ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಕಾಪು: ಪಿರ್ಯಾದಿದಾರರಾದ ಉಪೇಂದ್ರ ಶರ್ಮಾ (39), ತಂದೆ: ಲಲ್ಲನ್ ಶರ್ಮಾ, ವಾಸ: ದೋಮತ್ ಗ್ರಾಮ ಕುಶಿನಗರ ಜಿಲ್ಲೆ ಉತ್ತರಪ್ರದೇಶ ಇವರು ಮತ್ತು ಅವರ ಊರಿನ ಗರೀಬ್ ಪ್ರಸಾದ್ ಎಂಬುವವರು ಉಡುಪಿಯ ಕೊರಂಗ್ರಪಾಡಿ ಎಂಬಲ್ಲಿ ರೂಂ ಮಾಡಿಕೊಂಡು ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 22/09/2021 ರಂದು ರಾತ್ರಿ 10:10 ಗಂಟೆಗೆ ಗರೀಬ್ ಪ್ರಸಾದನು ಉದ್ಯಾವರ ಗ್ರಾಮದ  ಪೆಟ್ರೋಲ್ ಪಂಪ್ ಹತ್ತಿರ ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರ ಪಶ್ಚಿಮ ಬದಿಯಲ್ಲಿ ನಿಂತಿರುವಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಓರ್ವ ಕಾರು ಚಾಲಕ ತನ್ನ ಕಾರನ್ನು ಅತೀ ವೇಗ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಗರೀಬ್ ಪ್ರಸಾದನಿಗೆ ಡಿಕ್ಕಿ ಹೊಡೆದು ಕಾರನ್ನು ನಿಲ್ಲಿಸದೇ ಪರಾರಿಯಾಗಿದ್ದು ಪರಿಣಾಮ ಗರೀಬ್ ಪ್ರಸಾದನು ತೀವ್ರ ಗಾಯಗೊಂಡು ಅಲ್ಲಿನ ಸ್ಥಳೀಯರು ಆತನನ್ನು ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಗರೀಬ್ ಪ್ರಸಾದನು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 23/09/2021 ರಂದು ಬೆಳಗ್ಗಿನ ಜಾವ 01:45 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 148/2021 ಕಲಂ: 279, 304(A) ಐಪಿಸಿ ಮತ್ತು 134 (ಎ) ಮತ್ತು (ಬಿ) ಐಎಂ ವಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾದ ಶೇಖರ್ (49), ತಂದೆ: ತಿಮ್ಮ ಪೂಜಾರಿ, ವಾಸ: ಡೋರ್ ನಂ: 3-101, ಅಂಬಲಪಾಡಿ, ತೆಂಕುಮನೆ ಕೋಟೆ ಗ್ರಾಮ, ಮತ್ತು ಅಂಚೆ ಉಡುಪಿ ತಾಲೂಕು ಇವರು ದಿನಾಂಕ 22/09/2021 ರಂದು ಸಂಜೆ 4:00 ಗಂಟೆಗೆ 76 ಬಡಗುಬೆಟ್ಟು ಗ್ರಾಮದ ಟೆ.ಎಮ್‌.ಎ ಪೈ ಆಸ್ಪತ್ರೆಯ ಎದುರು ರಸ್ತೆ ದಾಟಲು ರಸ್ತೆ ಬದಿ ನಿಂತಿರುವಾಗ ಜೋಡುಕಟ್ಟೆ ಕಡೆಯಿಂದ ಲಯನ್ ಸರ್ಕಲ್ ಕಡೆಗೆ KA-20-EV-9899 ನೇ ಬುಲೆಟ್ ಸವಾರ ಅಶ್ಮಿತ್ ಶೆಟ್ಟಿ  ತಮ್ಮ ಬುಲೆಟ್ ನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಬದಿಗೆ ಬಂದು ರಸ್ತೆ ದಾಟಲು ನಿಂತಿದ್ದ ಪಿರ್ಯಾದಿದಾರರಿಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಎಡಕೈಗೆ ಮೂಳೆಮುರಿತ, ಹಣೆಗೆ ಮತ್ತು ಎರಡೂ ಕಾಲುಗಳಿಗೆ ತರಚಿದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 59/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾದ ರಮೇಶ್ ಮೈಂದನ್ (52), ತಂದೆ: ದಿ. ಮುತ್ತಯ್ಯ ಮೆಂಡನ್, ವಾಸ: ಶ್ರೀದುರ್ಗಾ ನಿಲಯ, 12-105 ಬಿ, ಕಾನಂಗಿ ರಸ್ತೆ, ಕುತ್ಪಾಡಿ, ಉದ್ಯಾವರ ಉಡುಪಿ ಇವರು ದಿನಾಂಕ 22/09/2021 ರಂದು ರಾತ್ರಿ 7:15 ಗಂಟೆಗೆ ತನ್ನ ಅಣ್ಣ ರಾಘವ ಮೈಂದನ್ (60) ರವರೊಂದಿಗೆ ನಡೆದುಕೊಂಡು ಉದ್ಯಾವರ ಕಡೆಯಿಂದ ಮನೆಯ ಕಡೆಗೆ ಬರೆತ್ತಿರುವಾಗ ಕುತ್ಪಾಡಿ ಗ್ರಾಮದ ಉದ್ಯಾವರ- ಮಲ್ಪೆ ರಸ್ತೆಯಲ್ಲಿ  ಚಿತ್ರ ಮನೆಯ ಮುಂಭಾಗ ಹಿಂದಿನಿಂದ ಅಂದರೆ ಉದ್ಯಾವರ ಕಡೆಯಿಂದ ಮಲ್ಪೆ ಕಡೆಗೆ KA-12-N-0316 ನೇ ಕಾರು ಚಾಲಕ ವೈ. ಶಾಮಸುಂದರ್ ರಾವ್ ಎಂಬುವವರು ತನ್ನ ಕಾರನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಬದಿಗೆ ಬಂದು ರಾಘವ ಮೈಂದನ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ, ರಾಘವ ಮೈಂದನ್ ರವರು ರಸ್ತೆಗೆ ಬಿದ್ದು ಮುಖಕ್ಕೆ, ತಲೆಗೆ ಮತ್ತು ಕೈಕಾಲುಗಳಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 60/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

 • ಕೋಟ: ಪಿರ್ಯಾದಿದಾರರಾದ ಸಂಜೀವ ಪೂಜಾರಿ (50), ತಂದೆ: ಮುತ್ತ ಪೂಜಾರಿ, ವಾಸ: ಮೂಡ್ಲಕಟ್ಟೆ ಕಂದಾವರ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 22/09/2021 ರಂದು 19:00 ಗಂಟೆಯ ಸಮಯಕ್ಕೆ ರೈಲ್ವೇ ಟ್ರ್ಯಾಕ್  ಮ್ಯಾನ್ ಕೆಲಸಕ್ಕೆಂದು ಹೊರಟು  ಕಾವಡಿ ರೈಲ್ವೆ ಬ್ರಿಡ್ಜ್ ನಿಂದ ಕೆದೂರು ಕಡೆಗೆ ರೈಲ್ವೆ ಟ್ರ್ಯಾಕ್ ನಲ್ಲಿ 2 ಕಿಮೀ ನಡೆದುಕೊಂಡು  ಬರುವಾಗ  ವಡ್ಡರ್ಸೆ ಗ್ರಾಮದ ಮಧುವನ ರೈಲ್ವೆ ಬ್ರಿಡ್ಜ ಬಳಿಯ  ರೈಲ್ವೆ ಟ್ರ್ಯಾಕ್ ನ ಪಶ್ಚಿಮ ಬದಿಯಲ್ಲಿ ಮಡ್ ಗಾಂವ್  ನಿಂದ ಮಂಗಳೂರಿಗೆ ಹೋಗುವ ಬಲ ಬದಿಯಲ್ಲಿ ರೈಲ್ವೆ ಹಳಿಯಲ್ಲಿ  ಸುಮಾರು 60 ರಿಂದ 65 ವರ್ಷ ಪ್ರಾಯದ ಅಪರಿಚಿತ ಗಂಡಸು ತಲೆ ಕೆಳಗಾಗಿ ಮುಖ ನೆಲಕ್ಕೆ  ತಾಗಿಕೊಂಡು ಬಿದ್ದಿರುವುದನ್ನು  ಆತನ ಕೈಕಾಲುಗಳು ಮುಂದಕ್ಕೆ ಇದ್ದು  ಸ್ಥಳದಲ್ಲಿಯೇ ಮೃತ ಪಟ್ಟಿರುವುದು  ಕಂಡು ಬಂದಿರುತ್ತದೆ .ಮೃತನು ಮಡ್ ಗಾಂವ್  ನಿಂದ ಮಂಗಳೂರಿಗೆ ಹೋಗುವ ರೈಲಿನಿಂದ ಬಿದ್ದು ಅಥವಾ ರೈಲ್ವೆಪಟ್ಟಿ ಬಳಿ ನಿಂತುಕೊಂಡಿರುವಾಗ  ರೈಲಿನ ಅವಘಡದಿಂದ  ಅಥವಾ ರೈಲಿನಿಂದ ಕೆಳಗೆ ಹಾರಿ ಬಿದ್ದು ಮೃತ ಪಟ್ಟಿರಬಹುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ  32/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿದಾರರಾದ ಉದಯ ಮರಕಾಲ (36), ತಂದೆ: ಶ್ರೀನಿವಾಸ, ವಾಸ: ಮಕರ ಜ್ಯೋತಿ ನಿಲಯ  ಶಾಂತಿ ನಗರ ಮಧುವನ ಕಾವಡಿ ಗ್ರಾಮ ಇವರ ತಾಯಿ ಲಕ್ಷ್ಮಿ(70) ರವರು  ದಿನಾಂಕ 22/09/2021 ರಂದು ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ್ದವರು  ದಿನಾಂಕ 23/09/2021 ರಂದು ಬೆಳಿಗ್ಗೆ 6:30 ಗಂಟೆಗೆ ನೋಡುವಾಗ ಮಲಗಿದ್ದಲ್ಲಿ ಇಲ್ಲದೇ ಇದ್ದು ಸುತ್ತ ಮುತ್ತ ಹುಡುಕಾಡಿದಾಗ ಮನೆಯ ಬಾವಿಯಲ್ಲಿ, ಬಾವಿ ನೀರು ಸೇದುವ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಬಾವಿಯ ರಾಟೆಗೆ ಹಾಕಿರುವ ರಾಡಿಗೆ ಕಟ್ಟಿಬಾವಿಯ ಒಳಗೆ ನೇತಾಡುವ ಸ್ಥಿತಿಯಲ್ಲಿ ಕಂಡು ಬಂದಿದ್ದು, ಲಕ್ಷ್ಮಿ ರವರಿಗೆ ಬಿ ಪಿ ಖಾಯಿಲೆ ಕಾಣಿಸಿಕೊಂಡಿದ್ದು ಯಾರೊಂದಿಗೂ ಸರಿಯಾಗಿ ಮಾತನಾಡದೇ ಇದ್ದು ಮನೆಯಿಂದ ಹೋಗುತ್ತೇನೆಂದು ಪದೇ ಪದೇ ಹೇಳುತ್ತಾ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದು ಇದೇ ಕಾರಣದಿಂದ ಅಥವಾ ಇನ್ನಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು  ಕುತ್ತಿಗೆಗೆ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 33/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾದ ಪ್ರಣವ್ ಟಿ (39), ತಂದೆ: ಜಯರಂಗ ಟಿ, ವಾಸ: ಭಾಗೀರಥಿ,14 ನೇ ಕ್ರಾಸ್, ತೆಳ್ಳಾರ್ ರೋಡ್, ಕಸಬಾ ಗ್ರಾಮ, ಕಾರ್ಕಳ ತಾಲೂಕು ಇವರ ತಂದೆ ಜಯರಂಗ ಟಿ (75) ರವರು ನಿವೃತ್ತ ಪ್ರಾದ್ಯಾಪಕರಾಗಿದ್ದು ಪಿರ್ಯಾದಿದಾರರೊಂದಿಗೆ ವಾಸವಿದ್ದವರು ಈಗ ಒಂದು ತಿಂಗಳಿನಿಂದ ಮಾನಸಿಕ ಖಿನ್ನತೆಯ ಸಮಸ್ಯೆಯಿಂದ ಬಳಲುತ್ತಿದ್ದು ಈ ಬಗ್ಗೆ ಉಡುಪಿ ಬಾಳಿಗ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದರೂ ಗುಣಮುಖರಾಗದ ಕಾರಣ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು, ದಿನಾಂಕ  23/09/2021 ರಂದು ಮದ್ಯಾಹ್ನ 12:40 ಗಂಟೆಯಿಂದ 13:30 ಗಂಟೆಯ ಮಧ್ಯಾವಧಿಯಲ್ಲಿ ಪತ್ನಿ ಮತ್ತು ಸೊಸೆ ಮನೆಯೊಳಗೆ ಇದ್ದಾಗ ಮನೆಯ ಕಾಂಪೌಂಡ್ ಆವರಣದಲ್ಲಿ ಇರುವ ಬಾವಿ ಕಟ್ಟೆಯ ಬಳಿಯ ಶೆಡ್ ನ ಗ್ರಿಲ್ ಗೆ ಲುಂಗಿಕಟ್ಟಿ ಕುತ್ತಿಗೆಗೆ ನೇಣು ಬಿಗಿದು ನೇತಾಡುವ ಸ್ಥಿತಿಯಲ್ಲಿದ್ದವರನ್ನು ಪಿರ್ಯಾದಿದಾರರು ನೋಡಿ ನೆರೆಹೊರೆಯವರ ಸಹಾಯದಿಂದ ಚಿಕಿತ್ಸೆ ಬಗ್ಗೆ ಕಾರ್ಕಳ ನಿಟ್ಟೆ ಗಾಜ್ರಿಯ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು ಜಯರಂಗರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 31/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ಪಿರ್ಯಾದಿದಾರರಾದ ಕೇಶವ ಆಚಾರ್ಯ (54), ತಂದೆ: ಸಂಕ್ರಯ್ಯ ಆಚಾರ್ಯ, ವಾಸ: 3-197(ಎ) ನಲ್ಲೂರು, 80 ಬಡಗಬೆಟ್ಟು ಗ್ರಾಮ, ಪರ್ಕಳ, ಉಡುಪಿ ಇವರ ತಮ್ಮ ರಘುರಾಮರವರಿಗೆ ಒಂದುವರೆ ವರ್ಷಗಳ ಹಿಂದೆ ಅಪಘಾತದಲ್ಲಿ ಕಾಲಿನ ಮೂಳೆ ಮುರಿತ ಉಂಟಾಗಿದ್ದು ಕೆಲಸಕ್ಕೆ ಹೋಗಿತ್ತಿರಲಿಲ್ಲ ಮತ್ತು ಅವರಿಗೆ ವಿಪರೀತ ಮದ್ಯಪಾನ ಸೇವನೆ ಚಟವಿತ್ತು ಆದ್ದರಿಂದ ರಘುರಾಮರವರು ಮದ್ಯಪಾನ ಸೇವನೆ ಹಾಗೂ ಕಾಲು ನೋವು ಸಮಸ್ಸೆಯಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ  ದಿನಾಂಕ 22/09/2021 ರಂದು 18:30 ಗಂಟೆಯಿಂದ ದಿನಾಂಕ 23/09/2021 ರ ಬೆಳಿಗ್ಗೆ 06:45 ಗಂಟೆಯ ಮಧ್ಯಾವದಿಯಲ್ಲಿ ನೆರೆ ಮನೆಯ ಮಾಧವ ಎಂಬುವವರಿಗೆ ಸೇರಿದ ಹಾಡಿಯ ರಿಕ್ಷಾ ಮತ್ತು ಕಾರು ಪಾರ್ಕ್‌ ಮಾಡುವ ಶೆಡ್‌ ಬಳಿಯ ಮರದ ಕೊಂಬೆಗೆ ಶಾಲನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 35/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹೆಬ್ರಿ: ಪಿರ್ಯಾದಿದಾರರಾದ ನವೀನ ನಾಯ್ಕ (23), ತಂದೆ: ಗೋವಿಂದ ನಾಯ್ಕ, ವಾಸ:ಚಾರ ಕೊಂಡೆಜಡ್ಡು ಚಾರ ಗ್ರಾಮ ಹೆಬ್ರಿ ತಾಲೂಕು ಇವರ ತಂದೆ ಗೋವಿಂದ ನಾಯ್ಕ್ (52) ಇವರು ಕೂಲಿ ಕೆಲಸ ಮಾಡಿಕೊಂಡು ದಿನಂಪ್ರತಿ ಮದ್ಯಪಾನವನ್ನು ಮಾಡುವ ಚಟವನ್ನು ಹೊಂದಿದ್ದು. ಇತ್ತೀಚೆಗೆ ಅವರು ಕೆಲಸಕ್ಕೆ ಹೋಗದೇ ಮದ್ಯಪಾನ ಮಾಡಲು ಹಣವು ಇಲ್ಲದೇ ಮಾನಸಿಕ ಖಿನ್ಯತೆಗೆ ಒಳಗಾಗಿ ಜೀವನದಲ್ಲಿ ಜಿಗುಷ್ಯೆಗೊಂಡು ದಿನಾಂಕ 21/09/2021 ರಂದು ಸಂಜೆ 4:00 ಗಂಟೆಗೆ ಮನೆಯಿಂದ ಹೊರಗೆ ಹೋದವರು ದಿನಾಂಕ 23/09/2021 ರಂದು ಬೆಳಿಗ್ಗೆ 10:00 ಗಂಟೆಯ ಮದ್ಯಾವಧಿಯಲ್ಲಿ ಚಾರಾ ಗ್ರಾಮದ ಸೊಳ್ಳೆಕಟ್ಟೆ ಎಂಬಲ್ಲಿನ ಕಾಡು ಪ್ರದೇಶದಲ್ಲಿರುವ ಪೊದೆಗಳ ಮದ್ಯದಲ್ಲಿರುವ ಗಿಡದ ಒಂದು ಕೊಂಬೆಗೆ ನೈಲಾನ್ ಹಗ್ಗವನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದು ಅತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ದೊರೆತಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 32/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.


   

ಇತ್ತೀಚಿನ ನವೀಕರಣ​ : 23-09-2021 05:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080