ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ 

  • ಉಡುಪಿ: ಪಿರ್ಯಾದಿದಾರರಾದ ಸುಧಾ ಪರಿಮಳ ಪ್ರಾಯ: 52 ವರ್ಷ ಗಂಡ: ರಾಘವೇಂದ್ರ ರಾವ್‌ ವಾಸ: ಜಿ01, ಗಾಯತ್ರಿ ನಿಕೇತನ್‌ ಅಪಾರ್ಟ್‌ಮೆಂಟ್‌, ಬಿಇಎಂಎಲ್‌ ಬಸ್‌ಸ್ಟಾಪ್‌ ಬಳಿ, ರಾಜರಾಜೇಶ್ವರಿ ನಗರ, ಬೆಂಗಳೂರು ಇವರು ದಿನಾಂಕ 22/10/2022 ರಂದು ಬೆಳಿಗ್ಗೆ ತನ್ನ ಸಂಸಾರದೊಂದಿಗೆ ಉಡುಪಿ ಕಡೆಗೆ ದೇವರ ದರ್ಶನಕ್ಕೆಂದು ಬಂದಿದ್ದು, ದಿನಾಂಕ 23/10/2022 ರಂದು ಬೆಳಿಗ್ಗೆ ದೇವರ ದರ್ಶನ ಪಡೆಯಲು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕೃಷ್ಣ ಮಠದ ಒಳಗೆ ಹೋಗಿದ್ದು, ಬೆಳಿಗ್ಗೆ 06:55 ಗಂಟೆಗೆ ಯಾರೋ ಕಳ್ಳರು ಪಿರ್ಯಾದಿದಾರರ ಹ್ಯಾಂಡ್‌ ಬ್ಯಾಗ್‌ ನ ಜಿಪ್‌ ತೆಗೆದು, ಅದರೊಳಗಿದ್ದ ಚಿಕ್ಕ ಪರ್ಸ್ ನ್ನು ಕಳವು ಮಾಡಿದ್ದು, ಪರ್ಸ್ ನಲ್ಲಿ ಪಿರ್ಯಾದಿದಾರರ 30 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, ನಗದು ರೂ. 4,500/-, ಕರ್ನಾಟಕ ಬ್ಯಾಂಕ್‌ನ ಎಟಿಎಂ ಕಾರ್ಡ್‌, ಪಿರ್ಯಾದಿದಾರರ ಹಾಗೂ ಅವರ ಗಂಡನ ಆಧಾರ್‌ ಕಾರ್ಡ್‌ಗಳು ಇದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂಪಾಯಿ. 1,24,500/- ಆಗಬಹುದು. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 158/2022 ಕಲಂ: 379 ಐಫಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಕೋಟ: ದಿನಾಂಕ 23/10/2022 ರಂದು ಬೆಳಿಗ್ಗೆ 6.30 ಗಂಟೆಗೆ   ಪಿರ್ಯಾದಿದಾರರಾದ ಥೋಮಸ್ ನೊರೊನ್ನ 71 ವರ್ಷ, ತಂದೆ: ದಿ ಅಲ್ಬರ್ಟ ನೊರೊನ್ನ ವಾಸ: ಕೊಟತಟ್ಟು ಪಡುಕೆರೆ ಕೋಟ ತಟ್ಟು ಗ್ರಾಮ ಬ್ರಹ್ಮಾವರ ತಾಲೂಕು ಇವರ ಸಹೋದರ ಪ್ರಾನ್ಸಿಸ್ ನೊರೊನ್ಹ ಎಂಬಾತನು ಜಾಗದಲ್ಲಿನ ರಸ್ತೆಯ ವಿಚಾರದಲ್ಲಿನ ತಕರಾರು ಈಗಾಗಲೇ ಮಾನ್ಯ ನ್ಯಾಯಾಲಯದಲ್ಲಿ ಆದೇಶಕ್ಕೆ ಬಾಕಿ ಇರುವಾಗಲೇ ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ಮಾಡಿದ್ದು ಅಲ್ಲದೇ ಗಡಿ ಭಾಗದ ಕಲ್ಲುಗಳನ್ನು ಕಿತ್ತು ಕೊಂಡೊಯ್ದು ಹಾಗೂ ಪಿರ್ಯಾದಿದಾರರ ಹೆಂಡತಿಗೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 183/2022 ಕಲಂ: 447, 354, 324, 504 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ದಿನಾಂಕ 23/10/2022 ರಂದು ಬೆಳಿಗ್ಗೆ 7.00 ಗಂಟೆಗೆ ಪಿರ್ಯಾದಿದಾರರಾದ ಪ್ರಾನ್ಸಿಸ್ ನೊರೊನ್ನ 69 ವರ್ಷ ತಂದೆ: ದಿ ಅಲ್ಬರ್ಟ ನೊರೊನ್ನ ವಾಸ: ಕೊಟತಟ್ಟು ಪಡುಕೆರೆ ಕೋಟ ತಟ್ಟು ಗ್ರಾಮ ಬ್ರಹ್ಮಾವರ ತಾಲೂಕು ಇವರ ಸಹೋದರ ಥೋಮಸ್ ನೊರೊನ್ನ ಎಂಬಾತನು ಪಿರ್ಯಾದಿದಾರರ ತೋಟಕ್ಕೆ ನುಗ್ಗಿ ಪಿರ್ಯಾದಿದಾರರ ಕಾಲಿಗೆ, ಕೆನ್ನೆಗೆ ಮತ್ತು ಬೆನ್ನಿಗೆ ಹೊಡೆದು ನೆಲಕ್ಕೆ ಅಪ್ಪಳಿಸಿರುತ್ತಾನೆ. ಹಾಗೂ ಆಸ್ತಿಯನ್ನು ಕಬಳಿಸಲು ರಸ್ತೆಯನ್ನು ಹಗ್ಗ ಕಟ್ಟಿ ಬಂದ್ ಮಾಡಿರುತ್ತಾರೆ. ಇನ್ನೊಂದು ಕಡೆ ಮಣ್ಣನ್ನು ಹಾಕಿ ಆತಂಕಿಸಿದ್ದಾರೆ .ಹಾಗೂ ಪಿರ್ಯಾದಿದಾರರ ಮನೆಗೆ ಬಂದು ಪಿರ್ಯಾದಿದಾರರ ಹೆಂಡತಿ ಮತ್ತು ಅಂಗವಿಕಲ ಮಗನನ್ನು ಮುಗಿಸಿ ಬಿಡುತ್ತೇನೆ. ಎಂದು ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 184/2022 ಕಲಂ: 447,323, 504,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 23-10-2022 06:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080