ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣಗಳು

  • ಉಡುಪಿ: ಪಿರ್ಯಾದಿ ಅಬ್ದುಲ್‌ ಸತ್ತಾರ್‌ (66) ತಂದೆ: ಶೇಖ್‌ ಯಾಕೂಬ್‌ ಸಾಹೇಬ್‌ ವಾಸ: ಫ್ಲ್ಯಾಟ್‌ನಂಬ್ರ 301, 3ನೇ ಮಹಡಿ, ತಾಜ್‌ ರೆಸಿಡೆನ್ಸಿ, ಈಶ್ವರ ನಗರ, ಮಣಿಪಾಲ, ಇವರು ಉಡುಪಿ ತಾಲೂಕು ಹೆರ್ಗಾ ಗ್ರಾಮದ ಈಶ್ವರ ನಗರ 7ನೇ ಅಡ್ಡ ರಸ್ತೆಯಲ್ಲಿರುವ ತಾಜ್‌ ರೆಸಿಡೆನ್ಸಿಯ ಪ್ಲ್ಯಾಟ್‌ ನಂ; 301 ನ್ನು ದಿನಾಂಕ 25.06.2010 ರಂದು ಆರೋಪಿತರುಗಳಾದ1) ತಾಜ್‌ಮುಲ್‌ ಹುಸೇನ್‌ ತಂದೆ: ಕೆ. ನೂರ್‌ ಅಹಮ್ಮದ್‌ ವಾಸ: ರಾಧಾ ಎಂಪೈರ್‌, ಕೊಳಂಬೆ, ಉಡುಪಿ ತಾಲೂಕು2) ಉಮಾ ಗೌಡ್‌ ಗಂಡ: ಬಿ.ಕೆ ಬಸಲಿಂಗನ ಗೌಡ್‌ ವಾಸ: ತಣಿಸಂದ್ರ, ಬೆಂಗಳೂರು3) ಶಂಶುದ್ದೀನ್‌ ತಂದೆ: ಕೆ. ನೂರ್‌ ಅಹ್ಮದ್‌ ವಾಸ: ಅಲೆವೂರು ರಸ್ತೆ, ಕುಕ್ಕಿಕಟ್ಟೆ, ಉಡುಪಿ ಇವರುಗಳಲ್ಲಿ 1ನೇ ಆರೋಪಿಯಿಂದ ಖರೀದಿಸಿದ್ದು, 1ನೇ ಆರೋಪಿಯು ತಾಜ್‌ ರೆಸಿಡೆನ್ಸಿ ಅಪಾರ್ಟ್‌ಮೆಂಟ್ಸ್‌ ಓನರ್ಸ್‌ ಅಸೋಶಿಯೇಶನ್‌ (ರಿ) ಇದರ ಅಧ್ಯಕ್ಷನಾಗಿದ್ದು, 2ನೇ ಆರೋಪಿತೆಯು ಕಾರ್ಯದರ್ಶಿಯಾಗಿದ್ದು, 3 ನೇ ಆರೋಪಿಯು 1ನೇ ಆರೋಪಿಯ ಜಿಪಿಎ ಹೋಲ್ಡರ್‌ ಆಗಿರುತ್ತಾರೆ. ಮೂರು ಜನ ಆಪಾದಿತರು ಪೂರ್ವ ದ್ವೇಷದಿಂದ, ತಕ್ಷೀರು ನಡೆಸುವ ಸಮಾನ ಉದ್ದೇಶದಿಂದ  ಪಿರ್ಯಾದುದಾರರ ನಕಲಿ ಸಹಿ ಹಾಕಿ,  ನಕಲಿ ದಾಖಲಾತಿಗಳನ್ನು ಉಡುಪಿಯಲ್ಲಿ ಸೃಷ್ಠಿಸಿ, ಸದ್ರಿ ನಕಲಿ ದಾಖಲಾತಿಗಳನ್ನು ಅಸಲಿ ದಾಖಲಾತಿಗಳೆಂದು ಸರಕಾರಿ ಅಧಿಕಾರಿಯವರಾದ  ಉಡುಪಿ ಜಿಲ್ಲಾ ರಿಜಿಸ್ಟ್ರಾರ್‌ ಅಪ್‌ ಸೊಸೈಟೀಸ್‌, ಬಡಗುಪೇಟೆ, ಉಡುಪಿ ಇವರ ಮುಂದೆ ದಿನಾಂಕ 01.01.2011 ರಂದು ಹಾಜರುಪಡಿಸಿ ತಾಜ್‌ ರೆಸಿಡೆನ್ಸಿ ಓನರ್ಸ್‌ ಅಸೋಶಿಯೇಶನ್‌ ನ್ನು ನೋಂದಾವಣೆ ಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 146/2022 ಕಲಂ: 465 468 471 Rw 34 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕೋಟ:  ಪಿರ್ಯಾದಿ ಗುರುರಾಜ ಕುಲಾಲ್‌ (28)ತಂದೆ: ಭೋಜು ಕುಲಾಲ್‌ವಾಸ: ಕಟಿಲೇಶ್ವರಿ ನಿಲಯ, ಜಿ.ಕೆ. ನಗರ,ಹುಣ್ಸೆಮಕ್ಕಿ, ಹೊಂಬಾಡಿ - ಮಂಡಾಡಿ ಗ್ರಾಮ ಇವರು ಹುಣ್ಸೆಮಕ್ಕಿ ಪೇಟೆಯಲ್ಲಿ ರಾಯಲ್‌ ಫ್ಯಾಷನ್‌ ಎಂಬ ಬಟ್ಟೆ ಅಂಗಡಿ ಇಟ್ಟು ವ್ಯಾಪಾರ ಮಾಡಿಕೊಂಡಿದ್ದು ಪಿರ್ಯಾದಿದಾರರು ಹಾಗೂ ಅವರ ಸಂಬಂದಿ ನಾಗೇಶ್‌ಕುಲಾಲ್‌ ಎಂಬಾತನಿಗೂ ಹಣದ ವ್ಯವಹಾರ ಇರುತ್ತದೆ. ಪಿರ್ಯಾದಿದಾರರು  ಆತನಿಗೆ ಸುಮಾರು 7-8 ತಿಂಗಳುಗಳಿಂದ ಒಟ್ಟು ರೂ. 69,000/- ಹಣವನ್ನು ನೀಡಿದ್ದು ಆತನು ಪಿರ್ಯಾದಿದಾರರಿಗೆ ರೂ. 39,000/- ಹಣವನ್ನು ಮಾತ್ರ ವಾಪಾಸು ನೀಡಿದ್ದು ರೂ. 30,000/- ಹಣವನ್ನು ಕೊಡಲು ಬಾಕಿ ಇದ್ದಿರುತ್ತದೆ.  ದಿನಾಂಕ: 21.09.2022 ರಂದು ಬೆಳಿಗ್ಗೆ ಸಮಯ ಹುಣ್ಸೆಮಕ್ಕಿ ಪೇಟೆಯಲ್ಲಿ ನಾಗೇಶ್‌ ಕುಲಾಲ್‌ನಲ್ಲಿ ಬಾಕಿ ಕೊಡಲು ಇದ್ದ ಹಣವನ್ನು ಕೊಡುವಂತೆ ಕೇಳಿದ್ದು ಆತನ ಸಂಜೆ ಅಂಗಡಿ ಬಳಿ ಬಂದು ಕೊಡುವುದಾಗಿ ಹೇಳಿರುತ್ತಾನೆ. ಅದೇ ದಿನ ರಾತ್ರಿ ಸುಮಾರು 8:30 ಗಂಟೆಗೆ ಪಿರ್ಯಾದಿದಾರರು  ಹಾಗೂ ಅವರ  ತಮ್ಮ ಚಂದ್ರಕಾಂತ್‌ನು ಅಂಗಡಿಯಲ್ಲಿರುವಾಗ ನಾಗೇಶ್‌ಕುಲಾಲ್‌ನು ಆತನ ಬಾಬ್ತು ಕಾಪಿ ಬ್ರೌನ್‌ಬಣ್ಣದ ನಂ: KA 05 MN 3702 ನೇ i20 ಕಾರಿನಲ್ಲಿ ಪಿರ್ಯಾದಿದಾರರ  ಅಂಗಡಿಯ ಎದುರು ರಸ್ತೆಯ ಬಳಿ ಬಂದು ಜೋರಾಗಿ ಕೂಗಾಡಿದ್ದು, ಅದನ್ನು ಕೇಳಿ ನಾನು ಪಿರ್ಯಾದಿದಾರರು  ಹೊರಗೆ ರಸ್ತೆಗೆ ಬಂದಾಗ ನಾಗೇಶನು ಪಿರ್ಯಾದಿದಾರರನ್ನು ಉದ್ದೇಶಿಸಿ, “ ನಿನಗೆ ನಾನು ದುಡ್ಡು ಕೊಡ್ತೆ ಅಂತ ಹೇಳಿದ್ದಲ್ವಾ, ನೀನ್‌ಪದೇ ಪದೇ ಎಂತಾ ಕಾಲ್‌ಮಾಡುದು ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಏಕಾಏಕಿ ಕೈಯಿಂದ  ಕೆನ್ನೆಗೆ ಹೊಡೆದಿರುತ್ತಾನೆ. ಪಿರ್ಯಾದಿದಾರರು  ಅಲ್ಲಿಂದ ಹೋಗಲು ಯತ್ನಿಸಿದಾಗ ಮುಂದೆ ಹೋಗದಂತೆ ತಡೆದು ಪುನಃ ಕೈಯಿಂದ ಹೊಡೆದು ಹಲ್ಲೆ ಮಾಡಿರುತ್ತಾನೆ. ಆಗ ಪಿರ್ಯಾದಿದಾರರು  ತಮ್ಮ ಜಗಳವನ್ನು  ಬಿಡಿಸಿರುತ್ತಾನೆ. ನಾಗೇಶ್‌ಕುಲಾಲ್‌ನು ಪಿರ್ಯಾದಿದಾರರ ಸಂಬಂಧಿಯಾಗಿದ್ದರಿಂದ ಮನೆಯವರಲ್ಲಿ ವಿಚಾರಿಸಿ ಠಾಣೆಗೆ ಬಂದು ದೂರು ನೀಡುವಾಗ ವಿಳಂಬವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 154/2022 ಕಲಂ: 504.506 323.341 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.    

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕಾಪು: ಪಿರ್ಯಾದಿ ಅಮೀರ್ ಸಾಹೇಬ್ (52) ತಂದೆ: ಹಸನ್ ಸಾಹೇಬ್ ವಾಸ: ಮನೆ ನಂಬ್ರ 3-92 9ನೇ ಕ್ರಾಸ್  ಬಲಬದಿ ಸರಕಾರಿಗುಡ್ಡೆ,ಮೂಡಬೆಟ್ಟು  ಗ್ರಾಮ ಇವರ ತಮ್ಮ ಸಮದ್ ಸಾಹೇಬ್ (50) ರವರು 7 ವರ್ಷಗಳ ಹಿಂದೆ ಮದುವೆಯಾಗಿದ್ದು ಮಕ್ಕಳಾಗದೇ ಇದ್ದುದರಿಂದ 6 ವರ್ಷಗಳ ಹಿಂದೆ ವಿವಾಹ ವಿಚ್ಛೇಧನ ಆಗಿರುತ್ತದೆ. ಸಮದ್ ಸಾಹೇಬ್ ರವರು ವಿವಾಹ ವಿಚ್ಚೇದನದ ಬಳಿಕ ಅತಿಯಾದ ಮದ್ಯ ಸೇವನೆ ಮಾಡುತ್ತಿದ್ದರು.  ದಿನಾಂಕ 22.09.2022 ರಂದು ಸಮದ್ ಸಾಹೇಬ್ ರವರು ಅಂಗಡಿಗೆ ಹೋದವರು ವಾಪಾಸು ಮನೆಗೆ ಬಂದು ಮನೆಯ ಕೋಣೆಯಲ್ಲಿ ಮಲಗಿರುತ್ತಾರೆ. ಈ ದಿನ ದಿನಾಂಕ 23.09.2022 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿದಾರರ ಅಕ್ಕ ಹಾಗೂ ಸೊಸೆ  ಸಮದ್ ಸಾಹೇಬ್ ರನ್ನು ಕರೆಯಲು ಬಾಗಿಲು ಬಡಿದಿದ್ದು, ಎಷ್ಟು ಹೊತ್ತಾದರೂ ಬಾಗಿಲೂ ತೆರೆಯದೇ ಇದ್ದುದರಿಂದ ಪಿರ್ಯಾದಿದಾರರಿಗೆ ಪೋನ್ ಕರೆ ಮಾಡಿ  ತಿಳಿಸಿದ್ದು ಕೂಡಲೇ ಪಿರ್ಯಾದಿದಾರರು ಮನೆಯ ಬಳಿ ಬಂದು ಮನೆಯ ಹಿಂದಿನ ಕಿಟಿಕಿಯಿಂದ  ನೋಡಿದಾಗ ಸಮದ್ ಸಾಹೇಬ್ ರವರು ಮನೆಯ ಕೋಣೆಯ ಜಂತಿಗೆ ಬಟ್ಟೆಯನ್ನು ಕಟ್ಟಿ ನೇಣು ಬಿಗಿದುಕೊಂಡು ನೇತಾಡುವ ಸ್ಥಿತಿಯಲ್ಲಿ ಕಂಡು ಬಂದಿದ್ದು ನಂತರ ಬಾಗಿಲನ್ನು ತೆರೆದು ನೋಡಿದ್ದಾಗ ಸಮದ್ ಸಾಹೇಬ್ ರು ಮೃತಪಟ್ಟಿರುವುದು ಕಂಡುಬಂದಿರುತ್ತದೆ. ಸಮದ್ ಸಾಹೇಬರು  ವಿವಾಹ ವಿಚ್ಚೇದನ ಬಳಿಕ ವಿಪರೀತ ಮದ್ಯಪಾನ ಚಟಕ್ಕೆ ಒಳಗಾಗಿದ್ದು ಅದರಿಂದಲೇ ಮಾನಸಿಕ ಖಿನ್ನತೆಗೆ ಒಳಗಾಗಿ ದಿನಾಂಕ 22.09.2022 ರಂದು 20:00 ಗಂಟೆಯಿಂದ 23.09.2022 ರಂದು 10:00 ಗಂಟೆಯ ಮಧ್ಯಾವಧಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಯು.ಡಿ.ಆರ್‌.ನಂಬ್ರ 28/2022 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  
  • ಗಂಗೊಳ್ಳಿ: ಫಿರ್ಯಾದಿ ಶ್ರೀನಿವಾಸ ಖಾರ್ವಿ (47), ತಂದೆ: ದಿ. ಲಕ್ಷ್ಮಣ ಖಾರ್ವಿ,  ವಾಸ: ಸಂದೀಪ ನಿಲಯ ಮಲ್ಯರ ಬೆಟ್ಟು  ಗಂಗೊಳ್ಳಿ ಗ್ರಾಮ ಇವರ ತಮ್ಮ ಮೃತ ವೆಂಕಟೇಶ ಖಾರ್ವಿ (45  ವರ್ಷ) ಎಂಬವರು ದಿನಾಂಕ: 23.09.2022 ರಂದು ಬೆಳಗಿನ ಜಾವ 5:00 ಗಂಟೆಗೆ ಮನೆಯಿಂದ ಮೀನುಗಾರಿಕೆ ಬಗ್ಗೆ ಹೋಗಿದ್ದು ಗಂಗೊಳ್ಳಿ ಗ್ರಾಮದ ಬೇಲಿಕೇರಿ ಬ್ರೇಕ್‌ ವಾಟರ್‌ ಸಮೀಪ ಅರಬ್ಬಿ ಸಮುದ್ರದ ತೀರದಲ್ಲಿ ಮರಣ ಬಲೆಯ ಸಹಾಯದಿಂದ ಮೀನುಗಾರಿಕೆ ಮಾಡುತ್ತಿರುವಾಗ ಸಮಯ ಸುಮಾರು 06:00 ಗಂಟೆಗೆ ಸಮುದ್ರದ ಅಲೆಗೆ ಕೊಚ್ಚಿಕೊಂಡು ಹೋಗಿ ಸಮುದ್ರದ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುತ್ತಾರೆ.  ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಯು.ಡಿ.ಆರ್ 23/2022 ಕಲಂ: 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ. 
  • ಶಂಕರನಾರಾಯಣ: ಪಿರ್ಯಾದಿ ಪವನ ಪ್ರಾಯ: 28 ವರ್ಷ ತಂದೆ: ದಿ. ದೇವಣ್ಣ ನಾಯ್ಕ ವಾಸ: ಕಾಸಾಡಿ ಕಾರಿಮನೆ  76 ಹಾಲಾಡಿ ಇವರ ತಾಯಿ ಪಾರ್ವತಿ ಪ್ರಾಯ 47 ವರ್ಷ ಇವರು ಕುಡಿತದ ಸ್ವಭಾವದವರಾಗಿದ್ದು ದಿನಾ ಕೂಲಿ ಕೆಲಸಕ್ಕೆ ಹೋದವರು ಮನೆಗೆ ಬ್ರಾಂಡಿಯನ್ನು ತೆಗೆದುಕೊಂಡು ಬಂದು ರಾತ್ರಿ ಮನೆಯಲ್ಲಿಯೇ ಕುಡಿಯುತ್ತಿದ್ದರು. ದಿನಾಂಕ 18.09.2022 ರಂದು ಬೆಳಿಗ್ಗೆ ಕೂಲಿ  ಕೆಲಸಕ್ಕೆ ಹೋದವರು  ಮನೆಗೆ ಬರುವಾಗ ಅಮಲು ಪದಾರ್ಥ ತೆಗೆದುಕೊಂಡು ಬಂದು ರಾತ್ರಿ ಮನೆಯಲ್ಲಿಯೇ ಕುಡಿದಿದ್ದು ಸಮಯ ಸುಮಾರು 8:30 ಗಂಟೆಗೆ ಕುಡಿದ ಅಮಲಿನಿಂದ ತೇಲಾಡಿಕೊಂಡು ಕಡೆಯುವ ಕಲ್ಲಿನ ಮೇಲೆ ಬಿದ್ದು ತಲೆಗೆ ರಕ್ತಗಾಯವಾಗಿದ್ದರಿಂದ  ಮನೆಯವರು  ರಕ್ತ ಹೊರಬಾರದಂತೆ ಕಾಫಿ ಪುಡಿ ತುಂಬಿದ್ದು ರಕ್ತ ಕಟ್ಟಿದ್ದರಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಮನೆಯಲ್ಲಿಯೇ ಇರಿಸಿಕೊಂಡಿರುತ್ತಾರೆ. ದಿನಾಂಕ 19/09/2022 ರಂದು ಪಾರ್ವತಿಯವರು ಮಾತನಾಡದೇ ಇದ್ದುದರಿಂದ  ಚಿಕಿತ್ಸೆಯ ಬಗ್ಗೆ  ಸಂಜೆ 6:30 ಗಂಟೆಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ವೈದ್ಯರ ಸಲಹೆಯಂತೆ  ಮಂಗಳೂರು  ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲುಮಾಡಿದ್ದು ತಲೆಗೆ ತುಂಬಾ ಪೆಟ್ಟಾಗಿದ್ದರಿಂದ ಚಿಕಿತ್ಸೆ  ಫಲಕಾರಿಯಾಗದೇ ದಿನಾಂಕ 22/09/2022 ರಂದು ರಾತ್ರಿ 11:12 ಗಂಟೆಗೆ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್‌ ನಂಬ್ರ 32/2022  ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ. 
  • ಹಿರಿಯಡ್ಕ: ಪಿರ್ಯಾದಿ ದಾಮೋದರ ನಾಯ್ಕ್ (45)  ತಂದೆ: ಆಮ್ಮಯ್ಯ ನಾಯ್ಕ್ ವಾಸ: ಗಾಣದ ಬಾಕ್ಯಾರು ಮನೆ, ಇವರ ತಮ್ಮನಾದ ಪುಂಡಲೀಕ ನಾಯ್ಕ್ (35) ರವರು ದಿನಾಂಕ: 20/09/2022 ರಂದು ಸಂಜೆ 7:00 ಗಂಟೆಗೆ ಪೆರ್ಡೂರು ಗ್ರಾಮದ ಕುಂಜದಕಟ್ಟೆ ಎಂಬಲ್ಲಿ ಬಿದ್ದುಕೊಂಡಿರುವುದಾಗಿ ಪರಿಚಿತರೊಬ್ಬರು ಕರೆ ಮಾಡಿ ತಿಳಿಸಿದಂತೆ ಪಿರ್ಯಾದುದಾರರು ಹೋಗಿ ನೋಡಲಾಗಿ ಮಣ್ಣು ರಸ್ತೆಯಲ್ಲಿ ಬಿದ್ದು ಕೊಂಡಿದ್ದವರನ್ನು ವಿಚಾರಿಸಲಾಗಿ ಮಾತನಾಡುತ್ತಿರಲಿಲ್ಲ ಸದ್ರಿಯವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಸರಕಾರಿ ಅಸ್ಪತ್ರಗೆ ದಾಖಲಿಸಿದ್ದು ದಿ: 21/09/2022 ರಂದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಕೆ ಎಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದು  ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗಿದೆ ದಿನಾಂಕ:  22/09/2022 ರಂದು ಸಂಜೆ 7:25 ಗಂಟೆಗೆ ಮೃತಪಟ್ಟಿದ್ದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ. ಯುಡಿಆರ್ ನಂಬ್ರ: 37/2022 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.   

ಇತ್ತೀಚಿನ ನವೀಕರಣ​ : 23-09-2022 06:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080