ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಪ್ರಶಾಂತ ವೈ (26), ತಂದೆ: ವಿಜಯ ಪೂಜಾರಿ, ವಾಸ: ಹದ್ದಿನ ಬೆಟ್ಟು ಮೂಡಹಡು ಗ್ರಾಮ ಇವರು ದಿನಾಂಕ 08/07/2022 ರಂದು ಬೆಳಿಗ್ಗೆ 9:30 ಗಂಟೆಗೆ ತನ್ನ KA-20-X-9767 ಮೋಟಾರ್‌ ಸೈಕಲ್‌ ನಲ್ಲಿ ಉಡುಪಿಗೆ ಹೋಗಿ ನಂತರ ರಾತ್ರಿ 10:30 ಗಂಟೆಗೆ ಮನೆಗೆ  ಬಂದು ಮನೆಯ ಪಕ್ಕದಲ್ಲಿರುವ ನಾಗಬನದ ಕಟ್ಟೆಯ ಬಳಿಯಲ್ಲಿ ಎಂದಿನಂತೆ ಬೈಕನ್ನು ನಿಲ್ಲಿಸಿದ್ದು ಬೆಳಿಗ್ಗೆ 5:30 ಗಂಟೆಗೆ ಎದ್ದು ಯೋಗ ತರಗತಿಗೆ ಹೋಗಲು  ಬೈಕನ್ನು ನೋಡಿದಾಗ ಬೈಕ್ ಸ್ಥಳದಲ್ಲಿ ಇರದೇ ಇದ್ದು ಈ ಬಗ್ಗೆ ಸ್ಥಳೀಯವಾಗಿ ಹಾಗೂ ಸ್ನೇಹಿತ ರಲ್ಲಿ ವಿಚಾರಿಸಿದಲ್ಲಿ  ಮೋಟಾರ್ ಸೈಕಲ್ ಪತ್ತೆಯಾಗದೇ ಇದ್ದು , ದಿನಾಂಕ 08/07/2022 ರಂದು 22:30 ಗಂಟೆಯಿಂದ  ದಿನಾಂಕ 09/07/2022 ರಂದು ಬೆಳಿಗ್ಗೆ 05:30 ಗಂಟೆಯ ಮದ್ಯಾವದಿಯಲ್ಲಿ ಯಾರೋ ಕಳ್ಳರು ಮೊಟಾರ್ ಸೈಕಲ ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 114/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಅಪಘಾತ ಪ್ರಕರಣ 

  • ಉಡುಪಿ: ಪಿರ್ಯಾದಿದಾರರಾದ ರತೀಶ್ ಭಂಡಾರಿ (23), ತಂದೆ: ಶೇಷಗಿರಿ ಭಂಡಾರಿ ,ವಾಸ: ಮನೆ ನಂಬ್ರ 8-3-11, ಕುಂಜಿಬೆಟ್ಟು, ಮೀನು ಮಾರ್ಕೆಟ್ ಹತ್ತಿರ, ಕುಂಜಿಬೆಟ್ಟು ಅಂಚೆ, ಶಿವಳ್ಳಿ ಗ್ರಾಮ,ಉಡುಪಿ ತಾಲೂಕು ಮತ್ತು ಜಿಲ್ ಇವರ ತಂದೆ ಶೇಷಗಿರಿ ಪ್ರಾಯ 56 ವರ್ಷ ರವರು ಉಡುಪಿ ಕೃಷ್ಣ ಸ್ಟೋರ್ಸ್ ನಲ್ಲಿ ಸಾಮಾಗ್ರಿಗಳನ್ನು ಕಟ್ಟಿ ಕೊಡುವ ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ 22/072022 ರಂದು ಶೇಷಗಿರಿ ರವರು ರಾತ್ರಿ ಕೆಲಸ ಮುಗಿಸಿ ಮನೆಯಾದ ಕಡಿಯಾಳಿಗೆ ನಡೆದುಕೊಂಡು ಬರುತ್ತಿರುವಾಗ ರಾತ್ರಿ 9:00 ಗಂಟೆಗೆ ಶಿವಳ್ಳಿ ಗ್ರಾಮದ ಕಡಿಯಾಳಿ ಅನೀಶ್ ಟ್ರೇಡರ್ಸ್ ಎದುರುಗಡೆ ಹಾದು ಹೋಗಿರುವ ರಾಹೆ-169(A) ನೇ ಸಾರ್ವಜನಿಕ ಕಾಂಕ್ರೀಟ್ ರಸ್ತೆಯ ಬದಿಯಲ್ಲಿ ನಡದುಕೊಂಡು ಬರುತ್ತಿರುವಾಗ ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ KA-20-EX-4583ನೇ ಬುಲೆಟ್ ಸವಾರ ಪ್ರಶಾಂತ್ ತಾನು ಸವಾರಿ ಮಾಡಿಕೊಂಡು ಬರುತ್ತಿದ್ದ ಬುಲೆಟ್‌ನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಪಿರ್ಯಾದಿದಾರರ ತಂದೆಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು, ತಲೆಯ ಎಡಬದಿ ಗಂಬೀರ ಸ್ವರೂಪದ ಗುದ್ದಿದ ಒಳ ಜಖಂ,ಎಡಕಣ್ಣಿನಲ್ಲಿ ಊದಿದ ಜಖಂ ಮತ್ತು ಎಡಕಾಲಿನ ಪಾದದ ಬಳಿ ರಕ್ತ ಗಾಯ ಆಗಿರುತ್ತದೆ. ಅಲ್ಲದೇ ಅಫಗಾತಪಡಿಸಿದ ಬುಲೆಟ್ ಸವಾರನು ರಸ್ತೆಗೆ ಬಿದ್ದು, ಸಣ್ಣಪುಟ್ಟ ಗಾಯವಾಗಿರುತ್ತದೆ. ಗಂಬೀರ ಗಾಯಗೊಂಡ ಪಿರ್ಯಾದಿದಾರರ ತಂದೆಯನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ವೈದ್ಯಕೀಯ ವೆಚ್ಚವು ಜಾಸ್ತಿಯಾಗುತ್ತದೆ ಎಂಬುದಾಗಿ ಅಲ್ಲಿಂದ ಬಿಡುಗಡೆಗೊಳಿಸಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿನ ವೈದ್ಯಾಧಿಕಾರಿಯವರು ಪಿರ್ಯಾದಿದಾರರ ತಂದೆಯನ್ನುಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುವುದಾಗಿ ದೃಡೀಕರಿಸಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 56/2022 ಕಲಂ: 279, 337, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಅಸ್ವಾಭಾವಿಕ ಮರಣ ಪ್ರಕರಣ 

  • ಶಿರ್ವಾ: ಪಿರ್ಯಾದಿದಾರರಾದ ಗಣೇಶ್ (55) ,ತಂದೆ: ದಿ. ಕಾಳು, ವಾಸ: ಮನೆ:1-78 ಜಾಲಮೇಲು ಮನೆ, ಜಾಲ ಮೇಲು ಪೋಸ್ಟ್ ಪೆರ್ನಾಲು ಪಿಲಾರು ಗ್ರಾಮ.ಶಿರ್ವ ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ತಮ್ಮ ಲಕ್ಷ್ಮಣ (35) ಮಲ್ಲಿಗೆ ಹೂ ಚೆಂಡ್ ಕಟ್ಟುವ ಕೆಲಸ ಮಾಡಿಕೊಂಡಿದ್ದು, ಅವಿವಾಹಿತನಾಗಿರುತ್ತಾರೆ. ದಿನಾಂಕ 19/7/2022 ರಂದು ಲಕ್ಷ್ಣಣ ರವರು ಹುಷಾರಿಲ್ಲದೇ ಮನೆಯಲ್ಲಿಯೇ ಇದ್ದು ತನಗೆ ತುಂಬಾ ಕೈ ಕಾಲು ನೋವು ಹಾಗೂ ಉಸಿರಾಟದ ತೊಂದರೆಯಾಗುತ್ತಿದೆ ಕೈ ಕಾಲಿನಲ್ಲಿ ಬಲ ಇಲ್ಲದ ಹಾಗೆ ಆಗುತ್ತಿದೆ ಎಂದು ತಿಳಿಸಿದಂತೆ ಕೂಡಲೇ ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದ್ದು, ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿ ಪರೀಕ್ಷಿಸಿದ ವೈದ್ಯರು ಲಕ್ಷ್ಮಣ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಲಕ್ಮಣರಿಗೆ ಲೋ ಬಿ.ಪಿ ಮತ್ತು ಉಸಿರಾಟದ ತೊಂದರೆಯಿಂದ ದಿನಾಂಕ 23/7/22 ರಂದು ಬೆಳಿಗ್ಗೆ .10:30 ಗಂಟೆಯಿಂದ 11:05 ಗಂಟೆಯ ನಡುವಿನ ಅವಧಿಯಲ್ಲಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 18 /2022 ಕಲಂ:174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-07-2022 06:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080