ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

 • ಹೆಬ್ರಿ: : ಪಿರ್ಯಾದಿದಾರರಾದ ಶರತ್ (46), ತಂದೆ: ಜಗನ್ನಾಥ ಶೆಟ್ಟಿ,  ವಾಸ: ಕಲ್ಮನಿ ಬೇಳಂಜೆ ಗ್ರಾಮ ಹೆಬ್ರಿ ತಾಲೂಕು ಇವರ  ಪತ್ನಿಯ ಅಕ್ಕ ನಾಗರತ್ನಾ (48 ) ರವರು ಹೈನುಗಾರಿಕೆ ಕೆಲಸ ಮಾಡಿಕೊಂಡಿದ್ದು ನಾಗರತ್ನ ರವರು ಬೇಳಂಜೆ ಗ್ರಾಮದ ಕಲ್ಮನೆ ಎಂಬಲ್ಲಿ ಹೊಳೆಯ ಬದಿಯಲ್ಲಿರುವ ಗದ್ದೆಯ ಬದಿಯಲ್ಲಿ ದನವನ್ನು ಮೇಯಿಸುತ್ತಾ ನಡೆದು ಕೊಂಡು ಹೋಗುತ್ತಿರುವಾಗ  ಮದ್ಯಾಹ್ನ 3:00 ಗಂಟೆಗೆ ಅವರು ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಹೊಳೆಯ ನೀರಿನಲ್ಲಿ ಮುಳುಗಿ ನೀರಿನ ರಭಸಕ್ಕೆ ತೇಲಿಕೊಂಡು ಮುಂದೆ ಹೋಗಿ ಸುಮಾರು 400 ಮೀಟರ್ ದೂರ ಬೇಳಂಜೆ ಗ್ರಾಮದ ಸಂಪಿಗೆ ಮನೆ ಎಂಬಲ್ಲಿ ಸಂಜೆ 3:45 ಗಂಟೆಗೆ ಹೊಳೆಯಲ್ಲಿ ನಾಗರತ್ನ ಇವರು ಹೊಳೆಯ ಬದಿಯಲ್ಲಿರುವ ಒಂದು ಮರಕ್ಕೆ ತಾಗಿಕೊಂಡು ಬಿದ್ದವರನ್ನು ಅಲ್ಲಿಂದ ಮೇಲಕ್ಕೆ ತಂದು ಹೊಳೆಯ ಬದಿಯಲ್ಲಿ ಮಲಗಿಸಿ ನೋಡಿದಾಗ ಅವರು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 25/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾದ ವನೀತ (48), ಗಂಡ: ದೀಪಕ್ ಪೂಜಾರಿ, ವಾಸ: ಶ್ರೀ ದುರ್ಗಾ ಕೃಪಾ ಅರದಾಲ್ ಮನೆ ಕಾರ್ಕಳ ತಾಲೂಕು  ಮುಂಡ್ಕೂರು ಗ್ರಾಮ ಇವರ ಮಗ ಅಬಿಷೇಕ್(19) ನಿಟ್ಟೆ ಕಾಲೇಜಿನಲ್ಲಿ ಪ್ರಥಮ ವರ್ಷದ ಡಿಪ್ಲೋಮ ವ್ಯಾಸಂಗ ಮಾಡಿಕೊಂಡಿದ್ದು ಪ್ರತಿದಿನ ಕಾಲೇಜಿನಿಂದ ಬಂದ ಬಳಿಕ ಪಿರ್ಯಾದಿದಾರರ ಮನೆಯ ಬಳಿ ಇರುವ ಪಿರ್ಯಾದಿದಾರರ ತಾಯಿಯ ಮನೆಗೆ ಹೊಗುತ್ತಿದ್ದು ಅಲ್ಲಿಯೇ ಉಳಿದುಕೊಂಡು ಬೆಳಿಗ್ಗೆ ಮನೆಗೆ ಬರುತ್ತಿದ್ದು, ದಿನಾಂಕ 22/08/2022 ಸಂಜೆ 04:00 ಗಂಟೆಗೆ ಅಭಿಷೇಕ್ ನಾಳೆ ನನಗೆ ಪರೀಕ್ಷೆ ಇರುವುದಾಗಿ ಓದಲು ಅಜ್ಜಿ ಮನೆಗೆ ಹೋಗುವುದಾಗಿ ಹೇಳಿ ಹೋಗಿದ್ದು ಸಂಜೆ  06:00 ಗಂಟೆಗೆ ಪಿರ್ಯಾದಿದಾರರ ತಾಯಿಯ ಮನೆಯಿಂದ ಜೋರಾಗಿ ಬೊಬ್ಬೆ ಕೇಳಿದ್ದು ಪಿರ್ಯಾದಿದಾರರು ಓಡಿ ಹೋಗಿ ನೋಡಲಾಗಿ ಅಭಿಷೇಕನು  ಕೊಠಡಿಯ ಪಕ್ಕಾಸಿಗೆ ನೈಲಾನ್ ಶಾಲ್ ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿದ್ದು ಆತನನ್ನ ನೇಣಿನಿಂದ ಕೆಳಗಿಳಿಸಿ ಚಿಕಿತ್ಸೆ ಬಗ್ಗೆ ಮುಂಡ್ಕೂರು ಆಳ್ವಾ ಕ್ಲಿನಿಕ್ ಗೆ ಕರೆದುಕೊಂಡು ಬಂದಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಅಬೀಷೆಕ್ ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿದೆ.  ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 26/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ .

ಕಾಣೆ ಪ್ರಕರಣ

 • ಹೆಬ್ರಿ: ಪಿರ್ಯಾದಿದಾರರಾದ ನಾಗರಾಜ (30), ತಂದೆ: ಕೃಷ್ಣಯ್ಯ ಆಚಾರ್ಯ, ವಾಸ: ಕೆ ಇ ಬಿ ಕಛೇರಿ ಬಳಿ ಗಾಂಧಿನಗರ ಚಾರ ಗ್ರಾಮ ಹೆಬ್ರಿ ತಾಲೂಕು ಇವರ  ತಂದೆ ಕೃಷ್ಣಯ್ಯ ಅಚಾರ್ಯ (65)  ಇವರು ಚಾರಾ ಗ್ರಾಮದ ಗಾಂಧಿನಗರ ಎಂಬಲ್ಲಿ ವಾಸ ಮಾಡಿಕೊಂಡಿದ್ದು. ಅವರಿಗೆ 4-5 ವರ್ಷಗಳಿಂದ ಮರೆವು ಕಾಯಿಲೆ ಇದ್ದು. ಅವರು ಈ ಹಿಂದೆ 2-3 ಬಾರಿ ಮನೆಯಿಂದ ಹೊರಗೆ ಹೋದವರು  ಆ ದಿನವೇ ಸಂಜೆಯ ಸಮಯ ಮನೆಗೆ ವಾಪಾಸು ಬರುತ್ತಿದ್ದರು. ದಿನಾಂಕ 18/08/2022 ರಂದು ಅವರು ರಾತ್ರಿ 10:00 ಗಂಟೆಗೆ ಮನೆಯಲ್ಲಿ ಊಟ ಮಾಢಿ ಮಲಗಿದ್ದು, ಮರುದಿನ ದಿನಾಂಕ 19/08/2022 ರಂದು ಬೆಳಿಗ್ಗೆ 06:00 ಗಂಟೆಗೆ ಎಲ್ಲರೂ ಎದ್ದಾಗ ಕೃಷ್ಣಯ್ಯ ಅಚಾರ್ಯ ರವರು ಮನೆಯಲ್ಲಿ ಇರದೇ ಕಾಣೆಯಾಗಿದ್ದು. ಈ ಬಗ್ಗೆ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 37/2022 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.     

ಇತರ ಪ್ರಕರಣ

 • ಶಿರ್ವಾ: ದಿನಾಂಕ 20/08/2022 ರಂದು ರಾಘವೇಂದ್ರ ಸಿ. ಪೊಲೀಸ್‌ ಉಪನಿರೀಕ್ಷಕರು.  ಶಿರ್ವಾ ಪೊಲೀಸ್‌ ಠಾಣೆ ಇವರು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಬೆಳಪು ಗ್ರಾಮದ ಬೆಳಪು ಬಳಿ ಓರ್ವ ವ್ಯಕ್ತಿ ನಿಂತಿದ್ದು, ಆತನು ಮೇಲ್ನೋಟಕ್ಕೆ ಯಾವುದೋ ಅಮಲು ಪದಾರ್ಥ ಸೇವನೆ ಮಾಡಿರುವುದು ಕಂಡು ಬಂದಿದ್ದು ಅತನ ಹೆಸರು ವಿಳಾಸ  ಕೇಳಲಾಗಿ ಮುಸ್ತಾಫ್ (30), ತಂದೆ: ಕೆ.ಪಿ ಹೈದರ್ , ವಾಸ: ವಿನಯನಗರ,ಬೆಳಪು ಗ್ರಾಮ , ಕಾಪು ತಾಲೂಕು ಉಡುಪಿ ಜಿಲ್ಲೆ ಎಂದು ತಿಳಿಸಿದ್ದು,  ಆತನನ್ನು ವಶಕ್ಕೆ  ಪಡೆದು ದಿನಾಂಕ 20/08/2022 ರಂದು  ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು ಆಪಾದಿತನು ಗಾಂಜಾ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ವರದಿ ದಿನಾಂಕ 22/08/2022 ರಂದು ಬಂದಿರುತ್ತದೆ.  ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 56/2022, ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.  
 • ಶಿರ್ವಾ: ದಿನಾಂಕ 20/08/2022 ರಂದು ರಾಘವೇಂದ್ರ ಸಿ. ಪೊಲೀಸ್‌ ಉಪನಿರೀಕ್ಷಕರು, ಶಿರ್ವಾ ಪೊಲೀಸ್‌ ಠಾಣೆ ಇವರು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಬೆಳಪು ಗ್ರಾಮದ ಬೆಳಪು ಬಳಿ ಓರ್ವ ವ್ಯಕ್ತಿ ನಿಂತಿದ್ದು, ಆತನು ಮೇಲ್ನೋಟಕ್ಕೆ ಯಾವುದೋ ಅಮಲು ಪದಾರ್ಥ ಸೇವನೆ ಮಾಡಿರುವುದು ಕಂಡು ಬಂದಿದ್ದು ಅತನ ಹೆಸರು ವಿಳಾಸ  ಕೇಳಲಾಗಿ ಅಶ್ರಫ್ (35) ,ತಂದೆ: ಅಬ್ಬಾಸ್ ,ವಾಸ:  ವಿನಯನಗರ ಬೆಳಪು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆಎಂದು ತಿಳಿಸಿದ್ದು, ಆತನನ್ನು ವಶಕ್ಕೆ  ಪಡೆದು ದಿನಾಂಕ 20/08/2022 ರಂದು  ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆಪಾದಿತನು ಗಾಂಜಾ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ವರದಿ ದಿನಾಂಕ 22/08/2022 ರಂದು ಬಂದಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 57/2022, ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಲ್ಪೆ: ದಿನಾಂಕ 21/08/2022 ರಂದು ಸುಷ್ಮಾ ಜಿ ಭಂಡಾರಿ, ಪೊಲೀಸ್‌ ಉಪನಿರೀಕ್ಷಕರು (ತನಿಖೆ),  ಮಲ್ಪೆ ಪೊಲೀಸ್ ಠಾಣೆ ಇವರು ರೌಂಡ್ಸ ಕರ್ತವ್ಯದಲ್ಲಿರುವಾಗ ಮೂಡುತೋನ್ಸೆ ಗ್ರಾಮದ ನೇಜಾರು  ಜಂಕ್ಷನ್ ಬಳಿ ಒಬ್ಬ ವ್ಯಕ್ತಿ ನಿಂತಿದ್ದುಆತನನ್ನು  ವಿಚಾರಿಸಲಾಗಿ ಆತನ ಹೆಸರು  ರೋಬನ್ ಡಿ ಅಲ್ಮೇಡಾ )(21) ಎಂದು ತಿಳಿಸಿದ್ದು ಆತನ ಬಾಯಿಯಿಂದ ಗಾಂಜಾದಂತಹ ವಾಸನೆ ಬಂದಿದ್ದು, ಗಾಂಜಾದಂತಹ ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಅನುಮಾನ ಇದ್ದು, ಆತನನ್ನು ವೈದ್ಯಕೀಯ ತಪಾಸಣೆ ಬಗ್ಗೆ  ಪ್ರೊಫೆಸರ್ ಅಂಡ್ ಹೆಡ್ ಕೆಎಂಸಿ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿದ್ದು, ಪರೀಕ್ಷಿಸಿದ ವೈದ್ಯರು ರೋಬನ್ ಡಿ ಅಲ್ಮೇಡಾ ಗಾಂಜಾ ಸೇವಿಸಿರುವ ಬಗ್ಗೆ ದಿನಾಂಕ 22/8/2022 ರಂದು ದೃಢ ಪತ್ರ ನೀಡಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾದ ಕ್ರಮಾಂಕ 68/2022 ಕಲಂ: 27(B) NDPS ACT ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ದಿನಾಂಕ 21/08/2022 ರಂದು ನಾರಾಯಣ, ಪೊಲೀಸ್ ಉಪನಿರೀಕ್ಷಕರು, ಸೆನ್‌ ಅಪರಾಧ ಪೊಲೀಸ್‌ ಠಾಣೆ ಇವರುಗಾಂಜಾ ಮಾರಾಟ ಮತ್ತು ಸೇವನೆ ಬಗ್ಗೆ ದಾಳಿ ಹಾಗೂ ಮಾಹಿತಿ ಸಂಗ್ರಹಣೆ ಬಗ್ಗೆ ಉಡುಪಿ, ಮಣಿಪಾಲ, ಕಾರ್ಕಳ ಕಡೆಗಳಲ್ಲಿ ಸಂಚರಿಸಿಕೊಂಡಿರುವಾಗ ಕಾರ್ಕಳ ತಾಲೂಕು, ಕಾರ್ಕಳ ಕಸಬಾ ಗ್ರಾಮದ ರಾಮಸಮುದ್ರ ಕೆರೆಯ ಬಳಿ, ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ವ್ಯಕ್ತಿಯನ್ನು  ವಶಕ್ಕೆ ಪಡೆದು ಮೆಡಿಕಲ್ ತಪಾಸಣೆಗೊಳಪಡಿಸಿದ್ದು, ದಿನಾಂಕ 22/08/2022 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿಯನ್ನು ಸ್ವೀಕರಿಸಿದ್ದು ವರದಿಯಲ್ಲಿ ಯೊಗೀಶ್ ಗಾಣಿಗ (25), ತಂದೆ: ರಾಜು ಗಾಣಿಗ, ವಾಸ: ಅಬ್ಬಾಸ್ ಕಂಪೌಂಡ್, ಮಟ್ಪಾಡಿ ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಇತನು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 45/2022  ಕಲಂ: 27 (b) ಎನ್.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ದಿನಾಂಕ 21/08/2022 ರಂದು ಮಂಜುನಾಥ, ಪೊಲೀಸ್ ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ ಇವರು ಗಾಂಜಾ ಮಾರಾಟ ಮತ್ತು ಸೇವನೆ ಬಗ್ಗೆ ದಾಳಿ ಹಾಗೂ ಮಾಹಿತಿ ಸಂಗ್ರಹಣೆ ಬಗ್ಗೆ ಉಡುಪಿ, ಮಣಿಪಾಲ, ಕಾರ್ಕಳ ಕಡೆಗಳಲ್ಲಿ ಸಂಚರಿಸಿಕೊಂಡಿರುವಾಗ ಕಾರ್ಕಳ ತಾಲೂಕು, ಕಾರ್ಕಳ ಕಸಬಾ ಗ್ರಾಮದ ರಾಮಸಮುದ್ರ ಕೆರೆಯ ಬಳಿ, ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ವ್ಯಕ್ತಿಯನ್ನು  ವಶಕ್ಕೆ ಪಡೆದು ಮೆಡಿಕಲ್ ತಪಾಸಣೆಗೊಳಪಡಿಸಿದ್ದು, ದಿನಾಂಕ 22/08/2022 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿಯನ್ನು ಸ್ವೀಕರಿಸಿದ್ದು, ವರದಿಯಲ್ಲಿ ಶ್ರೇಯಸ್ (20), ತಂದೆ: ಸೋಮಣ್ಣ, ವಾಸ: ಹೊಸನಗರ, ಶಿವಮೊಗ್ಗ ಜಿಲ್ಲೆ, ಪ್ರಸ್ತುತ ವಾಸ: ಡೋ.ನಂಬ್ರ 308, ಸುವಿದಾ ಅಪಾರ್ಟ್‌ಮೆಂಟ್, ಕಾರ್ಕಳ ಕಸಬಾ ಗ್ರಾಮ, ಕಾರ್ಕಳ ತಾಲೂಕು  ಇತನು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 46/2022  ಕಲಂ: 27 (b) ಎನ್.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ದಿನಾಂಕ 21/08/2022 ರಂದು ಮಂಜುನಾಥ, ಪೊಲೀಸ್ ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ಇವರು ಗಾಂಜಾ ಮಾರಾಟ ಮತ್ತು ಸೇವನೆ ಬಗ್ಗೆ ದಾಳಿ ಹಾಗೂ ಮಾಹಿತಿ ಸಂಗ್ರಹಣೆ ಬಗ್ಗೆ ಉಡುಪಿ, ಮಣಿಪಾಲ, ಕಾರ್ಕಳ ಕಡೆಗಳಲ್ಲಿ ಸಂಚರಿಸಿಕೊಂಡಿರುವಾಗ ಕಾರ್ಕಳ ತಾಲೂಕು, ಕಾರ್ಕಳ ಕಸಬಾ ಗ್ರಾಮದ ರಾಮಸಮುದ್ರ ಕೆರೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ವ್ಯಕ್ತಿಯನ್ನು ವಶಕ್ಕೆ ಪಡೆದು ಮೆಡಿಕಲ್ ತಪಾಸಣೆಗೊಳಪಡಿಸಿದ್ದು, ದಿನಾಂಕ 22/08/2022 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿಯನ್ನು ಸ್ವೀಕರಿಸಿದ್ದು, ವರದಿಯಲ್ಲಿ ನಂದೀಶ್ (22), ತಂದೆ: ನಾರಾಯಣ ಪೂಜಾರಿ, ವಾಸ: ಕಲ್ಲಾರ್ ಸುಲ್ಲಿ, ಕೆಲಕುಲೈ ಗ್ರಾಮ, ಸಿದ್ರಮಟ್ಟ ಪೋಸ್ಟ್, ಕೊಪ್ಪ ತಾಲೂಕು, ಪ್ರಸ್ತುತ ವಾಸ: ಡೋ.ನಂಬ್ರ 308, ಸುವಿಧಾ ಅಪಾರ್ಟ್‌ಮೆಂಟ್, ಕಾರ್ಕಳ ಕಸಬಾ ಗ್ರಾಮ, ಕಾರ್ಕಳ ತಾಲೂಕು ಇತನು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 47/2022  ಕಲಂ: 27 (b) ಎನ್.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ದಿನಾಂಕ 20/08/2022 ರಂದು ಪ್ರಮೋದ್‌ ಕುಮಾರ್‌ ಪಿ, ಪೊಲೀಸ್‌ ನಿರೀಕ್ಷಕರು ,  ಉಡುಪಿ  ನಗರ ಠಾಣೆ ಇವರು ಸಿಬ್ಬಂದಿಯವರೊಂದಿಗೆ  ರೌಂಡ್ಸನಲ್ಲಿರುವಾಗ ಉಡುಪಿ  ತಾಲೂಕು  ಕುತ್ಪಾಡಿ  ಗ್ರಾಮದ  ಅನಂತಕೃಷ್ಣ  ನಗರದ ಬಳಿಯ ಸಾರ್ವಜನಿಕ  ಸ್ಥಳದಲ್ಲಿ ಓರ್ವ ಯುವಕನು ಗಾಂಜಾ ಸೇವನೆ ಮಾಡುತ್ತಿರುವುದಾಗಿ ಬಂದ ಮಾಹಿತಿ ದೊರೆತಂತೆ  ಸ್ಥಳಕ್ಕೆ ತಲುಪಿ ಆಪಾದಿತ ಇರ್ಷಾದ್‌ ಖಾನ್‌ (32),  ತಂದೆ: ಅಜೀಝ್‌ ಖಾನ್‌,  ವಾಸ:ಮನೆನಂಬ್ರ 11/698,  ‘ಚಾಂದಿನಿ ಮಂಝಿಲ್‌’,  ಅನಂತಕೃಷ್ಣ ನಗರ, ಕುತ್ಪಾಡಿ  ಗ್ರಾಮ,  ಉಡುಪಿ  ಜಿಲ್ಲೆಎಂಬಾತನನ್ನು ವಶಕ್ಕೆ ಪಡೆದು, ಆತನು  ಗಾಂಜಾ  ಸೇವಿಸಿರುವ ಬಗ್ಗೆ  ಫಾರೆನ್ಸಿಕ್‌ ಮೆಡಿಸಿನ್‌ ವಿಭಾಗ, ಕೆ.ಎಂ.ಸಿ. ಮಣಿಪಾಲ ಇಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ತಜ್ಞ ವರದಿ ಪಡೆಯಲಾಗಿ ಆಪಾದಿತನು ನಿಷೇಧಿತ ಗಾಂಜಾ (Marijuana) ಎಂಬ ಮಾದಕ ವಸ್ತುವನ್ನು ಸೇವಿಸಿರುವುದು  ದೃಢಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 128/2022, ಕಲಂ: 27(B) NDPS Act  ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ದಿನಾಂಕ  20/08/2022 ರಂದು ಪ್ರಮೋದ್‌ ಕುಮಾರ್‌ ಪಿ, ಪೊಲೀಸ್‌ ನಿರೀಕ್ಷಕರು ,  ಉಡುಪಿ  ನಗರ  ಠಾಣೆ ಇವರು  ಸಿಬ್ಬಂದಿಯವರೊಂದಿಗೆ ರೌಂಡ್ಸನಲ್ಲಿರುವಾಗ  ಉಡುಪಿ  ತಾಲೂಕು  ಮೂಡನಿಡಂಬೂರು ಗ್ರಾಮದ ಬೋರ್ಡ್‌ ಹೈಸ್ಕೂಲ್‌ ಬಳಿಯ ಸಾರ್ವಜನಿಕ  ಸ್ಥಳದಲ್ಲಿ ಓರ್ವ ಯುವಕನು ಗಾಂಜಾ ಸೇವನೆ ಮಾಡುತ್ತಿರುವುದಾಗಿ  ಮಾಹಿತಿ  ದೊರೆತಂತೆ  ಸ್ಥಳಕ್ಕೆ ತಲುಪಿ ಆಪಾದಿತ  ಶರ್ವೀನ್‌ (20), ತಂದೆ:ಸ್ಟೀಫನ್‌, ವಾಸ: ಫ್ಲ್ಯಾಟ್‌ನಂ: 606,  ಶಿರಿಬೀಡು,  ಸಿಟಿಬಸ್‌‌ ನಿಲ್ದಾಣದ ಬಳಿ, ಮೂಡನಿಡಂಬೂರು  ಗ್ರಾಮ, ಉಡುಪಿ ಜಿಲ್ಲೆಎಂಬಾತನನ್ನು ವಶಕ್ಕೆ ಪಡೆದು, ಆತನು  ಗಾಂಜಾ  ಸೇವಿಸಿರುವ ಬಗ್ಗೆ  ಫಾರೆನ್ಸಿಕ್‌ ಮೆಡಿಸಿನ್‌ ವಿಭಾಗ, ಕೆ.ಎಂ.ಸಿ. ಮಣಿಪಾಲ ಇಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ತಜ್ಞ ವರದಿ ಪಡೆಯಲಾಗಿ ಆಪಾದಿತನು ನಿಷೇಧಿತ ಗಾಂಜಾ (Marijuana) ಎಂಬ ಮಾದಕ ವಸ್ತುವನ್ನು ಸೇವಿಸಿರುವುದು  ದೃಢಪಟ್ಟಿರುವುದದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 129/2022, ಕಲಂ: 27(B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ .
 • ಉಡುಪಿ: ದಿನಾಂಕ 20/08/2022 ರಂದು ಪ್ರಮೋದ್‌ ಕುಮಾರ್‌ ಪಿ, ಪೊಲೀಸ್‌ ನಿರೀಕ್ಷಕರು ,  ಉಡುಪಿ  ನಗರ  ಠಾಣೆ ಇವರು  ಸಿಬ್ಬಂದಿಯವರೊಂದಿಗೆ   ರೌಂಡ್ಸನಲ್ಲಿರುವಾಗ  ಉಡುಪಿ  ತಾಲೂಕು  ಶಿವಳ್ಳಿ  ಗ್ರಾಮದ ಎಂ.ಜಿ.ಎಂ.  ಕಾಲೇಜು  ಎದುರಿನ  ಸುನಾಗ್‌ ಆಸ್ಪತ್ರೆಯ ಬಳಿಯ ಸಾರ್ವಜನಿಕ  ಸ್ಥಳದಲ್ಲಿ ಓರ್ವ ಯುವಕನು ಗಾಂಜಾ ಸೇವನೆ ಮಾಡುತ್ತಿರುವುದಾಗಿ ಮಾಹಿತಿ  ದೊರೆತಂತೆ  ಸ್ಥಳಕ್ಕೆ ತಲುಪಿ ಆಪಾದಿತ  ಸಮೀದ್‌ (20), ತಂದೆ: ಪ್ರಭಾಕರ  ತೇಜ್‌ಪಾಲ್‌,  ವಾಸ: ಸಮೃದ್ಧಿ  ಹೌಸ್‌,  ಮಾರ್ಪಳ್ಳಿ, ಕೊರಂಗ್ರಪಾಡಿ  ಗ್ರಾಮ,  ಉಡುಪಿ ಜಿಲ್ಲೆಎಂಬಾತನನ್ನು ವಶಕ್ಕೆ ಪಡೆದು, ಆತನು  ಗಾಂಜಾ  ಸೇವಿಸಿರುವ ಬಗ್ಗೆ  ಫಾರೆನ್ಸಿಕ್‌ ಮೆಡಿಸಿನ್‌ ವಿಭಾಗ, ಕೆ.ಎಂ.ಸಿ. ಮಣಿಪಾಲ ಇಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ತಜ್ಞ ವರದಿ ಪಡೆಯಲಾಗಿ ಆಪಾದಿತನು ನಿಷೇಧಿತ ಗಾಂಜಾ (Marijuana) ಎಂಬ ಮಾದಕ ವಸ್ತುವನ್ನು ಸೇವಿಸಿರುವುದು  ದೃಢಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 130/2022, ಕಲಂ: 27(B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.    
 • ಕೋಟ: ದಿನಾಂಕ 22/08/2022 ರಂದು ಸಂಜೆ 5:30 ಗಂಟೆಗೆ ಪಿರ್ಯಾದಿದಾರರಾದ ನಬೀಸಾ (56),  ಗಂಡ:  ಮೊಯಿದಿನ್ ಸಾಹೇಬ್ , ವಾಸ:ಸಾಜಿದಾ ಮಂಜಿಲ್ ಚಿಕ್ಕನಕೆರೆ ಮಣೂರು ಗ್ರಾಮ ಇವರು  ಮನೆಯಲ್ಲಿರುವಾಗ ಆರೋಪಿಗಳಾದ ಆಸೀಫ್ ಆಪತ್ಬಾಂಧವ, ಅಬ್ದುಲ್ ಲತೀಫ್, ಅಬ್ದುಲ್ ರೆಹಮಾನ್ ಹಾಗೂ ಇತರ ಇಬ್ಬರು ಒಟ್ಟಾಗಿ ಸೇರಿಕೊಂಡು ಸಿಲ್ವರ್ ಬಣ್ಣದ KA-20-MC-9030 ನೇ ಓಮಿನಿ ಕಾರಿನಲ್ಲಿ ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರ ಮಗ ಇಬ್ರಾಹಿಂ ರವರ ಹೆಂಡತಿ ಆಸ್ಮಾಳ ವಿಚಾರವಾಗಿ ತಗಾದೆ ತೆಗೆದು ಆರೋಪಿತರ ಪೈಕಿ ಆಸೀಫ್‌ನು ಏಕಾಏಕಿ ಪಿರ್ಯಾದಿದಾರರ ಗಂಡನನ್ನು ದೂಡಿದ್ದು ಆಗ ತಡೆಯಲು ಬಂದ ಪಿರ್ಯಾದಿದಾರರಿಗೆ ಕೈಯಿಂದ ಹೊಡೆದು ಕೆಳಗೆ ದೂಡಿದ್ದು, ಮನೆಯ ಕಿಟಕಿ ಗ್ಲಾಸುಗಳು ಹಾಗೂ ಬಾಗಿಲಿಗೆ ಹೊಡೆದು ಜಖಂಗೊಳಿಸಿರುತ್ತಾರೆ. ಈ ಘಟನೆಯಲ್ಲಿ ಪಿರ್ಯಾದಿದಾರರಿಗೆ ಹಾಗೂ ಅವರ ಗಂಡನಿಗೆ ಮೈಕೈಗೆ ಒಳನೋವು ಮತ್ತು ಮಗ ಇಬ್ರಾಹಿಂ ನ ಎಡಕೈ ಮಧ್ಯದ ಬೆರಳಿಗೆ ರಕ್ತಗಾಯ ಹಾಗೂ ಇನ್ನೋರ್ವ ಮಗ ಹಮೀದ್ ನ ಎದೆಗೆ ಒಳನೋವು ಆಗಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 134/2022 ಕಲಂ: 143, 147, 447, 323, 427, 354 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 23-08-2022 10:00 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080