ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ಜೈಸನ್ ಎಂ. ಡಿ (51), ತಂದೆ: ಎಂ ಡಿ ಜೋಯಿ, ವಾಸ: ನಾಗರಮಕ್ಕಿ , ಯಡ್ತರೆ ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ 21/07/2022 ರಂದು 12:45 ಗಂಟೆಗೆ ಬೈಂದೂರಿನಿಂದ ಅವರ ಮನೆಗೆ ಅವರ ಮೋಟಾರು ಸೈಕಲ್ ನಲ್ಲಿ ಕಡ್ಕೆ ಮಾರ್ಗವಾಗಿ ಯಡ್ತರೆ ಗ್ರಾಮದ ಕಡ್ಕೆ ಬೀರೇಶ್ವರ ದೇವಸ್ಥಾನದ  ಬಳಿ ಕಾಂಕ್ರೀಟ್ ರಸ್ತೆಯಲ್ಲಿ ಹೋಗುತ್ತಿರುವಾಗ  ಅವರ ಹಿಂದಿನಿಂದ  KA-47-V-9992 ನೇ ಮೋಟಾರು ಸೈಕಲ್ ಸವಾರನು ಸಹ ಸವಾರನನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ನ್ನು ಓವರ್ ಟೇಕ್ ಮಾಡಿ ಮುಂದೆ ಹೋಗುತ್ತಿರುವಾಗ ಮೋಟಾರ್ ಸೈಕಲ್ ಸವಾರನು ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಮೋಟಾರು ಸೈಕಲ್ ಸವಾರನ ಹತೋಟಿ ತಪ್ಪಿ ಸ್ಕಿಡ್ ಆಗಿ ಸವಾರ ಹಾಗೂ ಸಹ ಸವಾರ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು  ಆಗ ಪಿರ್ಯಾದಿದಾರರು ಅಲ್ಲಿಗೆ ಬಂದ ವಿಜಯ ಗೊಂಡ ಎಂಬುವವರೊಂದಿಗೆ ಸೇರಿ ಎತ್ತಿ ಉಪಚರಿಸಿದ್ದು  ಮೋಟಾರು ಸೈಕಲ್ ಸವಾರ ನಾರಾಯಣ ಗೊಂಡ ರವರಿಗೆ  ಹಣೆಗೆ ಬಾಯಿಗೆ ರಕ್ತಗಾಯ,ಕೈ ಕಾಲು ಗಳಿಗೆ ತರಚಿದ ಗಾಯವಾಗಿದ್ದು , ಸಹ ಸವಾರ ಸಂಕಯ್ಯ ಗೊಂಡ ರವರಿಗೆ  ತಲೆಗೆ ತೀವ್ರ ಸ್ವರೂಪದ ರಕ್ತ ಗಾಯ ಹಾಗೂ ಎರಡೂ ಕೈ ಹಾಗೂ ಕಾಲುಗಳಿಗೆ ತರಚಿದ ಗಾಯವಾಗಿರುತ್ತದೆ. ಗಾಯಾಳುಗಳನ್ನು ಒಂದು ಅಂಬುಲೆನ್ಸ್ ನಲ್ಲಿ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಲ್ಲಿ  ಅಲ್ಲಿಯ ವೈದ್ಯರು  ಪರೀಕ್ಷೀಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಹೋಗಲು ಸೂಚಿಸಿದ್ದು ನಂತರ ಗಾಯಾಳುಗಳನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ 108 ಅಂಬುಲೆನ್ಸ್ ನಲ್ಲಿ ಚಿಕಿತ್ಸೆ  ಬಗ್ಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 143/2022 ಕಲಂ: 279 , 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ರೇಖಾ (32), ಗಂಡ: ವೆಂಕಟೇಶ್‌ ‌ನಾಗರಾಜ್‌, ವಾಸ: ದಿಲಿಪ್‌ರವರ ಬಾಡಿಗೆ ಮನೆ, ಕರಂಬಳ್ಳಿ ಜನತಾ ಕಾಲೋನಿ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಇವರ ಗಂಡ ವೆಂಟೇಶ್‌ ನಾಗರಾಜ್‌ (32) ರವರು ದಿನಾಂಕ 19/07/2022 ರಂದು 17:00 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಉಡುಪಿ ಸಿಟಿ ಬಸ್‌ನಿಲ್ದಾಣದಲ್ಲಿ ಭಾಸ್ಕರ ಎಂಬುವವರಿಗೆ ಅವರ ದ್ವಿಚಕ್ರ ವಾಹನವನ್ನು ನೀಡಿ ಹೋದವರು ವಾಪಾಸು ಮನೆಗೆ ಬಾರದೇ, ಸಂಬಂಧಿಕರ ಮನೆಗೂ ಹೋಗದೇ, ಮೊಬೈಲ್‌ ಸಂಪರ್ಕಕ್ಕೂ ಸಿಗದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 117/2022 ಕಲಂ: ಗಂಡಸು ಕಾಣೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಶಂಕರನಾರಾಯಣ: ದಿನಾಂಕ 16/07/2022  ರಂದು  ಮದ್ಯಾಹ್ನ 12:30 ಗಂಟಯಿಂದ 21/07/2022 ರ ಬೆಳಿಗ್ಗೆ 08:00 ಗಂಟೆಯ  ಮದ್ಯಾವಧಿಯಲ್ಲಿ ಯಾರೋ ಕಳ್ಳರು  ಪಿರ್ಯಾದಿದಾರರಾದ ಡಿ. ಭರತ್ ಕಾಮತ್ (47), ತಂದೆ:  ಡಿ. ಶ್ರೀನಿವಾಸ ಕಾಮತ್,  ದಕ್ಕೆರ ಬಾಳು ಜನ್ಸಾಲೆ ಸಿದ್ದಾಪುರ ಗ್ರಾಮ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇವರ ಕುಟುಂಬದ ಬ್ರಹ್ಮಸ್ಥಾನ ಎಂಬ ದೈವ ಸ್ಥಾನದ ಬಾಗಿಲನ್ನು ಮುರಿದು  ಒಳ ಪ್ರವೇಶಿಸಿ ದೈವಸ್ಥಾನದ  ಕಾಣಿಕೆ ಹುಂಡಿಯನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಕಳವು ಮಾಡಿಕೊಂಡು ಹೋದ ಕಾಣಿಕೆ ಹುಂಡಿಯಲ್ಲಿ 2000/- ರಿಂದ  3000/- ರೂಪಾಯಿ ವರೆಗೆ ಕಾಣಿಕೆ ಹಣ ಇರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 71/2022  ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿದಾರರಾದ ಸೋನಿಕಾ (29), ತಂದೆ: ವಿಠಲ ಅಂಚನ್, ವಾಸ: ಕೋಟಿಬೆಟ್ಟು ಹೌಸ್, ಮಟ್ಟಾರ್ ಅಂಚೆ, ಶಿರ್ವ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ 08/11/2021 ರಂದು ಕಾರ್ಕಳ ತಾಲೂಕು ಇವರು ಇನ್ನಾ ಗ್ರಾಮ ನಿವಾಸಿ 1 ನೇ ಆರೋಪಿ ಪ್ರವೀಣ್ ಎನ್ ಅಮೀನ್ ಎಂಬುವವರ ಜೊತೆ ಮದುವೆಯಾಗಿದ್ದು, ಮದುವೆಯ ಸಮಯ ಪಿರ್ಯಾದಿದಾರರ ಮನೆಯವರು ಆರೋಪಿತನಿಗೆ 2 ಲಕ್ಷ ರೂಪಾಯಿ ಮತ್ತು 10 ಪವನ್ ಚಿನ್ನವನ್ನು ವರದಕ್ಷಿಣೆಯಾಗಿ ನೀಡಿರುತ್ತಾರೆ. ನಂತರ ಪಿರ್ಯಾದಿದಾರರು ಅವರ ಗಂಡನ ಮನೆಗೆ ತೆರಳಿದ್ದು, ಮರುದಿನದಿಂದಲೇ 1 ನೇ ಆರೋಪಿತನು ಪಿರ್ಯಾದಿದಾರರಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದು ರಾತ್ರಿ ವೇಳೆ ಮದ್ಯಪಾನ ಮಾಡಿಕೊಂಡು ಬಂದು ಚಿತ್ರಹಿಂಸೆ ನೀಡಿರುತ್ತಾರೆ. ಅದಾದ ಒಂದು ತಿಂಗಳ ನಂತರ ಪಿರ್ಯಾದಿದಾರರು ಹಾಗೂ 1 ನೇ ಆರೋಪಿತನು ಮುಂಬೈಗೆ ತೆರಳಿದ್ದು, ಅಲ್ಲಿ 1ನೇ ಆರೋಪಿತ ಮತ್ತು 2 ನೇ ಆರೋಪಿತೆ ಸವಿತಾ (35), ಕೋಂ: ರಾಮ ಕುಂದರ್, ವಾಸ: 4 ನೇ ಮಹಡಿ, ಮೋಹನ್ ಸ್ಮೃತಿ ಬಿಲ್ಡಿಂಗ್, ಕಿಸಾನ್ ನಗರ್, ನಂ. 2, ರೋಡ್‌ ನಂ 16, ಈಗಲ್ ಎಸ್ಟೇಟ್, ಥಾಣೆ, ಮಹಾರಾಷ್ಟ್ರ ರಾಜ್ಯ ಇಬ್ಬರೂ ಸೇರಿ ಪಿರ್ಯಾದಿದಾರರನ್ನು ರೂಮಿನಲ್ಲಿ ಅಕ್ರಮವಾಗಿ ಕೂಡಿ ಹಾಕಿ ಚಿತ್ರ ಹಿಂಸೆಯನ್ನು ನೀಡಿ, ಈ ವಿಷಯವನ್ನು ಮನೆಯವರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ. ಅಲ್ಲದೇ 1ನೇ ಆರೋಪಿತನು ತನಗೆ ನೀಡಿರುವ ವರದಕ್ಷಿಣೆ ಕಡೆಮೆಯಾಗಿದ್ದು, ಬೇರೆ ವ್ಯವಹಾರಕ್ಕಾಗಿ 10 ಲಕ್ಷ ರೂ ಹಣವನ್ನು ತರುವಂತೆ ಪೀಡಿಸಿರುತ್ತಾನೆ. ನಂತರ ಪಿರ್ಯಾದಿದಾರರು ದಿನಾಂಕ 11/05/2022 ರಂದು ಅಲ್ಲಿಂದ ತನ್ನ ತಂದೆಯ ಮನೆಗೆ ಬಂದಿರುವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 91/2022, ಕಲಂ: 498(A), 342, 506 r/w 34 IPC ಮತ್ತು ಕಲಂ: 3, 4, ವರದಕ್ಷಿಣೆ ನಿಷೇಧ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-07-2022 09:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080