ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹಿರಿಯಡ್ಕ: ದಿನಾಂಕ: 20/11/2022 ರಂದು 00:30 ಗಂಟೆಗೆ ಹಿರಿಯಡ್ಕ ಜಂಕ್ಷನ್ ಬಳಿ  ಕೆಎ 37 ಬಿ 5143 ಮಿನಿ ಗೂಡ್ಸ್ ವಾಹನವನ್ನು ಅದರ ಚಾಲಕನು  ಹೆಬ್ರಿ ಕಡೆಯಿಂದ ಮಣಿಪಾಲ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ  ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಪಿರ್ಯಾದಿ ಉಮೇಶ್ ಶೆಟ್ಟಿ ಇವರು ರಾ ಹೆ 169 (ಎ ) ರಲ್ಲಿ ಮಣಿಪಾಲ ಕಡೆಯಿಂದ ಕಾರ್ಕಳ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಕೆಎ 20 ಇಪಿ 1100 ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಪಿರ್ಯಾದುದಾರರು ಕೆಳಕ್ಕೆ ಬಿದ್ದು ಪಿರ್ಯಾದುದಾರರ ಬಲಕಾಲಿನ ಮೂಳೆ ಮುರಿತ ಬಲಭುಜಕ್ಕೆ ರಕ್ತಗಾಯ ಹಾಗೂ ಎಡಕೈಗೆ ತರಚಿದ ಗಾಯ ಉಂಟಾಗಿದ್ದು ಸಾರ್ವಜನಿಕರು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಂಸಿ ಅಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 77/2022 ಕಲಂ : 279,338 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿ ಪದ್ಮ ವಿ ಶೆಟ್ಟಿ ಇವರು ಕುಂದಾಪುರದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿಯಮಿತ ಇದರ ಶಾಖಾಧಿಕಾರಿಯಾಗಿದ್ದು, ಕುಂದಾಪುರ ತಾಲೂಕು ಬಳ್ಕೂರು ಗ್ರಾಮದ ಸಸಿಹಿತ್ಲು ಎಂಬಲ್ಲಿ ವಾಸವಾಗಿರುವ ಕುಷ್ಟ ಆಚಾರಿ ಇವರ ಮಗ ಲಚ್ಚ ಆಚಾರಿ,  ಹಾಗೂ ಲಚ್ಚ ಆಚಾರಿಯವರ ಪತ್ನಿಯಾದ ಲಕ್ಷ್ಮೀ, ಹಾಗೂ ಬಾಬು ಆಚಾರಿಯವರ ಮಕ್ಕಳಾದ ಹರೀಶ ಮತ್ತು ದಿನೇಶ ಎನ್ನುವವರು ಸದ್ರಿ  ಬ್ಯಾಂಕ್ ನಿಂದ 5 ಲಕ್ಷ ರೂಪಾಯಿ ಹಣವನ್ನು ಸಾಲವನ್ನು ಪಡೆದಿದ್ದು, ದಿನಾಂಕ 30/05/2016 ರಂದು ಕುಂದಾಪುರ ಸ.ರಿ ಆಫೀಸಿನ ದಸ್ತಾವೇಜು ನಂಬ್ರ  982/2017-18 ನ್ನು ಸದ್ರಿ ಸಾಲಕ್ಕೆ ಅಡಮಾನವಾಗಿ ಅಡವು ಪತ್ರ ಮತ್ತು ಸಾಲದ ದಾಖಲಾತಿಗಳನ್ನು ಬ್ಯಾಂಕ್ ಗೆ ಬರೆದುಕೊಟ್ಟಿರುವುದಾಗಿದೆ. ಆಪಾದಿತರು ಪಡೆದುಕೊಂಡ ಸಾಲಕ್ಕೆ ಪ್ರತಿಯಾಗಿ ಸಾಲದ ಕಂತನ್ನು ಸರಿಯಾಗಿ ಮರು ಪಾವತಿ ಮಾಡದೇ ಇದ್ದು,  ಈ ಬಗ್ಗೆ ಪಿರ್ಯಾದಿದಾರರ ಬ್ಯಾಂಕನ ವತಿಯಿಂದ ಸಹಕಾರಿ ಸಂಘಗಳ ಉಪನಿಭಂದಕರು ಉಡುಪಿ ಇವರ ನ್ಯಾಯಾಲಯದಲ್ಲಿ ಸದ್ರಿ ಆಪಾದಿತರ ವಿರುದ್ದ ದಾವೆ ನಂಬ್ರ 282/2017-18 ರಂತೆ ದಾವೆ ಹೂಡಿದ್ದು, ನಂತರ ಸದ್ರಿ ನ್ಯಾಯಾಲಯದ ತೀರ್ಪಿನಂತೆ  ಹಣದ ವಸೂಲಾತಿ ಬಾಬ್ತು ಕುಂದಾಪುರ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಅಮಲ್ ಜ್ಯಾರಿ ನಂಬ್ರ 19/2022 ರಂತೆ ಅಮಲ್ ಜ್ಯಾರಿ ಅರ್ಜಿಯನ್ನುದಾಖಲಿಸಿದ್ದು ಸದ್ರಿ ಅಮಲ್ ಜ್ಯಾರಿಯಲ್ಲಿನೋಟಿಸ್ ಆದೇಶವಾಗಿರುತ್ತದೆ. ಸದ್ರಿ ಬ್ಯಾಂಕ್ ಅಡಮಾನ ಇಟ್ಟ ಗೋಪಾಡಿ ಗ್ರಾಮದ ಸ.ನಂ 96/7ರಲ್ಲಿ 0.02.50+0.02.50 ನೇಯ ಜಮೀನಿನ ಸಾಲದ ಬಗ್ಗೆ ಆಪಾದಿತರು ಪಿರ್ಯಾದಿದಾರರ ಬ್ಯಾಂಕ್ ನ ಸಾಲವು ಮರು ಸಂದಾಯವಾಗಿರುವುದಾಗಿ ಪೋರ್ಜರಿ ದೃಡೀಕರಣವನ್ನು ಸೃಷ್ಟಿಸಿ ದಿನಾಂಕ 07/05/2022 ರಂದು ಕುಂದಾಪುರ ಸ.ರಿ ಆಫೀಸಿನ ದಸ್ತಾವೇಜು ನಂಬ್ರ 910/2022-23 ರಂತೆ ನೋಂದಾವಣಿ ಮಾಡಿದ್ದು ಬ್ಯಾಂಕ್ ನ ಗಮನಕ್ಕೆ ಬಂದಿದ್ದು, ಸದ್ರಿ ಸಾಲ ಚುಕ್ತಾ ದೃಡೀಕರಣ ಪತ್ರಕ್ಕೆ ಪಿರ್ಯಾದಿದಾರರು ಮತ್ತು ಬ್ಯಾಂಕ್ ನವರು  ಸಹಿ ಮಾಡದೇ ಇದ್ದು, ಮತ್ತು ಸದ್ರಿ ಸಾಲ ಚುಕ್ತಾ ದೃಡೀಕರಣ ಪತ್ರದಲ್ಲಿ ಲಗ್ತೀಕರಿಸಿದ ಪಿರ್ಯಾದಾರರ ಆಧಾರ್ ಪತ್ರವು ಅವರ ಅಸಲು ಆಧಾರ್ ಪತ್ರದಂತೆ ಇರುವುದಿಲ್ಲ. ಅಲ್ಲದೇ ಸದ್ರಿ ಸಾಲ ಚುಕ್ತಾ ದೃಡೀಕರಣ ಪತ್ರ ನೋಂದಾವಣಿಯಾಗುವ ಸಮಯ ಲಚ್ಚ ಆಚಾರಿ ಯವರು ಜೀವಂತ ಇರದೇ ಇದ್ದು ದಾಖಲೆಗಳ ಪ್ರಕಾರ ಸದ್ರಿಯವರು ದಿನಾಂಕ 08/06/2017 ರಂದು ಮೃತಪಟ್ಟಿರುವುದು ಕಂಡು ಬಂದಿರುತ್ತದೆ. ಪಿರ್ಯಾದಿದಾರರ ಬ್ಯಾಂಕ್ ಗೆ ಬರಬೇಕಾಗಿದ್ದ ಸಾಲವನ್ನು ಮರುಪಾವತಿ ಮಾಡದೇ ಸಾಲಗಾರರಾದ ಲಕ್ಷ್ಮೀ ಮತ್ತು ಬಾಬು ಆಚಾರಿಯವರ ಮಕ್ಕಳಾದ ದಿನೇಶ ಮತ್ತು ಹರೀಶ ಎನ್ನುವವರು ಪೋರ್ಜರಿ ಅಧಿಕಾರ ಪತ್ರ ತಯಾರು ಮಾಡಿ ಸದ್ರಿ ಪೋರ್ಜರಿ ಸಾಲ ಚುಕ್ತಾ ದೃಡೀಕರಣ ಪತ್ರವನ್ನು ಕುಂದಾಪುರ ನೋಂದಣಿ ಕಛೇರಿಯಲ್ಲಿ ನೋಂದಾವಣೆ ಮಾಡಿ ಬ್ಯಾಂಕ್ ಗೆ ಮೋಸ ಮತ್ತು ವಂಚನೆಯನ್ನುಂಟು ಮಾಡಿರುವುದಾಗಿದೆ . ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 124/2022 ಕಲಂ: 465, 468, 471, 420 R/W 34    ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

  • ಶಿರ್ವ:ಪಿರ್ಯಾದಿ ಪುನೀತ್ ಇವರ ತಂದೆ ಚಂದ್ರಕಾಂತ ಪೂಜಾರಿ(46ವರ್ಷ)ರವರು ಪೈಂಟಿಂಗ್ ಕೆಲಸವನ್ನು ಮಾಡಿಕೊಂಡಿರುತ್ತಾರೆ. ದಿನಾಂಕ:21/11/2022 ರಂದು ಬೆಳಿಗ್ಗೆ ಪಿರ್ಯಾದಿದಾರರು ಕಾಲೇಜಿಗೆ ಹೋಗಿದ್ದು, ಚಂದ್ರಕಾಂತ ಪೂಜಾರಿಯವರು ಕೆಲಸವಿಲ್ಲವೆಂದು ಮನೆಯಲ್ಲಿದ್ದವರು ಮಧ್ಯಾಹ್ನ 01.00 ಗಂಟೆ ಸಮಯಕ್ಕೆ ತನ್ನ ಬಾಬ್ತು ದ್ವಿಚಕ್ರ ವಾಹನ ಕೆಎ 20ಇಎ8085ನೇದರಲ್ಲಿ ಮನೆಯಿಂದ ಹೋದವರು ಈ ತನಕ ವಾಪಾಸು ಮನೆಗೆ ಬಂದಿರುವುದಿಲ್ಲ. ಈ ಬಗ್ಗೆ ಶಿರ್ವ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 83/22, ಕಲಂ  ಮನುಷ್ಯ ಕಾಣೆಯಂತೆ  ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ ‌

  • ಬ್ರಹ್ಮಾವರ  : ಬ್ರಹ್ಮಾವರ  ತಾಲೂಕು, ಹಾರಾಡಿ ಗ್ರಾಮದ, ಹೊನ್ನಾಳ ಉರ್ದು ಶಾಲೆಯ ಬಳಿ, ಗರಡಿ ಮನೆ ಎಂಬಲ್ಲಿ ವಾಸವಾಗಿರುವ ಫಿರ್ಯಾದಿ ಆದಿತ್ಯ ಪೂಜಾರಿ ಇವರ ತಂದೆಯಾದ ರಾಮ ಪೂಜಾರಿ (ಪ್ರಾಯ: 54 ವರ್ಷ) ಎಂಬವರು ದಿನಾಂಕ: 22.11.2022  ರಂದು ರಾತ್ರಿ ಸುಮಾರು 7:00    ಗಂಟೆಯಿಂದ ರಾತ್ರಿ 7:15  ಗಂಟೆಯ ಮಧ್ಯಾವಧಿಯಲ್ಲಿ  ಮನೆಯ ಮಲಗುವ ಕೋಣೆಯಲ್ಲಿ ತಾನು ಧರಿಸುತ್ತಿದ್ದ ಬಿಳಿ ಬಣ್ಣದ ಪಂಚೆಯಿಂದ ಮನೆಯ ಮಾಡಿನ ಮರದ ಜಂತಿಗೆ ನೇಣು ಹಾಕಿಕೊಂಡಿದ್ದು  ಕೆಳಗಿಳಿಸಿ, ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಸರಕಾರಿ ಆಸ್ಪತ್ರೆಗೆ ರಾತ್ರಿ 10:20 ಗಂಟೆಗೆ ಕರೆದುಕೊಂಡು ಬಂದಾಗ ವೈಧ್ಯರು ಪರೀಕ್ಷಿಸಿ ರಾಮ ಪೂಜಾರಿ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ  ಪೊಲೀಸ್‌ ಠಾಣೆ ಯು.ಡಿ.ಆರ್ 57/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ. \
  • ಬ್ರಹ್ಮಾವರ : ಬ್ರಹ್ಮಾವರ  ತಾಲೂಕು, ನೀಲಾವರ ಗ್ರಾಮದ, ಕೆಲಕುಂಜಾಲು ಎಂಬಲ್ಲಿ ವಾಸವಾಗಿರುವ ಫಿರ್ಯಾದಿ ಜಯಂತಿ ಇವರ ತಂದೆಯಾದ ಗೋಪಾಲ ನಾಯ್ಕ( ಪ್ರಾಯ: 75 ವರ್ಷ) ಎಂಬವರು  ಸುಮಾರು 4 ವರ್ಷಗಳಿಂದ ಗಂಟಲು ಕ್ಯಾನ್ಸರ್‌ ಖಾಯಿಲೆಯಿಂದ ಬಳಲುತ್ತಿದ್ದು, ಇದೇ ವಿಚಾರದಲ್ಲಿ ಅವರು ಮನನೊಂದು ಜೀವನದಲ್ಲಿ ಜೀಗುಪ್ಸೆಗೊಂಡು ದಿನಾಂಕ: 22.11.2022  ರಂದು ರಾತ್ರಿ 11:30  ಗಂಟೆಯಿಂದ ದಿನಾಂಕ 23.11.2022 ರಂದು ಬೆಳಿಗ್ಗೆ 09:00  ಗಂಟೆಯ ಮಧ್ಯಾವಧಿಯಲ್ಲಿ ಚಾಂತಾರು ಗ್ರಾಮದ ಮದಗದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ  ಪೊಲೀಸ್‌ ಠಾಣೆ ಯು.ಡಿ.ಆರ್ 58/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಲ್ಪೆ: ಪಿರ್ಯಾದಿ ವಿಜಯ ಶೆಟ್ಟಿ ಇವರ ಅಣ್ಣ  ಗುರುರಾಜ್  ಶೆಟ್ಟಿ(42 ವರ್ಷ)  ರವರು  ಮಾರಣಕಟ್ಟೆಯ ದೇವಸ್ಥಾನದಲ್ಲಿ ಕ್ಲರ್ಕ್ ಆಗಿ  ಕೆಲಸ ಮಾಡಿಕೊಂಡಿದ್ದು, 4 ವರ್ಷಗಳಿಂದ  ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ  ಕುಂದಾಪುರದ ಮಾತಾ ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆಯುತ್ತಿದ್ದರು. ನಿನ್ನೆ ದಿನ ದಿನಾಂಕ: 22-11-2022 ರಂದು   ಸಂಜೆ 7:00 ಗಂಟೆಯ ಸಮಯಕ್ಕೆ   ಮಾರಣಕಟ್ಟೆ  ದೇವಸ್ಥಾನದ ಸಿಬ್ಬಂದಿ ನಕ್ಷತ್ರ  ಎಂಬವರು   ಪಿರ್ಯಾದಿದಾರರಿಗೆ ಕರೆ  ಮಾಡಿ  ಪಿರ್ಯಾದಿದಾರರ ಅಣ್ಣ ಗುರುರಾಜ್ ಶೆಟ್ಟಿ  ಮಲ್ಪೆ  ಬೀಚ್ ನಲ್ಲಿ   ವಿಷ ಸೇವನೆ  ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವಿಷಯ ತಿಳಿಸಿದಂತೆ ಪಿರ್ಯಾದಿದಾರರು  ಉಡುಪಿ ಜಿಲ್ಲಾಸ್ಪತ್ರೆಗೆ ಬಂದು ಅಣ್ಣನ ಮೃತದೇಹವನ್ನು  ನೋಡಿ ಗುರುತಿಸಿರುತ್ತಾರೆ. ,ಪಿರ್ಯಾದಿದಾರರ ಅಣ್ಣ  ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ,ಅದೇ ಚಿಂತೆಯಿಂದ  ಡೆತ್ ನೋಟ್ ಬರೆದಿಟ್ಟು  ನಿನ್ನೆ ದಿನ ದಿನಾಂಕ 22-11-2022 ರಂದು ಮಧ್ಯಾಹ್ನ 12:00  ಗಂಟೆಯಿಂದ  ಸಂಜೆ 5:00 ಗಂಟೆಯ ಮಧ್ಯಾವಧಿಯಲ್ಲಿ  ಮಲ್ಪೆ  ಬೀಚ್ ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ  ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಮಲ್ಪೆ  ಪೊಲೀಸ್‌ ಠಾಣೆ ಯು.ಡಿ.ಆರ್ 67/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಲ್ಪೆ: ಪಿರ್ಯಾದಿ ಕೃಷ್ಣ ಶೇರಿಗಾರ್ ಇವರ ತಾಯಿ ಪದ್ಮ ಶೇರಿಗಾರ್ತಿ ಪ್ರಾಯ:85 ವರ್ಷ ರವರು ಟಿ ಬಿ ಕಾಯಿಲೆಯಿಂದ ಬಳಲುತ್ತಿದ್ದು ಅವರಿಗೆ 15 ದಿನಗಳ ಹಿಂದೆ  ಉಡುಪಿಯ ಡಾ ಟಿ ಎಂ ಎ ಪೈ ಆಸ್ಪತ್ರೆಯ ವೈದ್ಯರಲ್ಲಿ ತೋರಿಸಿ ಒಂದು ವಾರ ಒಳ ರೋಗಿಯಾಗಿ ದಾಖಲಿಸಿ ಚಿಕಿತ್ಸೆ ಕೊಡಿಸಿ ನಂತರ ಡಿಸ್ಚಾರ್ಜ್ ಮಾಡಿ  ಮನೆಗೆ ಕರೆದುಕೊಂಡು ಬಂದಿದ್ದು,ಪುನ ದಿನಾಂಕ:22-11-2022 ರಂದು ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಬಂದಿದ್ದು ಅವರು ರಾತ್ರಿ 9:30 ಗಂಟೆಗೆ ಊಟ ಮಾಡದೆ ಮಲಗಿರುತ್ತಾರೆ , ಪದ್ಮ ಶೇರಿಗಾರ್ತಿ ರವರಿಗೆ ರವರಿಗೆ ಟಿ ಬಿ ಕಾಯಿಲೆಯಿದ್ದು ಅದೇ ಕಾರಣದಿಂದ  ದಿನಾಂಕ:22-11-2022 ರಂದು ರಾತ್ರಿ 9:30 ಗಂಟೆಯಿಂದ ದಿನಾಂಕ;23-11-2022 ಬೆಳಿಗ್ಗೆ 06:30 ರ ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಎದುರಿನ ಬಾವಿಗೆ ಹಾರಿ  ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ  ಪೊಲೀಸ್‌ ಠಾಣೆ ಯು.ಡಿ.ಆರ್ 68/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಶಂಕರನಾರಾಯಣ: ಫಿರ್ಯಾದಿ ಕರುಣಾ  ಇವರ     ಚಿಕ್ಪಪ್ಪ  ನಾಗರಾಜ  ದೇವಾಡಿಗ  ಇವರ  ಮಗ  ಪ್ರಶಾಂತ  ದೇವಾಡಿಗ  ಪ್ರಾಯ   31 ವರ್ಷ ಈತನು ಊರಿನಲ್ಲಿ ವಾದ್ಯ  ನುಡಿಸುವ  ಕೆಲಸ ಮಾಡಿಕೊಂಡಿದ್ದನು,ಈತನು  ಯಾವುದೋ ಕಾರಣದಿಂದ ಮನನೊಂದು  22/11/2022     20:30 ಗಂಟೆಯಿಂದ  ದಿನಾಂಕ 23.11.2022 ರಂದು  ಬೆಳಿಗ್ಗೆ  6;00  ಘಂಟೆಯ  ಮಧ್ಯದ  ಅವಧಿಯಲ್ಲಿ     ಆತನ ವಾಸದ  ಮನೆಯಾದ   ಬ್ರಹ್ಮಾವರ  ತಾಲೂಕಿನ  ವಂಡಾರು ಗ್ರಾಮದ  ಹಳ್ಳಿಬೈಲ್ಲು  ಎಂಬಲ್ಲಿ ನೇಣು ಬಿಗಿದು ಆತ್ಮಹತ್ಯೆ  ಮಾಡಿಕೊಂಡಿರುತ್ತಾನೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯು.ಡಿ.ಆರ್ 39/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾರ್ಕಳ: ಕಾರ್ಕಳ ತಾಲೂಕು  ಮುಂಡ್ಕೂರು ಗ್ರಾಮದ ದಡ್ಡುಮನೆಯಲ್ಲಿ ವಾಸವಾಗಿರುವ ಪಿರ್ಯಾದಿ ಪ್ರವೀಣ್ ಇವರ ಅಣ್ಣ ಪ್ರಕಾಶ್ ಪೂಜಾರಿ (44)  ವಿಪರೀತ ಮಧ್ಯ ಸೇವಿಸುತ್ತಿದ್ದು ಇದರಿಂದ ಜೀವನದಲ್ಲಿ ಮಾನಸಿಕವಾಗಿ  ಜಿಗುಪ್ಸೆಗೊಂಡು ದಿನಾಂಕ 23/11/2022 ರಂದು  ಬೆಳಿಗ್ಗೆ 10:00 ಗಂಟೆಯಿಂದ 10:20 ಗಂಟೆಯ ಮದ್ಯ ಅವದಿಯಲ್ಲಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯು.ಡಿ.ಆರ್ 37/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 23-11-2022 06:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080