ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಕಾಪು:  ದಿನಾಂಕ 16/07/2021 ರಂದು ಗೋಪಾಲ ಶೆಟ್ಟಿಗಾರ, ಸಹಾಯಕ ಪೊಲೀಸ್ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರು ಸಿಬ್ಬಂದಿಯರೊಂದಿಗೆ ಉದ್ಯಾವರ  ಗ್ರಾಮದ ಉದ್ಯಾವರ ಮೇಲ್ಪೇಟೆ ಹತ್ತಿರ ರೌಂಡ್ಸ್ ಕರ್ತವ್ಯದಲ್ಲಿರುವಾಗ  ಸ್ಥಳದಲ್ಲಿ ಅನುಮಾನಾಸ್ಪದ ಓರ್ವ ವ್ಯಕ್ತಿ ಕಂಡು ಬಂದಿದ್ದು ಆತನು ಮಾದಕ ಸೇವನೆಯ ನಶೆಯಲ್ಲಿರುವ ಬಗ್ಗೆ ಅನುಮಾನಗೊಂಡು ಅವನ ಬಳಿ ಹೋಗಿ ಪರಿಶೀಲಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿ ಹೆಸರು ವಿಳಾಸ ತಿಳಿದುಕೊಳ್ಳಲಾಗಿ  ಆತನ ಹೆಸರು ಸಮಿತ್ ತೆಜ್‌ಪಾಲ್ (20), ತಂದೆ : ಪ್ರಭಾಕರ ತೆಜ್‌ಪಾಲ, ವಾಸ :ಸೈಂಟ್ ಪ್ರಾನ್ಸಿಸ್ ಶಾಲೆ ಬಳಿ  ಮೇಲ್ಪೇಟೆ, ಉದ್ಯಾವರ ಗ್ರಾಮ, ಉಡುಪಿ ತಾಲೂಕು ಎಂದು ತಿಳಿಸಿದ್ದು, ಆತನನ್ನು  ವೈದ್ಯಕೀಯ ಪರೀಕ್ಷೆಯ ಬಗ್ಗೆ ಪ್ರೊಫೆಸರ್ ಅಂಡ್ ಹೆಡ್  ಕೆ.ಎಂ.ಸಿ ಪೊರೆನ್ಸಿಕ್ ವಿಭಾಗ  ಮಣಿಪಾಲ  ಇವರ  ಮುಂದೆ  ಹಾಜರು ಪಡಿಸಿದ್ದು ಪರೀಕ್ಷಿಸಿದ ವೈದ್ಯರು ದಿನಾಂಕ 19/07/2021 ರಂದು ಗಾಂಜಾ ಸೇವಿಸಿರುವ ಬಗ್ಗೆ ದೃಢ ಪತ್ರ ನೀಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 121/2021 ಕಲಂ: 27(ಬಿ) ಎನ್ ಡಿ ಪಿ ಎಸ್ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ದಿನಾಂಕ 16/07/2021 ರಂದು ಗೋಪಾಲ ಶೆಟ್ಟಿಗಾರ, ಸಹಾಯಕ ಪೊಲೀಸ್ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರು ಸಿಬ್ಬಂದಿಯರೊಂದಿಗೆ ಕಾಪು ತಾಲೂಕು ಏಣಗುಡ್ಡೆ ಗ್ರಾಮದ ಕಟಪಾಡಿ ಜಂಕ್ಷನ್ ಹತ್ತಿರ ರೌಂಡ್ಸ್ ಕರ್ತವ್ಯದಲ್ಲಿರುವಾಗ  ಸ್ಥಳದಲ್ಲಿ ಅನುಮಾನಾಸ್ಪದ ಓರ್ವ ವ್ಯಕ್ತಿ ಕಂಡು ಬಂದಿದ್ದು ಆತನು ಮಾದಕ ಸೇವನೆಯ ನಶೆಯಲ್ಲಿರುವ ಬಗ್ಗೆ ಅನುಮಾನಗೊಂಡು ಅವನ ಬಳಿ ಹೋಗಿ  ಪರಿಶೀಲಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿ ಹೆಸರು ವಿಳಾಸ ತಿಳಿದುಕೊಳ್ಳಲಾಗಿ ಸಂಪತ್ ಬಂಗೇರಾ (23), ತಂದೆ : ದಾಮೋದರ ಬಂಗೇರಾ, ವಾಸ : ಉಷಾ ನಿಲಯ ಕುರ್ಕಾಲು  ಗ್ರಾಮ ಸುಭಾಷನಗರ ಅಂಚೆ ಕಾಪು ತಾಲೂಕು ಉಡುಪಿ ಜಿಲ್ಲೆ ಎಂದು ತಿಳಿಸಿದ್ದು, ಆತನನ್ನು ವೈದ್ಯಕೀಯ ಪರೀಕ್ಷೆಯ ಬಗ್ಗೆ  ಪ್ರೊಫೆಸರ್ ಅಂಡ್ ಹೆಡ್  ಕೆ.ಎಂ.ಸಿ ಪೊರೆನ್ಸಿಕ್ ವಿಭಾಗ  ಮಣಿಪಾಲ  ಇವರ  ಮುಂದೆ ಹಾಜರು ಪಡಿಸಿದ್ದು  ಪರೀಕ್ಷಿಸಿದ ವೈದ್ಯರು ದಿನಾಂಕ 19/07/2021 ರಂದು ಗಾಂಜಾ ಸೇವಿಸಿರುವ ಬಗ್ಗೆ ದೃಢ ಪತ್ರ ನೀಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 122/2021 ಕಲಂ: 27(ಬಿ) ಎನ್ ಡಿ ಪಿ ಎಸ್ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ದಿನಾಂಕ 16/07/2021 ರಂದು ಗೋಪಾಲ ಶೆಟ್ಟಿಗಾರ, ಸಹಾಯಕ ಪೊಲೀಸ್ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರು  ಸಿಬ್ಬಂದಿಯರೊಂದಿಗೆ ಕಾಪು ತಾಲೂಕು ಕಾಪು ಪಡು ಗ್ರಾಮದ ಕಾಪು ಬೀಚ್ ಹತ್ತಿರ ರೌಂಡ್ಸ್ ಕರ್ತವ್ಯದಲ್ಲಿರುವಾಗ  ಸ್ಥಳದಲ್ಲಿ ಅನುಮಾನಾಸ್ಪದ ಓರ್ವ ವ್ಯಕ್ತಿ ಕಂಡು ಬಂದಿದ್ದು ಆತನು ಮಾದಕ ಸೇವನೆಯ ನಶೆಯಲ್ಲಿರುವ ಬಗ್ಗೆ ಅನುಮಾನಗೊಂಡು ಅವನ ಬಳಿ ಹೋಗಿ ಪರಿಶೀಲಿಸಿದಾಗ ಅವನು  ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಆತನನ್ನು ವಶಕ್ಕೆ ಪಡೆದುಕೊಂಡು, ಹೆಸರು ವಿಳಾಸ ವಿಚಾರಿಸಿ ತಿಳಿದುಕೊಳ್ಳಲಾಗಿ  ಥಾಮ್ಸನ್ (24),  ತಂದೆ : ಆಂಟೋನಿ, ವಾಸ : ಅನಂತ ನಗರ 2ನೇ ಹಂತ ಮಣಿಪಾಲ, ಉಡುಪಿ ಜಿಲ್ಲೆ ಎಂದು ತಿಳಿಸಿದ್ದು, ಅತನನ್ನು ವೈದ್ಯಕೀಯ ಪರೀಕ್ಷೆಯ ಬಗ್ಗೆ ಪ್ರೊಫೆಸರ್ ಅಂಡ್ ಹೆಡ್  ಕೆ.ಎಂ.ಸಿ ಪೊರೆನ್ಸಿಕ್ ವಿಭಾಗ  ಮಣಿಪಾಲ  ಇವರ  ಮುಂದೆ ಹಾಜರುಪಡಿಸಿದ್ದು,  ಪರೀಕ್ಷಿಸಿದ ವೈದ್ಯರು ದಿನಾಂಕ 19/07/2021 ರಂದು ಗಾಂಜಾ ಸೇವಿಸಿರುವ ಬಗ್ಗೆ ದೃಢ ಪತ್ರ ನೀಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 123/2021  ಕಲಂ: 27(ಬಿ) ಎನ್ ಡಿ ಪಿ ಎಸ್ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 22/07/2021 ರಂದು ಮಧು ಬಿ.ಇ, ಪೊಲೀಸ್ ಉಪನಿರೀಕ್ಷಕರು, ಕಾರ್ಕಳ ನಗರ ಪೊಲೀಸ್ ಠಾಣೆ ಇವರು ಕಾರ್ಕಳ ಕಸಬಾ ಗ್ರಾಮದ ಪೊಲ್ಲಾರ್ ಕ್ರಾಸ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ KA-19-Z-6955 ನೇ ನಂಬ್ರದ ಕಾರನ್ನು ಅದರ ಚಾಲಕ ಶಾಹಿದ್  ಕಾರಿನಲ್ಲಿ ಇನ್ನಿಬ್ಬರಾದ ಶೇಖ್ ಅಬ್ದುಲ್ ಮತ್ತು ಮಹಮ್ಮದ್ ಸರ್ಫರಾಜ್ ಇವರುಗಳನ್ನು ಕುಳ್ಳಿರಿಸಿಕೊಂಡು ಪೊಲ್ಲಾರ್ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಕಾರಿನ ಹಿಂಬದಿಯ ಡಿಕ್ಕಿಯಲ್ಲಿ ಎರಡು ಪ್ಲಾಸ್ಟಿಕ್ ಬಕೆಟ್ ಒಳಗಡೆ ದನದ ಮಾಂಸ ಇದ್ದು, ಈ ದನದ ಮಾಂಸವನ್ನು ತೆಳ್ಳಾರ್ ಮಸೀದಿ ಬಳಿ ನಿವಾಸಿ ಇಸ್ಮಾಯಿಲ್ ರವರ ಮನೆಯಲ್ಲಿ ತೆಳ್ಳಾರ್ ಮಸೀದಿ ಬಳಿಯ ನಿವಾಸಿ ರಜಾಬ್ ಎಂಬಾತನು ಕಡಿದಿದ್ದು, ಅದನ್ನು ಇಸ್ಮಾಯಿಲ್ ಸಾಹೇಬ್ ಮತ್ತು ಮಹಮ್ಮದ್ ಸರ್ಫರಾಜ್ ಇವರುಗಳು ಮಾಂಸ ಮಾಡಿ ನೀಡಿರುವುದಾಗಿ ತಿಳಿಸಿದ್ದು, ಆಪಾದಿತರು ಯಾವುದೇ ಪರವಾನಿಗೆ ಹೊಂದದೆ, ದನವನ್ನು ಕಡಿದು ಮಾಂಸ ಮಾಡಿದ್ದಲ್ಲದೆ, ಕಾರಿನಲ್ಲಿ ಸಾಗಾಟ ಮಾಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 89/2021 ಕಲಂ: 4, 5, 11 ಕರ್ನಾಟಕ ಗೋ ಹತ್ಯಾ ನಿಷೇಧ ಕಾಯ್ದೆ ಹಾಗೂ ಪ್ರತಿಭಂದಕ ಕಾಯ್ದೆ 1964 ಕಲಂ: 4, 5, 7, 12 The Karnataka Prevention of slaughter and preservation of cattle ordinance Act 2020 & ಕಲಂ: 11(1)(d) Prevention of cruelty to Animal Act 2020 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-07-2021 09:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080