ಅಭಿಪ್ರಾಯ / ಸಲಹೆಗಳು

 ಉಡುಪಿ CEN ಅಪರಾಧ ಪೊಲೀಸರ ಕಾರ್ಯಾಚರಣೆ 20 ಕಿಲೋ, 614 ಗ್ರಾಂ ಗಾಂಜಾ. Toyota ಕಂಪೆನಿಯ Glanza ಕಾರು ಹಾಗೂ 3 ಮೊಬೈಲ್ ಹ್ಯಾಂಡ್ ಸೆಟ್ ಗಳು ವಶ ಮೂವರು ಆರೋಪಿಗಳ ಬಂಧನ

 

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ವಿಷ್ಣುವರ್ಧನ, ಐ.ಪಿ.ಎಸ್. ಇವರ ನಿರ್ದೇಶನದಲ್ಲಿ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎಸ್.ಟಿ ಸಿದ್ದಲಿಂಗಪ್ಪ ಇವರ ಮಾರ್ಗದರ್ಶನದಲ್ಲಿ, ಉಡುಪಿ ಜಿಲ್ಲಾ CEN ಅಪರಾಧ ಪೊಲೀಸ್ ಠಾಣಾ ನಿರೀಕ್ಷಕರಾದ ಮಂಜುನಾಥ ಇವರಿಗೆ ದಿನಾಂಕ: 23-07-2022 ರಂದು ದೊರೆತ ಖಚಿತ ಮಾಹಿತಿಯ ಮೇರೆಗೆ ಅವರು ಮೇಲಾಧಿಕಾರಿಯವರ ಅನುಮತಿ ಪಡೆದುಕೊಂಡು ಪಂಚರು,ಪತ್ರಾಂಕಿತ ಅಧಿಕಾರಿ, ಹಾಗೂ ಸಿಬ್ಬಂದಿಯವರ ಸಹಕಾರದೊಂದಿಗೆ ಬೆಳಿಗ್ಗೆ 11:45 ಗಂಟೆ ಸುಮಾರಿಗೆ ಉಡುಪಿ ತಾಲೂಕು ಪೆರ್ಡೂರು ಗ್ರಾಮದ ಜೋಗಿಬೆಟ್ಟು ಎಂಬಲ್ಲಿ ಎನ್. ಹೆಚ್. 169(A) ತಾರು ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಆಗುಂಬೆ-ಹೆಬ್ರಿ ಕಡೆಯಿಂದ ಕೆ.ಎ.20 ಎಂ.ಡಿ. 3719 ನೇ ನಂಬ್ರದ ನೀಲಿ ಬಣ್ಣದ ಕಾರಿನಲ್ಲಿ ಅಕ್ರಮವಾಗಿ ಗಾಂಜಾವನ್ನು ಸಾಗಾಟ ಮಾಡಲು ಬರುತ್ತಿರುವ ಆರೋಪಿಗಳಾದ 1ನೇ ವಿಜಯ ಕುಮಾರ್ ಎಸ್. ಪ್ರಾಯ 23 ವರ್ಷ, ತಂದೆ: ಶ್ರೀನಿವಾಸ, ವಾಸ: ಕಟ್ಟಿನ ಮನೆ, ಹರಾವರಿ, ಚಿಕ್ಕಮಂಗಳೂರು ಜಿಲ್ಲೆ , 2 ನೇ ನಿಕ್ಷೇಪ್ ಎಸ್.ವಿ. ಪ್ರಾಯ 24 ವರ್ಷ, ತಂದೆ: ವಸಂತ ಎಸ್.ಆರ್. ವಾಸ: ಬೆಲೂರು ನರಸಿಂಹ ರಾಜ ಪುರ, ಚಿಕ್ಕಮಂಗಳೂರು. 3ನೇ ನಿತೇಶ್ ಕುಮಾರ್, ಪ್ರಾಯ 22 ವರ್ಷ, ತಂದೆ: ದಿ. ಆನಂದ, ವಾಸ: ಕುವೆಂಪು ನಗರ, 1 ನೇ ಕ್ರಾಸ್ ಮುರಾರ್ಜಿ ಹಾಸ್ಟೆಲ್ ಬಳಿ, ಗುಣವಂತೆ ಗ್ರಾಮ, ಕೊಪ್ಪ, ಚಿಕ್ಕಮಂಗಳೂರು ಎಂಬುವವರುಗಳನ್ನು ದಸ್ತಗಿರಿಗೊಳಿಸಿ, ಆರೋಪಿಗಳ ವಶದ ಲ್ಲಿದ್ದ ಯಾವುದೇ ಪರವಾನಿಗೆ ಇಲ್ಲದೇ, ಕಾನೂನು ಬಾಹಿರವಾಗಿ ಮಾರಾಟ ಮಾಡಲು ಹೊಂದಿದ್ದ 20 ಕಿಲೋ 614 ಗ್ರಾಂ ತೂಕದ ಗಾಂಜಾ, (ಅಂದಾಜು ಮೌಲ್ಯ ರೂ.6,09,000/-),ಗಿರಾಕಿ ಕುದುರಿಸಲು ಬಳಸುವ ಮೊಬೈಲ್ ಹ್ಯಾಂಡ್ ಸೆಟ್ ಗಳು -3 (ಅಂದಾಜು ಮೌಲ್ಯ ರೂ.15,000/-), ಕಾರಿನ ಅಂದಾಜು ಮೌಲ್ಯ ರೂ. 9,00,000/- , ನಗದು ಹಣ ರೂ. 6,000/-, ವನ್ನು ಸ್ವಾಧೀನಪಡಿಸಿಕೊಂಡಿ ರುವುದಾಗಿದೆ. ಸದ್ರಿ ವಶಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ ರೂ. 15,30,000/-. ಆಗಿರುತ್ತದೆ. 

 ಈ ಬಗ್ಗೆ ಸೆನ್ ಅಪರಾಧ ಠಾಣೆಯಲ್ಲಿ ಅ.ಕ್ರ:34/2022 ಕಲಂ:8(c),20(b)(ii),(C) ಎನ್.ಡಿ.ಪಿ.ಎಸ್. ಕಾಯ್ದೆ 1985ಯಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕಾರ್ಯಾಚರಣೆಯಲ್ಲಿ CEN ಪೊಲೀಸ್ ಠಾಣಾ ಸಿಬ್ಬಂದಿಗಳಾದ ಎ.ಎಸ್.ಐ ಕೇಶವ ಗೌಡ, ನಾಗೇಶ, ರಾಘವೇಂದ್ರ ಬ್ರಹ್ಮಾವರ, ಕೃಷ್ಣಪ್ರಸಾದ್, ಪ್ರವೀಣ್, ಜೀವನ್, ಪ್ರಶಾಂತ, ನಿಲೇಶ್, ದೀಕ್ಷಿತ್,ಮಾಯಪ್ಪ, ಜೀಪು ಚಾಲಕ ನವೀನ್ ಚಂದ್ರ ಮತ್ತು ತಾಂತ್ರಿಕ ವಿಭಾಗದ ದಿನೇಶ್ ರವರು ಪಾಲ್ಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 23-07-2022 08:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080