ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಇಬ್ರಾಹಿಂ (46) ತಂದೆ : ದಿ. ಉಮ್ಮರ್ ಬ್ಯಾರಿ ವಾಸ : ಮೂಳೂರು ಫಿಶ್‌ ರಿಸ್ ರಸ್ತೆ, ಎಮ್. ಹೆಚ್. ಸ್ಟೋರ್ ಬಳಿ ಮೂಳೂರು ಗ್ರಾಮ ಕಾಪು ಇವರು ದಿನಾಂಕ 23/10/2021 ರಂದು ಬೆಳಗ್ಗೆ 11:00 ಸಮಯಕ್ಕೆ ಮೂಳೂರು ಯುನಿಯನ್ ಬ್ಯಾಂಕ್ ಹತ್ತಿರ ಇರುವಾಗ ಮೂಳೂರು ಯುನಿಯನ್ ಬ್ಯಾಂಕ್ ಸಮೀಪ  ಉಡುಪಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರ ಪೂರ್ವ ಬದಿಯ ಮಣ್ಣು ರಸ್ತೆಯಲ್ಲಿ  ರಸ್ತೆದಾಟಲು  ನಿಂತಿರುವ ಓರ್ವ ಹೆಂಗಸಿಗೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಓರ್ವ ಕಾರಿನ ಚಾಲಕ ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ತೀರ ಎಡಬದಿಗೆ ಬಂದು  ಢಿಕ್ಕಿ ಹೊಡೆದಿದ್ದು  ಪರಿಣಾಮ ಆ ಹೆಂಗಸು ಸುಮಾರು 20 ಅಡಿ ದೂರ ಎಸೆದು ರಸ್ತೆಗೆ ಬಿದ್ದಿದ್ದು, ಕಾರನ್ನು ಕಾರು ಚಾಲಕ ಅಲ್ಲಿಯೇ ಮುಂದೆ ನಿಲ್ಲಿಸಿದ್ದು, ಇಬ್ರಾಹಿಂ ರವರು ಕೂಡಲೇ ಸ್ಥಳಕ್ಕೆ ಹೋಗಿ ಆ ಹೆಂಗಸನ್ನು ಉಪಚರಿಸಿ ನೋಡುವಾಗ ಅವರ ತಲೆಗೆ ತೀವೃ ಸ್ವರೂಪದ ಗಾಯವಾಗಿ ಮಾತನಾಡುವ ಸ್ಥೀತಿಯಲ್ಲಿರಲಿಲ್ಲ. ಇಬ್ರಾಹಿಂ ರವರು ಅಲ್ಲಿ ಸೇರಿದವರ ಸಹಾಯದಿಂದ ಒಂದು ವಾಹನದಲ್ಲಿ ಉಡುಪಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೊಗಿದ್ದು, 12:05 ಗಂಟೆ ಸಮಯಕ್ಕೆ ಪರೀಕ್ಷಿಸಿದ ವೈದ್ಯರು ಆ ಹೆಂಗಸು ಮಾರ್ಗದ ಮಧ್ಯದಲ್ಲೆ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಆ ಹೆಂಗಸಿನ ಹೆಸರು ಆಶಿಯಮ್ಮ ಎಂದು ತಿಳಿಯಿತು. ಆಶಿಯಮ್ಮ ರವರಿಗೆ ಢಿಕ್ಕಿ ಹೊಡೆದ ಕಾರು ನಂಬ್ರ ಕೆಎ-05 ಎಮ್.ಎಕ್ಸ್-3188 ಆಗಿದ್ದು ಅದರ ಚಾಲಕನ ಹೆಸರು ವಿಶ್ವನಾಥ ಎಂದು ತಿಳಿದಿರುತ್ತದೆ. ಈ ಅಪಘಾತಕ್ಕೆ ಕಾರು ಚಾಲಕ ವಿಶ್ವನಾಥ ರವರ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 164/2021  ಕಲಂ: 279, 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಶೈಲಜ ಬೆಟ್ರಬೆಟ್, (74) ತಂದೆ: ದಿವಂಗತ.ದೇವಿದಾಸ್ ರಾವ್ ಬಾಗಡೆ ವಾಸ: ನಂ.803, ವಿಶ್ವಾಸ್ ಪ್ಯಾರಡೈಸ್, ಉಡುಪ ಕೌಂಪೌಂಡ್, ಬೈಲೂರು ರಸ್ತೆ, 76 ಬಡಗಬೆಟ್ಟು ಇವರ ಮೊಬೈಲ್ ನಂಬ್ರ ಕ್ಕೆ IGMS,Delhi(Govt. Department of Integrated Gradient Management System. ಎಂಬುದಾಗಿ ನಂಬಿಸಿ ಯಾರೋ ಅಪರಿಚಿತ ವ್ಯಕ್ತಿಗಳು 8527023692, 9599164053, 9891996342, 9463996011ನೇ ನಂಬ್ರಗಳಿಂದ ದೂರವಾಣಿ ಕರೆ ಮಾಡಿ, ಶೈಲಜ ಬೆಟ್ರಬೆಟ್ ರವರ ಗಂಡನ Provident Fund ನಲ್ಲಿ ಬಾಕಿ ಇರುವ ಹಣವನ್ನು ಪಡೆಯಲು ಸಹಕರಿಸುವುದಾಗಿ ನಂಬಿಸಿ ಅದಕ್ಕೆ ಬಾಕಿ ಉಳಿದಿರುವ ಟ್ಯಾಕ್ಸ್ ಹಾಗೂ ಇತರ ಖರ್ಚುಗಳ ಬಗ್ಗೆ ಹಣ ಪಾವತಿಸುವಂತೆ ಹೇಳಿ ಆರೋಪಿಗಳು ಶೈಲಜ ಬೆಟ್ರಬೆಟ್ ರವರಿಗೆ  ಎಸ್.ಬಿ.ಐ, ಆರ್.ಬಿಎಲ್ ಹಾಗೂ ಕೋಟಾಕ್ ಮಹೇಂದ್ರ ಬ್ಯಾಂಕ್ ಗಳ ಎಸ್.ಬಿ ಖಾತೆಯನ್ನು ನೀಡಿ  ಒಟ್ಟು ರೂಪಾಯಿ 2,80,691/= ಹಣವನ್ನು ಉಡುಪಿಯಲ್ಲಿರುವ ಎಸ್.ವಿ.ಸಿ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮುಖೇನ ನೆಫ್ಟ್ ಮಾಡಿಸಿಕೊಂಡು, ಫಿ.ಎಸ್ ಹಣವನ್ನು ನೀಡದೆ, ಪಡೆದ ಹಣವನ್ನು ಕೂಡ ವಾಪಾಸ್ಸು ನೀಡದೆ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 52/2021 ಕಲಂ 66(c), 66(d) ಐ.ಟಿ. ಆಕ್ಟ್  420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-10-2021 06:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080