ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಪಿರ್ಯಾದಿ ಬಾಗವ್ವ ಕಾ ಬಡಿಗೇರ್ ಪ್ರಾಯ: 52 ವರ್ಷ  ಗಂಡ: ದಿ,ಕಾಳಪ್ಪ ಬಡಿಗೇರ್  ವಾಸ: ಮನೆ ನಂಬ್ರ 34, ಗೋವಿಂದ ಆಚಾರ್ಯ ಮಾರ್ಗ, ಬನ್ನಂಜೆ, ಉಡುಪಿ ತಾಲೂಕು ಇವರ  ಮಗನಾದ ರವಿ ಕಾಳಪ್ಪ ಬಡಿಗೇರ ಪ್ರಾಯ: 30 ವರ್ಷ ರವರು ತನ್ನ ತಾಯಿಯೊಂದಿಗೆ ಬನ್ನಂಜೆ ಮನೆ ನಂಬ್ರ 34 ರಲ್ಲಿ ವಾಸ್ತವ್ಯವಿದ್ದು, ಸುಮಾರು 2 ವರ್ಷದ ಹಿಂದೆ ಆತನ ಹೆಂಡತಿ ಮೃತಪಟ್ಟ ಕಾರಣ ವಿಪರೀತ ಮದ್ಯಪಾನ ಮಾಡುವ ಚಟವನ್ನು ಹೊಂದಿದ್ದು, ಅದೇ ಕಾರಣಕ್ಕೆ ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದು,  ದಿನಾಂಕ: 23/08/2022 ರಂದು ಮುಂಜಾನೆ  04:00 ಗಂಟೆಗೆ ಮನೆಯಲ್ಲಿ ಮೃತಪಟ್ಟಿರುವುದಾಗಿದ್ದು,  ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿ ಆರ್  ನಂ 37/2022 ಕಲಂ 174 CrPC ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಲ್ಪೆ: ಶ್ರೀಮತಿ   ಶೈಲಜ  ಎಸ್ ಪ್ರಾಯ 61   ವರ್ಷ  ಇವರು  ದಿನಾಂಕ 01-11-2021  ರಂದು  ಬೆಳಿಗ್ಗೆ   ಪಿರ್ಯಾದಿ ಶ್ರೀ  ಕೃಷ್ಣ  ಮೂರ್ತಿ ಪ್ರಾಯ 50 ವರ್ಷ     ತಂದೆ   ರಂಗ ಆಚಾರ್ಯ ವಾಸ ಶ್ರೀ  ಕೃಷ್ಣ ವೃದ್ದರ ಆಶ್ರಯ ಧಾಮ  ಮೂಡಬೆಟ್ಟು  ಕೊಡವೂರು  ಗ್ರಾಮ  ಎಂಬಲ್ಲಿಗೆ  ಬಂದು  ತನ್ನನ್ನು ಆಶ್ರಮಕ್ಕೆ  ಸೇರಿಸಿಕೊಳ್ಳುವಂತೆ   ತಿಳಿಸಿದ್ದು  ಪಿರ್ಯಾದಿದಾರರು   ಶೈಲಜಾ  ರವರ  ಸಂಬಧಿಕರಿಗೆ  ಕರೆ  ಮಾಡಿ  ವಿಚಾರ  ತಿಳಿಸಿ  ಬಳಿಕ ಶೈಲಜಾ  ಎಸ್ ರವರನ್ನು   ವೃದ್ದರ ಆಶ್ರಮಕ್ಕೆ  ಸೇರಿಸಿಕೊಂಡಿರುತ್ತಾರೆ.  ದಿನಾಂಕ 17-08-2022    ರಂದು  16-00 ಗಂಟೆಗೆ  ಶೈಲಜಾ  ಎಸ್ ರವರು ಯಾವುದೋ ಮಾತ್ರೆ ಸೇವಿಸಿದ  ಬಗ್ಗೆ ಪಿರ್ಯಾದಿದಾರರು ಸಂಶಯ ಗೊಂಡು ಉಡುಪಿ ಜಿಲ್ಲಾ ಆಸ್ಪತ್ರೆಗೆ  ಕರೆದುಕೊಂಡು ಬಂದು   ದಾಖಲಿಸಿದ್ದು ವೈಧ್ಯರು   ಶೈಲಜಾ  ಎಸ್ ರವರನ್ನು  ವಿಚಾರಿಸಿದಾಗ  60 ಬಿ.ಪಿ   ಮಾತ್ರೆಗಳನ್ನು ಸೇವಿಸಿರುವುದಾಗಿ  ತಿಳಿಸಿರುತ್ತಾರೆ. ಶೈಲಜಾ  ಎಸ್ ರವರು  ಉಡುಪಿ ಜಿಲ್ಲಾ ಆಸ್ಪತ್ರೆಯ    ದಾಖಲಾಗಿ  ಚಿಕಿತ್ಸೆ  ಪಡೆಯುತ್ತಿದ್ದವರು  ಚಿಕಿತ್ಸೆ  ಫಲಕಾರಿಯಾಗದೆ  ದಿನಾಂಕ 22-08-2022 ರಂದು 17-55  ಗಂಟೆಗೆ   ಮೃತ ಪಟ್ಟಿರುತ್ತಾರೆ. ಶ್ರೀಮತಿ   ಶೈಲಜಾ  ಎಸ್ ರವರು  ಜೀವನದಲ್ಲಿ ಜಿಗುಪ್ಸೆ ಗೊಂಡು  60 ಬಿ.ಪಿ   ಮಾತ್ರೆಗಳನ್ನು   ಸೇವಿಸಿ ಅಸ್ವಸ್ಥಗೊಂಡು  ಮೃತಪಟ್ಟಿರುತ್ತಾರೆ  .ಈ ಬಗ್ಗೆ ಮಲ್ಪೆ  ಪೊಲೀಸ್‌ ಠಾಣಾ UDR NO  44 /2022 . ಕಲಂ 174 CRPC  ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ

  • ಕಾರ್ಕಳ : ದಿನಾಂಕ 22/08/2022 ರಂದು ಸಂಜೆ 5:30 ಗಂಟೆಗೆ ಕಾರ್ಕಳ ತಾಲೂಕು, ಮುಂಡ್ಕೂರು ಗ್ರಾಮದ ಪೇರೂರು ಎಂಬಲ್ಲಿರುವ ಪ್ರಕರಣದ ಪಿರ್ಯಾದುದಾರರಾದ ಶ್ರೀಮತಿ ರೂಪ (40), ಗಂಡ: ನವೀನ್ ಪೂಜಾರಿ, ವಾಸ: ಪೇರೂರು ಮನೆ, ಮುಂಡ್ಕೂರು ಅಂಚೆ ಮತ್ತು ಗ್ರಾಮಇವರ ದಿನಸಿ ಅಂಗಡಿಯ ಮುಂಭಾಗದಲ್ಲಿ ಹಾದು ಹೋಗುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಲಾರಿ ನಂಬ್ರ AP39UB2799 ನೇಯದರ ಚಾಲಕನು ತನ್ನ ಬಾಬ್ತು ಲಾರಿಯನ್ನು ಸಚ್ಚೇರಿಪೇಟೆ ಕಡೆಯಿಂದ ಜಾರಿಗೆ ಕಟ್ಟೆ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ, ಅದೇ ದಿಕ್ಕಿನಲ್ಲಿ, ಅಂದರೆ ಸಚ್ಚೇರಿಪೇಟೆ ಕಡೆಯಿಂದ ಜಾರಿಗೆ ಕಟ್ಟೆ ಕಡೆಗೆ ಸುರೇಶ್ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ ನಂಬ್ರ KA20U4451 ನೇಯದರ ಹಿಂಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಮೋಟಾರು ಸೈಕಲ್ ಸವಾರನು ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು, ಮೋಟಾರು ಸೈಕಲ್ ಸವಾರನ ಎಡಕಣ್ಣಿನ ಬಳಿ, ಹಣೆಗೆ ಮತ್ತು ಎಡಕೈಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ  ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 106/2022 ಕಲಂ: 279, 337  ಭಾದಸಂ ರಂತೆ ಪ್ರಕರಣ ದಾಖಲಿಸಲಾಗಿದೆ.

ಮನುಷ್ಯ ಕಾಣೆ ಪ್ರಕರಣ

  • ಗಂಗೊಳ್ಳಿ: ಫಿರ್ಯಾದಿ ಅನಿತಾ 26 ವರ್ಷ ಗಂಡ: ಯೋಗೇಂದ್ರ ಆಚಾರ್ಯ ವಾಸ: ಗುಡ್ಡದ ಹೊಸಳ್ಳಿ ಗ್ರಾಮ , ಮಾವಲಿ ಪೋಸ್ಟ್ ಶಿಕಾರಿಪುರ ತಾಲೂಕು ಶಿವಮೊಗ್ಗ ರವರ ಗಂಡನಾದ ಯೋಗೆಂದ್ರ ಆಚಾರ್‌ (36 ವರ್ಷ) ರವರು ದಿನಾಂಕ: 28/07/2022 ರಿಂದ  ಬೈಂದೂರು ತಾಲೂಕು ಮರವಂತೆ ಗ್ರಾಮದ ನಡುಬೆಟ್ಟು ಎಂಬಲ್ಲಿರುವ ತನ್ನ ಅಣ್ಣನಾದ ಭಾಸ್ಕರ ಆಚಾರ್ಯ ರವರ  ಮನೆಗೆ ಬಂದು ವಾಸ್ತವ್ಯವಿದ್ದು  ದಿನಾಂಕ: 15-08-2022 ರಂದು 13:30 ಗಂಟೆಗೆ ಯೋಗೆಂದ್ರ ಆಚಾರ್‌ (36 ವರ್ಷ) ರವರು ತನ್ನಅಣ್ಣನ ಮನೆಯಿಂದ ಮರವಂತೆ ಪೇಟೆಗೆ ಹೋಗಿಬರುವುದಾಗಿ ಹೇಳಿ ಹೋದವರು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು, ಈ ಬಗ್ಗೆ ಸಂಬಂಧಿಕರಲ್ಲಿ  ಹಾಗೂ ಆಸು ಪಾಸಿನಲ್ಲಿ ವಿಚಾರಿಸಿ ಹುಡುಕಾಡಿದಲ್ಲಿ  ಈ ತನಕ ಪತ್ತೆಯಾಗಿರುವುದಿಲ್ಲ.ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  80/2022  ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.

 

ಇತ್ತೀಚಿನ ನವೀಕರಣ​ : 23-08-2022 06:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080