ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾಪು: ಪಿರ್ಯಾದಿದಾರರಾದ ಜಸ್ಟೀನ್ ಮ್ಯಾಕ್ಸ್ ವೆಲ್ (26) ತಂದೆ:ಸೋಲೋಮಾನ್ ಜಿ ಎಫ್ ,ವಾಸ:ಗೆಸ್ಸೆ ಮನೆ  ಪ್ರಾರ್ಥನಾ ಮಂದಿರ ಸಮೀಪ ಕೈ ಪುಂಜಾಲು ಉಳಿಯಾರಗೋಳಿ ಗ್ರಾಮ, ಕಾಪು ಇವರು ದಿನಾಂಕ 22/11/2021 ರಂದು ಮನೆಯಲ್ಲಿರುವಾಗ ಸಂಜೆ 3:00 ಗಂಟೆಗೆ ಅವರ ಸ್ನೇಹಿತರೊಬ್ಬರು ಫೋನ್ ಮಾಡಿ ನಿನ್ನ ತಂದೆ ಸೋಲೋಮಾನ್ ಜಿ ಎಫ್ ರವರು  ತನ್ನ ಸ್ಕೂಟರ್ ನಂಬ್ರ KA-20-EN-3277 ನೇದರಲ್ಲಿ ಮೂಳೂರು ಕಡೆಯಿಂದ ಕೈಪುಂಜಾಲು ಕಡೆಗೆ ಮಂಗಳೂರು - ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪೊಲಿಪು ಮಸೀದಿ ಎದುರು  ಹೋಗುತ್ತಿರುವಾಗ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ಅದೇ ರಸ್ತೆಯಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಹಾಗೂ ಅಜಾಕರೂಕತೆಯಿಂದ ತೀರ ಎಡಬದಿಗೆ ಚಲಾಯಿಸಿಕೊಂಡು ಬಂದು ಮುಂದೆ ಹೋಗುತ್ತಿದ್ದ ನಿನ್ನ ತಂದೆಯ ಸ್ಕೂಟರ್‌ಗೆ  ಹಿಂದಿನಿಂದ ಡಿಕ್ಕಿ ಹೊಡೆದು ವಾಹನ ನಿಲ್ಲಿಸದೇ  ಪರಾರಿಯಾಗಿದ್ದು, ಪರಿಣಾಮ ಸ್ಕೂಟರ್ ಸಮೇತ ನಿನ್ನ ತಂದೆ ರಸ್ತೆಗೆ ಬಿದ್ದು ಅಪಘಾತವಾಗಿರುವುದಾಗಿ ತಿಳಿಸಿದಂತೆ  ಜಸ್ಟೀನ್ ಮ್ಯಾಕ್ಸ್ ವೆಲ್ ರವರು ಕೂಡಲೇ ಸ್ಥಳಕ್ಕೆ  ಬಂದು ತನ್ನ ತಂದೆಯನ್ನು ಸ್ಥಳೀಯರೊಂದಿಗೆ ಉಪಚರಿಸಿ ನೋಡುವಾಗ ಅವರಿಗೆ ಬಲ ಕಾಲಿಗೆ ತೀವ್ರ ಗಾಯ, ಎದೆಯ ಎಡ  ಮತ್ತು ಬಲ ಭಾಗದಲ್ಲಿ ತರಚಿದ ಗಾಯ ಮತ್ತು ಬಲ ಕಣ್ಣಿನ ಸಮೀಪದಲ್ಲಿ ಗಾಯ, ಮತ್ತು ತಲೆಗೆ ತೀವ್ರ ರಕ್ತಗಾಯವಾಗಿದ್ದು ಮಾತಾನಾಡದೇ ಸ್ಥಿತಿಯಲ್ಲಿ ಇಲ್ಲದೇ ಇದ್ದವರನ್ನು ಒಂದು ವಾಹನದಲ್ಲಿ ಚಿಕಿತ್ಸೆ ಬಗ್ಗೆ  ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಇಲ್ಲಿನ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 171/2021 ಕಲಂ: 279, 338   ಐ.ಪಿ.ಸಿ ಕಲಂ:134 (ಎ) (ಬಿ) ಐ ಎಮ್ ವಿ ಆ್ಯಕ್ಟ್  ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ಪಿರ್ಯಾದಿದಾರರಾಧ ಬಸವರಾಜ್ (32) ತಂದೆ: ದಿ. ಯಮುನಪ್ಪ ವಾಸ: ಹಲುಕುರ್ಕಿ ಗ್ರಾಮ  ಬಾದಾಮಿ ತಾಲೂಕು ಬಾಗಲಕೋಟೆ ಇವರು ಮೂಲತಃ ಬಾಗಲಕೋಟೆ ಜಿಲ್ಲೆಯವರಾಗಿದ್ದು  ಪ್ರಸ್ತುತ ಕೋಟೆ ಗ್ರಾಮದ ಪಳ್ಳಿಗುಡ್ಡೆ ಎಂಬಲ್ಲಿ ವಾಸು ಶೇರಿಗಾರ ರವರ ಮನೆಯಲ್ಲಿ ಬಾಡಿಗೆಗೆ ಇದ್ದು, ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಬಸವರಾಜ್‌ ರವರು ದಿನಾಂಕ 22/11/2021 ರಂದು ರಾತ್ರಿ ಕಟಪಾಡಿಯ ಏಣಗುಡ್ಡೆ  ಗ್ರಾಮದ ನವರಂಗ ಬಾರ್ ಸಮೀಪ ರಸ್ತೆ ಬದಿಯಲ್ಲಿರುವಾಗ ಸಮಯ ಸುಮಾರು ರಾತ್ರಿ 20:00 ಗಂಟೆಗೆ ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಓರ್ವ ಕಾರು ಚಾಲಕ ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ತೀರಾ ಎಡ ಬದಿಗೆ ಚಲಾಯಿಸಿಕೊಂಡು ರಸ್ತೆಯ ಬದಿಯಲ್ಲಿ ನಿಂತಿರುವ ಇವರ ಪರಿಚಯದ ಪ್ರಕಾಶ ಎಂಬವರಿಗೆ ಢಿಕ್ಕಿ ಹೊಡೆದು ಕಾರನ್ನು ಅಲ್ಲಿಯೇ ಮುಂದೆ ನಿಲ್ಲಿಸಿದ್ದು,  ಬಸವರಾಜ್‌ ರವರು  ಕೂಡಲೇ ಸ್ಥಳಕ್ಕೆ  ಹೋಗಿ ನೋಡುವಾಗ ಪ್ರಕಾಶ ರಸ್ತೆಗೆ  ಬಿದ್ದಿದ್ದು, ಪ್ರಕಾಶ ರವರ ತಲೆಗೆ ಮೈ-ಕೈ ಗಳಿಗೆ ಗಾಯವಾಗಿ ಮಾತನಾಡದ ಸ್ಥಿತಿಯಲ್ಲಿದ್ದು, ಆತನನ್ನು ಬಸವರಾಜ್‌ ಇವರು ಮತ್ತು ಅವರ ಊರಿನ ಕನಕಪ್ಪ ರವರು ಸೇರಿ ಉಡುಪಿ ಜಿಲ್ಲಾ ಸರ್ಕಾರಿ  ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ  ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ  ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವರೇ ತಿಳಿಸಿದಂತೆ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯ ಬಗ್ಗೆ  ದಾಖಲಿಸಿಕೊಂಡಿದ್ದು ಚಿಕಿತ್ಸೆಯಲ್ಲಿರುವ ಪ್ರಕಾಶನು ದಿನಾಂಕ 23/11/2021 ರಂದು 01:20 ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದಾಗಿ ಅಲ್ಲಿನ  ವೈದ್ಯರು ತಿಳಿಸಿರುತ್ತಾರೆ. ಪ್ರಕಾಶನಿಗೆ ಢಿಕ್ಕಿ ಹೊಡೆದ ಕಾರು ನಂಬ್ರ ಕೆಎ-20 ಡಿ-344 ಆಗಿದ್ದು ಅದರ ಚಾಲಕನ ಹೆಸರು ಕೃಷ್ಣ ಪೂಜಾರಿ ಎಂದು ತಿಳಿಯಿತು. ಈ ಅಪಘಾತಕ್ಕೆ ಕಾರು ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುವುದಾಗಿದೆ.  ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 172/2021  ಕಲಂ 279,  304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

 • ಕಾರ್ಕಳ: ದಿನಾಂಕ 22/11/2021 ರಂದು ಕಾರ್ಕಳ ಕಸಬಾ ಗ್ರಾಮದ ಕರಿಯಕಲ್ಲು ಎಂಬಲ್ಲಿ ರಾಕ್‌‌ಸೈಡ್ ಬಾರ್ ಬಳಿ ಇರುವ ಗುರು ರಾಘವೇಂದ್ರ ಮೊಬೈಲ್ ಸೇಲ್ಸ್‌ ಮತ್ತು ಸರ್ವಿಸ್ ಅಂಗಡಿ ಬದಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ಮಟ್ಕಾ ಜುಗಾರಿ ಎಂಬ ಆಟ ಆಡುತ್ತಿದ್ದಾರೆ ಎಂಬುದಾಗಿ ಬಂದ ಖಚಿತ ಮಾಹಿತಿಯಂತೆ ಮಧು ಬಿ ಇ ಪೊಲೀಸ್‌ ಉಪನಿರೀಕ್ಷಕರು ಕಾರ್ಕಳ ನಗರ ಪೊಲೀಸ್‌ಠಾಣೆ ಇವರು ಸಿಬ್ಬಂದಿಗಳೊಂದಿಗೆ ಮೇಲಿನ ಸ್ಥಳಕ್ಕೆ ಬಂದು ನೋಡಿದಾಗ ಆರೋಪಿತ ಸೂರ್ಯಕಾಂತ ಶೆಟ್ಟಿ ಈತನು ಸಾರ್ವಜನಿಕ ಸ್ಥಳದಲ್ಲಿ  ನಿಂತುಕೊಂಡು ಒಂದು ರೂಪಾಯಿಗೆ 70 ರೂಪಾಯಿ ಕೊಡುತ್ತೇನೆಂದು ಮಟ್ಕಾ ಜೂಜಾಟಕ್ಕೆ ಜನರನ್ನು ಕೂಗಿ ಕರೆದು ಚೀಟಿಯ ಮೇಲೆ ಪೆನ್ನಿನಿಂದ ಅಂಕಿಗಳನ್ನು ಬರೆಯುತ್ತಿರುವುದನ್ನು ಖಚಿತಪಡಿಸಿಕೊಂಡು ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ಸಮಯ ಸುಮಾರು 20:20 ಗಂಟೆಗೆ ದಾಳಿ ಮಾಡಿ ಆರೋಪಿತನನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ 910 /- ರೂಪಾಯಿ ನಗದು, ಮಟ್ಕಾ ನಂಬ್ರ ಬರೆದ ಚೀಟಿ-1  ಹಾಗೂ ಬಾಲ್ ಪೆನ್ನು-1 ಇವುಗಳನ್ನು ಮಹಜರು ಮುಖೇನ ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 152/2021 ಕಲಂ: 78(I)(III) KP ಆ್ಯಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾಧ ಅಮೃತ ಬಿ ಶೆಟ್ಟಿ  (58),ತಂದೆ: ಭಾಸ್ಕರ ಶೆಟ್ಟಿ ,ವಾಸ: ತುಂಗವನ ಐರೋಡಿ ಗ್ರಾಮ, ಉಡುಪಿ ಇವರ ತಮ್ಮ ಅನಿಲ್ ಶೆಟ್ಟಿ (54) ಈತನಿಗೆ ಎರಡು ತಿಂಗಳ ಹಿಂದೆ ಹರಣಿಯಾ ಶಸ್ತ್ರ ಚಿಕಿತ್ಸೆಯಾಗಿದ್ದು, ಹಾಗೂ ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ಉಳ್ಳವನಾಗಿದ್ದು, ಜೀವನದಲ್ಲಿ ಮಾನಸಿಕವಾಗಿ ನೊಂದು ದಿನಾಂಕ 23/11/2021 ರಂದು ಬೆಳಿಗ್ಗೆ 04:30 ಗಂಟೆಯಿಂದ 06:15 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಬಾವಿಯ ರಾಟೆಗೆ ಹಾಕಲಾದ ನೈಲಾನ್ ಹಗ್ಗದಿಂದ ಬಾವಿಗೆ ಅಳವಡಿಸಿದ ಕಬ್ಬಿಣದ ರಾಡಿಗೆ ಸುತ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಸಾವಿನಲ್ಲಿ ಯಾವುದೇ ಸಂಶಯ ಇರುವುದಿಲ್ಲ ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಯು.ಡಿ.ಆರ್ ಕ್ರಮಾಂಕ  44/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ ಪಿರ್ಯಾದಿದಾರ ಅಶ್ವಿನ್ ಕುಮಾರ್, ಪ್ರಾಯ: 30 ವರ್ಷ, ತಂದೆ: ರಮೇಶ್ ಪೂಜಾರಿ, ವಾಸ: ಸಾಲ್ಯಾನ್ ನಿವಾಸ, ಕಲ್ಯಾ ಗ್ರಾಮ, ಕಾರ್ಕಳ ತಾಲೂಕು ಇವರ  ದೊಡ್ಡಮ್ಮನ ಮಗ ಉದಯ್(35) ಎಂಬುವವರು ವಿದೇಶದಲ್ಲಿ ಉದ್ಯೋಗ ಮಾಡಿಕೊಂಡಿದ್ದವರು, ಕೊರೋನಾ ಕಾರಣದಿಂದ ಕಳೆದ ವರ್ಷ ಊರಿಗೆ ಬಂದು ಕಾಪುವಿನಲ್ಲಿ ಇದ್ದವರು, ಯಾವುದೇ ಕೆಲಸವಿಲ್ಲದೆ ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ಮಾಡಿಕೊಂಡಿದ್ದರು. ನಂತರ ಉದಯ್ ಹಾಗೂ ಅವರ ಹೆಂಡತಿಗೆ ಕೌಟುಂಬಿಕ ವಿಚಾರದಲ್ಲಿ ಮನಸ್ತಾಪವಾಗಿದ್ದು,  ಅವರ ಹೆಂಡತಿ ಕಾಪು ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ. ಮತ್ತು ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿರುತ್ತಾರೆ.  ಇದೇ ವಿಚಾರದಲ್ಲಿ ಉದಯ್ ರವರು ಮನನೊಂದು ದಿನಾಂಕ: 19.11.2021 ರಂದು ರಾತ್ರಿ 22:30 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿ ಬೀಚ್ ಬಳಿ ಯಾವುದೋ ವಿಷ ಪದಾರ್ಥ ಸೇವಿಸಿದವರನ್ನು, ಪಡುಬಿದ್ರಿಯ ಸಿದ್ದಿವಿನಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದಾಖಲಿಸಿದ್ದು, ಅಲ್ಲಿ ಚಿಕಿತ್ಸೆಯಲ್ಲಿರುತ್ತಾ ನಿನ್ನೆ ದಿನ ದಿನಾಂಕ: 23.11.2021 ರಂದು ಬೆಳಿಗ್ಗೆ. 03:00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.  ಸದ್ರಿ ಉದಯ್ ರವರು ಕೌಟುಂಬಿಕ ಮನಸ್ತಾಪದದಿಂದ ಮನನೊಂದು ಯಾವುದೋ ವಿಷ ಪದಾರ್ಥ ಸೇವಿಸಿ ಮೃತಪಟ್ಟಿದ್ದು ಅವರ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣಾ ಯುಡಿಆರ್  ನಂಬ್ರ 23/2021, ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-11-2021 06:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080