬಲ್ಲಿ ಆಪಾದಿತ ರಮೇಶ ಗಾಣಿಗ ಪಿರ್ಯಾದಿದಾರರಾದ  ಶಾಂತಾ ಪೂಜಾರ್ತಿ (41), ಗಂಡ:ಯೋಗೀಶ್ ಪೂಜಾರಿ, ವಾಸ: ಸೋಮನಾಥೇಶ್ವರ ದೇವಸ್ಥಾನದ ಬಳಿ, ಪಡುತಾರಿಬೇರು, ಆಲೂರು ಗ್ರಾಮ, ಕುಂದಾಪುರ ತಾಲೂಕು ಇವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದದಿಂದ ಬೈದು, ಬಿಡಿಸಲು ಬಂದ ಪಿರ್ಯಾದಿದಾರರ ಗಂಡ ಯೋಗೇಶ್ ಪೂಜಾರಿ ಯವರಿಗೆ ಮರದ ದೊಣ್ಣೆಯಿಂದ ಹೊಡೆದು ಗಾಯ ಮಾಡಿ ಜೀವ ಬೆದರಿಕೆ  ಹಾಕಿರುವುದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 117/2021  ಕಲಂ: 323,324, 354(ಬಿ),447, 448, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
     

ಇತ್ತೀಚಿನ ನವೀಕರಣ​ : 23-12-2021 10:02 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080