ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಕಾರ್ಕಳ: ಪಿರ್ಯಾದಿದಾರರಾದ ಸಂದೀಪ್‌ ಶೆಣೈ(38), ತಂದೆ: ರಮೇಶ ಶೆಣೈ, ವಾಸ:ಆಶಾ ದೀಪ, ತೆಳ್ಳಾರು 19 ನೇ ಕ್ರಾಸ್‌, ರಾಘವೇಂದ್ರಪುರ, ಕಾರ್ಕಳ ಕಸಬ ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ 21/08/2021 ರಂದು ಸಂಜೆ ತನ್ನ ಸೈಕಲನ್ನು ಸವಾರಿ ಮಾಡಿಕೊಂಡು ಮನೆಯಿಂದ ಕಾರ್ಕಳ ಕಡೆಗೆ ಹೊರಟಿದ್ದು 18:30 ಗಂಟೆಗೆ ಕಾರ್ಕಳ – ತೆಳ್ಳಾರು ಸಾರ್ವಜನಿಕ ರಸ್ತೆಯ ರಾಘವೇಂದ್ರ ಮಠದ ಬಳಿ ತಲುಪುವಾಗ ತೆಳ್ಳಾರು ಕಡೆಯಿಂದ ಕಾರ್ಕಳ ಕಡೆಗೆ KA-20-MB-8363 ನೇ ನೊಂದಣಿ ಸಂಖ್ಯೆಯ ಕಾರನ್ನು ಅದರ ಚಾಲಕ ಅನಿರುದ್ದ್‌‌ ಪಂಡಿತ್‌ ಅತಿ ವೇಗ ಮತ್ತು ನಿರ್ಲಕ್ಷತನದಿಂದ ಸವಾರಿಮಾಡಿಕೊಂಡು ಬಂದು ಪಿರ್ಯಾದಿದಾರರ ಸೈಕಲಿಗೆ  ಹಿಂದಿನಿಂದ ಡಿಕ್ಕಿ  ಹೊಡೆದ ಪರಿಣಾಮ ಪಿರ್ಯಾದಿದಾರರು ಸೈಕಲ್‌ ಸಮೇತ ಡಾಮಾರು ರಸ್ತೆಗೆ  ಬಿದ್ದು ಪಿರ್ಯಾದಿದಾರರ ಬಲಕೈಮೂಳೆ ಮುರಿತವಾಗಿದ್ದು ಬಲಕಾಲಿನ ಮೊಣಗಂಟಿನ  ಬಳಿ ತರಚಿದ ಗಾಯವಾಗಿರುತ್ತದೆ. ಪಿರ್ಯಾದಿದಾರರು ನಿಟ್ಟೆ  ಗಾಜ್ರಿಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 103/2021  ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಸಂಗಪ್ಪ (30), ತಂದೆ: ನಿಂಗಪ್ಪ, ವಾಸ: ಬೇಗೂರ್ ಕಲಘಟಗಿ, ಕಲಘಟಗಿ ತಾಲೂಕು ದಾರವಾಡ ಜಿಲ್ಲೆ ಇವರು ದಿನಾಂಕ 21/08/2021 ರಂದು ರಾತ್ರಿ 8:00 ಗಂಟೆಗೆ  ತನ್ನ ಲಾರಿ ನಂಬ್ರ KA-25-AB-3978 ನೇದರಲ್ಲಿ ಸಕ್ಕರೆ ಲೋಡ್ ಮಾಡಿಕೊಂಡು ಕ್ಲೀನರ್ ಅಶೋಕನೊಂದಿಗೆ ಬೆಳಗಾವಿಯಿಂದ ಕೇರಳಕ್ಕೆ ಹೊರಟಿದ್ದು, ದಿನಾಂಕ 22/08/2021 ರಂದು ಉಡುಪಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ  ಮಂಗಳೂರು ಕಡೆಗೆ ಹೋಗುತ್ತಿದ್ದಾಗ ಮಧ್ಯಾಹ್ನ 2:00 ಗಂಟೆ ಸಮಯಕ್ಕೆ ಮೂಳೂರಿನ  ಸಿಎಸ್‌ಐ ಚರ್ಚ್‌ ಎದುರುಗಡೆ  ಮಣ್ಣು ರಸ್ತೆಯಲ್ಲಿ ಲಾರಿಯನ್ನು  ನಿಲ್ಲಿಸಿ  ಪಿರ್ಯಾದಿದಾರರು ಮತ್ತು ಕ್ಲೀನರ್ ಅಶೋಕ್ ರವರು ಊಟ ಮಾಡಿ ಲಾರಿಯ ಟಯ್ರ್‌ನ್ನು ಚೆಕ್ ಮಾಡುತ್ತಿರುವಾಗ ಸಂಜೆ ರು 4:00 ಗಂಟೆ ಸಮಯಕ್ಕೆ KA-20-EU-8802 ನೇ ಸ್ಕೂಟರ್ ಸವಾರ ಶರಣ್ ಶೆಟ್ಟಿ ತನ್ನ ಸ್ಕೂಟರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿಮಾಡಿಕೊಂಡು ತೀರ ಎಡಬದಿಯ ಮಣ್ಣು ರಸ್ತೆಗೆ ಬಂದು ಪಿರ್ಯಾದಿದಾರರ ನಿಂತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ  ಸ್ಕೂಟರ್ ಸವಾರ ಸ್ಕೂಟರ್ ಸಮೇತ ಲಾರಿಯ ಹಿಂಬದಿ ಒಳಗೆ ಹೋಗಿ ತಲೆಗೆ ಮತ್ತು ಕೈಕಾಲುಗಳಿಗೆ ಪೆಟ್ಟಾಗಿದ್ದು, ಆತನು ಮಾತಾನಾಡುವ ಸ್ಥಿತಿಯಲ್ಲಿಲ್ಲದೇ ಇದ್ದವನನ್ನು ಪಿರ್ಯಾದಿದಾರರು ಒಂದು ವಾಹನದಲ್ಲಿ ಉಡುಪಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಸಂಜೆ 4:35 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 139/2021  ಕಲಂ 279,  304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಅಸ್ವಾಭಾವಿಕ ಮರಣ ಪ್ರಕರಣಗಳು

  • ಬೈಂದೂರು: ಪಿರ್ಯಾದಿದಾರರಾದ ಪ್ರಮೋದ್ (28), ತಂದೆ: ಶಿವಯ್ಯ ಖಾರ್ವಿ , ವಾಸ;ಚಣ್ಕು ಮನೆ ಅಳಿವೆ ಕೋಡಿ ,ತಾರಾಪತಿ ಪಡುವರಿ  ಗ್ರಾಮ ಮತ್ತು ಬೈಂದೂರು ತಾಲೂಕು ಇವರು ಮೀನುಗಾರಿಕೆ  ಕೆಲಸ ಮಾಡಿಕೊಂಡಿದ್ದು ಉಪ್ಪುಂದದ ಮಂಜುನಾಥ ಖಾರ್ವಿಯವರ ದಿವ್ಯ ಗಣೇಶ ರಾಣಿ ಬಲೆ ದೋಣಿಯಲ್ಲಿ ನಿತಿನ್ ,ರಾಮದಾಸ್ ,ರಾಮಕೃಷ್ಣ,ಶಿವ ,ರಾಮರವರೊಂದಿಗೆ ದಿನಾಂಕ 22/08/2021 ರಂದು ಬೆಳಿಗ್ಗೆ 06:00 ಗಂಟೆಗೆ ದೋಣಿಯಲ್ಲಿ ಹತ್ತಿಕೊಂಡು ತಾರಾಪತಿಯ ಅರಬ್ಬೀ ಸಮುದ್ರದಲ್ಲಿ ಮೀನು ಹಿಡಿಯಲು ರಾಣಿ ಬಲೆ ದೋಣಿಯಲ್ಲಿ ಹೋಗುತ್ತಿರುವಾಗ ಸಮುದ್ರದಲ್ಲಿ ಜೋರಾದ ಅಲೆ ಬಂದು ದೋಣಿಯು ಸ್ವಲ್ಪ ಮಗುಚಿದ್ದರಿಂದ ರಾಮದಾಸ್ ಖಾರ್ವಿ (58) ರವರು ದೋಣಿಯಿಂದ ಆಯತಪ್ಪಿ ಸಮುದ್ರದ ನೀರಿಗೆ ಬಿದ್ದಿದ್ದು ಆ ಸಮಯ ಪಿರ್ಯಾದಿದಾರರ ಜೊತೆಯಲ್ಲಿದ್ದವರೆಲ್ಲರೂ ಸೇರಿ ನೀರಿನಿಂದ ಮೇಲಕ್ಕೆ ಎತ್ತಿ ಉಪಚರಿಸಿದಾಗ ರಾಮದಾಸ್ ಖಾರ್ವಿ ರವರು ಮಾತನಾಡದೇ ಇದ್ದು ಚಿಕಿತ್ಸೆಯ ಬಗ್ಗೆ ಸಮುದ್ರದ ದಡಕ್ಕೆ ದೋಣಿಯಲ್ಲಿ ತಂದು ಅಂಬುಲೆನ್ಸ್ ವಾಹನದಲ್ಲಿ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದು ವೈದ್ಯಾಧಿಕಾರಿಯವರಲ್ಲಿ ಪರೀಕ್ಷಿಸಿದಲ್ಲಿ ರಾಮದಾಸ್ ಖಾರ್ವಿಯವರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 30/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ : ಪಿರ್ಯಾದಿದಾರರಾದ ನೀಲ ಮುರುಗೇಶ (40), ಗಂಡ : ದಿ. ಮುರುಗೇಶ, ವಾಸ: ಎತ್ತಪ್ಪ ನಗರ  ಮಂಗಳ ಕರೈ ಪುದೂರ್ ರಸ್ತೆ ಮತ್ತು ಅಂಚೆ ಕಾರಮಡೈ ಗ್ರಾಮ ಮೇಟುಪಾಲ್ಯ ತಾಲೂಕು ಕೊಯಮತ್ತೂರ್ ಜಿಲ್ಲೆ ತಮಿಳುನಾಡು ಇವರ ತಂಗಿ ದುರ್ಗಾ (32) ಇವರು 13 ವಷಗಳ ಹಿಂದೆ ತಮಿಳುನಾಡಿನ ಕಾರೆಮಡೈ ನಿವಾಸಿ ಮೋಹನ ಎಂಬುವವರನ್ನು ಮದುವೆ ಆಗಿದ್ದು, 10 ವರ್ಷಗಳಿಂದ ಕಾರ್ಕಳದ ಅಯ್ಯಪ್ಪನಗರ ಎಂಬಲ್ಲಿ  ಕೆಲಸ  ಮಾಡಿಕೊಂಡು ಗಂಡನೊಂದಿಗೆ ವಾಸವಾಗಿರುತ್ತಾರೆ. ದಿನಾಂಕ 10/08/2021 ರಂದು ಅವರ ಚಿಕ್ಕಪ್ಪನ ಮಗಳು ಲಕ್ಷ್ಮಿ ದುರ್ಗಳನ್ನು ಕರೆದುಕೊಂಡು ಪಿರ್ಯಾದಿದಾರರ ಮನೆಗೆ  ಬಿಟ್ಟುಹೋಗಿದ್ದು ಅವಳ ಕೆನ್ನೆ ಬಾತುಕೊಂಡಿದ್ದು ವಿಚಾರಿಸಿದಾಗ  ದಿನಾಂಕ 08/08/2021 ರಂದು 09:00 ಗಂಟೆಗೆ ಕಾರ್ಕಳ ಅಯ್ಯಪ್ಪನಗರದಲ್ಲಿರುವ  ತನ್ನ ಮನೆಯಲ್ಲಿ ಜಾರಿ ಬಿದ್ದಿರುವುದಾಗಿ ತಿಳಿಸಿರುತ್ತಾಳೆ. ಅವಳಿಗೆ ನೋವಿಗೆ ಮೆಡಿಕಲ್ ಮತ್ತು ಖಾಸಗಿ ಆಸ್ಪತ್ರೆಯಿಂದ ಮಾತ್ರೆ ತಂದು ಕೊಟ್ಟರೂ ಹಲ್ಲುನೋವಿನ ಊತ ಕಡಿಮೆಯಾಗಿರಲಿಲ್ಲ. ದಿನಾಂಕ 20/08/2021 ರಂದು ನೋವು ಜಾಸ್ತಿಯಾದ ಕಾರಣ ಖಾಸಗಿ ಡಿ.ಜೆ ಆಸ್ಪತ್ರೆಗೆ ಮತ್ತು ಮೇಟುಪಾಳ್ಯಂ  ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋದಾಗ ಟ್ರೀಟ್ ಮೆಂಟ್ ಮಾಡಿಲ್ಲ, ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಕೊಯಮುತ್ತೂರು ಮೆಡಿಕಲ್ ಕಾಲೇಜಿಗೆ  ಕರೆದುಕೊಂಡು ಹೋಗುತ್ತಿದ್ದಾಗ ಪ್ರಾಣಹೋಗಿದ್ದು ಸಂಜೆ 16:10 ಗಂಟೆಗೆ  ಕೊಯಮುತ್ತೂರು ಮೆಡಿಕಲ್ ಕಾಲೇಜಿಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ದುರ್ಗಾಳು  ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 24/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕುಂದಾಪುರ: ಪಿರ್ಯಾದಿದಾರರಾದ ರಮೇಶ (40),  ತಂದೆ: ನರಸಿಂಹ ಮೊಗವೀರ , ವಾಸ: ‘ಎಕದಂತ’, ತೋಪ್ಲು, ಆನಗಳ್ಳಿ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇವರ ತಂದೆ ನರಸಿಂಹ ಮೋಗವೀರ (68) ಇವರು ಪಿರ್ಯಾದಿದಾರರಿಗೆ  ಸುಮಾರು 10 ವರ್ಷ ಇರುವಾಗಲೇ ಮನೆಬಿಟ್ಟು ಹೋಗಿದ್ದು ವಿಪರೀತ ಕುಡಿತದ ಚಟ ಹೊಂದಿರುತ್ತಾರೆ. ಮನೆಬಿಟ್ಟು ಹೋದವರು ಕೋಟೇಶ್ವರ ಪೇಟೆಯ ವಠಾರದಲ್ಲಿ ಅಂಗಡಿ ಜಗಲಿಯಲ್ಲಿ ಮಲಗಿ ದಿನ ಕಳೆಯುತ್ತಿದ್ದರು. ಕುಟುಂಬದವರು ಹಲವಾರು ಬಾರಿ ಮನೆಗೆ ಬರುವಂತೆ ತಿಳಿಸಿದರು ಮನೆಗೆ ಬಂದಿರುವುದಿಲ್ಲ. ದಿನಾಂಕ 22/08/2021 ರಂದು ಮದ್ಯಾಹ್ನ 1:30 ಗಂಟೆಗೆ ಪಿರ್ಯಾದಿದಾರರ ಸಂಬಂಧಿ ಪ್ರಕಾಶ್ ಎಂಬುವವರು ಪಿರ್ಯಾದಿದಾರರ ಮೊಬೈಲ್ ಗೆ ಕರೆಮಾಡಿ ಕೋಟೇಶ್ವರ ಗ್ರಾಮ ಪಂಚಾಯತ್ ಕಛೇರಿಯ ಪೂರ್ವ ಬದಿಯ ಸರ್ವಿಸ್ ರಸ್ತೆಯ ಕಾಂಕ್ರೆಟ್ ಕಟ್ಟೆಯ ಮೇಲೆ ಪಿರ್ಯಾದಿದಾರರ ತಂದೆ ಕುಳಿತಲ್ಲಿಯೇ ಮೃತಪಟ್ಟಿರುವ ವಿಚಾರ ತಿಳಿಸಿದ್ದು ಹೋಗಿ ನೋಡಲಾಗಿ ಅವರು ಮೃತಪಟ್ಟಿರುವುದಾಗಿದೆ. ಪಿರ್ಯಾದಿರಾರರ ತಂದೆ ವಿಪರೀತ ಕುಡಿತದ ಚಟ ಹೊಂದಿದ್ದು ಯಾವುದೋ ಖಾಯಿಲೆಗೆ ತುತ್ತಾಗಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 34/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಕೆ.ಮೂಡೂರ ಕೊಠಾರಿ, ತಂದೆ: ದಿ.ಕುಷ್ಟು ಕೊಠಾರಿ, ವಾಸ: ಶ್ರೀ ದುರ್ಗಾ,ಬಿಜೂರು ಗ್ರಾಮ, ದೀಟಿ ರಸ್ತೆ ಬೈಂದೂರು ತಾಲೂಕು ಇವರ ಮಗ ಶಶಾಂಕ್ (21) ರವರು ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದು ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣಗೊಂಡ ಬಗ್ಗೆ ಒಮ್ಮೊಮ್ಮೆ ಮನೆಯಲ್ಲಿ ಮೌನವಾಗಿ ಕುಳಿತುಕೊಳ್ಳುತ್ತಿದ್ದುದನ್ನು ನೋಡಿ ಪಿರ್ಯಾದಿದಾರರು ಆತನಿಗೆ ಬುದ್ಧಿವಾದ ಹೇಳುತ್ತಿದ್ದರು. ದಿನಾಂಕ 22/08/2021 ರಂದು ಪಿರ್ಯಾದಿದಾರರು ಹೆಂಡತಿ, ಮಗಳು ಹಾಗೂ ಮಗ ಶಶಾಂಕ್ ನೊಂದಿಗೆ ನಾವುಂದದ ಸ್ಕಂದ ಹಾಲ್ ನಲ್ಲಿ ಇರುವ ಸಂಬಂಧಿಕರ ಸೀಮಂತ್ ಕಾರ್ಯಕ್ರಮಕ್ಕೆ ಹೋಗಿದ್ದು  ಪಿರ್ಯಾದಿದಾರರ ಮಗ ಶಶಾಂಕನು ತಾನು ಮನೆಗೆ ಹೋಗುವುದಾಗಿ ಹೇಳಿ ಮನೆಯ ಬೀಗದ ಕೀ ತೆಗೆದುಕೊಂಡು ಬಂದಿದ್ದು ಪಿರ್ಯಾದಿದಾರರು ಹೆಂಡತಿ ಮಗಳೊಂದಿಗೆ 15:00 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ಚಾಚಿಕೊಂಡಿದ್ದು  ಮನೆಯ ಬಾಗಿಲನ್ನು ದೂಡಿ ಒಳಗೆ ಹೋದಾಗ ಶಶಾಂಕನು ಹಾಲ್ ನ ಮಾಡಿಗೆ ಹೋಗುವ ಮೆಟ್ಟಿಲಿನ ಮೇಲೆ ಮಾಡಿಗೆ ಹಾಕಿದ ಕಬ್ಬಿಣದ ಹುಕ್ಕಿಗೆ ನೈಲಾನ್ ಬಟ್ಟೆಯಿಂದ ನೇಣು ಬಿಗಿದುಕೊಂಡು ನೇತಾಡುವುದು ಕಂಡು ಬಂದಿದ್ದು ಕುತ್ತಿಗೆಗೆ ಹಾಕಿಕೊಂಡ ನೈಲಾನ ಬಟ್ಟೆ ಕತ್ತರಿಸಿ ಶಶಾಂಕನನ್ನು ಅಂಬುಲೆನ್ಸ್ ವಾಹನದಲ್ಲಿ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಲ್ಲಿ ವೈದ್ಯರು ಪರೀಕ್ಷಿಸಿ ಶಶಾಂಕ್ ಮೃತ ಪಟ್ಟಿರುವುದಾಗಿ ದೃಢಪಡಿಸಿದ್ದು, ಮೃತ ಶಶಾಂಕ್ ನು ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣನಾದ ಬಗ್ಗೆ ಅದೇ ಚಿಂತೆಯಲ್ಲಿ  ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 22/08/2021 ರಂದು ಮದ್ಯಾಹ್ನ 14:00 ಗಂಟೆಯಿಂದ 15:00 ಗಂಟೆಯ ಮಧ್ಯಾವಧಿಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 31/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

  • ಅಜೆಕಾರು: ದಿನಾಂಕ 22/08/2021 ರಂದು ಕಾರ್ಕಳ ತಾಲೂಕು ಕೆರ್ವಾಶೆ ಗ್ರಾಮದ ಕೆರ್ವಾಶೆ ದೂಪೆಹಾಡಿ ಎಂಬಲ್ಲಿ ಚಂದ್ರನ ವೈನ್ಸ್ ಹಿಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪಿಟು ಜುಗಾರಿ ಆಟ ನಡೆಸುತ್ತಿರುವುದಾಗಿ ಶುಭಕರ್, ಪೊಲೀಸ್‌ ಉಪನಿರೀಕ್ಷಕರು, ಅಜೆಕಾರು ಪೊಲೀಸ್‌ ಠಾಣೆ ಇವರಿಗೆ  ದೊರೆತ ವರ್ತಮಾನದಂತೆ ದಾಳಿ ನಡೆಸಿ ಆರೋಪಿಗಳಾದ ರಾಮ ಶೆಟ್ಟಿ, ಸುಧೀಪ್, ಸಂದೀಪ್, ಸಂತೋಷ್, ಆನಂದ ಇವರನ್ನು ವಶಕ್ಕೆ ಪಡೆದು ಆರೋಪಿತರು ಇಸ್ಪೀಟ್‌ ಜುಗಾರಿ ಆಟಕ್ಕೆ ಬಳಸಿದ 864/- ರೂಪಾಯಿ, 52 ಇಸ್ಪೀಟ್‌ ಎಲೆಗಳು, ಹಳೆಯ ಪ್ಲಾಸ್ಟಿಕ್ ಬ್ಯಾನರನ್ನು ಹಾಗೂ ಮೋಟಾರು ಸೈಕಲ್ ನಂಬ್ರ KA-20-ER-3013 ನೇಯದನ್ನು ಸ್ವಾಧೀನಪಡಿಕೊಂಡಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 21/2021  ಕಲಂ: 87 KP Act ರಂತೆ ಪ್ರಕರಣ ದಾಖಲಾಗಿರುತ್ತದೆ.      

ಇತ್ತೀಚಿನ ನವೀಕರಣ​ : 23-08-2021 09:55 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080