ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಿರ್ವಾ: ದಿನಾಂಕ 21/10/2021 ರಂದು ಪಿರ್ಯಾದಿದಾರರಾದ ಕ್ಲಿಂಟನ್ ಕಾಬ್ರಲ್ (18), ತಂದೆ: ಮೈಕಲ್ ಕಾಬ್ರಲ್, ವಾಸ: ಹಳೇ ಇಗರ್ಜಿ,ಶಿರ್ವ, ಶಿರ್ವಾ  ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಮತ್ತು ಅವರ ಅಣ್ಣ ಜಾಕ್ಸನ್ ಕಾಬ್ರಲ್ ರವರು ಶಿರ್ವಾದ ಅಲೆಕ್ಸ್ ಮಳಿಗೆಯಲ್ಲಿ ಕೆಲಸ ಮುಗಿಸಿಕೊಂಡು ಪ್ರದೀಪರವರೊಂದಿಗೆ ಮನೆಯ ಕಡೆ ಹೊರಟು ರಾತ್ರಿ 09.35 ಗಂಟೆಗೆ ಶಿರ್ವ ಸೊಸೈಟಿಯ ಎದುರುಗಡೆ ಹಾದು ಹೋಗಿರುವ ರಸ್ತೆಯಲ್ಲಿ  ಹೋಗುತ್ತಿರುವಾಗ  ಹಿಂದಿನಿಂದ ಶಿರ್ವ ಕಡೆಯಿಂದ ಉಡುಪಿ ಕಡೆಗೆ ಓರ್ವ ಕಾರು ಚಾಲಕನು ಅತಿವೇಗ ಹಾಗೂ ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿಕೊಂಡು ರಸ್ತೆಯ ತೀರಾ ಬದಿಗೆ ಬಂದು ಪಿರ್ಯಾದಿ ಅಣ್ಣ ಜಾಕ್ಸನ್ ಕಾಬ್ರಲ್ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಜಾಕ್ಸನ್ ಕಾಬ್ರಲ್ ರವರ ಹಿಂಬದಿ ತಲೆಗೆ ತೀವ್ರ ಒಳಜಖಂ ಹಾಗೂ ಬೆನ್ನಿಗೆ ತರಚಿದ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ  ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 58/2021 , ಕಲಂ: 279,   338 ಐಪಿಸಿ ಮತ್ತು 134(A&B) IMV ACT  ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಜನಾರ್ಧನ (56), ತಂದೆ: ಐತಪ್ಪ ಮೂಲ್ಯ, ವಾಸ: ಹಾಲ್ತೋಟ್ಟು ಮನೆ, ಪದವಿನಂಗಡಿ, ಪಚ್ಚನಾಡಿ, , ಬೋಂದೆಲ್ ಮಂಗಳೂರು,ಹಾಲಿ ವಾಸ: ಶ್ರೀ  ದುರ್ಗಾ, ಬಂಡಸಾಲೆ, ಪಾಂಡುರಂಗ ಭಜನಾ ಮಂದಿರದ ಬಳಿ, ಕೆಮ್ಮುಂಡೇಲು, ಎಲ್ಲೂರು ಗ್ರಾಮ, ಕಾಪು ತಾಲೂಕು ಇವರು ದಿನಾಂಕ 22/10/2021 ರಂದು ಬೆಳಿಗ್ಗೆ 07:00 ಗಂಟೆಗೆ ತನ್ನ ಮನೆಯಾದ ಎಲ್ಲೂರು ಎಂಬಲ್ಲಿಂದ ಮಂಗಳೂರಿಗೆ ಕೆಲಸ ಬಗ್ಗೆ ತೆರಳಲು ತನ್ನ KA-19-EB-5175 ನೇ ಮೋಟಾರ್ ಸೈಕಲ್‌ ನಲ್ಲಿ ಎಲ್ಲೂರು ಕಡೆಯಿಂದ ಪಾದೆಬೆಟ್ಟು ಕಡೆಗೆ ಬರುತ್ತಿರುವಾಗ ಬೆಳಿಗ್ಗೆ 08:00 ಗಂಟೆಗೆ ಎಲ್ಲೂರು ಗ್ರಾಮ ಪಡು ಮನೆ ಎಂಬಲ್ಲಿ ಕಾಂಕ್ರೀಟ್ ರಸ್ತೆಯಲ್ಲಿ ಎದುರುಗಡೆ ಪಾದೆಬೆಟ್ಟು ಕಡೆಯಿಂದ ಎಲ್ಲೂರು ಕಡೆಗೆ ಆರೋಪಿ ಗಣೇಶ್ ನಾಯ್ಕ ತನ್ನ ಬಾಬ್ತು ಮೋಟಾರ್ ಸೈಕಲ್‌ KA-20-EL-4946ನ್ನು  ಅತೀವೇಗವಾಗಿ ಚಲಾಯಿಸಿ ಬಲಗಡೆಗೆ ಬರುವುದುನ್ನು ನೋಡಿ ಪಿರ್ಯಾದಿದಾರರು ಮೋಟಾರ್ ಸೈಕಲ್‌ ನ್ನು ತೀರಾ ಎಡಬದಿಗೆ ಚಲಾಯಿಸಿ ನಿಲ್ಲಿಸಿದಾಗ  ಆರೋಪಿಯು ಪಿರ್ಯಾದಿದಾರರ ಬೈಕಿನ ಬಲಬದಿ ಗಾರ್ಡಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ರಸ್ತೆಗೆಬಿದ್ದು  ಪಿರ್ಯಾದಿದಾರರ ಬಲಕಾಲಿನ ಮೊಣಗಂಟಿನ ಕೆಳಗೆ ಗಾಯ ಮತ್ತು ಒಳ ಜಖಂ ಮತ್ತು ಪಾದದ ಮೇಲೆ ತರಚಿದ ಗಾಯ ಆಗಿದ್ದು ಚಿಕಿತ್ಸೆ ಸುರತ್ಕಲ್ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾದ ಕ್ರಮಾಂಕ 102/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಸುರೇಶ್ ದೇವಾಡಿಗ (47), ತಂದೆ: ರಾಮಣ್ಣ ದೇವಾಡಿಗ,  ವಾಸ: ಮರಲ್ದಬೆಟ್ಟು  ಮನೆ, ಮಿಯಾರು ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ 22/10/2021 ರಂದು ಬೆಳಗ್ಗೆ 07:00 ಗಂಟೆಗೆ ಬಜಗೋಳಿ ಕಡೆಯಿಂದ ಕಾರ್ಕಳ ಪುಲ್ಕೇರಿ ಕಡೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಿರ್ಯಾದಿದಾರರು ಗ್ಲೋರಿಯಸ್ ಆಯಿಲ್ ಮಿಲ್ ಬಳಿ ರಸ್ತೆಯನ್ನು ದಾಟಲು ನಿಂತಿರುವಾಗ ಬಜಗೋಳಿ ಕಡೆಯಿಂದ ಕಾರ್ಕಳ ಪುಲ್ಕೇರಿ ಕಡೆಗೆ ಓರ್ವ ದ್ವಿಚಕ್ರ ವಾಹನ ಸವಾರನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಎಡಬದಿಗೆ ಸವಾರಿ ಮಾಡಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲಗಾಲಿನ ಮೂಳೆ ಮುರಿತಗೊಂಡಿದ್ದಲ್ಲದೇ, ಎಡಕಾಲು, ಎಡಕೈ, ಹಣೆಗೆ, ಮೂಗಿನ ಬಳಿ ತರಚಿದ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 132/2021 ಕಲಂ: 279,337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದದಿದಾರರಾದ ಸುಮನ್ ಫರ್ನಾಂಡಿಸ್ (20), ತಂದೆ: ಸ್ಟ್ಯಾನಿ ಫರ್ನಾಂಡಿಸ್, ವಿಳಾಸ:ವಿ ಪಿ ನಗರ, 1ನೇ ಕ್ರಾಸ್  ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ದಿನಾಂಕ 22/09/2021 ರಂದು ಬೆಳಿಗ್ಗೆ  00:10 ಗಂಟೆಗೆ ಉಡುಪಿ ಕಡೆಯಿಂದ ಮಣಿಪಾಲದ  ಸಿಂಡಿಕೇಟ್ ಸರ್ಕಲ್ ಕಡೆಗೆ KA-22-EE-2245 ಮೋಟಾರ್ ಸೈಕಲ್ ನಲ್ಲಿ ಹಿಂಬದಿ ಸವಾರನಾಗಿ ಸುನೀತ್ ನ್ನು ಕುಳಿರಿಸಿಕೊಂಡು ಮೋಟಾರ್ ಸೈಕಲ್ ಚಲಾಯಿಸಿಕೊಂಡು ಹೋಗುವಾಗ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ  ಮಣಿಪಾಲ ವಿ ಪಿ ನಗರದ  ನ್ಯಾಚುರಲ್  ಐಸ್ ಕ್ರಿಮ್ ಬಳಿ  ರಾಷ್ಟ್ರೀಯ ಹೆದ್ದಾರಿ 169(ಎ) ರಲ್ಲಿ ತಲುಪುತಿದಂತೆ ಹಿಂದಿನಿಂದ ಒಂದು ಕಾರನ್ನು ಅದರ ಚಾಲಕನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಪಿರ್ಯಾದಿದರರಾದ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದರರು ಮತ್ತು ಹಿಂಬದಿ ಸವಾರ ಮೋಟಾರ್ ಸೈಕಲ್  ಸಮೇತ ರಸ್ತೆಗೆ ಬಿದ್ದು  ಹಿಂಬದಿ ಸವಾರನಿಗೆ ತೀವ್ರ  ತಲೆಗೆ  ಸ್ವರೂಪದ ಗಾಯ ಪಿರ್ಯಾದಿದಾರರಿಗೆ ಕೈ ಕಾಲಿಗೆ ರಕ್ತಗಾಯ ಉಂಟಾಗಿದ್ದು ಹಾಗೂ  ಮೋಟಾರ್ ಸೈಕಲ್ ಜಖಂಗೊಂಡಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 140/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣಗಳು

  • ಕಾಪು:  ದಿನಾಂಕ 22/10/2021  ರಂದು ರಾಘವೇಂದ್ರ  ಸಿ, ಪೊಲೀಸ್ ಉಪನಿರೀಕ್ಷಕರು,  ಕಾಪು ಪೊಲೀಸ್ ಠಾಣೆ ಇವರು ರೌಂಡ್ಸ ನಲ್ಲಿರುವಾಗ  ಏಣಗುಡ್ಡೆ  ಗ್ರಾಮದ ಕಟಪಾಡಿ ಬಸ್‌ ನಿಲ್ದಾಣದ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಮಾಹಿತಿ ಬಂದಂತೆ ದಾಳಿ ನಡೆಸಿ ಮಟ್ಕಾ ಚೀಟಿ ಬರೆಯುತ್ತಿದ್ದ  ವ್ಯಕ್ತಿಯನ್ನು ಹಿಡಿದು ವಿಚಾರಸಲಾಗಿ ತನ್ನ ಹೆಸರು ಅಬ್ದುಲ್ ರಜಾಕ್ (37), ತಂದೆ : ಅಬ್ದುಲ್ ಖಾದರ್, ವಾಸ: ಮನೆ ನಂಬ್ರ 4-5(1)  ರಾಯಿಝ್ ಮಂಜಿಲ್, ವಿನೋಭಾ ನಗರ ಪಳ್ಳಿಗುಡ್ಡೆ, ಕೋಟೆ ಗ್ರಾಮ ಕಟಪಾಡಿ ಎಂದು ತಿಳಿಸಿದ್ದು,  ಮಟ್ಕಾ ಬರೆಯಲು ಬಳಸಿದ ಬಾಲ್ ಪೆನ್-1 ಮತ್ತು ಆತನ ಕೈಯಲ್ಲಿದ್ದ ಮಟ್ಕಾ ನಂಬ್ರ ಬರೆಯಲು ಬಳಸಿದ ಮಟ್ಕಾ ಚೀಟಿ -1, ನಗದು ರೂಪಾಯಿ 765/- ರೂಪಾಯಿ  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 162/2021 ಕಲಂ: 78(1)&(111) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು:  ದಿನಾಂಕ 22/10/2021 ರಂದು ರಾಘವೇಂದ್ರ  ಸಿ, ಪೊಲೀಸ್ ಉಪನಿರೀಕ್ಷಕರು,  ಕಾಪು ಪೊಲೀಸ್ ಠಾಣೆ ಇವರಿಗೆ ಪಡು ಗ್ರಾಮದ ಮೀನು ಮಾರುಕಟ್ಟೆ ಸಮೀಪ ಸಾರ್ವಜನಿಕ ಸ್ಥಳದಲ್ಲಿ  ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಮಾಹಿತಿ ಬಂದಂತೆ ದಾಳಿ ನಡೆಸಿ ಮಟ್ಕಾ ಚೀಟಿ ಬರೆಯುತ್ತಿದ್ದ ವ್ಯಕ್ತಿಯನ್ನು ಹಿಡಿದು ವಿಚಾರಸಲಾಗಿ ತನ್ನ ಹೆಸರು ಚಂದ್ರಹಾಸ (35), ತಂದೆ: ಮುದ್ದು ಪೂಜಾರಿ, ವಾಸ : ಮನೆ ನಂಬ್ರ 2-64 ಸಾಮಿಲ್ ತೋಟ ಹೊಸ ಮಾರಿಗುಡಿ ಹಿಂಭಾಗ ಪಡು ಗ್ರಾಮ ಕಾಪು ತಾಲೂಕು ಉಡುಪಿ ಜಿಲ್ಲೆ ಎಂದು ತಿಳಿಸಿದ್ದು, ಮಟ್ಕಾ ಬರೆಯಲು ಬಳಸಿದ ಬಾಲ್ ಪೆನ್-1 ಮತ್ತು ಆತನ ಕೈಯಲ್ಲಿದ್ದ ಮಟ್ಕಾ ನಂಬ್ರ ಬರೆಯಲು ಬಳಸಿದ ಮಟ್ಕಾ ಚೀಟಿ -1 ನಗದು ರೂಪಾಯಿ 730/- ರೂಪಾಯಿ ಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 163/2021 ಕಲಂ: 78(1)&(111) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಕಾರ್ಕಳ: ದಿನಾಂಕ 22/10/2021 ರಂದು ಬೆಳಿಗ್ಗೆ 04:00 ಗಂಟೆಗೆ ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಸಂಕಲಕರಿಯ ಎಂಬಲ್ಲಿ ಇಬ್ರಾಹಿಂ ಎಂಬುವವರ ಮನೆಯ ಬಳಿ ಇರುವ ಹಾಡಿಯ ಬಳಿ ಮಾಂಸಕ್ಕಾಗಿ ಜಾನುವಾರುಗಳನ್ನು ಹಾಡಿಯಲ್ಲಿ ಕಟ್ಟಿ ಹಾಕಿರುವುದಾಗಿ ತೇಜಸ್ವಿ ಟಿ ಐ, ಪೊಲೀಸ್ ಉಪನಿರೀಕ್ಷಕರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಇವರಿಗೆ ಬಂದ ಮಾಹಿತಿಯಂತೆ ದಾಳಿ ಮಾಡಿ ಸ್ಥಳದಲ್ಲಿದ್ದ  ಆರೋಪಿ ಅಬ್ದುಲ್ ರಹೀಂ(35), ತಂದೆ: ಅಬ್ದುಲ್ ಖಾದರ್ ಎಂಬಾತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ಜಾನುವಾರುಗಳನ್ನು ತನ್ನ ಅಣ್ಣಂದಿರಾದ ಇಬ್ರಾಹಿಂ, ಹಸನಬ್ಬ ಹಾಗೂ ತನ್ನ ಅಕ್ಕನ ಮಗ ಮಹಮ್ಮದ್ ರಫೀಕ್ ಸೇರಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಕಾರ್ಕಳ, ನಿಟ್ಟೆ, ಕಡೆಗಳಲ್ಲಿ ಕೊಟ್ಟಿಗೆಯಿಂದ ಜಾನುವಾರುಗಳನ್ನು ಕದ್ದು ಹಾಗೂ ಬ್ರೋಕರ್  ಗಳಿಂದ ಕಡಿಮೆ ಬೆಲೆಗೆ ಖರೀದಿ ಮಾಡಿ ಯಾವುದೇ ಪರವಾನಿಗೆ ಇಲ್ಲದೇ ಓಮ್ನಿ ಕಾರಿನಲ್ಲಿ ಸಾಗಾಟ ಮಾಡಿ ಮನೆಯ ಬಳಿ ಹಾಡಿಯ ಬಳಿ ಹಿಂಸಾತ್ಮಕ ರೀತಿಯಲ್ಲಿ ಮೇವನ್ನು ಹಾಕದೇ ಹುರಿಹಗ್ಗದಿಂದ ಕಟ್ಟಿ ಹಾಕಿ ಆರೋಪಿತರುಗಳು ಅವರ ಮನೆಯ ಬಾತ್ ರೂಮ್ ನಲ್ಲಿ ಆಗಾಗ ದನವನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದು ಈ ದಿನ ಕೂಡ ಮಾಂಸ ಮಾಡಿದ್ದು ಆರೋಪಿ ಇಬ್ರಾಹಿಂ, ಹಸನಬ್ಬ ಹಾಗೂ ಮಹಮ್ಮದ್ ರಫೀಕ್ ರವರುಗಳು ಮಾರುತಿ ಒಮ್ನಿ ಕಾರಿನಲ್ಲಿ ಮೂಲ್ಕಿ ಮಾರ್ಕೆಟ್ ಕಡೆಗೆ ತೆಗೆದುಕೊಂಡು ಹೋಗಿರುವುದಾಗಿ ತಿಳಿದುಬಂದಿದ್ದು ಪರಿಶೀಲಿಸಲಾಗಿ (1) ಕಪ್ಪು ಬಣ್ಣದ ಹಣೆಯಲ್ಲಿ ಬಿಳಿ ಬೊಟ್ಟು ಮತ್ತು ಕೊಂಬು ಇರುವ ದನ-01, ಸದ್ರಿ ದನದ ಮೌಲ್ಯ 10,000/-ರೂಪಾಯಿಗಳು. (2) ಕಪ್ಪು ಬಿಳಿ ಬಣ್ಣದ ಹಣೆಯಲ್ಲಿ ಬಿಳಿ ಬೊಟ್ಟು ಹಾಗೂ ಕೊಂಬು ಇರುವ ದನ-01,  ದನದ ಮೌಲ್ಯ 10,000/-ರೂಪಾಯಿಗಳು. (3) ಕಂದು ಬಣ್ಣದ ಕೊಂಬು ಇರುವ ದನ-01, ದನದ ಮೌಲ್ಯ 10,000/-ರೂಪಾಯಿಗಳು.  (4)  ನಸುಕಂದು ಬಣ್ಣದ ಕೊಂಬು ಇರುವ ದನ-01  ದನದ ಮೌಲ್ಯ 10,000/-ರೂಪಾಯಿಗಳು.  (5) ನಸುಕಂದು ಬಣ್ಣದ ಕೊಂಬು ಇರುವ ದನ-01 ದನದ ಮೌಲ್ಯ 10,000/-ರೂಪಾಯಿಗಳು. (6) ನಸು ಬಿಳಿ ಕಂದು ಬಣ್ಣದ ಗಂಡು ಕರು-01 ದನದ ಮೌಲ್ಯ 2,000/-ರೂಪಾಯಿಗಳು. (7) ಕಂದು ಬಣ್ಣದ ಹೆಣ್ಣು ಕರು-01, ಮೌಲ್ಯ 2000/- ರೂಪಾಯಿಗಳು (8) ಕಪ್ಪು ಬಿಳಿಬಣ್ಣದ ಹೆಣ್ಣು ಕರು-01 ಮೌಲ್ಯ  2000/- ರೂಪಾಯಿಗಳು, ಹಾಗೂ ಆರೋಪಿತನ ಮನೆಯ ಬಾತ್ ರೂಮ್ ನ್ನು ಪರಿಶೀಲಿಸಲಾಗಿ ಕೇಸರಿ ಬಣ್ಣದ ಪ್ಲಾಸ್ಟಿಕ್ ಟಬ್ , ಮೂರು ಆಲ್ಯುಮಿನಿಯಮ್ ಪಾತ್ರೆಗಳಲ್ಲಿ ದನದ ಮಾಂಸ, ಲಿವರ್, ಕಾಲುಗಳನ್ನು ತುಂಬಿಸಿರುವುದು ಕಂಡುಬಂದಿದ್ದು ಅದರ ಬಳಿಯಲ್ಲಿಯೇ ಬಿಳಿ ಬಣ್ಣದ ಪ್ಲಾಸ್ಟಿಕ್ ಡಬ್ಬದಲ್ಲಿ ಮಾಂಸವನ್ನು ತುಂಡು ಮಾಡುವ ಚಾಕು,ಕತ್ತಿ ಇನ್ನಿತರ ಸಾಮಗ್ರಿಗಳು ಇರುವುದು ಕಂಡು ಬಂದಿರುವುದಾಗಿದೆ.  ದನದ ಮಾಂಸವು ಸುಮಾರು 75 ಕೆಜಿ ಇದ್ದು ಅದರ ಮೌಲ್ಯ 25,000/- ರೂ ಆಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 125/2021  ಕಲಂ: 457, 380 ಐಪಿಸಿ ಹಾಗೂ ಕಲಂ: 8,9,11  ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಪರಿರಕ್ಷಣೆ ಅಧಿನಿಯಮ ಹಾಗೂ  ಕಲಂ: 11(1) (ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆ 1964 ಹಾಗೂ ಕಲಂ:  ಕಲಂ 45, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧ್ಯಾದೇಶ -2020 ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಕಿರಣ್ ಪೂಜಾರಿ (31), ತಂದೆ: ಬಾಬು ಪೂಜಾರಿ, ವಾಸ: ಜ್ಯೋತಿ ನಿಲಯ, ಮೈದೀನ್ಪುರ, ಶಿರೂರು ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 21/10/2021 ರಂದು ಮಧ್ಯಾಹ್ನ 01:30 ಗಂಟೆಗೆ ಶಿರೂರು ಗ್ರಾಮದ ಮೈದೀನಪುರದಲ್ಲಿನ ನಿಕಿಲ್ ಹೋಟೆಲ್ ಗೆ ಊಟ ಮಾಡಲು ಹೋಗಿ ಹೋಟೆಲ್ ನ ಬಳಿ ಪಿರ್ಯಾದಿದಾರರು ಅವರ ಸ್ನೇಹಿತ ಅಶೋಕ್ ದೇವಾಡಿಗ ರವರ ಜೊತೆಯಲ್ಲಿ ಮಾತನಾಡುತ್ತಿರುವಾಗ KA-25-MA-7239 ಮತ್ತು KA-25-MB-0653 ನೇ ಕಾರುಗಳಲ್ಲಿ ಆರೋಪಿತರಾದ 1. ಅಣ್ಣಪ್ಪ ಶೆಟ್ಟಿ, 2. ರವಿ ಶೆಟ್ಟಿ, 3. ಪ್ರಶಾಂತ್ ಶೆಟ್ಟಿ, 4. ಸತೀಶ ಶೆಟ್ಟಿ, 5. ಅಕ್ಷಯ ಆಚಾರ್ಯ , 6 ರಾಘು ಶೆಟ್ಟಿ ಹಾಗೂ ಇತರರು ಬಂದಿಳಿದು, ಆರೋಪಿತರ ಪೈಕಿ 3 ರಿಂದ 6 ನೇಯವರು ಪಿರ್ಯಾದಿದಾರರನ್ನು ಹಿಡಿದುಕೊಂಡು ಆರೋಪಿ 1ನೇ ಯವರು ಪಿರ್ಯಾದಿದಾರರನ್ನು ಉದ್ದೇಶಿಸಿ ನನ್ನ ಬಾರಿನಲ್ಲಿ ನಿನ್ನೇ ದಿನ ಗಲಾಟೆ ಮಾಡಿದ್ದು ಯಾಕೇ ಎಂದು ಅವಾಚ್ಯ ಶಬ್ದದಿಂದ ಬೈದು ಅಲ್ಲದೇ ಪಿರ್ಯಾದಿದಾರರನ್ನು ಕೊಲ್ಲದೇ ಇಲ್ಲಿಂದ ಹೋಗುವುದಿಲ್ಲ ಎಂದು ಆತನ ಜೊತೆ ತಂದಿದ್ದ ತಲವಾರಿನಿಂದ ಪಿರ್ಯಾದಿದಾರರ ತಲೆಗೆ ಹೊಡೆದ ಪರಿಣಾಮ ಪಿರ್ಯಾದಿದಾರರ ತಲೆಗೆ ರಕ್ತಗಾಯವಾಗಿರುತ್ತದೆ. ಹಾಗೂ 2ನೇ ಆರೋಪಿತನು ತಂದಿದ್ದ ಹಾರೆಯನ್ನು ಪಿರ್ಯಾದಿದಾರರಿಗೆ ಬೀಸಿ ನಿನ್ನದು ಜಾಸ್ತಿಯಾಗಿದೆ ನಿನ್ನನ್ನು ಕೊಲ್ಲುವುದಕ್ಕೆ ನಾವು ಬಂದಿರುವುದು ಎಂದು ಹಾರೆಯಿಂದ ಪಿರ್ಯಾದಿದಾರರ ತಲೆಗೆ ಹೊಡೆದಿದ್ದು ಮತ್ತು ಇತರ ಆರೋಪಿತರು ಪಿರ್ಯಾದಿದಾರರ ಸ್ನೇಹಿತ ಆಶೋಕ್ ದೇವಾಡಿಗನಿಗೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದಿರುತ್ತಾರೆ. ನಂತರ ಆರೋಪಿತರೆಲ್ಲರೂ ಅಲ್ಲಿಂದ ಹೋಗುವಾಗ ನೀವು ಈಗ ಜೀವಂತ ಉಳಿದರೆ ಮುಂದಕ್ಕೆ ಕೊಲ್ಲದೇ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ನಂತರ ಗಾಯಗೊಂಡ ಪಿರ್ಯಾದಿದಾರರನ್ನು ಅವರ ಸ್ನೇಹಿತ ಅಶೋಕ್ ದೇವಾಡಿಗ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಒಳರೋಗಿಯಾಗಿ ದಾಖಲು ಮಾಡಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 167/2021 ಕಲಂ: 324 ,504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 23-10-2021 10:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080