ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಗಂಗೊಳ್ಳಿ: ಪಿರ್ಯಾದಿದಾರರಾದ ಗೋಪಾಲ ಪೂಜಾರಿ (50), ತಂದೆ: ದಿ: ಗೋವಿಂದ ಪೂಜಾರಿ, ವಾಸ: ಮಾತೃಛಾಯಾ ನಿಲಯ, ಸೇನಾಪುರ ಗ್ರಾಮ, ಕುಂದಾಪುರ ತಾಲೂಕು ಇವರು ದಿನಾಂಕ 21/11/2021 ರಂದು ಗುಡ್ಡಮ್ಮಾಡಿ ಆಟೋ ಸ್ಟ್ಯಾಂಡ್ ನಲ್ಲಿರುವಾಗ ಸಂಜೆ  6:30 ಗಂಟೆಗೆ ಸಂದೀಪ ಪೂಜಾರಿ ಎಂಬುವವರು KA-20-EX-6052 ನೇ ಮೋಟಾರ್ ಸೈಕಲ್  ನಲ್ಲಿ ಪ್ರದೀಪ್ ಪೂಜಾರಿಯವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಆಲೂರು ಕಡೆಯಿಂದ ಗುಡ್ಡಮ್ಮಾಡಿ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಕುಂದಾಪುರ ತಾಲೂಕು ಸೇನಾಪುರ ಗ್ರಾಮದ ಗುಡ್ಡಮ್ಮಾಡಿ ಮುಖಮಂಟಪದ ಬಳಿ ತಲುಪುವಾಗ್ಗೆ ಸೇನಾಪುರ ಕಡೆಗೆ  ಹೋಗುವ ರಸ್ತೆಯಲ್ಲಿ ಒಮ್ಮೆಲೇ ಅಜಾಗರೂಕತೆಯಿಂದ ಬ್ರೇಕ್ ಹಾಕಿದ ಪರಿಣಾಮ  ಸಹ ಸವಾರ ರಸ್ತೆಗೆ ಬಿದ್ದಿದ್ದು ಬಲ ಕೋಲು ಕೈಗೆ  ಒಳನೋವು, ಹೊಟ್ಟೆಯ ಬಲಭಾಗಕ್ಕೆ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಮಂಜುನಾಥ ಆಸ್ಪತ್ರೆಯಲ್ಲಿ ಒಳರೊಗಿಯಾಗಿ ದಾಖಲಿಸಿರುತ್ತಾರೆ. ಬೈಕ್ ಸವಾರನಿಗೆ ಭುಜಕ್ಕೆ ಒಳನೋವಾಗಿದ್ದು  ಚಿಕಿತ್ಸೆ ಪಡೆದಿರುವುದಿಲ್ಲ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 107/2021  ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 21/11/2021  ರಂದು  ರಾತ್ರಿ  11:45  ಗಂಟೆಗೆ, ಕುಂದಾಪುರ  ತಾಲೂಕಿನ ಕಸಬಾ ಗ್ರಾಮದ  ಸಂತೆಮಾರ್ಕೆಟ್‌  ಬಳಿ, ಪಶ್ಚಿಮ ಬದಿಯ   NH 66  ಸರ್ವಿಸ್‌ರಸ್ತೆಯಲ್ಲಿ,   ಆಪಾದಿತ ರವೀಂದ್ರ ಸುರೇಶ್‌ ಕಾಂಚನ್‌‌ ಎಂಬುವವರು KA20-EH-5803ನೇ ಬೈಕನ್ನು ಕುಂದಾಪುರ ಶಾಸ್ತ್ರಿಸರ್ಕಲ್‌‌ ಕಡೆಯಿಂದ  ಸಂಗಮ್‌ ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು, ಕುಂದಾಪುರ  ಆದರ್ಶ  ಆಸ್ಪತ್ರೆಯಿಂದ ಶಾಸ್ತ್ರಿ ಸರ್ಕಲ್‌‌ ಕಡೆಗೆ ಪಶ್ಚಿಮ ಬದಿಯ NH ಸರ್ವಿಸ್‌ ರಸ್ತೆಯ ಎಡಬದಿಯಲ್ಲಿ  ಪಿರ್ಯಾದಿದಾರರಾದ ಶ್ರೀಧರ ಶೇರಿಗಾರ (51),  ತಂದೆ ನರಸಿಂಹ ,ವಾಸ: ಶ್ರೀ  ಲಕ್ಷ್ಮಿ  ನಿಲಯ,  NH  ರಸ್ತೆ,  KSRTC ಬಸ್‌‌ನಿಲ್ದಾಣದ ಬಳಿ, ಕಸಬಾ ಗ್ರಾಮ, ಕುಂದಾಪುರ ಇವರು  ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20-EM-7717 Honda Active ನೇ ಸ್ಕೂಟರ್‌ಗೆ  ಎದುರುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಶ್ರೀಧರ್‌ ಶೇರಿಗಾರರವರ ತಲೆಗೆ, ಗಲ್ಲಕ್ಕೆ, ಬಲಕಾಲಿನ ಮುಂಗಾಲು ಗಂಟಿನ ಕೆಳಗೆ  ತರಚಿದ ರಕ್ತಗಾಯವಾಗಿದ್ದು, ಅಲ್ಲದೇ 6  ಹಲ್ಲುಗಳು  ಜಖಂ ಗೊಂಡು   ಕುಂದಾಪುರ ಆದರ್ಶ  ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 95/2021 ಕಲಂ:  279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 20/11/2021  ರಂದು  ರಾತ್ರಿ  9:00  ಗಂಟೆಗೆ, ಕುಂದಾಪುರ ತಾಲೂಕಿನ ಕೊಟೇಶ್ವರ ಗ್ರಾಮದ ಅಂಕದಕಟ್ಟೆ ಸರ್ಜನ್‌ ‌ಆಸ್ಪತ್ರೆಯ ಬಳಿ ಪೂರ್ವ ಬದಿಯ  NH 66 ರಸ್ತೆಯಲ್ಲಿ,  ಆಪಾದಿತ ಸಂದೀಪ ಎಂಬುವವರು KA-14-R-5399 ನೇ ಬೈಕನ್ನು ಕುಂದಾಪುರ  ಕಡೆಯಿಂದ  ಕೊಟೆಶ್ವರ  ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು, ಪಿರ್ಯಾದಿದಾರರಾದ ಮಂಜು ಕೆ  (36),  ತಂದೆ: ಕೋಟಿ , ವಾಸ: ಕೊರವಾಡಿ ಅಂಗಡಿಬೆಟ್ಟು, ಕುಂಭಾಶಿ ಗ್ರಾಮ, ಕುಂದಾಪುರ ತಾಲೂಕು ಇವರ ಜೊತೆಯಲ್ಲಿ ರಸ್ತೆ ದಾಟಲು ನಿಂತುಕೊಂಡಿದ್ದ ರವಿರಾಜ್‌ ಎಂಬುವವರಿಗೆ ಡಿಕ್ಕಿ ಹೊಡೆದ  ಪರಿಣಾಮ ರವಿರಾಜ್‌ ರವರ ತಲೆಗೆ ಒಳ ಜಖಂ ಉಂಟಾಗಿ ಸರ್ಜನ್‌ ‌ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ  ಪಡೆದು, ಅಲ್ಲಿಂದ  ದಿನಾಂಕ 21/11/2021  ರಂದು  ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆದು  ಹೆಚ್ಚಿನ ಚಿಕಿತ್ಸೆ ಬಗ್ಗೆ  ಉಡುಪಿ ಜಿಲ್ಲಾ  ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 94/2021 ಕಲಂ:  279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಅಣ್ಣಪ್ಪ ಪೂಜಾರಿ (48), ತಂದೆ: ಕುಷ್ಟು ಪೂಜಾರಿ, ವಾಸ: ಜನನಿ ಯಡ್ತಾಡಿ ಗ್ರಾಮ & ಅಂಚೆ, ಬ್ರಹ್ಮಾವರ ತಾಲೂಕು ಇವರ ಮನೆಯ ಹತ್ತಿರ ವಾಸವಾಗಿರುವ ಸುಕ್ರು ಪೂಜಾರಿ (65) ಎಂಬುವವರು ತನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು,   ಅವರು ವಿಪರೀತ ಮದ್ಯ ಸೇವನೆ ಮಾಡಿ ಜೀವನದಲ್ಲಿ ಜೀಗುಪ್ಸೆಗೊಂಡಿದ್ದು ಅಲ್ಲದೇ ಯಾವುದೋ ಕಾರಣದಿಂದ ಮನನೊಂದು ದಿನಾಂಕ 22/11/2021 ರಂದು ಮಧ್ಯಾಹ್ನ 1:30  ಗಂಟೆಯಿಂದ 2:30 ಗಂಟೆಯ ಮಧ್ಯಾವಧಿಯಲ್ಲಿ ಯಡ್ತಾಡಿ ಗ್ರಾಮದ ಕಂಬಳಗದ್ದೆ ರಸ್ತೆಯ ಸುಬ್ರಾಯ ನಾಯ್ಕ ರವರಿಗೆ ಸಂಬಂದಿಸಿದ ಹಾಡಿಯಲ್ಲಿ ಮರದ ಕೊಂಬೆಗೆ ನೈಲಾನ್‌ ಹಗ್ಗವನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 67/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

 • ಕುಂದಾಪುರ:  ಪಿರ್ಯಾದಿದಾರರಾದ ರೆಹಮತ್ (36), ತಂದೆ: ಜಲೀಲ್ ಅಹ್ಮದ್, ವಾಸ: ಮಾರುತಿ ಕಾಂಪ್ಲೆಕ್ಸ್, ಕೋಟತಟ್ಟು, ಮಣೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರ ಗಂಡ ಮೊಹಮ್ಮದ್ ಜಲೀಲ್ (36) ರವರು ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದು ದಿನಾಂಕ 17/10/2021 ರಂದು ಊರಿಗೆ ಬಂದಿದ್ದು ಬಳಿಕ ಸೌದಿ ಅರೇಬಿಯಾಕ್ಕೆ  ಹೋಗುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪಿರ್ಯಾದಿದಾರರ ಮಗ ರಾಶೀಕ್ ನು  ಜಲೀಲ್ ಮೊಹಮ್ಮದ್ ರವರನ್ನು ಕುಂದಾಪುರದ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಬಳಿ ದಿನಾಂಕ 30/10/2021 ರಂದು 09:30 ಗಂಟೆಗೆ  ಬಿಟ್ಟುಹೋಗಿದ್ದು,  ಜಲೀಲ್ ರವರು ಸೌದಿ ಅರೇಬಿಯಾಕ್ಕೂ ಹೋಗದೇ ವಾಪಾಸು ಮನೆಗೆ ಬಾರದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 125/2021 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

 • ಶಿರ್ವಾ: ಪಿರ್ಯಾದಿದಾರರಾದ ಶ್ರೀಮತಿ ಪೌಲಿನ್‌ ಬ್ರಿಟ್ಟೋ (67), ಗಂಡ: ಅಂತೋನಿ ಬ್ರಿಟ್ಟೋ, ವಾಸ: ದಿಂದೊಟ್ಟು ಪಡುಬೆಳ್ಳೆ, ಬೆಳ್ಳೆ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ಬೆಳ್ಳೆ  ಗ್ರಾಮದಲ್ಲಿ  ಕೃಷಿ ಭೂಮಿಯನ್ನು ಹೊಂದಿದ್ದು,  ಕೃಷಿ ಭೂಮಿಗಳ ಮಧ್ಯದಲ್ಲಿ  ನೀರು ಹಾದು ಹೋಗಲು ತೋಡುಗಳಿದ್ದು, ತೋಡಿನ  ಮಧ್ಯೆ  ಅನಾಧಿಕಾಲದಿಂದಲೂ  ನೀರನ್ನು ಕೃಷಿಗೆ ಉಪಯೋಗಿಸಿಕೊಂಡು ಬರುತ್ತಿದ್ದು, ಆರೋಪಿ ಅಂಬ್ರೋಸ್‌ ಕ್ಯಾಸ್ತಲಿನೋ (70) , ತಂದೆ:ನಿಕೋಲಿಸ್‌ ಕ್ಯಾಸ್ತಲಿನೋ, ವಾಸ: ದಿಂದೊಟ್ಟು ಪಡುಬೆಳ್ಳೆ, ಬೆಳ್ಳೆ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ನೀರು  ಹಾದು ಹೋಗುವ ತೋಡಿಗೆ ಕಸ ಕಡ್ಡಿಗಳನ್ನು ಹಾಕಿ ತೋಡುಗಳನ್ನು ಮುಚ್ಚಿ ನೀರು ಹಾದು ಹೋಗದ ಹಾಗೆ ತೊಂದರೆಯನ್ನು ಕೊಡುತ್ತಿದ್ದು, ಈ ಬಗ್ಗೆ ಪಿರ್ಯಾದಿದಾರರು ಮಾನ್ಯ ಸಿವಿಲ್‌ ನ್ಯಾಯಾಲಯದಲ್ಲಿ ತೋಡಿಗೆ ಕಸಕಡ್ಡಿಗಳನ್ನು  ಹಾಕಿ ತೊಂದರೆ ನೀಡದಂತೆ  ದಿನಾಂಕ 07/07/2021 ರಂದು ನಿರ್ಬಂಧಕಾಜ್ಞೆಯನ್ನು ತಂದಿದ್ದು, ಆ ಬಳಿಕ ದಿನಾಂಕ 18/10/2021 ರಂದು ಬೆಳಿಗ್ಗೆ 9:00  ಗಂಟೆಗೆ ಆರೋಪಿತನು  ನೀರು ಹಾದು  ಹೋಗುವ  ತೋಡಿಗೆ  ಮಣ್ಣನ್ನು ಹಾಕಿ ನೀರು ಹಾದು  ಹೋಗದಂತೆ  ಅಡೆತಡೆ ಮಾಡಿರುವುದನ್ನು ಪಿರ್ಯಾದಿದಾರರು ಪ್ರಶ್ನಿಸಿದಾಗ  ಆರೋಪಿತನು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದು  ನಂತರ   ಆರೋಪಿತನು  ಪಿರ್ಯಾದಿದಾರರ  ಮನೆಯ  ಅಂಗಳಕ್ಕೆ ಪ್ರವೇಶ  ಮಾಡಿ ಅಲ್ಲಿಯೂ  ಕೂಡಾ  ಪಿರ್ಯಾದಿದಾರರಿಗೆ  ಬೈದು  ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 69/2021 ಕಲಂ: 447, 504, 506  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ದಿನಾಂಕ 21/11/2021 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿದಾರರಾದ ಶಾರದಾ (40), ಗಂಡ: ರಾಮ , ವಾಸ: 1ನೇ ಕ್ರಾಸ್ ನೇತಾಜಿ ನಗರ 80 ಬಡಗಬೆಟ್ಟು ಗ್ರಾಮ ಉಡುಪಿ ತಾಲೂಕು ಹಾಗೂ ಗಂಡ ರಾಮ ಎಂಬುವವರು ಸ್ಕೂಟರ್‌ನಲ್ಲಿ ಹೊಗುತ್ತಿರುವಾಗ 80 ಬಡಗುಬೆಟ್ಟು ಗ್ರಾಮದ ನೇತಾಜಿ ನಗರ 4ನೇ ಕ್ರಾಸ್‌ ರಸ್ತೆಯಲ್ಲಿ ಆರೋಪಿಗಳಾದ ಗಣೇಶ, ರಾಕೇಶ, ರಾಜೇಂದ್ರ, ಮತ್ತು ಮಣಿ ಎಂಬುವವರುಗಳು ಪಿರ್ಯಾದಿದಾರರು ಹಾಗೂ ಅವರ ಗಂಡನನ್ನು ತಡೆದು ನಿಲ್ಲಿಸಿ ನಿಮ್ಮ ಮಗನನ್ನು ನಿವು ಭದ್ರಿಕೆಯಲ್ಲಿ ಇಟ್ಟುಕೊಳ್ಳಿ  ಎಂದು ಅವಾಚ್ಯೆ ಶಬ್ದದಿಂದ ಬೈದು ಆರೋಪಿ 1ನೇ ಅವರು ರಾಮ ರವರ ಕೆನ್ನೆಗೆ ಕೈ ಯಿಂದ ಹೊಡೆದು ಪಿರ್ಯಾದಿದಾರರು ತಡೆಯಲು ಹೊದಾಗ ಆರೋಪಿ 3ನೇ ರಾಜೇಂದ್ರ ರವರು ಪಿರ್ಯಾದಿದಾರನ್ನು ಕೈ ಹಿಡಿದು ಎಳೆದು ದೂಡಿ ಕೆಳಗೆ ಬಿಳಿಸಿ ಕಲ್ಲಿನಿಂದ ಹೊಡೆದಿರುತ್ತಾರೆ ಆರೋಪಿ 2. ರಾಕೇಶ  ಮತ್ತು 4. ಮಣಿ ಅವರು ಕೂಡಾ ರಾಮ ರವರಿಗೆ ಕೈಯಿಂದ ಹೊಡೆದು ಕಾಳಿನಿಂದ ತುಳಿದಿರುತ್ತಾರೆ, ಅಲ್ಲದೆ  ಬೆದರಿಕೆ ಹಾಕಿರುತ್ತಾರೆ, ಈ ಹಲ್ಲೆಯಿಂದ ಪಿರ್ಯಾದಿದಾರರ ಎಡ ಕಣ್ಣಿನ ಹುಬ್ಬಿನ ಬಳಿ ರಕ್ತ ಗಾಯವಾಗಿದ್ದು ಮೈ ಕೈ ನೊವುಂಟಾಗಿರುತ್ತದೆ, ಪಿರ್ಯಾದಿದಾರರ ಗಂಡ ರಾಮ ರವರಿಗೆ ತುಟಿಗೆ ಗಾಯವಾಗಿದ್ದು ಮೈ ಕೈಗೆ ನೋವುಂಟಾಗಿರುತ್ತದೆ, ಪಿರ್ಯಾದಿದಾರರು ಹಾಗೂ ರಾಮ ರವರು ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾದ ಕ್ರಮಾಂಕ 150/2021 ಕಲಂ:341, 323, 354, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಲ್ಪೆ: ಪಿರ್ಯಾದಿದಾರರಾದ ಉಮೇಶ(51),  ತಂದೆ: ದೇಜು ಕರ್ಕೆರ, ವಾಸ: ದೇಗುಲಾ  ಕಡೇಕಾರು ಇವರು  ಮಲ್ಪೆ ಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು , ಪಿರ್ಯಾದಿದಾರರ ನೆರೆಮನೆಯವರಾದ ನವೀನ್ ಪೂಜಾರಿ  ಎಂಬುವವರ ಮನೆಯಲ್ಲಿ  ನಾಯಿಯನ್ನು ಸಾಕಿ ಅದರ ಮರಿಗಳನ್ನು ಮಾರಾಟ ಮಾಡುತ್ತಿದ್ದು ,ನಾಯಿಗಳ ಬೊಬ್ಬೆ ಹಾಗೂ ಅದರ ಮಲಮೂತ್ರಗಳ ವಾಸನೆ ಯಿಂದ ತೊಂದರೆ ಆಗುತ್ತಿದ್ದ  ಬಗ್ಗೆ  ಮಲ್ಪೆ ಠಾಣೆಯಲ್ಲಿ ದೂರು ಅರ್ಜಿ ನೀಡಿದ್ದು  ಇದೇ ವಿಚಾರವಾಗಿ  ದಿನಾಂಕ 22/11/2021 ರಂದು  ಸಂಜೆ 5:15 ಗಂಟೆಗೆ  ಪಿರ್ಯಾದಿದಾರರ ತಮ್ಮ ಗಣೇಶ ಮೋಟಾರು ಸೈಕಲ್ ನಲ್ಲಿಮನೆಗೆ ಬರುತ್ತಿರುವಾಗ ಆರೋಪಿ  ನವೀನ್ ಮತ್ತು ಆತನ ಸ್ನೇಹಿತ್  ಕೇವಿನ್  ಪಿರ್ಯಾದಿದಾರರ ತಮ್ಮನನ್ನು ಪಾಲೋ ಮಾಡಿಕೊಂಡು ಬಂದು ಕಡೇಕಾರ್ ಜಂಕ್ಷನ್ ನಲ್ಲಿ ಮೋಟಾರು ಸೈಕಲ್ ನ್ನು ಅಡ್ಡಗಟ್ಟಿ ಆತನಿಗೆ ಅವಾಚ್ಯ ಶಬ್ದಗಳಿಂದ ಬೈದು,  ಮೋಟಾರು ಸೈಕಲ್ ನಿಂದ ಎಳೆದು ಕೈಯಿಂದ ಆರೋಪಿತರು ಮತ್ತು ಆತನ ಸ್ನೇಹಿತ ಕೇವಿನ್ ಸೇರಿ ಹೊಡೆದಿರುತ್ತಾರೆ.  ಆ ಸಮಯ ಪಿರ್ಯಾದಿದಾರರು ಅಲ್ಲಿಗೆ  ಬಂದು   ತಡೆದಾಗ ಪಿರ್ಯಾದಿದಾರರ ಅಂಗಿಯ ಕಿಸೆಯನ್ನು ಆರೋಪಿತರು ಹರಿದಿರುತ್ತಾರೆ, ಅಲ್ಲದೆ ಜೀವ ಬೆದರಿಕೆ ಹಾಕಿರುತ್ತಾರೆ ,ಆರೋಪಿರು ಪಿರ್ಯಾದಿದಾರರ ತಮ್ಮ ಗಣೇಶ ನಿಗೆ ಹೊಡೆದ ಪರಿಣಾಮ  ಚಿಕಿತ್ಸೆ ಬಗ್ಗೆ  ಉಡುಪಿ ಜಿಲ್ಲಾ  ಆಸ್ಪತ್ರೆಯಲ್ಲಿ ಒಳರೋಗಿಯಾಗಿ  ದಾಖಲಾಗಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 125/2021 ಕಲಂ: 506,504, 323 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-11-2021 10:02 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080