ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿ ಶ್ರೀಮತಿ ಭಾರತಿ ಇವರ ತಾಯಿ ಶ್ರೀಮತಿ ಸೀತಾ ರವರು ನಿನ್ನೆ ದಿನಾಂಕ:22/21/2021 ರಂದು ಸಂಜೆ ಅವರ ಮನೆಯಾದ ಮಂಗಳೂರು ತಾಲೂಕಿನ ಕಿಲ್ಪಾಡಿ ಗ್ರಾಮ ಎಂಬಲ್ಲಿಂದ ತೆಂಕ ಎರ್ಮಾಳ್‌‌ಗೆ ಬಸ್ಸಿನಲ್ಲಿ ಬಂದು ಇಳಿದು ಅಲ್ಲಿಗೆ ಬಂದಿದ್ದ ಪಿರ್ಯಾದಿದಾರರ ಜೊತೆ ಸಂಜೆ 6:00 ಗಂಟೆ ಸುಮಾರಿಗೆ ಕಾಪು ತಾಲೂಕು ತೆಂಕಎರ್ಮಾಳು ಗ್ರಾಮದ ಮಹಾಲಕ್ಷ್ಮಿ ಹೋಟೇಲ್‌ ಬಳಿ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುವ ಏಕಮುಖ ಸಂಚಾರ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುವಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ KA-20-ES-4145 ಬೈಕ್‌ ಸವಾರನು ಬೈಕನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸೀತಾ ರವರಿಗೆ ಹಿಂದಿನಿಂದ ಡಿಕ್ಕಿಪಡಿಸಿದ್ದು, ಪರಿಣಾಮ ಸೀತಾ ರವರು ಹಾಗೂ ಬೈಕ್ ಸವಾರ ಪ್ರವೀಣ್‌ ಪೂಜಾರಿ ಹಾಗೂ ಸಹಸವಾರ ತಾರನಾಥ ರಸ್ತೆಗೆ ಬಿದ್ದು ಅವರಿಗೆ ಗಾಯಗಳಾಗಿದ್ದು ಈ ಅಫಘಾತದಿಂದ  ಸೀತಾ ರವರಿಗೆ ಎಡಕಾಲು ಮೊಣಗಂಟಿಗೆ ತೀವೃ ರಕ್ತಗಾಯ, ಹಣೆಗೆ ರಕ್ತಗಾಯ ಹಾಗೂ ಬಲಕೈ ತಟ್ಟಿಗೆ ತರಚಿದ ಗಾಯ ಆಗಿರುತ್ತದೆ. ಅಲ್ಲಿ ಸೇರಿದ ಸ್ಥಳೀಯರು ಹಾಗೂ ಫಿರ್ಯಾದುದಾರರು ಸೀತಾರವರನ್ನು ಉಪಚರಿಸಿ ಒಂದು ಅಟೋರಿಕ್ಷಾದಲ್ಲಿ ಕಾಪು ಪ್ರಶಾಂತ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಅಲ್ಲಿಂದ ಉಡುಪಿ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ಅಲ್ಲಿಂದ  ದಿನಾಂಕ:23/12/2021 ರಂದು ಬೆಳಗ್ಗಿನ ಜಾವ 5:00 ಗಂಟೆ ಸುಮಾರಿಗೆ ಮಂಗಳೂರು ವೆನ್‌ಲಾಕ್‌ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು, ಈ ಅಫಘಾತಕ್ಕೆ KA-20-ES-4145 ನೇ ಬೈಕ್‌ ಸವಾರ ಪ್ರವೀಣ್‌ ಪೂಜಾರಿ ಈತನ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 119/2021 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಉಡುಪಿ: ಪಿರ್ಯಾದಿ ವಾಣಿ ಇವರು ಹೋಂಡಾ ಆ್ಯಕ್ಟೀವಾ ಸ್ಕೂಟರ್‌ ನಂಬ್ರ: KA 20 EC 0147 ನೇದರ ಆರ್‌.ಸಿ ಮಾಲಕರಾಗಿದ್ದು, ಪಿರ್ಯಾದುದಾರರು ದಿನಾಂಕ 22/12/2021 ರಂದು ಬೆಳಿಗ್ಗೆ 06:50 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಸರ್ವೀಸ್‌ ಬಸ್‌ ಸ್ಟ್ಯಾಂಡ್‌ನ ಪೊಲೀಸ್‌ ಚೌಕಿಯ ಎದುರು ನಿಲ್ಲಿಸಿ ಬಸ್‌ಗೆ ಪಾರ್ಸೆಲ್ ಕೊಡಲು ಹೋಗಿದ್ದು, ಪಿರ್ಯಾದುದಾರರು  ವಾಪಾಸು 06:55 ಗಂಟೆಗೆ ಸದ್ರಿ ಸ್ಥಳಕ್ಕೆ ಹೋಗಿ ನೋಡಲಾಗಿ, ಸ್ಕೂಟರ್‌ ಇಟ್ಟ ಜಾಗದಲ್ಲಿ ಇಲ್ಲದೆ ಇದ್ದು, ದಿನಾಂಕ: 22/12/2021 ರಂದು ಬೆಳಿಗ್ಗೆ 06:50 ಗಂಟೆಯಿಂದ 06:55 ಗಂಟೆಯ ಮಧ್ಯಾವದಿಯಲ್ಲಿ ಪಿರ್ಯಾದುದಾರರು ನಿಲ್ಲಿಸಿದ ಸ್ಕೂಟರ್‌ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ಕೂಟರ್‌ನ ಅಂದಾಜು ಮೌಲ್ಯ ರೂ. 15,000/- ಆಗಬಹುದು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 188/2021 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಗಂಗೊಳ್ಳಿ: ದಿನಾಂಕ 22/12/2021 ರಂದು ನಂಜಾ ನಾಯ್ಕ, ಪಿಎಸ್‌ಐ ಗಂಗೊಳ್ಳಿ ಪೊಲೀಸ್‌ ಠಾಣೆ  ಇವರು  22:15 ಗಂಟೆಗೆ ಠಾಣೆಯಲ್ಲಿರುವಾಗ  ಹೊಸಾಡು ಗ್ರಾಮದ ಮುಳ್ಳಿಕಟ್ಟೆಯ ಹಾಲು ಡೈರಿಯ ಬಳಿ  ನಾಲ್ಕು ಜನರ ನಡುವೆ ಜಗಳ ನಡೆಯುತ್ತಿರುವ ಬಗ್ಗೆ ಬಾತ್ಮೀದಾರರೊಬ್ಬರು ನೀಡಿದ ಮಾಹಿತಿ ಮೇರೆಗೆ ಇಲಾಖಾ ಜೀಪ್ ನಲ್ಲಿ ಸಿಬ್ಬಂದಿಯವರೊಂದಿಗೆ ರಾತ್ರಿ 10:30 ಗಂಟೆಗೆ ಸದ್ರಿ ಸ್ಥಳಕ್ಕೆ ಹೋಗಿ ನೋಡಲಾಗಿ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯ ಹಾಲು ಡೈರಿಯ ಬಳಿ  ಸಾರ್ವಜನಿಕ ಸ್ಥಳದಲ್ಲಿ ಆಪಾದಿತರಾದ 1. ಅಮೀತ್‌, 2. ಅಜೀತ್‌ , 3. ಪ್ರದೀಪ್‌ 4.ನಿಶಾನ್ ಎಂಬವರುಗಳು  ಒಬ್ಬರನ್ನೊಬ್ಬರು ಶರ್ಟ್‌ ಪಟ್ಟಿಯನ್ನು ಹಿಡಿದುಕೊಂಡು ದೂಡಾಡಿಕೊಂಡು ಅವಾಚ್ಯ ಶಬ್ಧಗಳಿಂದ ಬೈದಾಡಿಕೊಳ್ಳುತ್ತಾ ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗವನ್ನುಂಟು ಮಾಡುತ್ತಿರುವವರನ್ನು ಪಿರ್ಯಾದಿದಾರರು ವಶಕ್ಕೆ ಪಡೆದು ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 118/2021 ಕಲಂ: 160 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

 • ಅಮಾಸೆಬೈಲು :  ಪ್ರಭಾಕರ ಶೆಟ್ಟಿ (52) ಎಂಬುವವರು ಸುಮಾರು 15 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು. ಉಡುಪಿ  ಕುಂದಾಪುರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದು ಗುಣಮುಖವಾಗದೆ ಮನೆಯಲ್ಲಿಯೇ ಇರುತ್ತಾರೆ ದಿನಾಂಕ:11-12-2021 ರಂದು ಬೆಳ್ಳಿಗ್ಗೆ 10:00 ಗಂಟೆಗೆ  ಅಮಾಸೆಬೈಲು ಪೇಟೆಗೆ ಹೋದವರು ಈ ತನಕ ಮನೆಗೆ ಬಂದಿರುವುದಿಲ್ಲ,  ಈ ಹಿಂದೆ ಹಲವು ಬಾರಿ ಹೊರಗೆ ಹೋಗಿ 2- 3 ದಿನ ಬಿಟ್ಟು ವಾಪಾಸು ಬರುತ್ತಿದ್ದು,ಈಗ ಹೋದವನು ವಾಪಾಸು ಮನೆಗೆಬಾರದೆ ಕಾಣೆಯಾಗಿರುತ್ತಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 43-2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಮಣಿಪಾಲ: ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಎಂ.ಜಿ.ಎಂ ಕಾಲೇಜ್‌ ಗುರುಕುಲ ಕ್ವಾಟ್ರಸ್‌ ನಂ: 26 ರಲ್ಲಿ  ಪಿರ್ಯಾದಿ ಶಿಲ್ಪಾ ಶ್ಯಾನಭೋಗ್‌ ಇವರ ಗಂಡ ಶ್ರೀ ಹರ್ಷ (37), ರವರು ಖಾಯಂ ಕೆಲಸವಿಲ್ಲದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಈ ಬಗ್ಗೆ 3 ತಿಂಗಳಿಂದ ಉಡುಪಿ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,  ಮಾನಸಿಕ ಖಿನ್ನತೆಯಿಂದಲೋ ಅಥವಾ ಇತರೆ ಯಾವುದೋ ಹೇಳಿಕೊಳ್ಳಲಾಗದ ಸಮಸ್ಯೆಯಿಂದ ಬಳಲುತ್ತಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 23/12/2021 ಮುಂಜಾವು 02:00 ಗಂಟೆಯಿಂದ 05:30 ಗಂಟೆ ಮಧ್ಯಾವಧಿಯಲ್ಲಿ  ಮನೆಯಲ್ಲಿ  ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 46/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 23-12-2021 06:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080