ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ: ದಿನಾಂಕ 22/09/2021ರಂದು ಮದ್ಯಾಹ್ನ 2:50 ಗಂಟೆಗೆ ಮಣಿಪಾಲ ಲಕ್ಷ್ಮೀಂದ್ರನಗರದ  ಇಂಡಸ್  ಕಮರ್ಶಿಯಲ್  ಕಾಂಪ್ಲೆಕ್ಸ್ ಬಳಿ  ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 169(ಎ) ರಲ್ಲಿ ಮಣಿಪಾಲ - ಉಡುಪಿ  ಏಕಮುಖ ರಸ್ತೆಯ  ಎಡಭಾಗದಲ್ಲಿ ವೀರಜ್‌ ‌ಸವಾರನಾಗಿಯೂ ಪೂರ್ಣಿಮಾ ಸಹಸವಾರಳಾಗಿಯು ಉಡುಪಿ ಕಡೆಗೆ  ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20-EP-2511 ನೇ ಸ್ಕೂಟರ್‌ನ ಹಿಂದಿನಿಂದ KA-20-Z-8299 ನೇ ಕಾರನ್ನು ಅದರ ಚಾಲಕನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು KA-20-EP-2511 ನೇ ಸ್ಕೂಟರ್‌‌ಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ವೀರಜ್‌ ‌ಮತ್ತು ಪೂರ್ಣಿಮಾ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪೂರ್ಣಿಮಾ ರವರ ತಲೆಗೆ, ಭುಜಕ್ಕೆ ತೀವ್ರ  ಸ್ವರೂಪದ ಗಾಯ , ಮೈಕೈಗೆ  ತರಚಿದ ಗಾಯ  ಹಾಗೂ ವೀರಜ್‌ನ  ತಲೆ , ಭುಜಕ್ಕೆ ತೀವ್ರ ಸ್ವರೂಪದ ಗಾಯ ,ಮೈಕೈಗೆ ತರಚಿದ ಗಾಯ ಉಂಟಾಗಿರುತ್ತದೆ.  ಹಾಗೂ  ಎರಡೂ ವಾಹನಗಳು  ಜಖಂಗೊಂಡಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 124/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ವೈಶಾಕ್ ಕೊಡವೂರು (21), ತಂದೆ: ಜಯಪ್ರಕಾಶ್, ವಾಸ:ಯಾಧವ ಸುಧಾ ಎ.ಪಿ.ಎಮ್.ಸಿ ಮಾರ್ಕೆಟನ ಹತ್ತಿರ ಆದಿ ಉಡುಪಿ ಅಂಚೆ ಮತ್ತು ಗ್ರಾಮ ಕೊಡವೂರು ಉಡುಪಿ ತಾಲೂಕು ಇವರು ದಿನಾಂಕ 22/09/2021 ರಂದು ತನ್ನ ಗೆಳೆಯ ಪ್ರನುಷ್ ನನ್ನು ತನ್ನ ಮೋಟಾರು ಸೈಕಲ್ ನಂಬ್ರ KA-20-H-6889 ನೇದರಲ್ಲಿ ಹಿಂಬದಿ ಕುಳ್ಳಿರಿಸಿಕೊಂಡು ಮನೆಯಿಂದ ಮಣಿಪಾಲ ಕಾಲೇಜ್ ಕಡೆಗೆ ಹೋಗಲು ಕರಾವಳಿ ಕಡೆಯಿಂದ ಮಣಿಪಾಲದ ಕಡೆಗೆ ರಾಷ್ಟ್ರೀಯ ಹೆದ್ದಾರಿ 169(ಎ) ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಬೆಳಿಗ್ಗೆ 10:45 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ತಲುಪುವಾಗ ಅದೇ ಮಾರ್ಗದಲ್ಲಿ ರಸ್ತೆಯ ಬಲಬದಿಯಲ್ಲಿ KA-19-AC-6957 ಕಾರು ಚಾಲಕ ಯೋಗೀಶ್ ತನ್ನ ಕಾರನ್ನು ಬಲಬದಿಗೆ ಯು ಟರ್ನ್  ಮಾಡಲು ಯಾವುದೇ ಸೂಚನೆ ನೀಡದೇ ಎಡ ಬದಿಗೆ ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ರಸ್ತೆಯ ಎಡಬದಿಯಲ್ಲಿ ನೇರವಾಗಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಸಹ ಸವಾರನು ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಬಲಕಾಲಿನ ಮೂಳೆಮೂರಿತ ಮತ್ತು ಸಹ ಸವಾರನಿಗೆ ಎಡಗೈಗೆ ಮೂಳೆಮುರಿತ ಉಂಟಾಗಿ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 58-2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಕುಮಾರಿ ತೇಜ ಯಾನೆ ತೇಜಸ್ವಿನಿ (20), ತಂದೆ: ಉರ್ಮಾಣಿ, ವಾಸ: ದರ್ಖಾಸು ಹೌಸ್, ಬಜರ್ಕಳ, ಬಜಗೊಳಿ ಅಂಚೆ ಮುಡಾರು ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರು 01 ವರ್ಷದಿಂದ ಕಾರ್ಕಳ ತಾಲೂಕು ಮುಡಾರು ಗ್ರಾಮದ ಮುಡ್ರಾಲು ಎಂಬಲ್ಲಿ ಇರುವ ಶ್ರೀದೇವಿ ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ಪ್ಯಾಕಿಂಗ್ ಕೆಲಸ ಮಾಡಿಕೊಂಡಿದ್ದು ದಿನಾಂಕ 02/07/2021 ರಂದು ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿರುವಾಗ ಮಧ್ಯಾಹ್ನ 12:00 ಗಂಟೆಗೆ ಬಾಯಾರಿಕೆಯಿಂದ ಫ್ಯಾಕ್ಟರಿಯ ಒಳಗೆ SPRITE ಬಾಟಲಿಯಲ್ಲಿ ಇದ್ದ ಆಸಿಡ್ ನನ್ನು ಕುಡಿದು ಅಸ್ಟಸ್ಥಗೊಂಡವರನ್ನು ಅವರೊಂದಿಗೆ ಕೆಲಸ ಮಾಡಿಕೊಂಡಿರುವವರು ಉಪಚರಿಸಿ ಚಿಕಿತ್ಸೆ ಬಗ್ಗೆ ಕಾರ್ಕಳ ಸಿ,ಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ,ಎಂ,ಸಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದು ಅವರ ಆಸ್ಪತ್ರೆಯ ಖರ್ಚು ವೆಚ್ಚವನ್ನು ನೋಡಿಕೊಳ್ಳುವುದಾಗಿ ಫ್ಯಾಕ್ಟರಿಯ ಮಾಲಿಕರು ಹೇಳಿದ್ದರಿಂದ ಆಸ್ಪತ್ರೆಯಲ್ಲಿ ದಾಖಲಾದ ಸಮಯ ಪೋಲೀಸರಿಗೆ ಹೇಳಿಕೆ ನೀಡುವಾಗ ಈ ಬಗ್ಗೆ ಕಾನೂನು ಕ್ರಮದ ಅಗತ್ಯವಿಲ್ಲವಾಗಿ ನುಡಿದಿದ್ದು ಈಗ ಫ್ಯಾಕ್ಟರಿಯ ಮಾಲಿಕರು ಹಣಕೊಡಲು ನಿರಾಕರಿಸಿ ಅವರನ್ನು ನೋಡಲು ಆಸ್ಪತ್ರೆಗೆ ಕೂಡಾ ಬಾರದೇ ಇದ್ದು ಈ ಘಟನೆಗೆ ಕ್ಯಾಶ್ಯೂ ಫ್ಯಾಕ್ಟರಿಯ ಮಾಲಿಕ ಗಣೇಶ್ ಕಾಮತ್ ಇವರು ನಿರ್ಲಕ್ಷತನದಿಂದ SPRITE ಬಾಟಲಿಯಲ್ಲಿ ಆ್ಯಸಿಡ್ ತುಂಬಿಸಿಟ್ಟುರುವುದೇ ಕಾರಣವಾಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 113/2021 ಕಲಂ: 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಉಡುಪಿ: ಪಿರ್ಯಾದಿದಾರರಾದ ಗಿರೀಶ್‌ ಕೆ.ಸಿ (36), ತಂದೆ: ಚೂಡಪ್ಪ, ವಾಸ: ಕಾರ್ತಿಕ್‌ರೆಸಿಡೆನ್ಸಿ, ಕಿದಿಯೂರು ಉಡುಪಿ SBI Bank ಸಾಗರ ಬ್ರಾಂಚ್‌ನಲ್ಲಿ ಖಾತೆ ಹೊಂದಿದ್ದು, ದಿನಾಂಕ 22/09/2021 ರಂದು ಪಿರ್ಯಾದಿದಾರರಿಗೆ ಯಾರೋ ಅಪರಿಚಿತರು ಲಿಂಕ್‌ನ್ನು ಮೆಸೆಜ್‌ ಮೂಲಕ ಕಳುಹಿಸಿ, ನಂತರ ಕರೆ ಮಾಡಿ ಬ್ಯಾಂಕ್‌ ಅಧಿಕಾರಿ ಮಾತನಾಡುತ್ತಿರುವುದಾಗಿ ನಂಬಿಸಿ, ಕೆವೈಸಿ ಅಪ್‌ಡೇಟ್ ಮಾಡಲು ಲಿಂಕ್‌ನ್ನು ಕ್ಲಿಕ್‌ ಮಾಡುವಂತೆ ತಿಳಿಸಿದ್ದು, ಪಿರ್ಯಾದಿದಾರರು ಪೋನ್‌ ಮಾಡಿರುವುದು ಬ್ಯಾಂಕ್‌ ಅಧಿಕಾರಿ ಎಂದು ನಂಬಿ ಲಿಂಕ್‌ನ್ನು ಒತ್ತಿದಾಗ ಪಿರ್ಯಾದಿದಾರರ ಖಾತೆಯಿಂದ 3 ಸಲ ಟ್ರಾನ್ಸ್ ಕ್ಷನ್ ಮಾಡಿ ರೂಪಾಯಿ 25,000/-, 20,000/-,  20,000/- ಒಟ್ಟು ರೂಪಾಯಿ 65,000/- ಹಣವನ್ನು ವಿದ್‌ಡ್ರಾ ಮಾಡಿರುತ್ತಾರೆ. ಬ್ಯಾಂಕ್‌ ಅಧಿಕಾರಿ ಎಂದು ನಂಬಿಸಿ, ಲಿಂಕ್‌ ಕಳುಹಿಸಿ ಹಣವನ್ನು ವಿದ್‌ಡ್ರಾ ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 44/2021 ಕಲಂ: 66(d) ಐ.ಟಿ. ಆಕ್ಟ್ ಮತ್ತು ಕಲಂ : 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-09-2021 10:30 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080